ರುಚಿಕಾ,ಭದ್ರ,ಮಾಲವೀಯ ಯೋಗಿಗಳು:ನಿಮಗೆ ಯಾವ ರೀತಿಯ ಯೋಗವಿದೆ?


Team Udayavani, Jun 23, 2018, 2:20 PM IST

144.jpg

ಕಳೆದ ವಾರದಲ್ಲಿ ಹಂಸ ಯೋಗ, ಶಶಯೋಗದ ಬಗ್ಗೆ ತಿಳಿದುಕೊಂಡೆವು. ಈವಾರ ರುಚಿಕಾ ಯೋಗ, ಭದ್ರಯೋಗ ಹಾಗೂ ಮಾಲವೀಯ ಯೋಗದ ಬಗ್ಗೆ ತಿಳಿಯೋಣ.

ಕುಜನು ಅಧಿಪತಿಯಾಗಿರುವ ಯೋಗವೇ ರುಚಿಕಾ ಯೋಗ. ಮೇಷ ಲಗ್ನವಾಗಿ ಕುಜನು ಲಗ್ನದಲ್ಲಿರಬೇಕು. ವೃಶ್ಚಿಕ ಲಗ್ನವಾದಾರೂ ಕುಜನು ಲಗ್ನದಲ್ಲಿರಬೇಕು. ಮಕರ ಲಗ್ನವಾಗಿ ಕುಜನು ಲಗ್ನದಲ್ಲಿರಬೇಕು. ಇದು ರುಚಿಕಾಯೋಗದ ನಿಯಮ. ಕುಜನಿಗೆ ಮೇಷ-ವೃಶ್ಚಿಕ ಸ್ವಂತ ಮನೆಯಾದರೆ ಮಕರ ರಾಶಿ ಉತ್ಛಸ್ಥಾನವಾಗುತ್ತದೆ. ಕುಜ 
ಭಾತೃಕಾರಕ. ಕುಜನ ಬಣ್ಣ: ಕೆಂಪು. ಲೋಹ: ತಾಮ್ರ. ರತ್ನ: ಹವಳ. ಸಂಖ್ಯೆ: 9. ದೇವತೆ: ಸುಬ್ರಹ್ಮಣ್ಯ. ಧಾನ್ಯ: ತೊಗರಿ. ವಾರ: ಮಂಗಳವಾರ.

ಸಾಮಾನ್ಯವಾಗಿ ರುಚಿಕಾ ಯೋಗದಲ್ಲಿ ಹುಟ್ಟಿದವರು ಎತ್ತರವಾಗಿರುತ್ತಾರೆ. ಸದೃಢ ಶರೀರಿಯಾಗಿರುತ್ತಾರೆ. ಭಾವುಕತೆ ಇವರಲ್ಲಿ ಕಡಿಮೆ. ದೃಢಮನಸ್ಕರಾಗಿರುತ್ತಾರೆ. ಕೆಲವೊಮ್ಮೆ ಕ್ರೂರಿಗಳಾಗುವ ಸಾಧ್ಯತೆಗಳೂ ಇವೆ. ಏಕ್‌ ಮಾರ್‌ ದೋ ತುಕುಡಾ ಎಂಬಂತೆ ಇರುತ್ತಾರೆ. ಮಾತೂ ಸಹ ಕತ್ತಿಯಂತೆ ಹರಿತ. ಹೃದಯ ಬೆಟ್ಟದ ಹಾಗೆ ಅಲುಗಾಡುವುದಿಲ್ಲ. ಚಿಕ್ಕಪುಟ್ಟ ವಿಷಯಕ್ಕೆ ಮನಸ್ಸು  ಕಸಿವಿಸಿ ಮಾಡಿಕೊಳ್ಳುವುದಿಲ್ಲ. 

