ನಮ್ಮನ್ನು ರಕ್ಷಿಸುವ ಶಕ್ತಿ ಯಾವುದು?
Team Udayavani, Oct 13, 2018, 10:43 AM IST
ಸುಕೃತವೆಂದರೆ, ನಾವು ಮಾಡುವ ಉತ್ತಮ ಕರ್ಮಗಳು. ಅಂದರೆ, ಒಳ್ಳೆಯ ಕಾರ್ಯಗಳು. ಹಾಗಾಗಿ, ಯಾವೊತ್ತಿಗೂ ನಾವು ಮಾಡುವ ಸತ್ಕಾರ್ಯಗಳು ಅಥವಾ ಪಾಪರಹಿತ ಕರ್ಮಗಳೇ ನಮ್ಮ ಸಂಕಷ್ಟಗಳಿಗೆ ವಿರೋಧಾಸ್ತ್ರವಾಗಿ ನಮ್ಮನ್ನು ಕಾಪಾಡುತ್ತವೆ.
ಜಗತ್ತು ಎಷ್ಟೇ ಮುಂದುವರಿದರೂ ಪ್ರತಿಯೊಬ್ಬನಲ್ಲಿಯೂ, ಬದುಕಿನಲ್ಲಿ ಒಮ್ಮೆಯಾದರೂ, ನನ್ನನ್ನು ಸಂಕಷ್ಟದಿಂದ ಪಾರು ಮಾಡುವ ಶಕ್ತಿ ಯಾವುದು? ಹೇಗೆ? ಎಂಬ ಪ್ರಶ್ನೆ ನುಸುಳದೇ ಇರುವುದಿಲ್ಲ. ಯಾಕೆಂದರೆ, ಮಾನವನ ನಶ್ವರವಾದ ಬದುಕಿನಲ್ಲಿ ನೋವು ನಲಿವಿನ ಕ್ಷಣಗಳು ಸೂರ್ಯ ಚಂದ್ರರ ಉದಯಾಸ್ತೋಪಾದಿಯಲ್ಲಿ ಹಾದು ಹೋಗುತ್ತಲೇ ಇರುತ್ತವೆ. ಅದು ಜೀವನ ವಿಧಾನವೂ ಇರಬಹುದು, ಸಹಜವಾದುದೂ ಇರಬಹುದು ಅಥವಾ ಸ್ವಯಂಕೃತವೇ ಇದ್ದಿರಬಹುದು. ಒಂದು ನೋವಿನ ಕ್ಷಣಕ್ಕೆ ಮೂರು ದಿನದ ನಲಿವನ್ನೂ ಕೊಲ್ಲುವ ಶಕ್ತಿ ಇದೆ ಎಂತಲೇ ಭಾವಿಸಿದ್ದೇವೆ. ಆದರೆ ವಾಸ್ತವಿಕವಾಗಿ ನಾವು ನಲಿವನ್ನು ಮರೆತಷ್ಟು ಬೇಗ ನೋವನ್ನು ಮರೆಯುವುದಿಲ್ಲ. ಹಾಗಾಗಿ, ಈ ನೋವುಗಳಿಗೆ ಕೊನೆಯಿಲ್ಲವೇ? ಈ ನೋವುಗಳಿಂದ ನಮ್ಮನ್ನು ಪಾರುಮಾಡುವವರು, ಕಷ್ಟಗಳಿಂದ ಕಾಪಾಡುವವರು ಯಾರೂ ಇಲ್ಲವೇ ಎಂಬ ಪ್ರಶ್ನೆಗಳು ಕಾಡುವುದು ಸಹಜ. ಎಲ್ಲ ಕಷ್ಟಗಳಿಂದಲೂ ನಮ್ಮನ್ನು ಪಾರು ಮಾಡುವ ಶಕ್ತಿ ನಮ್ಮ ಜೊತೆಗೇ ಇದೆ ಎಂಬುದನ್ನು, ಧರ್ಮ ಸಾರುತ್ತಲೇ ಬಂದಿದೆ. ಧರ್ಮ, ನಮ್ಮ ಕರ್ಮಗಳನ್ನು ನಿರ್ಣಯಿಸುತ್ತದೆ. ಅದರ ಫಲವೂ ಕರ್ಮದ ಮೇಲೆಯೇ ನಿಂತಿದೆ. ಸರಳವಾಗಿ ಹೇಳುವುದಾದರೆ, ಬೇವು ನೆಟ್ಟು ಮಾವು ಬೇಕೆಂದು ಕಾದರೆ ಅದು ಸಾಧ್ಯವೇ? ಎಂಬಂತೆ ಬದುಕುವ ದಾರಿಯೇ ನೋವು ನಲಿವುಗಳ ಪ್ರಮಾಣವನ್ನು ನಿರ್ಧರಿಸುವ ಮುಖ್ಯ ಸಂಗತಿ. ಹಾಗಾಗಿ, ಧರ್ಮದ ಹಾದಿ ತೊರೆಯಬಾರದು.
