ಧರ್ಮರಾಯನೇಕೆ ಜೂಜಿನಿಂದ ಆಚೆ ಬರಲಿಲ್ಲ?

(ಪಾರ್ಟ್‌ ಆಫ್ ಸ್ಪೀಚ್‌ )

Team Udayavani, Jul 6, 2019, 11:54 AM IST

SL-BHYRAPPA

ಭಾರತೀಯ ವಿದ್ಯಾಭವನ ಹಾಗೂ ಇಸ್ಕಾನ್‌ ಸಹಯೋಗದಲ್ಲಿ ಇತ್ತೀಚೆಗೆ “ಮಹಾಭಾರತ ಸಂದೇಶ’ ಕುರಿತ 5 ದಿನ ಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ, ಕಾದಂಬರಿ ಕಾರ ಎಸ್‌.ಎಲ್‌. ಭೈರಪ್ಪ ಮಾತನಾಡಿದರು. ಅದರ ಆಯ್ದ ಭಾಗ ಇಲ್ಲಿದೆ… 

ಧರ್ಮರಾಯನನ್ನು ನಮ್ಮ ಇಡೀ ಪರಂಪರೆ, “ಧರ್ಮದ ಎನಾºಡಿಮೆಂಟ್‌’ ಅಂತ ಕರೆ ಯುತ್ತೆ. ಆದರೆ, ನಾವು ಪ್ರಾಕ್ಟಿ ಕಲ್‌ ಆಗಿ ನೋಡೋದಾದ್ರೆ, ಎಷ್ಟರಮಟ್ಟಿಗೆ ಅವನು ಧರ್ಮದ ಸಾಕಾರ ಆಗ್ತಾ ನೆ? ಅವನು ಜೂಜಿನ ಅಡಿ ಕ್ಟರ್‌. ಇಸ್ಪೀಟ್‌ ಆಡುತ್ತಿದ್ದ ವ್ಯಸನಿ. ಒಂದ್ಸಲ ಹೋಗ್ತಾನೆ, ಇಡೀ ರಾಜ್ಯ ಕಳ್ಕೊಳ್ತಾನೆ. ಆಮೇಲೆ ಧೃತರಾಷ್ಟ್ರ ಅದನ್ನು ವಾಪಸ್‌ ಕೊಡಿಸ್ತಾನೆ. ಮತ್ತೆ ಶಕುನಿ ಬಂದು, ಇವನನ್ನು ಕರೀತಾನೆ… “ಇನ್ನೊಂದ್ಸಲಿ ಆಡ್ಬೇಕು’ ಅಂತ. ಒಂದ್ಸಲ ಎಲ್ಲವನ್ನೂ ಕಳ್ಕೊಂಡಿದ್ದೀನಿ, ಮತ್ತೆ ಹೋಗ್ಬಾರ್ದು ಅಂತ ವಿವೇಚನೆ ಇರಲಿಲ್ಲ ಆತನಿಗೆ. ಮತ್ತೆ ಹೋಗಿºಡ್ತಾನೆ. ಹೋದಾಗ, ಅಲ್ಲಿ ಇದ್ದಂಥ ಪಣ ಏನು? 12 ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸ. ಆ ವನವಾಸದೊಳಗೆ ಏನೇನು  ಫ‌ಜೀತಿ ಪಟ್ಟಿದ್ದಾರೆ ಅಂತ ಅನ್ನೋದು ಮೂಲ ಮಹಾಭಾರತದೊಳಗಿದೆ. ಅಲ್ಲಿಂದ ಅಜ್ಞಾತವಾಸಕ್ಕೆ ಬರ್ತಾರೆ. ಅಜ್ಞಾತವಾಸಕ್ಕೆ ಬಂದ್ರೆ, ವಿರಾಟನ ರಾಜ್ಯದಲ್ಲಿ ಅಥವಾ ವಿರಾಟ ನಗರದಲ್ಲಿ ಈ ಐದು ಜನರು, ಮರೆ ಮಾಡ್ಕೊಂಡು ತಮ್ಮ ಹೊಟ್ಟೆಪಾಡು ನೋಡ್ಕೊಂಡು ಇರ್ಬೇಕು. ಅದನ್ನು ಹ್ಯಾಗ್‌ ಮಾಡ್ತಾರೆ? ಭೀಮ ಅಡುಗೆಯವನಾಗಿ ಸೇರ್ಕೊಳ್ತಾನೆ. ಯಾಕಂತಂದ್ರೆ ಅವನಿಗೆ ಊಟ ಜಾಸ್ತಿ ಬೇಕು. ಅಡುಗೆಯವನಾಗಿದ್ರೆ ಊಟ ಚೆನ್ನಾಗಿ ಮಾಡಬಹುದಲ್ಲ! ಅರ್ಜುನ ಡ್ಯಾನ್ಸ್‌ ಮಾಸ್ಟರ್‌ ಆಗ್ತಾನೆ. ನಕುಲ, ಸಹದೇವರು ಕುದುರೆ ಮತ್ತು ದನಗಳನ್ನು ಕಾಯ್ಕೊಂಡು ಇರ್ತಾರೆ.