 ಒಂದು ದೊಡ್ಡ ಸಂಸ್ಥೆಯನ್ನು ಹುಟ್ಟು ಹಾಕಿ ಮುನ್ನಡೆಸುವ ಛಾತಿ ಇರುತ್ತದೆ. ರಾಜಕೀಯವಾಗಿ ಉನ್ನತ ಸ್ಥಾನದಲ್ಲಿ ಇರುತ್ತಾರೆ. ಯಾವುದೇ ದೊಡ್ಡ ಸಂಸ್ಥೆಯ ಉನ್ನತಾಧಿಕಾರಿಯಾಗಬಹುದು. ಏಕೆಂದರೆ ದೊಡ್ಡ ಸ್ಥಾನದಲ್ಲಿ ಇರುವವರು ಭಾವುಕತೆಗೆ ಪಕ್ಕಾಗದೆ ಕೆಲವು ಬಾರಿ ದೃಢ 
ನಿರ್ಧಾರಗಳನ್ನು ಮಾಡಬೇಕಾಗುತ್ತದೆ. ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಅಣ್ಣ, ತಮ್ಮ ಚಿಕ್ಕಪ್ಪ ಸೋದರಮಾವ ಎಂದು ಮೃದು ಧೋರಣೆ ತೋರಿಸಲಾಗುವುದಿಲ್ಲ. ರುಚಿಕಾ ಯೋಗದವರು ಯಾವ ಮುಲಾಜನ್ನೂ ನೋಡದೆ ಆ ಸಂದರ್ಭಕ್ಕೆ ಯೋಗ್ಯವಾದ ನಿರ್ಧಾರವನ್ನು ತೆಗೆದುಕೊಳ್ಳುವುದರಲ್ಲಿ ನಿಸ್ಸೀಮರು. ಇದು ಆ ಸಮಯಕ್ಕೆ ಹರಿತ ಎನಿಸಿದರೂ ದೂರದೃಷ್ಟಿಯಿಂದ ಒಳ್ಳೆಯದೇ ಆಗಿರುತ್ತದೆ. 

ರುಚಿಕಾ ಯೋಗವರು ಪೊಲೀಸ್‌, ಮಿಲಿಟರಿ ಹುದ್ದೆಗೆ ಹೆಚ್ಚು ಸೂಕ್ತರು. ಉಳಿದ ಗ್ರಹಗತಿಗಳೂ ಶುಭಸ್ಥಾನದಲ್ಲಿದ್ದರೆ ಪೊಲೀಸ್‌ ಅಥವಾ ಮಿಲಿಟರಿ ಅಥವಾ ರಾಜಕೀಯವಾಗಿ ಉನ್ನತ ಸ್ಥಾನದಲ್ಲಿ ಇರುತ್ತಾರೆ. ಸುಪ್ರಸಿದ್ಧರಾಗುತ್ತಾರೆ.  ಗ್ರಹಚಾರವಶಾತ್‌ ಕುಜನಿಗೆ ಶನಿಯ ದೃಷ್ಟಿಯೋ, ರಾಹುವಿನ ದೃಷ್ಟಿಯೋ ಬಿದ್ದಿದ್ದರೆ ಅಂಥವರು ಕುಪ್ರಸಿದ್ಧರೂ ಆಗಿಬಿಡುತ್ತಾರೆ. ಇಂಥವರು ಕಳ್ಳರು, ದರೋಡೆಕೋರರು, ಕೊಲೆಗಡುಕರು, ಅತ್ಯಾಚಾರಿಗಳು, ಆಗಿಬಿಡಬಹುದು. ಪೊಲೀಸ್‌ ಇಲಾಖೆಯಲ್ಲಿ ಕ್ರೂರಿಯಾದ ಆಫೀಸರ್‌ ಆಗಬಹುದು. ಒಬ್ಬ ಹೆಸರಾಂತ ವೈದ್ಯ ಆಗಬಹುದು. ಸದಾ ರಕ್ತ ಮಾಂಸ ಇಂಥವುಗಳ ಸಹವಾಸಗಳಲ್ಲೇ ಇರುವಂತವನಾಗಬಹುದು. ಲ್ಯಾಬ್‌ ಟೆಕ್ನಿಷಿಯನ್‌ ಕೂಡಾ ಆಗಬಹುದು. ಭೂಗತ  ಪಾತಕಿಯಾಗಬಹುದು. ಇವರು ಸಾವಿಗೆ ಅಂಜುವುದಿಲ್ಲ.  ದೇಶಕ್ಕಾಗಿಯೂ ಪ್ರಾಣ ಕೊಡಬಹುದು, ದೇಶದ್ರೋಹ ಮಾಡಲೂ ಆತ್ಮಾಹುತಿ ಮಾಡಿಕೊಳ್ಳಬಹುದು. 

