ಭಾರತ ಫೈನಲ್ ತಲುಪಿದ್ದೇ ಅದ್ಭುತ,ಅಚ್ಚರಿ
Team Udayavani, Jul 29, 2017, 12:55 PM IST
ಈ ಬಾರಿಯ ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್‌ಗಳಿಸಿದ್ದು 228 ರನ್. ಒಂದು ಹಂತದಲ್ಲಿ ಭಾರತ 42ನೇ ಓವರ್‌ನಲ್ಲಿ ಮೂರು ವಿಕೆಟ್‌ಗೆ 191 ರನ್ ಗಳಿಸಿತ್ತು. ಮುಂದಿನ 28 ರನ್ ಗಳಿಸುವ ಸಂದರ್ಭದಲ್ಲಿ ಉಳಿದ 7 ವಿಕೆಟ್ ಕಳೆದುಕೊಂಡಿತ್ತು. ಸೋಲಿನ ಅಂತರ 9 ರನ್, ಇನ್ನೂ 8 ಚೆಂಡು ಉಳಿದಿತ್ತು. ಮೇಲ್ನೋಟಕ್ಕೆ ಭಾರತ ತನ್ನ ಕೈಯಲ್ಲಿದ್ದ ಪಂದ್ಯವನ್ನು ಆ ಮೂಲಕ ವಿಶ್ವಕಪ್ ಅನ್ನು ಕ್ರಿಕೆಟ್ ಜನಕ ದೇಶಕ್ಕೆ ಬಿಟ್ಟುಕೊಟ್ಟಿತು. ಒಂದರ್ಥದಲ್ಲಿ ಅದು ನಿಜ. ಒತ್ತಡವನ್ನು ಮೆಟ್ಟಿನಿಲ್ಲುವ ವಿಷಯದಲ್ಲಿ ಭಾರತ ಸೋತಿತು. ಇದಕ್ಕೇ ಇರಬೇಕು. ಭಾರತ ತಂಡದ ನಾಯಕಿ ಮಿಥಾಲಿ ರಾಜ್, ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಹಿಳಾ ಆವೃತ್ತಿಯ ಆರಂಭದ ಆಗ್ರಹವನ್ನು ಮಾಡಿದ್ದು.
ಒಂದೇಟಿಗೆ ಎರಡು ವಿಷಯಗಳನ್ನು ಹೇಳಬೇಕು. ಕ್ರಿಕೆಟ್ ಭಾಷೆಯಲ್ಲಿ ದುರ್ಬಲ ಎಂದು ಟೂರ್ನಿಗೆ ಮೊದಲು ಅನ್ನಿಸಿಕೊಂಡಿದ್ದ ಭಾರತ ತಂಡ ನಿರ್ಣಾಯಕ ಪಂದ್ಯದವರೆಗೆ ಸಾಗಿದ್ದೇ ಒಂದು ಅಚ್ಚರಿ, ಅದ್ಭುತ. ಭಾರತವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಬರೀ ಐಪಿಎಲ್ ಮಹಿಳಾ ಕ್ರಿಕೆಟ್ ಪರಿಹಾರವಾಗಲಿಕ್ಕಿಲ್ಲ. ಸಮಸ್ಯೆಯನ್ನು ಬೇರು ಸಮೇತ ತೆಗೆದುಹಾಕಲು ಬೇರೆಯದೇ ರೀತಿಯಲ್ಲಿ ನೋಡಬೇಕಿದೆ.
ವರ್ಷಕ್ಕೆ ಐದೇ ಪಂದ್ಯ!?