ಧರ್ಮರಾಜ ಏನು ಮಾಡ್ತಾನೆ? ವಿರಾಟನ ಆಸ್ಥಾನಕ್ಕೆ ಸೇರ್ಕೊಂಡು ವಿರಾಟನಿಗೂ ಪಗಡೆ ಆಟಕ್ಕೆ ಎಳೆದುಕೊಳ್ತಾನೆ. ಈ ಕಳ್ಕೊಂಡವರು ಒಬ್ಬರಿಗೊಬ್ಬರಿಗೆ  ಪರಸ್ಪರ ಚೆನ್ನಾಗಿ ಅರ್ಥ ಆಗ್ತಾರೆ. ನಮ್ಮಲ್ಲಿ, ಇವಾ ಗ ಹ್ಯಾಗಿದೆಯೋ ಗೊತ್ತಿಲ್ಲ. ನಾನು ಚಿಕ್ಕವನಿದ್ದಾಗ, ನಮ್ಮೂರು ಕಡೆ ನೋಡಿದ್ದೆ. ಎಲ್ಲಾದರೂ ಒಂದು ಮದುವೆ ನಡೆಯಿತು ಅಂತಂದ್ರೆ, ಇಸ್ಪೀಟ್‌ನೊವ್ರು ಎರಡು ಜೇಬಿಗೂ ಎರಡು ಇಸ್ಪೀಟ್‌ ಪ್ಯಾಕ್‌ ಇಟ್ಕೊಂಡ್ಹೊಗ್ತಿದ್ರು. ಅಲ್ಲಿ ಒಬ್ರಿಗೊಬ್ರು ಮುಖ ನೋಡ್ತಿದ್ದಂಗೆ ಗೊತ್ತಾಗುತ್ತೆ, ಇವನು ಆಟಗಾರ ಅಂತ. ತಕ್ಷಣ ಸ್ನೇಹ ಬಂದ್ಬಿಡುತ್ತೆ ಅವ್ರಿಗೆ. ನಂತರ ಅಷ್ಟೇ ಅವ್ರ ಕೆಲ್ಸ.. ಮುಹೂರ್ತ ನೋಡೋ ಕೆ ಹೋಗೋದೇ ಇಲ್ಲ. ಊಟಕ್ಕೂ ಸರಿಯಾದ ಟೈಮ್‌ಗೆ ಹೋಗೋದೇ ಇಲ್ಲ. ಎರಡೂ¾ರು ದಿವಸ ಅದನ್ನೇ ಆಡ್ಕೊಂಡ್ಹೊàಗ್ತಾರೆ. ವಾಪಸ್‌ ಹೊರಡುವಾಗ ಹ್ಯಾಗೂ, ಮದುವೆ ಮನೆಯಲ್ಲಿ ಉಂಡೆ, ಚಕ್ಲಿ ಎಲ್ಲ ಕೊಡ್ತಾರೆ. ಅದನ್ನ ತಗೊಂಡು ಮನೆಗೆ ಬರ್ತಾರೆ. ಮನೆಗೆ ಬಂದ್ರೆ ಇವರ ಹೆಂಡ್ತಿ ಕೇಳ್ತಾಳೆ, “ಹುಡುಗಿ ಹ್ಯಾಗಿದ್ಲು ನೋಡೋಕೆ?’ ಅಂತವ. ಇವನು ನೋಡೇ ಇರಲ್ಲ. “ಚೆನ್ನಾಗಿದ್ಲು ‘ ಅಂತಾ ನೆ. “ಅಲ್ಲಾ, ಚೆನ್ನಾಗಿದ್ಲು ಅಂದ್ರೆ ಹ್ಯಾಗಿದ್ಲು .. ಉದ್ದಕ್ಕಿದ್ಲಾ? ಯಾವ್‌ ಬಣ್ಣ?’ ಅಂತ. “ಅದೆಲ್ಲಾನೂ ಹೇಳ್ಬೇಕಾ? ಚೆನ್ನಾಗಿದ್ಲು ಅಂದ್ರೆ ಚೆನ್ನಾಗಿದ್ಲು, ಮುಚ್ಚುಬಾಯ್‌’ ಅಂತಾನೆ. ಯಾಕಂದ್ರೆ ಅವ್ನು ನೋಡೇ ಇರಲ್ಲ. ಇದೂ ಅಡಿಕ್ಷನ್ನಲ್ಲಿ ಬರುವಂಥದ್ದು. ಯುದಿಷ್ಠಿರ ಅಲ್ಲೂ ಪಗಡೆಗೆ ಸೇರಿ ಕೊಳ್ತಾ ನೆ. ಅದನ್ನು ಮಾಡಬಾರದು ಅಂತ ಅವನಿಗೆ ಅನ್ನಿಸುವುದೇ ಇಲ್ಲ.

(ಸಮನ್ವಯ: ಭಾರತೀಯ ವಿದ್ಯಾಭವನ, ಬೆಂಗಳೂರು)

ಟಾಪ್ ನ್ಯೂಸ್

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Kadaba: ಮೇಯಲು ಬಿಟ್ಟ ದನದ ಕಾಲು ಕಡಿದ ವ್ಯಕ್ತಿ; ದೂರು

dw

Siddapura: ವಿದ್ಯುತ್‌ ಲೈನಿಗೆ ಕೊಕ್ಕೆ ತಾಗಿ ಕಾರ್ಮಿಕ ಸಾವು

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

byndoor

Siddapura: ಪಾದಚಾರಿಗೆ ಪಿಕಪ್‌ ವಾಹನ ಢಿಕ್ಕಿ; ಗಂಭೀರ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.