ಸೈನಾ, ಸಿಂಧು ನಂತರ ಮತ್ಯಾರು?
Team Udayavani, Jul 28, 2018, 1:05 AM IST
ಹಿಂದೊಂದು ಕಾಲವಿತ್ತು. ಭಾರತೀಯ ಬ್ಯಾಡ್ಮಿಂಟನ್ ಎಂದರೆ ಸಾಕು ಪ್ರಕಾಶ್ ಪಡುಕೋಣೆ ಹೆಸರು ಥಟ್ಟನೇ ಕೇಳುತ್ತಿತ್ತು. ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ನಿಂದ ಅವರು ಮರೆಯಾದ ನಂತರ, ಬಾನಂಗಳದಲ್ಲಿ ಮಿಂಚಿದ್ದೇ ಸೈನಾ ನೆಹ್ವಾಲ್. ಅವರ ನಂತರ, ಬಂದಿದ್ದು ಸಿಂಧು. ಈ ಇಬ್ಬರೂ, ಯುವ ಜನಾಂಗದ ಸ್ಫೂರ್ತಿಯ ತಾರೆಯಾಗಿ ಹೊರಹೊಮ್ಮಿದವರು. ಆದರೆ, ಭಾರತೀಯ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಆಟಗಾರ್ತಿಯಲ್ಲಿ, ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಿರುವವರು ಯಾರು? ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ರಂಗ ತನಗೆ ತಾನೇ ಕೇಳಿಕೊಳ್ಳಬೇಕಿರುವ ಪ್ರಶ್ನೆಯಿದು.
ಪುರುಷರ ವಿಭಾಗದಲ್ಲೇನೋ, ಶ್ರೀಕಾಂತ್, ಪಿ. ಕಶ್ಯಪ್, ಅಜಯ್ ಜಯರಾಮ್ ಮುಂತಾದವರಿದ್ದಾರೆ. ಆದರೆ, ಮಹಿಳೆಯರ ವಿಭಾಗದಲ್ಲಿ ಸೈನಾ, ಸಿಂಧು ಬಿಟ್ಟರೆ ಮುಂದೆ ಯಾರು ಎಂಬ ಪ್ರಶ್ನೆ, ಸದ್ಯದ ಮಟ್ಟಿಗೆ ಪ್ರಶ್ನೆಯಾಗಿಯೇ ಉಳಿದಿದೆ. ಸ್ವಲ್ಪ ಕೆದಕಿದರೆ, ಬರುವ ಹೆಸರು ಗಾಯತ್ರಿ ಗೋಪಿಚಂದ್. ರಾಷ್ಟ್ರೀಯ ಕೋಚ್ ಹಾಗೂ ಸೈನಾ, ಸಿಂಧು ಅವರ ಗುರು ಪುಲ್ಲೇಲ ಗೋಪಿಚಂದ್ ಪುತ್ರಿ. ಈಕೆಯನ್ನು ಬಿಟ್ಟರೆ, ಸಿಂಗಲ್ಸ್‌ನಲ್ಲಿ ಸೈನಾ, ಸಿಂಧು ಅವರನ್ನು ತುಂಬುವಂಥ ಮತ್ತೂಬ್ಬ ಭರವಸೆಯ ಆಟಗಾರ್ತಿಯ ಹೆಸರು ಕಾಣುತ್ತಿಲ್ಲ. ಇದು ನಿಜಕ್ಕೂ ಆತಂಕಕಾರಿ ವಿಚಾರ.
ಸೈನಾ ಸಾಧನೆ
ಅದು 2006ರ ಸಮಯ. ಭಾರತೀಯ ಬ್ಯಾಡ್ಮಿಂಟನ್ ರಂಗದಲ್ಲಿ ಸೈನಾ ನೆಹ್ವಲ್ ಎಂಬ ಮಿಂಚು ವಿಶ್ವ ಬಾನಂಗಳದಲ್ಲಿ ಮಿಂಚಲಾರಂಭಿಸಿತ್ತು. ಏಷ್ಯನ್ ಸ್ಯಾಟೆಲೈಟ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಸೈನಾ, ಈ ಪಂದ್ಯಾವಳಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆಯುವುದರೊಂದಿಗೆ ಪ್ರವರ್ಧಮಾನಕ್ಕೆ ಬಂದರು. ಅದೇ ವರ್ಷ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿ ಭರವಸೆಯ ಆಟಗಾರ್ತಿಯಾಗಿ ಮೂಡಿಬಂದರು.
ಅಲ್ಲಿಂದ ಮುಂದಕ್ಕೆ ಸೈನಾ ಹಿಂದಿರುಗಿ ನೋಡಿದ್ದೇ ಇಲ್ಲ. ಹಲವಾರು ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಘಟಾನುಘಟಿ ಕ್ರೀಡಾಳುಗಳಿಗೇ ನೀರು ಕುಡಿಸಿ ಮೇಲೆದ್ದು ಬಂದ ಸೈನಾ, ನೋಡ ನೋಡುತ್ತಿದ್ದಂತೆ ಬ್ಯಾಡ್ಮಿಂಟನ್ ರಂಗದಲ್ಲಿ ಮೇರು ಆಟಗಾರ್ತಿಯಾಗಿ ಕಂಗೊಳಿಸಿದರು. ಹಾಗೆ ಶುರುವಾದ ಅವರ ಗೆಲುವಿನ ಓಟ, ಕೆಲವೆಡೆ ಏರಿಳಿ ಕಂಡರೂ 2009ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮಟ್ಟದವರೆಗೂ ಬೆಳೆಯುವಂತೆ ಮಾಡಿತು.