ರುಚಿಕಾ ಯೋಗದವರಿಗೆ ಹೊಡೆತ,  ಬೀಳುವುದು, ಏಳುವುದು, ಗಾಯ ರಕ್ತ, ಅಪಘಾತ, ಮೂಳೆಮುರಿತ, ಪ್ರಾಣಾಂತಿಕ ಅಪಾಯಗಳು ಇವರಿಗೆ ಲೆಕ್ಕವೇ ಇಲ್ಲ. ಯಾವುದಕ್ಕೂ ಕೇರೇ ಮಾಡರು. ಸಾಹಸ ವೃತ್ತಿಗಳಲ್ಲಿ ಇವರಿಗೆ ಬಹಳ ಆಸಕ್ತಿ. ರಿವರ್‌ ರ್ಯಾಫ್ಟಿಂಗ್‌ ಮಾಡುವುದು, ಪರ್ವತಾರೋಹಣ, ಮಾರ್ಷಲ್‌ ಆರ್ಟ್‌ನಲ್ಲಿ ಪರಿಣಿತಿ, ಕುದುರೆ ಸವಾರಿ, ಕತ್ತಿವರಸೆ, ಫ‌ುಟ್‌ಬಾಲ್‌ ಕ್ರಿಕೆಟ್‌ ನಂಥ ಕ್ರೀಡೆಗಳಲ್ಲಿ ಆಸಕ್ತಿ, ಅದನ್ನೇ ವೃತ್ತಿಯನ್ನಾಗಿಸಿಕೊಂಡವರೂ ಆಗಿರಬಹುದು. ಒಟ್ಟಿನಲ್ಲಿ ಸಾಹಸ  ಮತ್ತು ಧೈರ್ಯ ಇವರ ಜೀವನದ ಅವಿಭಾಜ್ಯ ಅಂಗವಾಗಿರುತ್ತದೆ. ಕೋಪಿಷ್ಠರೂ ಆಗಿರುತ್ತಾರೆ. ಪ್ರಾಣವನ್ನು ಕೊಡಲೂ, ಪ್ರಾಣವನ್ನು ತೆಗೆಯಲೂ ಹಿಂದೆಮುಂದೆ ನೋಡುವುದಿಲ್ಲ. ಎರಡರಲ್ಲೂ ಮಿತಿ ಇಲ್ಲ. ಇವರಿಗೆ ಒಳ್ಳೆಯ ಶಿಕ್ಷಣ ಸಂಸ್ಕಾರವಂತ ವಾತಾವರಣ ದೊರೆತರೆ ದೇಶಕ್ಕೆ ಇವರೊಂದು ಆಸ್ತಿಯಾಗಿಯೂ ಆಗುತ್ತಾರೆ. ತಮ್ಮ ಕುಟುಂಬಕೂ,R ಹುಟ್ಟೂರಿಗೂ ದೇಶಕ್ಕೂ ಹೆಸರು ತರುತ್ತಾರೆ. ಮಾಜಿ ವಿಶ್ವಸುಂದರಿ ಹಾಗೂ ಖ್ಯಾತ ಬಾಲಿವುಡ್‌ ನಟಿ ಐಶ್ವರ್ಯಾ ರೈ ರುಚಿಕಾ ಯೋಗದಲ್ಲಿ ಹುಟ್ಟಿದವರು. 