ಭಾರತದ ಮಹಿಳಾ ತಂಡ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳ ಶೃಂಖಲೆಯನ್ನು ಆರಂಭಿಸಿದ್ದು 1978ರಲ್ಲಿ. ಈವರೆಗೆ ಅದು ಪಾಲ್ಗೊಂಡ ಪಂದ್ಯಗಳ ಸಂಖ್ಯೆ 248. ಆ ಲೆಕ್ಕದಲ್ಲಿ ವರ್ಷಕ್ಕೆ ಐದು ಪಂದ್ಯಗಳ ಆಜುಬಾಜು. ಅದರಲ್ಲಿನ 63 ಪಂದ್ಯಗಳು ವಿಶ್ವಕಪ್ ಸ್ಪರ್ಧೆಯದ್ದು. ಅಂದರೆ 185 ಪಂದ್ಯ ಎರಡು ರಾಷ್ಟ್ರಗಳ ನಡುವಿನ ಪಂದ್ಯ. ಅದರಲ್ಲಿ 99 ಭಾರತದಲ್ಲಿಯೇ ನಡೆದಿದ್ದು. ಇಷ್ಟೆಲ್ಲಾ ಏಕೆ ಹೇಳಬೇಕಾಗಿದೆ ಅಂದಿರಾ? ಉತ್ತರ ಸಿಂಪಲ್, ಭಾರತ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವಕಪ್ ಹೊರತಾಗಿ ತನ್ನದಲ್ಲದ ರಾಷ್ಟ್ರ, ವಾತಾವರಣ, ಪಿಚ್‌ನಲ್ಲಿ ಆಡಿದ್ದು ಕಳೆದ 40 ವರ್ಷಗಳಲ್ಲಿ ಕೇವಲ 84 ಪಂದ್ಯಗಳನ್ನು ಮಾತ್ರ. ಒಂದು ತಂಡವಾಗಿ ಭಾರತ ವಿದೇಶಿ ಪಿಚ್‌ಗಳಲ್ಲಿ ಆಡಿದ ಅನುಭವಗಳಿಲ್ಲದೆ ಚಾಂಪಿಯನ್‌ನಂತೆ ಆಡುವುದಾದರೂ ಹೇಗೆ ಅಥವಾ ಈ ಬಾರಿ ಹೆಚ್ಚು ಕಡಿಮೆ ಚಾಂಪಿಯನ್‌ನಂತೆ ಆಡಿದ್ದಾದರೂ ಹೇಗೆ?
2005ರಲ್ಲೊಮ್ಮೆ ಭಾರತ ವಿಶ್ವಕಪ್‌ನ ಫೈನಲ್‌ಗೇರಿತ್ತು. ಬಿಡಿ, ಅಲ್ಲಿ ಆಸ್ಟ್ರೇಲಿಯಾ ಭಾರತವನ್ನು ಬಾಲಂಗೋಚಿಯಂತೆ ಸದೆಬಡಿದಿತ್ತು. ಅವತ್ತು ಆಡಿದ ತಂಡದಲ್ಲಿದ್ದ ಮಿಥಾಲಿ ರಾಜ್‌ರ ಆಟವನ್ನು ಕಣ್ಣರಳಿಸಿ ನೋಡಿದ್ದ ವೇದಾ ಕೃಷ್ಣಮೂರ್ತಿಗೆ ಅವತ್ತು 12 ವರ್ಷ, ಸ್ಮತಿ ಮಂಧನಾಗಂತೂ ಬರೀ ಒಂಬತ್ತು!! ಮಿಥಾಲಿ ಇವರಿಬ್ಬರಿಗೂ ಮಾದರಿ. ಅದೇ ತಂಡದಲ್ಲಿ ಆಡಿದ್ದ ಜೂಲನ್ ಗೋಸ್ವಾಮಿ 1997ರ ವಿಶ್ವಕಪ್ ಫೈನಲ್‌ನಲ್ಲೂ ಇದ್ದರು. ಅಂದು ಭಾರತ ಫೈನಲ್‌ಗೆ ಬಂದಿರಲಿಲ್ಲವಾದರೂ ಗೋಸ್ವಾಮಿ ಬಾಲ್ ಗರ್ಲ್ ಆಗಿ ಫೈನಲ್‌ನಲ್ಲಿ ಕೆಲಸ ಮಾಡಿದ್ದರು. ತಮಾಷೆಗಳನ್ನು ಬದಿಗಿಡಿ, 2005ರ ಫೈನಲ್‌ನಲ್ಲಿ ಆಡಿರುವ ವೇಗಿ ಈವರೆಗೆ ಭಾರತದ ವೇಗಿಗಳ ಹುಟ್ಟಿಗೆ ಪ್ರೇರಣೆಯಾಗಲೇ ಇಲ್ಲ. ಗಡಿಯಾಚೆಯ ಪಾಕ್‌ನ ಕೈನಾಟ್ ಇಮಿ¤ಯಾಜ್‌ಗೆ ಅವರಿಂದ ಸ್ಫೂರ್ತಿ ಸಿಕ್ಕಿದೆ ಎಂಬುದು ನಿಜವಾದರೂ ಭಾರತದ ಮಹಿಳೆಯರು ಹೆಚ್ಚು ಹೆಚ್ಚು ಆಸಕ್ತರಿಗೆ ಮಾದರಿ ಏಕಾಗಲಿಲ್ಲ ಎಂಬುದಕ್ಕೆ ಬೇರೆಯದೇ ಪ್ರತಿಪಾದನೆಯಿದೆ. ಅದನ್ನು ಮುಂದೆ ಪ್ರಸ್ತಾಪಿಸಬಹುದು.
