ಜನಿವಾರ ಧಾರಣೆಯ ಅರ್ಥವೇನು?


Team Udayavani, Oct 27, 2018, 3:25 AM IST

64554.jpg

ಉಪನಯನ ಕಾರ್ಯಕ್ರಮದಲ್ಲಿ ವಟುವಿಗೆ ಸಂಸ್ಕಾರಯುತವಾಗಿ ಬದುಕಲು ಕೆಲವು ನಿಯಮಗಳನ್ನು ಹೇಳಲಾಗುತ್ತದೆ. ಧ್ಯಾನತಪಸ್ಸು, ಊಟದ ವಿಧಾನ, ನೀತಿಯುತ ನಡತೆ ಮೊದಲಾದವುಗಳನ್ನು ತಿಳಿಸಿಕೊಟ್ಟು, ಅವನ್ನು ಪಾಲಿಸುವಂತೆ ಹೇಳಲಾಗುತ್ತದೆ. ಅಂತಹ ಸುಸಂಸ್ಕೃತ ನಡವಳಿಕೆಗಳನ್ನು ಪಾಲಿಸುತ್ತೇನೆಂದು ನಿರ್ಧರಿಸಿ ತೊಟ್ಟ ದೀಕ್ಷೆಯ ರೂಪವೇ ಜನಿವಾರ.

ಯಜ್ನೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್‌
ಆಯುಷ್ಯಮಗ್ರ್ಯಂ ಪ್ರತಿಮುಂಚ ಶುಭ್ರಂ ಯಜ್ನೋಪವೀತಂ ಬಲಮಸ್ತು ತೇಜಃ ||
ಎಂಬ ಮಂತ್ರವನ್ನು ಉಚ್ಚರಿಸಿ  ಜನಿವಾರ ಧರಿಸಲಾಗುತ್ತದೆ. ಮೂರು ಎಳೆಯ ನೂಲಿಗೆ ಪವಿತ್ರಗಂಟನ್ನು ಹಾಕಿ, ಅದನ್ನು ನೀರಿನಲ್ಲಿ ಶುದ್ಧ ಮಾಡಿಕೊಂಡು ಓಂಕಾರ, ಅಗ್ನಿ, ನಾಗ, ಸೋಮ, ಪಿತೃ, ಪ್ರಜಾಪತಿ, ವಾಯುಂ, ಸೂರ್ಯಂ, ವಿಶ್ವಾನೆªàವ .. ಹೀಗೆ ದೇವತೆಗಳನ್ನು ಅದರಲ್ಲಿ ಆವಾಹನೆ ಮಾಡಿ, ಪೂಜಿಸಿ, ಗಾಯತ್ರಿಮಂತ್ರ ಜಪಿಸಿ ಧರಿಸುವುದು ಕ್ರಮ. ಆದರೆ ಕಾಲ ಬದಲಾದಂತೆ ಅದರ ರೂಪವೂ ಬದಲಾಗುತ್ತ ಹೋಗಿ, ಮನೆಯಲ್ಲಿ ಪೂಜಾಕಾರ್ಯಗಳಿ¨ªಾಗ ಮಾತ್ರ ಧರಿಸುವ ಧರ್ಬೆಯಿಂದ ಮಾಡಿದ ಪವಿತ್ರದಂತೆಯೇ ಜನಿವಾರವನ್ನೂ ಹಬ್ಬ, ಪೂಜಾ ದಿನಗಳಲ್ಲಿ ಮಾತ್ರ ಧರಿಸುವ ಕ್ರಮ ನಿಧಾನವಾಗಿ ರೂಢಿಗೆ ಬರುತ್ತಿದೆ.

