ಬೀಸಣಿಕೆ ಬಾಲದ ಬಿಳಿ ಕುತ್ತಿಗೆ ಹುಳ ಕುಡುಕ
Team Udayavani, Jan 27, 2018, 4:17 PM IST
ಟಿಂಟಿಣಿ, ಟಿಂಟಿಣಿ, ಟಿಂಟಿಣಿ ಎಂದು ಗಜ್ಜೆ ಸಪ್ಪಳದಂತೆ ಕೂಗುತ್ತದೆ. ಹೀಗೆ ಕೂಗುವಾಗ ತನ್ನ ಬಾಲವನ್ನು ಬೀಸಣಿಕೆಯಂತೆ ಎತ್ತಿ -ಆಚೆ ಈಚೆ ಕುಣಿಸಿ -ನಂತರ ಮಡಚಿಕೊಳ್ಳುವುದು. ಕೀಟಗಳನ್ನು ಹಿಡಿದಾಗ ವಿಜಯೋತ್ಸಾಹವನ್ನು ತೋರಿಸಿಕೊಳ್ಳಲು ಸಿಳ್ಳೆ ಸಹ ಹೊಡೆಯುತ್ತದೆ.
ಇದನ್ನು ಬೂದು ಬಣ್ಣದ ಹುಳ ಹುಡುಕ ಎಂದೂ ಕರೆಯುತ್ತಾರೆ. ಇದು 17 ಸೆಂ.ಮೀ ಗಾತ್ರ ಚಿಕ್ಕ ಹಕ್ಕಿ. ಹೊಗೆ ಕಪ್ಪು ಅಥವಾ ಬೂದು ಬಣ್ಣ ಈ ಹಕ್ಕಿಯಲ್ಲಿ ಕಾಣುವುದರಿಂದ ಇದಕ್ಕೆ ಬೂದು ಬಣ್ಣದ ಬಿಳಿಕುತ್ತಿಗೆ ಹುಳ ಹಿಡುಕ ಎಂಬ ಹೆಸರು ಸಹ ಬಂದಿದೆ. ಅರ್ಧ ವರ್ತುಲಾಕಾರವಾಗಿ ಬಿಚ್ಚಿದಾಗ ಬೂದು ಬಣ್ಣದ ಗರಿ ಕಾಣುತ್ತದೆ. ತುದಿಯಲ್ಲಿ ಬಿಳಿ ಬಣ್ಣದ ಮಚ್ಚೆ ಇದೆ. ಬೀಸಣಿಗೆಯಂತೆ ತನ್ನ ಬಾಲ ಎತ್ತಿ ಬಿಚ್ಚಿ, ಆಚೆ , ಈಚೆ ಅಲ್ಲಾಡಿಸುತ್ತಾ, ಇಲ್ಲವೇ, ಬಾಲ ಮುಚ್ಚಿ ಭೂಮಿಗೆ ಸಮಾನಾಂತರವಾಗಿ ಕುಳಿತುಕೊಳ್ಳುವುದರಿಂದ ಇದರ ಹೆಸರಿನ ಜೊತೆ ಬೀಸಣಿಗೆ ಬಾಲದ ಹಕ್ಕಿ ಎಂಬ ಹೆಸರು ಬಂದಿದೆ.
‘ರಿಪಿಡುರಿಡಿಯಾ ಎಂಬ ಪ್ರಬೇಧಕ್ಕೆ ಸೇರಿದ ಹಕ್ಕಿ ಇದು. ಈ ಜಾತಿಯ ಹಕ್ಕಿಗಳ ಬಣ್ಣದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಇದ್ದರೂ ಸಹ ಇವು ಗೂಡು ಕಟ್ಟುವರೀತಿ – ಬಾಲವನ್ನು ಬೀಸಣಿಗೆಯಂತೆ ಮೇಲೆ ಎತ್ತಿ ಕುಳಿತುಕೊಳ್ಳುವ ಬಗೆ ಒಂದೇರೀತಿ ಇರುತ್ತದೆ.
ಈ ಲಕ್ಷಣ ಆಧರಿಸಿ ಇದನ್ನು ವರ್ಗೀಕರಿಸಲಾಗಿದೆ. ಪಶ್ಚಿಮ ಬಂಗಾಳ, ನೇಪಾಳ, ಸಿಕ್ಕಿಂನಲ್ಲೂ ಈ ಪಕ್ಷಿ ಕಾಣಸಿಗುತ್ತದೆ. 2ಚಿಕ್ಕ ಕಣ್ಣು ,ಬಿಳಿ ಹುಬ್ಬು , ಕುತ್ತಿಗೆ ಅದರ ಕೆಳಗೆ ಎದೆಯ ಭಾಗದಲ್ಲಿ ಚಿಕ್ಕ ಬಿಳಿ ಚುಕ್ಕೆ ಇದೆ. ಕೆಳಬರುತ್ತಾ ಬಿಳಿ ಬಣ್ಣದ ಹೊಟ್ಟೆ ಭಾಗದಲ್ಲಿ ಚುಕ್ಕೆ ಸೇರಿರುತ್ತದೆ. ಈ ಜಾತಿಯ ಹಕ್ಕಿ ಸಾಮಾನ್ಯವಾಗಿ ಕರ್ನಾಟಕದ ಪಶ್ಚಿಮ ಘಟ್ಟ ಕೇರಳ, ಮತ್ತು ಪಶ್ಚಿಮ ಘಟ್ಟದ ಪೂರ್ವಭಾಗದಲ್ಲೂ ಕಾಣಸಿಗುತ್ತದೆ. ಇದರ ಎದೆ ಭಾಗದ ಚುಕ್ಕೆ ಯಾವಾಗಲೂ ಇರುವುದೋ ಅಥವಾ ಮರಿಮಾಡುವ ಸಮಯದಲ್ಲಿ ಮಾತ್ರ ಉಂಟಾಗುವುದೋ? ಎಂಬ ವಿಷಯ ನಿಗೂಢವಾಗಿದೆ.