ಬಿಡಬ್ಲೂéಎಫ್ ವಿಶ್ವ ಜೂನಿಯರ್‌ನಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ, ಏಷ್ಯನ್ ಗೇಮ್ಸ್‌ನಲ್ಲಿ ಮೂರು ಕಂಚು, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಎರಡು ಬಾರಿ ಚಿನ್ನ, ಏಷ್ಯನ್ ಗೇಮ್ಸ್‌ನಲ್ಲಿ ಮೂರು ಕಂಚು, ಬಿಡಬ್ಲೂéಎಫ್ನಲ್ಲಿ ಬೆಳ್ಳಿ, ಒಲಿಂಪಿಕ್ಸ್‌ನಲ್ಲಿ ಕಂಚು ಸೇರಿದಂತೆ ಇನ್ನೂ ಅನೇಕ ಪ್ರತಿಷ್ಠಿತ ಟೂರ್ನಿಗಳಲ್ಲಿ ಜಯ ಸಾಧಿಸುವ ಮೂಲಕ ಹಲವಾರು ಸಾಧನೆಗಳನ್ನು ಮಾಡಿದ ಸೈನಾ ಅವರದ್ದು ಒಂದು ಸಾಧನೆಯಾದರೆ ಅವರ ನೆರಳಿನಂತೆಯೇ ಬಂದು ಸದ್ದು ಮಾಡಿದವರು ಪಿ.ವಿ. ಸಿಂಧು.
ಸಿಂಧು ಹಾದಿ
ಪುಸರ್ಲ ವೆಂಕಟ ಸಿಂಧು ಅಥವಾ ಪಿ.ವಿ. ಸಿಂಧು, ಸೈನಾ ಅವರಂತೆಯೇ ಆಂಧ್ರಪ್ರದೇಶದ ಪ್ರತಿಭೆ. ಬಾಲಕಿಯರ ವಿಭಾಗದಲ್ಲಿದ್ದಾಗಲೇ 2011ರಲ್ಲಿ ನಡೆದಿದ್ದ ಡಗ್ಲಾಸ್ ಕಾಮನ್ವೆಲ್ತ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಿನ್ನ ಗೆಲ್ಲುವ ಮೂಲಕ ತಮ್ಮ ಸಾಧನೆಯ ಪರ್ವಕ್ಕೆ ಇತಿಶ್ರೀ ಹಾಡಿದ ಸಿಂಧು, ಅಲ್ಲಿಂದ ಮುಂದಕ್ಕೆ ಒಂದರ ಹಿಂದೊಂದು ಯಶಸ್ಸುಗಳನ್ನು ತಮ್ಮ ಬೆನ್ನಿಗೆ ಹಾಕಿಕೊಂಡು ಮುನ್ನಡೆದರು.
ಸೈನಾ ಅವರಿಗೆ ಗುರುವಾಗಿದ್ದ ಪುಲ್ಲೇಲ ಗೋಪಿಚಂದ್ ಅವರ ಗರಡಿಯಲ್ಲೇ ಪಳಗಿದ ಸಿಂಧು, ಸೈನಾ ಅವರು ಗೋಪಿಚಂದ್ ಅವರನ್ನು ತ್ಯಜಿಸಿದ ನಂತರ ಆ ಮಹಾಗುರುವಿನ ಪಟ್ಟ ಶಿಷ್ಯೆಯಾದರು. ಕಠಿಣ ಪರಿಶ್ರಮ, ನಿಲ್ಲದ ಪಯಣದಿಂದಾಗಿ ಹಂತ ಹಂತವಾಗಿ ಪ್ರವರ್ಧಮಾನಕ್ಕೆ ಬಂದ ಅವರು, ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದರು.
ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಸೇರಿ, ಏಷ್ಯನ್ ಕ್ರೀಡಾಕೂಟಗಳಲ್ಲಿ ಎರಡು ಚಿನ್ನ, ನಾಲ್ಕು ಕಂಚು, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚು, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಂದು ಬೆಳ್ಳಿ, ಎರಡು ಕಂಚು ತಮ್ಮದಾಗಿಸಿಕೊಂಡ ಹೆಗ್ಗಳಿಕೆಯೂ ಅವರ ಕಡೆಗಿದೆ.
ಹೀಗೆ, ಸೈನಾ ಹಾಗೂ ಸಿಂಧು ಮಿಂಚಲು ಶುರುವಾಗಿ ದಶಕಗಳೇ ಉರುಳಿದರೂ ಆ ಮಟ್ಟದ ಮತ್ತೂಬ್ಬ ಆಟಗಾರ್ತಿ ಉದಯಿಸಿಲ್ಲ ಎಂದು ಖೇದಕರ ವಿಚಾರ. ಈ ನಿಟ್ಟಿನಲ್ಲಿ ಅಭಿಮಾನಿಗಳು ಮಾತ್ರವಲ್ಲ ಇಡೀ ಭಾರತೀಯ ಬ್ಯಾಡ್ಮಿಂಟನ್ ರಂಗವೇ ಆಲೋಚನೆ ಮಾಡಬೇಕಿದೆ.
ಚೇತನ್ ಓ.ಆರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.