ಕರುಣ್ ನಾಯರ್ ಹಿಂದಿಕ್ಕಿದ್ದಾರೆ!
ಭಾರತ ಮಹಿಳಾ ಕ್ರಿಕೆಟ್ ತಂಡದ ಟೆಸ್ಟ್ ಪಾಲ್ಗೊಳ್ಳುವಿಕೆ ತೀರಾ ಹೀನಾಯವಾಗಿದೆ. 1978ರಿಂದ ಈವರೆಗೆ ಆಡಿದ್ದು ಬರೀ 36 ಟೆಸ್ಟ್ ಎಂದರೆ ವರ್ಷಕ್ಕೊಂದು ಟೆಸ್ಟ್ ಪಂದ್ಯವನ್ನೂ ಆಡಿಲ್ಲ. ಕಳೆದ 17 ವರ್ಷಗಳಲ್ಲಿ ಆಡಿರುವುದು ಕೇವಲ 10 ಟೆಸ್ಟ್. 2002ರಲ್ಲಿ 3, 2003ರಲ್ಲಿ ಒಂದು, 2005ರಲ್ಲಿ ಇನ್ನೊಂದು, 2006ರಲ್ಲಿ ಮೂರು ಮತ್ತು 8 ವರ್ಷಗಳ ಟೆಸ್ಟ್ ವಿಶ್ರಾಂತಿಯ ನಂತರ 2014ರಲ್ಲಿ 2. ನಾಳೆ ನವೆಂಬರ್ ಬಂದರೆ ಭಾರತ ಟೆಸ್ಟ್ ಆಡದೆ ಮತ್ತೆ ಮೂರು ವರ್ಷ ಕಳೆದಂತಾಗುತ್ತದೆ. ಒಂದು ತಂಡ ಸಮರ್ಥವಾಗಿ ಬೆಳೆಯಬೇಕಾದರೆ ಅದಕ್ಕೊಂದು ಅಡಿಪಾಯ ಬೇಕು. ಅದನ್ನು ಟೆಸ್ಟ್ ಪಂದ್ಯ ಕಲಿಸಿಕೊಡುತ್ತದೆ ಎಂಬುದು ನಿರ್ವಿವಾದವಾಗಿ ಸಾಬೀತಾಗಿದೆ. ಆದರೆ ಭಾರತ ಟೆಸ್ಟ್ ಕ್ರಿಕೆಟ್‌ನೆ°à ಆಡುತ್ತಿಲ್ಲ ಎಂಬುದು ತೀರಾ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ಫೈನಲ್ ತಲುಪಿದ ತಂಡದ ಪ್ರತಿಯೊಬ್ಬ ಸದಸ್ಯೆಯರಿಗೆ ಬಿಸಿಸಿಐ ತಲಾ 50 ಲಕ್ಷ ರೂ.ಗಳ ಬಹುಮಾನ ಘೋಷಿಸಿದೆ. ಇದರ ಜೊತೆಗೆ ಬೇರೆ ಬೇರೆ ದೇಶಗಳ ಜೊತೆಗೆ, ಬೇರೆ ದೇಶಗಳಲ್ಲೂ ಟೆಸ್ಟ್, ಏಕದಿನ ಸರಣಿಗಳನ್ನು ಆಯೋಜಿಸದಿದ್ದರೆ ಬಿಸಿಸಿಐಗೆ 50 ಲಕ್ಷದ ಬಹುಮಾನ ಘೋಷಿಸುವ ಇನ್ನೊಂದು ಸಂದರ್ಭ ಬಾರದೆ ಹೋಗಬಹುದು!