ಭದ್ರಯೋಗ

ಇನ್ನು ಭದ್ರಯೋಗಕ್ಕೆ ಬುಧ ಅಧಿಪತಿ. ಮಿಥುನ ಲಗ್ನವಾಗಿ, ಬುಧನು ಮಿಥುನದಲ್ಲಾಗಲೀ ಕನ್ಯಾದಲ್ಲಾಗಲೀ ಇರಬೇಕು ಅಥವಾ ಕನ್ಯಾಲಗ್ನವಾಗಿ ಬುಧನು ಕನ್ಯಾದಲ್ಲಾಗಲೀ ಮಿಥುನದಲ್ಲಾಗಲಿ ಇರಬೇಕು. ಇದು ಭದ್ರಯೋಗವೆನಿಸಿಕೊಳ್ಳುತ್ತದೆ. ಭದ್ರಯೋಗದಲ್ಲಿ ಜನಿಸಿದವರು ಬಹಳ ಬುದ್ಧಿಬಂತರು. ಬುಧನು ಬಂಧುಕಾರಕ. ಬುದ್ಧಿಕಾರಕ. ಭದ್ರಯೋಗದವರು ಬಂಧು ಬಾಂಧವರೊಡನೆ ಉತ್ತಮ ಸಂಬಂಧ ಹೊಂದಿರುತ್ತಾರೆ. ಇವರ ಐಕ್ಯೂ ತುಂಬಾ ಹರಿತ. ನೆನಪಿನ ಶಕ್ತಿಯೂ ಬಹಳ ತೀಕ್ಷ್ಣ. ಬ್ಯಾಂಕಿಂಗ್‌ ಕ್ಷೇತ್ರ, ಚಾರ್ಟೆಡ್‌ ಅಕೌಂಟೆಂಟ್‌, ಕಂಪ್ಯೂಟರ್‌ ಕ್ಷೇತ್ರ ಇವರಿಗೆ ಹೇಳಿ ಮಾಡಿಸಿದ ಕ್ಷೇತ್ರಗಳು. ಈಗಿನ ಮೊಬೈಲ್‌ ಕ್ಷೇತ್ರದ ದೊರೆಯಾಗಬಹುದು. ಬುದ್ಧಿವಂತಿಕೆ ಎನ್ನುವುದು ಇವರ ಕಣಕಣದಲ್ಲೂ ಹರಿಯುತ್ತಿರುತ್ತದೆ.ಕ್ವಿಜ್‌ ಕಾರ್ಯಕ್ರಮಗಳಲ್ಲಿ ಇವರು ಭಾಗವಸಿದರೆ ಮೊದಲ ಬಹುಮಾನ ಗ್ಯಾರಂಟಿ. ಕ್ವಿಜ್‌ ಕಾರ್ಯಕ್ರಮಗಳ ಆಯೋಜಕರೂ ಆಗಿರುತ್ತಾರೆ. ವಿಜಾnನ, ಗಣಿತ, ಅಕೌಂಟ್ಸ್‌ ಮತ್ತು ತಂತ್ರಜಾnನ ಇವರಿಗೆ ಅಚ್ಚುಮೆಚ್ಚಾದ ಕ್ಷೇತ್ರ.  ಈ ಕ್ಷೇತ್ರಗಳಲ್ಲಿ ಇವರನ್ನು ಮೀರಿಸುವವರು ಯಾರೂಇಲ್ಲ. ಕ್ರೀಡೆಯಲ್ಲೂ ಇವರು ಗಮನ ಸೆಳೆಯುತ್ತಾರೆ. ಇದಕ್ಕೆ ಉದಾಹರಣೆ ಭಾರತೀಯ ಕ್ರಿಕೆಟ್‌ನ ಮಾಜಿ ನಾಯಕ, ಹಾಲಿ ಆಟಗಾರ ಮಹೇಂದ್ರ ಸಿಂಗ್‌ ಧೋನಿ. ಧೋನಿ ಭದ್ರಯೋಗದ ಜಾತಕದವರು. ಒಮ್ಮೊಮ್ಮೆ ನೆಲಕ್ಕೆ ಬಿದ್ದರೂ ಅಷ್ಟೇ ವೇಗವಾಗಿ ಎದ್ದು ನಿಲ್ಲುತ್ತಾರೆ. ಇಂಥವರಿಗೆ ದೌರ್ಬಲ್ಯಗಳು ಕಡಿಮೆ. 

