ನಾದಮಯ ಈ ಕುಟುಂಬವೆಲ್ಲಾ…!


Team Udayavani, Apr 28, 2018, 1:31 PM IST

254411.jpg

ಸುಮಾರು 165 ಜನಕ್ಕೆ ಸಂಗೀತ ಕೇಳಿಸುವ, ಅಭಿರುಚಿ ಮೂಡಿಸುವ ಬಗೆ ಹೇಗೆ? ಎಲ್ಲರನ್ನೂ ಕರೆಸಿ ಒಂದೇ ಸೂರಿನಲ್ಲಿ ಸಂಗೀತ ಕೇಳಿಸಬೇಕು. ಇಲ್ಲವೇ ನಿಗಧಿತ ಸಮಯಕ್ಕೆ ಸ್ಕೈಪ್‌ನಲ್ಲಿ ಅಷ್ಟೂ ಜನಕ್ಕೂ ಹಾಡಿ ಕೇಳಿಸಬಹುದು? ಇದು ಬಿಟ್ಟು ಇನ್ನೇನು ಮಾಡಬಹುದು?

 ಇಲ್ಲಿ ಮಾಡಿದ್ದಾರೆ ನೋಡಿ. ‘ನಾದಮಯ ಈ ಲೋಕವೆಲ್ಲ’ ಎಂಬ ವಾಟ್ಸ್‌ಪ್‌ ಗ್ರೂಪ್‌ ಮೂಲಕ. ಅಂಗೈ ಅಗಲದ  ಮೊಬೈಲ್‌ನಲ್ಲೇ ಪ್ರತಿ ದಿನ ಸಂಗೀತ ಕೇಳುವ ಯೋಗ. ಈ ಗುಂಪಿನ ಸದಸ್ಯರಿಗೆ ಮುಖತಃ ಭೇಟಿಯಾಗುವ ಅವಕಶಾಶ ಇಲದಿದ್ದರೂ  ಪರಸ್ಪರ ಗೌರವ, ವಿಶ್ವಾಸವಿದೆ. ಇವರೆಲ್ಲಾ ಸಮಾನ ಮನಸ್ಕ ಸಂಗೀತ ಪ್ರೇಮಿಗಳು. ಆದರೆ  ಒಂದೇ ಊರಿನವರಲ್ಲ. ಕೆಲವರು ನಮ್ಮ ರಾಜ್ಯದಲ್ಲಿ, ಹಲವರು ಅನ್ಯ ರಾಜ್ಯದಲ್ಲಿ, ಇನ್ನೂ ಕೆಲವರು ಅನ್ಯ ದೇಶದಲ್ಲಿದ್ದರೂ ಎಲ್ಲರೂ ಪ್ರತಿದಿನ ಭೇಟಿಯಾಗುತ್ತಿರುತ್ತಾರೆ. ವಾಟ್ಸ್‌ ಆ್ಯಪ್‌ ಮೂಲಕ. 

ವರ್ಷಕ್ಕೆ ನೂರಾರು ಸಂಗೀತ ಕಾರ್ಯಕ್ರಮಗಳಾಗುವ ಧಾರವಾಡದಲ್ಲಿದ್ದರೂ ಸಂಸಾರದ ಜಂಜಡದಲ್ಲಿ ಅವುಗಳಿಗೆ ಹಾಜರಾಗುವುದು ಕಡಿಮೆಯೇ ಆಗಿತ್ತು. ಈ ಕೊರಗು ನಿವಾರಿಸಿದ್ದು ಎರಡು ವರ್ಷಗಳ ಹಿಂದೆ “ನಾದಮಯ’ ಎಂಬ ವಿಶಿಷ್ಟ ಗುಂಪು.