ಹಾಗಂತ ಟೆಸ್ಟ್‌ನಲ್ಲಿ ಭಾರತದ ತಂಡದ ಪ್ರದರ್ಶನ ಕಳಪೆಯಾಗಿಲ್ಲ. ಇನ್‌ಫ್ಯಾಕ್ಟ್, ತುಂಬಾ ಅದ್ಭುತವಾಗಿದೆ. 2006ರಲ್ಲಿ ನಡೆದಿದ್ದು ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್ ಟೌಂಟನ್‌ನಲ್ಲಿ ನಡೆದಾಗ ಭಾರತ ಜಯಭೇರಿ ಬಾರಿಸಿತ್ತು. ಎಂಟು ವರ್ಷಗಳ ನಂತರ ಇದೇ ಇಂಗ್ಲೆಂಡ್ ವಿರುದ್ಧ ಮೊಸೇಲಿಯಲ್ಲಿ ಸಿಕ್ಕಿದ್ದು ಗೆಲುವಿನ ಸಂಭ್ರಮ. ಕೊನೆಯ ಮೂರು ಟೆಸ್ಟ್‌ಗಳ ಫಲಿತಾಂಶವನ್ನು ಗಣನೆಗೆ ತೆಗೆದುಕೊಂಡರೆ ಭಾರತ ಇಂಗ್ಲೆಂಡ್‌ನ್ನು ಎರಡು ಬಾರಿ ಹಾಗೂ ದಕ್ಷಿಣ ಆಫ್ರಿಕಾವನ್ನ ಒಮ್ಮೆ ಮಣಿಸಿದೆ. ಈ ಫಲಿತಾಂಶಗಳ ಹೊರತಾಗಿ 2014ರ ನಂತರ ಭಾರತ ಒಂದೂ ಟೆಸ್ಟ್ ಆಡಿಲ್ಲ!
ಸ್ವಾರಸ್ಯ ಎಂದರೆ, 2016-17ರಲ್ಲಿ ಭಾರತೀಯ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ, ಭಾರತ ಆಡಿದ ಎಲ್ಲಾ ಟೆಸ್ಟ್‌ಗಳಲ್ಲೂ ಪಾಲ್ಗೊಳ್ಳದ ಕರ್ನಾಟಕದ ಕರುಣ್ ನಾಯರ್ ಎಂಬ ಪ್ರತಿಭೆ ಒಂದೇ ಸೀಸನ್‌ನಲ್ಲಿ ಭಾರತದ ಮಹಿಳಾ ತಂಡ ಕಳೆದ 12 ವರ್ಷಗಳಲ್ಲಿ ಆಡಿದಷ್ಟು ಪಂದ್ಯಗಳನ್ನು ಆಡಿ ಮುಗಿಸಿದ್ದಾನೆ!
ಹಣಕ್ಕಿಂತ ಪರಿಚಯಕ್ಕಾಗಿ ಐಪಿಎಲ್!