ಜನಿವಾರದ ಅಗತ್ಯವಾದರೂ ಏನು? ಎಂಬ ಪ್ರಶ್ನೆ ಎಲ್ಲರಿಗೂ ಕಾಡಿರಬಹುದು. ಆದರೆ ಚಿಂತಿಸುತ್ತ ಹೋದಂತೆ ಅದರ ಅಗತ್ಯತೆಯ ಅರಿವು ನಮಗಾಗುತ್ತದೆ. ಗರ್ಭಾತ್‌ ಅಷ್ಟಮ ಅಥವಾ ಜನ್ಮಾತ್‌ ಅಷ್ಟಮದಲ್ಲಿ ಗಂಡು ಮಕ್ಕಳಿಗೆ ಯಜ್ಞೊàಪವೀತವನ್ನು ಕೊಡುವ ಉಪನಯನ ಸಂಸ್ಕಾರವನ್ನು ನೆರವೇರಿಸುವುದು ಸಂಪ್ರದಾಯ.

ಉಪನಯನ ಎಂಬುದು ಬ್ರಹ್ಮೋಪದೇಶ, ಉಪವೀತಧಾರಣೆ, ವಟೋಪದೇಶ, ಮುಂಜಿ ಮೊದಲಾದ ಆಯಾ ಊರಿನ ಭಾಷೆಗೆ ತಕ್ಕಂತೆ ಬೇರೆಬೇರೆ ಹೆಸರುಗಳಿಂದ ಕರೆಯಿಸಿಕೊಂಡಿದ್ದರೂ ಅದು ಕೇವಲ ಉಪನಯನವಷ್ಟೇ ಅಲ್ಲ; ಉಪನಯನ ಸಂಸ್ಕಾರ. ಈ ಸಂಸ್ಕಾರ ಎಂಬುದಕ್ಕೆ ಆಳವಾದ ಅರ್ಥವಿದೆ. ಯಾಕೆಂದರೆ ಒಳ್ಳೆಯ ಸಂಸ್ಕಾರವನ್ನು ರೂಢಿಸಿಕೊಳ್ಳುವಲ್ಲಿ ಸಹಕಾರಿಯಾಗಿ ನಿಲ್ಲುವುದೇ ಈ ಉಪನಯನ ಸಂಸ್ಕಾರ.

ಎಂಟನೇ ವಯಸ್ಸು ದಾಟುತ್ತಿದ್ದಂತೆ ನಾವು ಪ್ರೌಢರಾಗುತ್ತ ಹೋಗುತ್ತೇವೆ. ಆ ಸಮಯದಲ್ಲಿ ಮನಸ್ಸು ಚಂಚಲವಾಗುತ್ತಲೇ ಇರುತ್ತದೆ. ಉಪನಯನ ಕಾರ್ಯಕ್ರಮದಲ್ಲಿ ವಟುವಿಗೆ ಸಂಸ್ಕಾರಯುತವಾಗಿ ಬದುಕಲು ಕೆಲವು ನಿಯಮಗಳನ್ನು ಹೇಳಲಾಗುತ್ತದೆ. ಧ್ಯಾನತಪಸ್ಸು, ಊಟದ ವಿಧಾನ, ನೀತಿಯುತ ನಡತೆ ಮೊದಲಾದವುಗಳನ್ನು ತಿಳಿಸಿಕೊಟ್ಟು, ಅವನ್ನು ಪಾಲಿಸುವಂತೆ ಹೇಳಲಾಗುತ್ತದೆ. ಅಂತಹ ಸುಸಂಸ್ಕೃತ ನಡವಳಿಕೆಗಳನ್ನು ಪಾಲಿಸುತ್ತೇನೆಂದು ನಿರ್ಧರಿಸಿ ತೊಟ್ಟ ದೀಕ್ಷೆಯ ರೂಪವೇ ಜನಿವಾರ.

