ಪ್ರಾರ್ಥನೆ ಎಂದರೇನು ?
Team Udayavani, Nov 17, 2018, 3:25 AM IST
ಪ್ರಾರ್ಥನೆ ಎಂದರೆ, ಈಶ್ವರನನ್ನು ಆರ್ತತೆಯಿಂದ ಕರೆಯುವ ಒಂದು ವಿಧಾನ. ಈಶ್ವರನ ನೆನಪು ಮಾಡುವುದು ಮತ್ತು ಅವನಿಂದ ಏನಾದರೂ ಬೇಡುವುದು. ಈಶ್ವರನು ನಮ್ಮ ತಾಯಿಯಂತೆ; ಆದುದರಿಂದಲೇ ಅವನನ್ನು ಒಳಗಿನಿಂದ ಅಂದರೆ ಮನಸ್ಸಿನಿಂದ ಕರೆಯಬೇಕು. ಯಾವಾಗ ನಾವು ಆರ್ತತೆಯಿಂದ ಪ್ರಾರ್ಥನೆ ಮಾಡುತ್ತೇವೆಯೋ, ಆಗ ನಮ್ಮ ಮನಸ್ಸಿನಲ್ಲಿ ಪ್ರಾರ್ಥನೆಯ ಶಬ್ದಗಳು ತಾವಾಗಿಯೇ ಬರುತ್ತವೆ.
ಆ ಶಬ್ದಗಳು ನಮ್ಮದಾಗಿರುವುದಿಲ್ಲ. ಶಬ್ದಗಳ ರಚನೆ ಮತ್ತು ಅವುಗಳ ಉಪಯೋಗ ಬೇರೆಯೇ ಪದ್ಧತಿಯಲ್ಲಿ ಆಗಿರುತ್ತದೆ. ಸಾûಾತ್ ಈಶ್ವರನೇ ಸೂಕ್ಷ ¾ದಿಂದ ನಮಗೆ ಆ ಪ್ರಾರ್ಥನೆಯನ್ನು ಸೂಚಿಸಿರುತ್ತಾನೆ. ಯಾವಾಗ, ನಾವು ದೇಹವನ್ನು ಅಂದರೆ ಬುದ್ಧಿಯನ್ನು ಸಂಪೂರ್ಣ ತ್ಯಾಗ ಮಾಡಿ ಶರಣಾಗತಿಯ ಭಾವದಿಂದ ಪ್ರಾರ್ಥನೆ ಮಾಡುತ್ತೇವೆಯೋ, ಆಗ ನಮಗೆ ಅದರ ಜಾnನವಾಗುತ್ತದೆ. ಬುದ್ಧಿಯಿಂದ ಮಾಡಿದ ಪ್ರಾರ್ಥನೆಯ ಅರಿವು ನಮಗಾಗುತ್ತದೆ ಮತ್ತು ಅದು ಮನಸ್ಸಿನಿಂದ ಮಾಡಿದುದಲ್ಲ ಎಂಬುದು ನಮಗೆ ತಿಳಿಯುತ್ತದೆ.
ಅರುಣ್ ಎಚ್.ವಿ. (ಆಧಾರ: ಸನಾತನ ಸಂಸ್ಥೆ)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.