ಮಿಥಾಲಿ ರಾಜ್ ಅವರು, ಮಹಿಳಾ ಐಪಿಎಲ್ ಪರ ವಕ್ತಾರಿಕೆ ಮಾಡಲು ಒಂದು ಕಾರಣವಿದೆ. ಭಾರತದ ಐಪಿಎಲ್ ಕೇವಲ ಆಟಗಾರರನ್ನು ಆಗರ್ಭ ಶ್ರೀಮಂತರನ್ನಾಗಿಸಿಲ್ಲ. ವಿದೇಶಿ ಆಟಗಾರರು ಕೂಡ ಪಾಲ್ಗೊಳ್ಳುವ ಐಪಿಎಲ್ ಅವರನ್ನು ಹೆಚ್ಚು ಪರಿಚಿತಗೊಳಿಸಿದೆ. ಈಗ ಸ್ಲೆಡಿjಂಗ್ ನೀನೂ ಮಾಡು, ನಾನೂ ಮಾಡುತ್ತೇನೆ ಎಂಬ ಮನೋಭಾವ. ನಿಕಟ ಪಂದ್ಯಗಳನ್ನು ಐಪಿಎಲ್‌ನಲ್ಲಿ ಆಡಿದ ಆಟಗಾರರು “ಲೈಫು ಇಷ್ಟೇನೇ ಎಂಬ ಘೋಷ ವಾಕ್ಯದಡಿ ತಮ್ಮ ಮೇಲೆ ಒತ್ತಡ ಹಾಕಿಕೊಳ್ಳುವುದು ಬಹುಪಾಲು ಕೊನೆಯಾಗಿದೆ. ಇದೇ ಆಶಯದಿಂದ ಮಿಥಾಲಿ ರಾಜ್ ಐಪಿಎಲ್‌ಗೆ ಬೇಡಿಕೆ ಇಟ್ಟಿದ್ದು.
ಅದು ನಿಜವೇ, ಕಳೆದ ತಿಂಗಳೊಪ್ಪತ್ತು ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದ ಅಂತರ್ಜಾಲ ನೇರಪ್ರಸಾರವನ್ನು 8 ಮಿಲಿಯನ್ ಜನರು ವೆಬ್‌ಸೈಟ್‌ನಲ್ಲಿ ನೋಡಿಕಿದ್ದಾರೆ. 10 ಮಿಲಿಯನ್ ಚಾಂಪಿಯನ್ಸ್ ಟ್ರೋಫಿ ಆ್ಯಪ್ ಭಟ್ಟಿ ಇಳಿಸಲ್ಪಟ್ಟಿದೆ. 175 ಮಿಲಿಯನ್ ಜನ ವಿಡಿಯೋಗಳನ್ನು ನೋಡಿದ್ದಾರೆ. ಇದರಲ್ಲಿ 2.57 ಮಿಲಿಯನ್ ಜನ ಐಪಿಎಲ್ ಯುವಕರ ತಂಡದ ಆಟವನ್ನು ವೀಕ್ಷಿಸುವ ಜೊತೆಗೆ ಫಾಲೋವರ್‌ಗಳನ್ನು ಹೊಂದಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಯಶಸ್ವಿಯಾದ ಸೂತ್ರ ಮಹಿಳಾ ವಿಭಾಗಕ್ಕೂ ಅನ್ವಯವೇ. ಮಹಿಳಾ ವಿಶ್ವಕಪ್‌ನ ಎಲ್ಲ 31 ಪಂದ್ಯಗಳನ್ನೂ ನೇರ ಪ್ರಸಾರ ಮಾಡಲಾಗಿದೆ.
ಒಂಚೂರು ಫ್ಲಾಶ್‌ಬ್ಯಾಕ್. 2016ರಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಸರಣಿಯನ್ನು ಟಿವಿಯಲ್ಲಿ ನೇರಪ್ರಸಾರ ಮಾಡಲಾಗಿತ್ತು. ನಿಜಕ್ಕಾದರೆ ಇದು ಭಾರತವು ಕಾಂಗರೂ ನಾಡಿನಲ್ಲಿ ಗೆದ್ದ ಮೊತ್ತಮೊದಲ ದ್ವಿಪಕ್ಷೀಯ ಸರಣಿ. ಆದರೆ ವೆಸ್ಟ್‌ಇಂಡೀಸ್, ಭಾರತದ ಸರಣಿ ಲೈವ್ ಇರಲಿಲ್ಲ. ಭಾರತ ಏಷ್ಯಾಕಪ್ ಗೆದ್ದರೂ ಫೈನಲ್ ಪಂದ್ಯ ಮಾತ್ರ ನೇರಪ್ರಸಾರವಿತ್ತು. ವಿಶ್ವಕಪ್‌ಗ್ೂ ಮುನ್ನ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚತುಷೊRàನ ಸ್ಪರ್ಧೆಯಲ್ಲಿ ಭಾರತ ಗೆದ್ದರೂ ಆ ಪದ್ಯ ನೋಡುವ ಅವಕಾಶ ವೀಕ್ಷಕರಿಗೆ ಲಭ್ಯವಾಗಲಿಲ್ಲ.