ಭದ್ರಯೋಗದವರ ಮಾತೂ ಸಹ ಅತಿ ಬುದ್ಧಿವಂತಿಕೆಯಿಂದ ಕೂಡಿರುತ್ತದೆ. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಅತಿ ನಾಜೂಕಾದ ಮಾತುಕತೆಗೆ ಇವರು ಸಿದ್ಧಹಸ್ತರು. ಯಾರನ್ನಾದರೂ ಕನ್‌ವಿನ್ಸ್‌ ಮಾಡುವುದು ಇವರಿಗೆ ಸುಲಭ. ಹೀಗಾಗಿ ಇವರು ಇನುÒರೆನ್ಸ್‌ ಕೇತ್ರದಲ್ಲೂ ಹೆಸರು ಮಾಡುತ್ತಾರೆ. ಒಳ್ಳೆಯ ಎಂಜಿನಿಯರ್‌ಗಳು ಆಗಿರುತ್ತಾರೆ. ಅಣೆಕಟ್ಟು ಕಟ್ಟುವುದು, ಕಟ್ಟಡಗಳ ಸಂಕೀರ್ಣಗಳನ್ನು ನಿರ್ಮಿಸುವುದು ವಿಮಾನ ಕ್ಷೇತ್ರ, (ಏರೋನಾಟಿಕ್‌ ಎಂಜಿನಿಯರ್‌)  ದೊಡ್ಡ ದೊಡ್ಡ ಮೆನುಗಳನ್ನು ತಯಾರಿಸುವುದು, ಯಂತ್ರಮಾನವವನ್ನು ನಿರ್ಮಿಸುವುದು ಇಂಥವೆಲ್ಲಾ 
ಭದ್ರಯೋಗದವರಿಗೆ ಸುಲಭ.  ದೈಹಿಕ ಶಕ್ತಿಯಿಂದ ಮಾಡಲಾಗದ್ದನ್ನು ಬುದ್ಧಿವಂತಿಕೆಯಿಂದ ಸುಲಭ ಮಾಡಿಕೊಳ್ಳುತ್ತಾರೆ. ಶಕ್ತಿಗಿಂತ ಯುಕ್ತಿ ಮೇಲು ಎನ್ನುವ ನಾಣ್ನುಡಿ ಇವರಿಗೆ ತುಂಬಾ ಅನ್ವಯವಾಗುತ್ತದೆ. ವ್ಯಾಪಾರ ಕ್ಷೇತ್ರದಲ್ಲೂ ಇವರದ್ದು ಎತ್ತಿದ ಕೈ. ಬಹುದೊಡ್ಡ ಅಂಗಡಿ ಮಳಿಗೆಗಳನ್ನು ಹೊಂದಿರುತ್ತಾರೆ. ಬುದ್ಧಿಗೆ ಕಸರತ್ತು ಕೊಡುವ ಯಾವುದೇ ಕೆಲಸವಾಗಲೀ ಇವರು ಚಾಲೆಂಜಾಗಿ ತೆಗೆದುಕೊಂಡು ಲೀಲಾಜಾಲವಾಗಿ ಮಾಡಿ ಮುಗಿಸುತ್ತಾರೆ. ತಮ್ಮ ಬುದ್ಧಿವಂತಿಕೆ ಸೃಜನಶೀಲತೆಯಿಂದ ಬಲು ಬೇಗ ಪ್ರಸಿದ್ಧಿಗೆ ಬರುತ್ತಾರೆ. ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತವೆ.  ಇವರು ಸುಲಭದಲ್ಲಿ ಸೋಲೊಪ್ಪುವುದೂ ಇಲ್ಲ. ಎಲ್ಲ ವಿಷಯದಲ್ಲೂ ಅಚ್ಚುಕಟ್ಟು ಶುಚಿ ಬಯಸುವ ಜನ. 

ಬುಧನ ಬಣ್ಣ ಹಸಿರು. ವಾರ: ಬುಧವಾರ. ರತ್ನ: ಪಚ್ಚೆ. ಸಂಖ್ಯೆ: ಐದು. ಧಾನ್ಯ: ಹೆಸರು. ಅಧಿದೇವತೆ: ವಿಷ್ಣು. 

ಮಾಲವೀಯ ಯೋಗ
ಮಾಲವೀಯ ಯೋಗಕ್ಕೆ ಶುಕ್ರ ಅಧಿಪತಿ. ವೃಷಭ, ತುಲಾ ಶುಕ್ರನಿಗೆ ಸ್ವಂತ ಮನೆಗಳು. ಮೀನ ರಾಶಿ ಶುಕ್ರನಿಗೆ ಉತ್ಛ ಸ್ಥಾನ. ಹೀಗಾಗಿ ಈ ಮೂರೂ ರಾಶಿಗಳಲ್ಲಿ ಯಾವುದಾದರೂ ರಾಶಿ ಲಗ್ನವಾಗಿ ಅದರಲ್ಲಿ ಶುಕ್ರನಿರಬೇಕು. ಶುಕ್ರ ಸುಖಕಾರಕ. ಲಲಿತ ಕಲೆಗಳ ಅಧಿದೇವತೆ. ಶುಕ್ರನು ದಾನವ ಗುರುವಾಗಿದ್ದರೂ ಸುಂಕುಚಿತ ಸ್ವಭಾವದವನು. ಸೌಮ್ಯಗ್ರಹ. ಮಾಲವೀಯ ಯೋಗದ ಜಾತಕರು ಬಹಳ ನಾಜೂಕಿನವರು. ಸೂಕ್ಷ್ಮಜೀವಿಗಳು. ಸುಂದರಾಂಗರು. 