ಅರಿಯದೆ ನಮ್ಮ ಮನಸ್ಸು ದುರ್ನಡೆತೆಯತ್ತ ಯೋಚಿಸಿದಾಗ ಮೆಯ್ಯಲ್ಲಿರುವ ಜನಿವಾರ ನಮ್ಮನ್ನು ತಡೆಯುತ್ತದೆ. ಇಲ್ಲ, ಇದು ಸರಿಯಾದುದಲ್ಲ, ಚಂಚಲರಾಗದೆ ಉತ್ತಮ ನಡೆಯನ್ನೇ ಆರಿಸಿಕೊಳ್ಳಬೇಕು ಎಂದು ಎಚ್ಚರಿಸುತ್ತದೆ. ಅದೇ ರೀತಿ, ಮದುವೆಯಾದ ಬಳಿಕೆ ಇನ್ನೊಂದು ಜನಿವಾರ ಅಂದರೆ ಒಟ್ಟಿಗೆ ಎರಡು ಜನಿವಾರವನ್ನು ಹಾಕಲಾಗುತ್ತದೆ. ಅಂದರೆ ಜೀವದ ಸಂಗಾತಿಯ ಜೊತೆಯಾಗಿ¨ªಾಳೆ,  ಇಲ್ಲಿ ಸಂಯಮದಿಂದಿರಬೇಕು, ಜವಾಬ್ದಾರಿ ಹೆಚ್ಚಿದೆ ಎಂಬುದನ್ನು ನೆನಪಿಸುತ್ತಿರುತ್ತದೆ. ಅಲ್ಲದೆ ಪರಸ್ತ್ರೀಸಂಗ, ಇನ್ನಿತರ ಯಾವುದೇ ದುವ್ಯìಸನಗಳಿಗೆ ಮನಸ್ಸು ಓಲೈಸದಂತೆ ನಮ್ಮನ್ನು ತಡೆಯಲು ಈ ಜನಿವಾರ ಸಹಕಾರಿ.

ಇನ್ನು, ಇವೆಲ್ಲವನ್ನೂ ಅರಿತು ನಡೆಯುವ ತಮಗೆ ಅಂದರೆ ಜ್ಞಾನಕ್ಕೆ ಜನಿವಾರದ ಹಂಗೇಕೆ? ಎಂಬ ಪ್ರಶ್ನೆ ಎದುರಾದಾಗ ಅಲ್ಲಿ ನಮ್ಮ ಏಕಾಗ್ರತೆ ಅಷ್ಟು ಬಲಿಷ್ಟವಾಗಿರಬೇಕು. ಮತ್ತು ಜ್ಞಾನದ ಕೊನೆಯ ಹಂತವನ್ನು ತಲುಪಿ ಅದರಲ್ಲಿಯೇ ಜೀವಿಸುತ್ತಿರಬೇಕು. ಹಾಗಾಗಿ ಋಷಿಗಳು ಅಥವಾ ಸನ್ಯಾಸಿಗಳಿಗೆ ಜನಿವಾರದ ಹಂಗಿರುವುದಿಲ್ಲ; ಅವರಿಗೆ ಜನಿವಾರ ಇರುವುದಿಲ್ಲ. ಮಾನವ, ಸಹಜವಾಗಿಯೇ ಚಂಚಲಚಿತ್ತವುಳ್ಳವನು. ಅವನಿಗೆ ಒಂದು ಗಡಿಯನ್ನು ದಾಟಬಾರದೆಂದು ಅರಿವಾಗಬೇಕಾದರೆ ಆ ಗಡಿಗೆ ಸುತ್ತಲೂ ಕಟ್ಟೆಕಟ್ಟಿರಬೇಕು. ಅಪ್ಪಿತಪ್ಪಿ ಅಂತಹ ಗಡಿದಾಟುವಾಗಲೂ ಆ ಕಟ್ಟೆ ಅವನನ್ನು ಎಚ್ಚರಿಸುತ್ತದೆ. ಹಾಗಾಗಿ ಜನಿವಾರ ಎಂಬುದು ಸಂಸ್ಕಾರದ ಬದುಕಿಗೆ ಎಚ್ಚರಿಕೆಯೂ ಹೌದು; ತಪಾಚರಣೆಗೆ ಮಾರ್ಗವೂ ಹೌದು.

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.