ಭಾರತದಲ್ಲಿ ಅತ್ಯುತ್ತಮ ಪ್ಯಾಕೇಜ್ ಆಗಿ ಕೊಟ್ಟಾಗ ಪ್ರೊ ಕಬಡ್ಡಿ ಕೂಡ ಜನರನ್ನು ಆಕರ್ಷಿಸಿದೆ. ಐಪಿಎಲ್ ಪಂದ್ಯಗಳು ಅದರ ಸುತ್ತಮುತ್ತಲ ಕಥೆ, ಗಾಸಿಪ್‌ಗ್ಳಿಂದ ಜನಪ್ರಿಯ. ಕ್ವಾಲಿಟಿ ನೇರ ಪ್ರಸಾರ ಆಟಗಾರ್ತಿಯರನ್ನು ನೋಡುಗನಿಗೆ ಹೆಚ್ಚು ಆಪ್ತವಾಗಿ ಪರಿಚಯಿಸುತ್ತದೆ. ಈಗ ನೋಡಿ, ವಿಶ್ವಕಪ್ ಲೈವ್ ನಂತರ ಭಾರತದ ಸ್ಮತಿ ಮಂಧನಾ ತಮ್ಮ ಸೌಂದರ್ಯದಿಂದ ಅದೆಷ್ಟೋ ಸಾವಿರ ಯುವಹೃದಯಗಳನ್ನು ಬಡಿದೆಬ್ಬಿಸಿದ್ದಾರೆ! ಒಲಿಂಪಿಕ್ಸ್‌ನ ತಿಂಗಳೊಪ್ಪತ್ತಿನ ನಂತರ ಮರೆತುಹೋಗುವ ದೀಪಾ ಕರ್ಮಾಕರ್, ಶಕ್ತಿ ಮಲ್ಲಿಕ್, ಮೇರಿ ಕೋಮ್, ಪಿ.ವಿ.ಸಿಂಧು ಉದಾಹರಣೆಗಳಿರುವಾಗ ಆಟಗಾರ್ತಿಯರನ್ನು ಸೆಲೆಬ್ರಿಟಿಗಳನ್ನಾಗಿ ಮಾಡದಿದ್ದರೆ ಅದರಿಂದ ಆಟದ ಜನಪ್ರಿಯತೆಗೂ ಲಾಭವಾಗುವುದಿಲ್ಲ, ನೆನಪಿರಲಿ. ಒಳಜಗಳಗಳಲ್ಲಿ, ರಾಜಕೀಯದಲ್ಲಿ ಮುಳುಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇತ್ತ ಗಮನಿಸಬೇಕು.
ಮರೆತಿದ್ದು
ಮಹಿಳಾ ವಿಶ್ವಕಪ್‌ಗೆ ಮುನ್ನ ಭಾರತ ತಂಡ ಶ್ರೀಲಂಕಾದಲ್ಲಿ 10 ತಂಡಗಳ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಆಡಿತ್ತು. ಅಲ್ಲಿ ಗೆದ್ದು ಅರ್ಹತೆ ಸಾಧಿಸಿದ ನಂತರ ಇಂಗ್ಲೆಂಡ್‌ಗೆ ತೆರಳಿ ಫೈನಲ್ ಸಾಧನೆ ಮಾಡಿದ್ದು.
ಮಾ.ವೆಂ.ಸ.ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.