ಗುಬ್ಬಚ್ಚಿಗಿಂತ ಸ್ವಲ್ಪ ದೊಡ್ಡದಾಗಿರುವ ಈ ಹಕ್ಕಿ ಸದಾ ಚಟುವಟಿಕೆಯಿಂದ, ಉತ್ಸಾಹದಿಂದ, ಟೊಂಗೆಯ ಮೇಲೆ ಹಾರಾಡುತ್ತಾ -ತನ್ನ ಬಾಲ ಬೀಸಣಿಗೆಯಂತೆ ಕುಣಿಸುತ್ತಾ ಇರುತ್ತದೆ. ಇದರ ಬಾಲದ ತುದಿ ವರ್ತುಲಾಕಾರವಾಗಿದೆ. ಪುಕ್ಕ ಬಿಚ್ಚಿ, ಕೆಲವೊಮ್ಮೆ ಮಡಚಿ, ಬಾಲವನ್ನು ಇಳಿಬಿಟ್ಟು ಕುಣಿಯುವುದು ಇದರ ಕುಣಿಯುವ ಪರಿ. ಇದು ಕೇವಲ ಮರಿಮಾಡುವ ಸಮಯದಲ್ಲಿ ಮಾತ್ರವೋ ಅಥವಾ ಸದಾ ಹೀಗೆ ಕುಣಿಸುವುದೋ ಎಂಬುದನ್ನು ಅವಲೋಕಿಸಬೇಕಿದೆ. ಇದು ಕುರುಚಲು ಕಾಡು, ಹೊಲ , ಉದ್ಯಾನ ನವನಗಳಲ್ಲಿ ಕಾಣುವುದು. ಭಾರತ, ಬಾಂಗ್ಲಾದೇಶ, ಸಿಲೋನ್, ಆಸ್ಟ್ರೇಲಿಯಾಗಳಲ್ಲೂ ಕಾಣಸಿಗುತ್ತವೆ. ಬೇರೆ ದೇಶದ ತಳಿಗಳಲ್ಲಿ ಇದರ ಮುಂದಲೆ ಕೇಸರಿ ಇದೆ.
ಕೆಲವು ಜಾತಿಯ ಹಕ್ಕಿಗಳಲ್ಲಿ ಇದರ ಬಾಲ -ಇದರ ಶರೀರಕ್ಕಿಂತ ಉದ್ದವಾಗಿದೆ. ಅಲ್ಲದೇ ಇದರ ರೆಕ್ಕೆಯ ಉದ್ದಕ್ಕಿಂತ ಹೆಚ್ಚಿದೆ. ಇದರ ರೆಕ್ಕೆ ಫ್ಯಾನಿನಂತಿದೆ. ಇದು ತುಂಬಾ ಕರಾರುವಕ್ಕಾಗಿ ಹಾರಿ -ಅನೇಕ ರೆಕ್ಕೆ ಹುಳಗಳನ್ನು ಹಾರಿಕೆಯ ಮಧ್ಯದಲ್ಲೆ ಹಿಡಿದು ತಿನ್ನುತ್ತದೆ. ಟಿಂಟಿಣಿ, ಟಿಂಟಿಣಿ, ಟಿಂಟಿಣಿ ಎಂದು ಗಜ್ಜೆ ಸಪ್ಪಳದಂತೆ ಕೂಗುತ್ತದೆ. ಹೀಗೆ ಕೂಗುವಾಗ ತನ್ನ ಬಾಲವನ್ನು ಬೀಸಣಿಕೆಯಂತೆ ಎತ್ತಿ -ಆಚೆ ಈಚೆ ಕುಣಿಸಿ -ನಂತರ ಮಡಚಿಕೊಳ್ಳುವುದು. ನೀಲಗಿರಿ ಪರ್ವತ -ಹಿಮಾಲಯದ 2700 ಮೀಟರ್ ಎತ್ತರದ ಪ್ರದೇಶದಲ್ಲೂ ಇದು ಕಾಣುವುದು. ಕೆಲವೊಮ್ಮೆ ಚುಕ್-ಚುಕ್ ಎಂದು ಹಾರುವ ಹುಳ ಇಲ್ಲವೇ ಕೀಟಗಳನ್ನು ಹಿಡಿದಾಗ ವಿಜಯೋತ್ಸಾಹವನ್ನು ತೋರಿಸಿಕೊಳ್ಳಲು ಸಿಳ್ಳೆ ಸಹ ಹೊಡೆಯುತ್ತದೆ. ಸುಮಾರು 3 ಮೀಟರ್ ಎತ್ತರದ ಕಣಿವೆಯಲ್ಲಿ ಇದರ ಗೂಡನ್ನು ನಿರ್ಮಿಸುತ್ತದೆ. ಅದರಲ್ಲಿ ತಿಳಿ ಗುಲಾಬಿ ಬಣ್ಣದ ಮೊಟ್ಟೆಯ -ದಪ್ಪ ಭಾಗದಲ್ಲಿ ಕಂದುಗಪ್ಪು ಬಣ್ಣದ ಗೆರೆಗಳಿರುವ 2-3 ಮೊಟ್ಟೆ ಇಡುವುದು. ಇದರ ಮರಿಗಳ ಪೋಷಣೆ, ಗುಟುಕು ನೀಡುವುದು ,ಮರಿಗಳ ರಕ್ಷಣೆ ಗಂಡು-ಹೆಣ್ಣು ಸೇರಿ ಮಾಡುತ್ತವೆ.
ಪಿ.ವಿ.ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.