ಹೀಗೊಂದು ಶ್ಲೋಕವಿದೆ;
ವನೇ ರಣೇ ಕ್ಷತ್ರು ಜಲಾಗ್ನಿ ಮಧ್ಯೇ|
ಮಹಾರ್ಣವೇ ಪರ್ವತ ಮಸ್ತಕೇಪಿವಾ |
ಸುಪ್ತಂ ಪ್ರಮತ್ತಂ ವಿಷಮಸ್ಥಿತಂ ವಾ |
ರಕ್ಷಂತಿ ಪುಣ್ಯಾನಿ ಪುರಾಕೃತಾನಿ ||
ವನದಲ್ಲಿ, ಯುದ್ಧದಲ್ಲಿ, ಶತ್ರುವಿನಿಂದ, ಜಲ, ಅಗ್ನಿ, ಮಹಾಸಮುದ್ರ, ಪರ್ವತ, ನಿದ್ರಾವಸ್ಥೆ, ಅಜಾಗ್ರತೆ ಸಂಕಟಮಯ ಈ ಎಲ್ಲಾ ಕಾಲದಲ್ಲಿಯೂ ಕೇವಲ ನಾವು ಮಾಡಿದ ಸುಕೃತವೇ ನಮ್ಮನ್ನೇ ರಕ್ಷಿಸುತ್ತದೆ. ಅಂದರೆ, ನಮ್ಮೆಲ್ಲ ಕಷ್ಟಗಳನ್ನು ಪರಿಹರಿಸುವ ಶಕ್ತಿಯೆಂದರೆ ಸುಕೃತ. ಇಲ್ಲಿ ಹೇಳಿದ ಸಮಯದಲ್ಲಿ ಉಂಟಾಗುವ ತೊಂದರೆಗಳು ಬಹಳ ಅಪಾಯಕಾರಿಯಾದುದು. ವನದಲ್ಲಿ ಅಂದರೆ, ಘೋರಕಾನನದಲ್ಲಿ ಸಿಕ್ಕಿ ಹಾಕಿಕೊಂಡರೆ, ನೀರು ಬೆಂಕಿಯಿಂದಾಗುವ ಅನಾಹುತಗಳು, ನಿದ್ರೆಯಲ್ಲಿ ಏನೂ ಬೇಕಾದರೂ ಆಗಬಹುದು ಅಂಥ ಅಪಾಯಗಳು, ಅಜಾಗರೂಕತೆಯಿಂದಾಗುವ ಅನಾಹುತಗಳು ಇವೆಲ್ಲವೂ ವಿಪರೀತ ಪರಿಣಾಮವನ್ನುಂಟು ಮಾಡುವ ಮತ್ತು ಆ ಕೂಡಲೇ ತಪ್ಪಿಸಿಕೊಳ್ಳಲಾಗದ ಪರಿಸ್ಥಿತಿಯನ್ನು ತಂದೊಡ್ಡುವಂಥವು. ಇಂತಹ ಸಂಕಷ್ಟದಲ್ಲಿಯೂ ನಮ್ಮನ್ನು ರಕ್ಷಿಸುವುದಿದ್ದರೆ ಅದು ಸುಕೃತ.
ಸುಕೃತ ಎಂದರೇನು?
ಸುಕೃತವೆಂದರೆ, ನಾವು ಮಾಡುವ ಉತ್ತಮ ಕರ್ಮಗಳು. ಅಂದರೆ, ಒಳ್ಳೆಯ ಕಾರ್ಯಗಳು. ಹಾಗಾಗಿ, ಯಾವೊತ್ತಿಗೂ ನಾವು ಮಾಡುವ ಸತ್ಕಾರ್ಯಗಳು ಅಥವಾ ಪಾಪರಹಿತ ಕರ್ಮಗಳೇ ನಮ್ಮ ಸಂಕಷ್ಟಗಳಿಗೆ ವಿರೋಧಾಸ್ತ್ರವಾಗಿ ನಮ್ಮನ್ನು ಕಾಪಾಡುತ್ತವೆ. ಇದನ್ನು, ಇನ್ನೂ ಸರಳವಾಗಿ ಹೇಳಬಹುದಾದರೆ-ಇವತ್ತು ನಾವು ಒಬ್ಬನಿಗೆ ಒಳಿತನ್ನು ಮಾಡಿದರೆ ಮುಂದೆ ಇನ್ನಾರೋ ನಮಗೆ ಅಗತ್ಯವಿದ್ದಾ ಗ ನಮ್ಮ ಸಹಾಯಕ್ಕಾಗುತ್ತಾರೆ. ಇದು ಎಂದೆಂದಿಗೂ ಸತ್ಯ.
ಬದುಕಿನಲ್ಲಿ ಕರ್ಮದ ಮೂಲಕ ಕಷ್ಟವನ್ನು ತಂದುಕೊಳ್ಳುವವರೂ ನಾವೇ; ಅದರಿಂದ ಪಾರುಮಾಡುವುದೂ ನಾವು ಮಾಡುವ ಸುಕೃತದ ಫಲವೇ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Surathkal: ಬೇಕು ವ್ಯವಸ್ಥಿತ ಒಳಚರಂಡಿ; ಸೋರುತ್ತಿರುವ ವೆಟ್‌ವೆಲ್‌ಗಳಿಂದ ಮಾಲಿನ್ಯ
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.