ಗ್ರೂಪಿನ ರೂವಾರಿಗಳು
ಸಾಮಾಜಿಕ ಕಾರ್ಯಕರ್ತ ನರಸಿಂಹ ರಾಯಚೂರ ಅವರ ಕನಸಿನ ಕೂಸು ಈ ಗುಂಪು. ಧಾರವಾಡ ಮೂಲದ ನರಸಿಂಹ ರಾಯಚೂರು, ವಿದ್ಯಾಭಾಸದ ದಿನಗಳಿಂದಲೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳಿಗೆ ಹೋಗುತ್ತ ಸಂಗೀತ ಪ್ರೀತಿ ಬೆಳೆಸಿಕೊಂಡವರು. ವೃತ್ತಿಯ ನಿಮಿತ್ತ ವಿಜಯಪುರದಲ್ಲಿ ನೆಲೆಸಿದ ಬಳಿಕ ಧಾರವಾಡವನ್ನು ನೆನಪಿಸಿಕೊಳ್ಳುತ್ತ, ಅಂತಹ ಸಂಗೀತ ಕಾರ್ಯಕ್ರಮಗಳು ಈ ಊರಿನಲ್ಲಿ ಇಲ್ಲವಲ್ಲ ಎಂದು ಹಳಹಳಿಸುತ್ತಿದ್ದರು. ಹೀಗೆ ಬೇರೆ ಬೇರೆ ನಗರದಲ್ಲಿರುವ ಅವರ ಸ್ನೇಹಿತರು ಫೋನ್‌ ಮಾಡಿದಾಗೆಲ್ಲ ಇದೇ ಬಗೆಯ ಭಾವನೆಗಳನ್ನು ತೋಡಿಕೊಳ್ಳುತ್ತಿದ್ದರು.

‘ನರಸಿಂಹ, ಶಾಸ್ತ್ರೀಯ ಸಂಗೀತಾ ಕೇಳಾಕ ಒಂದು ಗ್ರುಪ್‌ ಮಾಡಪಾ ನೀ. ಏನರಾ ಕೆಲ್ಸಾ ಮಾಡಿದ್ರ ಚಲೋನೂ ಮಾಡತಿ, ಜನರನ್ನೂ ಸುಧಾರಿಸ್ತಿ’ ಎಂಬ ಸ್ನೇಹಿತರ ಒತ್ತಾಸೆಯಿಂದ 2015ರಲ್ಲಿ ನಾದಮಯ ವಾಟ್ಸ್‌ಪ್‌ ಗ್ರೂಪ್‌ ಶುರು ಮಾಡಿದರು. ಆರಂಭದಲ್ಲಿ ದಿನಕ್ಕೆ ಮೂರು-ನಾಲ್ಕು ರಾಗಗಳ ಕ್ಲಿಪ್ಪಿಂಗ್ಸ್‌ ಹಾಕುತ್ತಿದ್ದರು. ಆಗ ಗುಂಪಿನ ಸದಸ್ಯರ ಸಂಖ್ಯೆ ಕೇವಲ 15. ಆರಂಭದಲ್ಲಿ ಕೇಳುಗರು ಮಾತ Åಇದ್ದ ಈ ಗುಂಪಿಗೆ  ಕ್ರಮೇಣ ಸಂಗೀತ ಕಲಿಯುವ ವಿದ್ಯಾರ್ಥಿಗಳು, ಸಂಗೀತಗಾರರು ಹಾಗೂ ಸಂಗೀತ ವಿಮರ್ಶಕರೂ ಸೇರಿಕೊಂಡರು ಪರಿಣಾಮವಾಗಿ,  ಆರು ತಿಂಗಳಲ್ಲಿ ಸದಸ್ಯರ ಸಂಖ್ಯೆ 80ಕ್ಕೇರಿತು. ಸದ್ಯ 165 ಸದಸ್ಯರಿಂದ ಸಂಗೀತ ಸೇವೆ ಆಗುತ್ತಿದೆ.

ಗುಂಪಿನ ಚಟುವಟಿಕೆಗೆ ಅತ್ಯಂತ ಶಿಸ್ತಿನ ರೂಪ ಕೊಡಬೇಕೆನ್ನುವ ಹಂತದಲ್ಲಿಯೇ ಸ್ವೀಡನ್‌ನಲ್ಲಿರುವ ಎನ್‌ಆರ್‌ಐ, ಮಂಜುಳಾ ದೇಶಪಾಂಡೆ ಜೊತೆಯಾದರು. ಅವರು ಶಾಸ್ತ್ರೀಯ ಸಂಗೀತ ಕಲಿತವರು. ಧಾರವಾಡ ಮೂಲದ ಅವರಿಗೂ, ಸ್ವೀಡನನ್ನಿನಲ್ಲಿ ತಮಗೆ ಆಸಕ್ತಿ ಇರುವ ಸಂಗೀತದ ವಿಷಯವನ್ನು ಹಂಚಿಕೊಳ್ಳಲು ಅವಕಾಶವಿಲ್ಲ ಎಂಬ ಕೊರಗಿತ್ತು. ಗುಂಪಿನ ಸದಸ್ಯರ ಶಿಸ್ತು, ಸಂಗೀತಾಸಕ್ತಿ ಕಂಡು ಹುರುಪುಗೊಂಡ ಅವರು, ಇದಕ್ಕೊಂದು ಶಿಕ್ಷಣದ ಸ್ವರೂಪ ಕೊಡಲು ಮುಂದಾಗಿ ಮತ್ತೂಬ್ಬ ಅಡ್ಮಿನ್‌ ಆದರು.