ಮಾಲವೀಯ ಯೋಗದವರು ಹುಟ್ಟಿನಿಂದಲೇ ಅದೃಷ್ಟವಂತರು. ಇವರಿರುವ ಕಡೆ ಐಶ್ವರ್ಯ ಕಾಲುಮುರಿದು ಬಿದ್ದಿರುತ್ತದೆ. ಮಾಲವೀಯ ಯೋಗದವರು ಚಿಕ್ಕಂದಿನಿಂದಲೇ ಸುಖವಾಗಿ ಬೆಳೆಯುತ್ತಾರೆ. ತಂದೆ ಎಷ್ಟು ಬಡವನಾದರೂ ಇವರು ಹುಟ್ಟಿದ ನಂತರ ಶ್ರೀಮಂತನಾಗುತ್ತಾನೆ. ಮಾಲವೀಯ ಯೋಗದವರು ಅಲಂಕಾರಪ್ರಿಯರು. ಶುಕ್ರ ಕಲೋಪಾಸಕ. ಹೀಗಾಗಿ ಈ ಯೋಗದವರು ಕಲೆಗಳ ಆರಾಧಕರಾಗಿರುತ್ತಾರೆ. ಸಂಗೀತ, ಸಾಹಿತ್ಯ, ನೃತ್ಯ ಸಂಗೀತವಾದ್ಯಗಳ ವಾದನ, ಕಸೂತಿ, ಟೈಲರಿಂಗ್‌, ಶಿಲ್ಪಕಲೆ, ವಾಸ್ತುಕಲೆ, ವಾಸ್ತುಶಾಸ್ತ್ರ, ಕಟ್ಟಡ ವಿನ್ಯಾಸ, ಕುಸುರಿ ಕೆಲಸ, ಆಭರಣಗಳನ್ನು ತಯಾರುಮಾಡುವುದು, ಆಭರಣಗಳ ಕುಸುರಿ ಕಲೆ ವಿನ್ಯಾಸ ಮಾಡುವುದು, ಮೂರ್ತಿ ಕೆತ್ತುವುದು, ಕುಂದನ್‌ ವರ್ಕì ಬಾಟಿಕ್‌ ವರ್ಕ್‌ ಹೀಗೆ ಯಾವುದಾದರೂ ಒಂದು ಕಲೆಯಲ್ಲಿÉ ಪರಿಣಿತರಾಗಿರುತ್ತಾರೆ. ಮಾಲವೀಯ ಯೋಗದವರು ಬಹುದೊಡ್ಡ ಕಲಾವಿದರೂ ಆಗಿರುತ್ತಾರೆ. 

ಮಾಲವೀಯ ಯೋಗದವರು  ಆಹ್ಲಾದಕರ ಪ್ರವೃತ್ತಿಯವರು. ತಾವೂ ಖುಷಿಯಾಗಿದ್ದು ತಮ್ಮ ಸುತ್ತಲಿನವರನ್ನೂ ಖುಷಿಯಾಗಿಡುತ್ತಾರೆ. ಕಷ್ಟವೆನ್ನುವುದು ಇವರ ಜೀವನದಲ್ಲಿ ಕಡಿಮೆ. ರಾಜಯೋಗವನ್ನು ಅನುಭವಿಸುತ್ತಾರೆ. ತಮ್ಮ ಸುಖ ಐಷಾರಾಮಕ್ಕೆ ಯಾವುದೇ ಕೊರತೆ ಮಾಡಿಕೊಳ್ಳುವುದಿಲ್ಲ. 