ವಾರಕ್ಕೊಂದು ರಾಗವನ್ನು ಪರಿಚಯಿಸುವ ಪರಿಕಲ್ಪನೆಯೊಂದಿಗೆ ಬದಲಾವಣೆ ಶುರುವಾಯಿತು. ಯಮನ್‌ ಮೂಲಕ ಆರಂಭವಾದ ರಾಗ ಪರಿಚಯದಲ್ಲಿ ಲಕ್ಷಣಗೀತೆ, ರಾಗದ ಆರೋಹ – ಅವರೋಹಣ, ವಾದಿ – ಸಂವಾದಿ, ವಜ್ಯì ಸ್ವರ, ಕೋಮಲ ಸ್ವರ, ತೀವ್ರ ಸ್ವರ – ಹೀಗೆ ಸಂಪೂರ್ಣ ವಿವರಗಳಿರುತ್ತವೆ. ಸೋಮವಾರ ರಾಗದ ವಿವರಣೆಯೊಂದಿಗೆ ಗಾಯಕರ ಕ್ಲಿಪ್ಪಿಂಗ್ಸ್‌ ಹಂಚುತ್ತಾರೆ. ಮಂಗಳವಾರ ವಾದ್ಯ ಸಂಗೀತ ಹಾಗೂ ಆ ರಾಗದ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಮಾನ ರಾಗವನ್ನು (ಉದಾ: ಹಿಂದೂಸ್ತಾನಿಯ ಪೂರ್ವಿ ರಾಗ, ಕರ್ನಾಟಕಿಯ ಕಾಮವರ್ಧಿನಿ) ಪರಿಚಯಿಸಿ, ಕ್ಲಿಪ್ಪಿಂಗ್ಸ್‌ ಹಾಕುತ್ತಾರೆ. ಬುಧವಾರ ವಾದ್ಯ ಸಂಗೀತ, ಲಘು ಶಾಸ್ತ್ರೀಯ ಸಂಗೀತವಿರುತ್ತದೆ.  ಗುರುವಾರ ಲಘು ಸಂಗೀತ, ಶುಕ್ರವಾರ ಅದೇ ರಾಗಾಧಾರಿತ ಸಿನಿಮಾ ಹಾಡುಗಳಿರುತ್ತವೆ. ಶನಿವಾರ ಗುಂಪಿನ ಸದಸ್ಯರು ತಮಗಿಷ್ಟವಾದ ಸಂಗೀತವನ್ನು ಹಂಚಿಕೊಳ್ಳಬಹುದು. ಪ್ರತಿ ರವಿವಾರ ಗುಂಪಿನ ನಾಲ್ವರು ಸದಸ್ಯರು ಹಾಡಿದ ಹಾಡುಗಳನ್ನು ಪೋಸ್ಟ್‌ ಮಾಡುತ್ತಾರೆ. “ಎರಡು ವರ್ಷಗಳಿಂದ ಭೂಪ್‌, ದೇಶ್‌ಕಾರ್‌, ದುರ್ಗಾ, ದರ್ಬಾರಿ, ಮಾಲಕಂಸ, ಕಾಲಿಂಗಡಾ ಸಹಿತ 60 ರಾಗಗಳನ್ನು ಪರಿಚಯಿಸಿದ್ದೇವೆ’ ಎನ್ನುತ್ತಾರೆ ಮಂಜುಳಾ.

ರಾಗ, ಕಲಾವಿದರು ಇತ್ಯಾದಿ ಮಾಹಿತಿಗಾಗಿ ಪುಸ್ತಕ, ಅಂತಜಾìಲ, ಧ್ವನಿಮುದ್ರಿಕೆ, ವೀಡಿಯೋಗಳು, ಸಂವಾದ ಇತ್ಯಾದಿ ಆಕರಗಳನ್ನು ಮಂಜುಳಾ ತಡಕಾಡುತ್ತಾರೆ. ಅದೂ ದೂರದ ಸ್ವೀಡನ್ನಿನಲ್ಲಿ ಕುಳಿತು ! ತಮ್ಮ ಗೃಹಕೃತ್ಯ, ಪಿಎಚ್‌.ಡಿ. ಅಧ್ಯಯನ, ಅಧ್ಯಾಪನಗಳ ನಡುವೆ ಅವರು ಈ ಕೆಲಸ ಮಾಡುತ್ತಾರೆ.  ಹಲವು ಆಕ‌ರಗಳಿಂದ ಪಡೆದ ಮಾಹಿತಿಗಳನ್ನು ಎಡಿಟ್‌ ಮಾಡಿ ವಾಟ್ಸ್‌ಆ್ಯಪ್‌ ಜಾಯಮಾನಕ್ಕೆ ತಕ್ಕಂತೆ ಹೊಂದಿಸುವುದೂ ದೊಡ್ಡ ಸವಾಲು.

“ಕೇವಲ ಸಂಗೀತ ಮಾತ್ರ ಅಲ್ಲ, ತಂತ್ರಜಾnನದ ಅರಿವು ಕೂಡಾ ನನಗಾಗೇತಿ. ಸಂಗೀತವನ್ನು ಗ್ರುಪ್ಪಿನ್ಯಾಗಿರೋ ಸದಸ್ಯರು ಕೇಳ್ತಾರ. ಕೃತಜ್ಞತೆ ವ್ಯಕ್ತಪಡಿಸ್ತಾರ. ನನ್ನ ಶ್ರಮ ಸಾರ್ಥಕ ಅನಿಸ್ತದ. ಇದು ನನ್ನ ದಿನಚರಿಯ ಅವಿಭಾಜ್ಯ ಅಂಗ ಅನಕೊಂಡುಬಿಟ್ಟೇನಿ. ನನ್ನ ದೇಶದ ಜನರ ಜೊತಿಗೆ ನಾ ಇದ್ದೇನಿ ಅನ್ನೋ ಸಮಾಧಾನ ನನ್ನದು’ ಎನ್ನುವ ಮಂಜುಳಾ ಅವರ ಮಾತಿನಲ್ಲಿ ಧನ್ಯತೆ ಕಾಣಿಸುತ್ತದೆ.

ಸಂಗೀತಕ್ಕ ಮಿಲಿಟರಿ ಶಿಸ್ತು!
ಬೆಳಗ್ಗೆ ಆರು ಗಂಟೆಗೆ ಸಂಗೀತದ ಕ್ಲಿಪ್ಪಿಂಗ್‌ ಹಾಕುತ್ತಾರೆ. ರಾತ್ರಿ ಎಂಟು ಗಂಟೆಗೆ ಬೈರವಿ ಹಾಕಿದ ಮೇಲೆ ಬೇರಾವುದೇ ಪೋಸ್ಟ್‌ ಹಾಕುವಂತಿಲ್ಲ. ಸಂಗೀತಕ್ಕೆ ಸಂಬಂಧವಿರದ ಸಂದೇಶ, ಚಿತ್ರ, ವಿಡಿಯೋ ಅಥವಾ ಶುಭಾಶಯಗಳನ್ನು ಹಾಕಿದರೆ ಗುಂಪಿನಿಂದ ಹೊರದಬ್ಬಿಸಿಕೊಂಡರೆಂದೇ ಅರ್ಥ. ಅಂಥ ಸಂದೇಶ ಕಣ್ತಪ್ಪಿನಿಂದಾಗಿ ಗುಂಪಿಗೆ ಹೋಗಿದ್ದರೆ, ತತ್‌ಕ್ಷಣವೇ ಕ್ಷಮಾಪಣೆ ಕೇಳಿದರೆ ಬಚಾವ್‌ ಅಗಬಹುದಷ್ಟೇಯ ಸಂಗೀತದ ಹೊರತಾಗಿ ಇನ್ಯಾವುದೇ ವಿಷಯಕ್ಕೆ ಸಂಬಂಧಿಸಿ ಚಾಟ್‌ ಮಾಡುವುದಕ್ಕೂ ಅನುಮತಿ ಇಲ್ಲ.