ಮಾಲವೀಯ ಯೋಗದವರು ಸೃಜನಶೀಲರು. ಕಲ್ಪನಾಶೀಲರು. ಭಾವುಕರು.ಶೃಂಗಾರ ಪ್ರಿಯರು. ರಸಿಕರು. ಜಿಹ್ವಾಚಾಪಲ್ಯ ಹೆಚ್ಚು. ಒಳ್ಳೊಳ್ಳೆಯ ಊಟ ತಿಂಡಿಗಳನ್ನು ಬಯಸುತ್ತಾರೆ. ಹೇಗೋ ಜೀವನ ಮಾಡುವುದಿಲ್ಲ. ಆ ಹೊತ್ತಿಗೆ ಏನಿದ್ದರೆ ಅದು ತಿನ್ನುವುದು, ಯಾವುದೋ ಒಂದು ಬಟ್ಟೆ ಧರಿಸುವುದು ಹೇಗೋ ಇದ್ದು ಬಿಡುವುದು ಇವರ ಜಾಯಮಾನವಲ್ಲ. ಇವರು ಎಲ್ಲದರಲ್ಲೂ ಅಚ್ಚುಕಟ್ಟು ಬಯಸುವವರು. ರುಚಿಕಟ್ಟಾದ ಊಟ, ಅಚ್ಚುಕಟ್ಟಾದ ಮನೆ, ವೇಷಭೂಷಣಗಳಲ್ಲಿ ನಾಜೂಕು ಎಲ್ಲವೂ ಇರಬೇಕು. ಇವರಿದ್ದ ಕಡೆ ಎಲ್ಲವೂ ನೀಟಾಗಿ ಶುಚಿಯಾಗಿ ಇರಬೇಕು. ಆಯಾ ವಸ್ತುಗಳು ಎಲ್ಲಿರಬೇಕೋ ಅಲ್ಲಿ ಇರಬೇಕು. ತಮ್ಮ ದೇಹದ ಮೇಲೆ ಒಂದು ಸಣ್ಣ ಗೀರು ಉಂಟಾದರೂ ತಮ್ಮ ಸೌದರ್ಯಕ್ಕೆಲ್ಲಿ ಧಕ್ಕೆ ಬರುವುದೋ ಎಂದು ಭಯ ಪಡುತ್ತಾರೆ. ಅಷ್ಟು ಸೂಕ್ಷ್ಮಜೀವಿಗಳು. ಹೆಚ್ಚು ಬಿಸಿಲಾದರೂ ಸಹಿಸರು. 

ಶುಕ್ರನ ದೇವತೆ ಲಕ್ಷಿ$¾à ಪಾರ್ವತಿ ಅಥವಾ ಸರಸ್ವತಿ. ಯಾವ ಶಕ್ತಿದೇವತೆಯಾದರೂ ಶುಕ್ರ ಅವರಿಗೆ ಅಧೀನ. ಶುಕ್ರನ ರತ್ನ: ವಜ್ರ. ಧಾನ್ಯ: ಅವರೆ. ಸಂಖ್ಯೆ: 6. ಬಣ್ಣ: ಬಿಳಿ. ಲೋಹ: ಬೆಳ್ಳಿ.

ಹಂಸಯೋಗ, ಶಶಯೋಗ, ಮಾಲವೀಯ ಯೋಗ, ಭದ್ರಯೋಗ, ರುಚಿಕಾ ಯೋಗ ಈ ಯಾವ ಯೋಗದಲ್ಲಿ ಜನಿಸಿದರೂ ಅವರು ಅದೃಷ್ಟವಂತರು. ಪ್ರಖ್ಯಾತರು, ಸುಪ್ರಸಿದ್ಧರೂ ಆಗುತ್ತಾರೆ. ದೊಡ್ಡ ಸ್ಥಾನಮಾನಗಳು ಇವರಿಗೆ ಸಿಗುತ್ತವೆ. ಸಾಮಾಜಿಕ ಗೌರವ, ಜನಾನುರಾಗ, ಎಲ್ಲವೂ ಇವರಾದಾಗಿರುತ್ತದೆ. ಯಾವುದೇ ಕ್ಷೇತ್ರದಲ್ಲಾದರೂ ಇವರು ಉನ್ನತ ಸ್ಥಾನದಲ್ಲಿ ಇರುತ್ತಾರೆ. 

 ವೀಣಾ ಚಿಂತಾಮಣಿ

ಟಾಪ್ ನ್ಯೂಸ್

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.