ವಾರ್ಷಿಕೋತ್ಸವದ ಮೆರಗು
ವರ್ಷಕ್ಕೊಮ್ಮೆ ಧಾರವಾಡ ಅಥವಾ ಹುಬ್ಬಳ್ಳಿಯಲ್ಲಿ ಅಥವಾ ಬೆಂಗಳೂರಿನಲ್ಲಿ ಗುಂಪಿನ ಸದಸ್ಯರ ಪರಿಚಯ ಹಾಗೂ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಅದಕ್ಕೆ ಆಯಾ ಊರಿನ ಸದಸ್ಯರೇ ವ್ಯವಸ್ಥೆ ಮಾಡುತ್ತಾರೆ. ವರ್ಷದಲ್ಲಿ 10 ದಿನ ಗುಂಪಿನ ಸದಸ್ಯರು ಹಾಡಿದ, ನೃತ್ಯ ಮಾಡಿದ ವಿಡಿಯೋ ಅಥವಾ ಆಡಿಯೋ ಕ್ಲಿಪ್ಪಿಂಗ್‌ಗಳನ್ನು ದಿನಕ್ಕೆ 10ರಂತೆ ಹಾಕಿ ವಾರ್ಷಿಕೋತ್ಸವ ಆಚರಿಸುತ್ತಾರೆ.
ಶುದ್ಧ ಸಂಗೀತವನ್ನು ಕೇಳುವ, ಓದುವ, ಹಾಡುವ, ಸಂಚಿಕೊಳ್ಳುವ ಆರೋಗ್ಯಪೂರ್ಣ ಹವ್ಯಾಸ ಹುಟ್ಟುಹಾಕಿದ್ದು “ನಾದಮಯ ಈ ಲೋಕವೆಲ್ಲ’ ವಾಟ್ಸ್‌ಆ್ಯಪ್‌ ಗುಂಪಿನ ಹೆಚ್ಚುಗಾರಿಕೆ. ಇದು ನರಸಿಂಹ ರಾಯಚೂರ ಹಾಗೂ ಮಂಜುಳಾ ದೇಶಪಾಂಡೆ ಅವರಿಂದ ಸಾಧ್ಯವಾಯಿತೆಂದು ಸದಸ್ಯರು ಹೆಮ್ಮೆಯಿಂದ ಹೇಳುತ್ತಾರೆ. ಗುಂಪಿಗೆ ಬಂದ ಮೇಲೆ ಸಂಗೀತವನ್ನು ಕೇಳುವುದರ ಜೊತೆಗೆ ಹಾಡುತ್ತಿದ್ದೇನೆ ಎನ್ನುತ್ತಾರೆ.  81ರ ಹರೆಯದ ಕ್ಯಾ| ಮುನ್ಶಿ ಅವರು. ಇಲ್ಲಿ ಸಂಗೀತ ಕೇಳುತ್ತಲೇ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತಾ ರಾಗಜಾnನವನ್ನು ಹೆಚ್ಚಿಸಿಕೊಂಡಿದ್ದೇನೆ ಎನ್ನುತ್ತಾರೆ ಡಾ| ಶಿವಯೋಗಿ ಬಳಿಗಾರ್‌. ಕಲಾದರಾದ ಹರೀಶ ಹೆಗಡೆ, ಗೌರಿ, ವಿದ್ಯಾಶ್ರೀ, ಕವಿತಾ ಮುಂತಾದವರೂ ಸಕ್ರಿಯರಾಗಿದ್ದಾರೆ.
ಕೊಡುವುದೇನು ಕೊಂಬುದೇನು ಒಲವು, ಸ್ನೇಹ, ಪ್ರೇಮ- ಎನ್ನುವ ಬೇಂದ್ರೆಯವರ ಕವಿತೆಯ ಸಾಲು ಇಲ್ಲಿ ಸಾಕಾರವಾಗಿದೆ.

 ಮಾಲತಿ ಹೆಗಡೆ

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.