ಬಡಲಿಂಗ ಶಿವಾಲಯ
Team Udayavani, Aug 4, 2018, 12:55 PM IST
ನಮ್ಮ ರಾಜ್ಯದಲ್ಲಿ ಶಿವನಿಗೆ ಸಮರ್ಪಿತವಾದ ಸಾಕಷ್ಟು ವಿಶೇಷ ದೇವಾಲಯಗಳಿವೆ. ಅವುಗಳಲ್ಲಿ ನಮ್ಮ ಐತಿಹಾಸಿಕ ನಗರವಾದ ಹಂಪಿಯಲ್ಲಿ ಇರುವ ಬಡಲಿಂಗ ಅದ್ಭುತ ಶಿವನ ದೇವಸ್ಥಾನ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇದು ನರಸಿಹಂ ದೇವಾಲಯದ ಪಕ್ಕದಲ್ಲಿ ಇದೆ.
ಇಡೀ ದೇವಾಲಯ ಕಲ್ಲುಗಳಿಂದ ನಿರ್ಮಿತವಾಗಿದೆ. ಮಧ್ಯೆ ಶಿವನ ಲಿಂಗ. ಅದರ ಮೇಲೆ ತೆರೆದ ಚಾವಣಿ ಇದೆ. ಮಳೆ ಬಂದರೆ ಅಭಿಷೇತಕ ರೀತಿಯಲ್ಲಿ ನೀರು ಶಿವನ ವಿಗ್ರಹದ ಮೇಲೆ ಬೀಳುತ್ತದೆ. ಶತ, ಶತಮಾನದಿಂದಿರುವ ಕಲ್ಲುಗಳೇ ದೇವಾಲಯಕ್ಕೆ ವಿಶಿಷ್ಟವಾದ ಕಳೆ ತಂದು ಕೊಟ್ಟಿದೆ.
ಈ ದೇವಸ್ಥಾನದಲ್ಲಿ ಲಿಂಗ ರೂಪದಲ್ಲಿ ಶಿವನನ್ನು ಪೂಜಿಸಲಾಗುತ್ತಿದೆ. ವರ್ಷಪೂರ್ತಿ ಪ್ರವಾಸಿಗರು ಮತ್ತು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಇದು ಏಕಶಿಲೆಯ ಶಿವಲಿಂಗ. ಸೂಕ್ಷ್ಮವಾಗಿ ಗಮನಿಸಿದರೆ, ಅದರಲ್ಲಿ ಮೂರು ಕಣ್ಣಿನ ಗುರುತುಗಳು ಕಾಣುತ್ತವೆ. ಸುಂದರವಾದ ಲಿಂಗವನ್ನು ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿದ್ದು, 3 ಮೀಟರ್ ಎತ್ತರವಿದೆ. ವಿಜಯನಗರ ಸಾಮ್ರಾಜ್ಯದ ಕಾಲದಿಂದ ಈ ದೇವಾಲಯ ಅಸ್ತಿತ್ವದಲ್ಲಿದೆ ಎಂದು ಇತಿಹಾಸ ಹೇಳುತ್ತಿದೆ.
ಸ್ಥಳ ಪುರಾಣ
ಇನ್ನು ಪುರಾಣದ ಪ್ರಕಾರ ಈ ದೇವಸ್ಥಾನಕ್ಕೆ ಬಡಲಿಂಗ ಎಂಬ ಹೆಸರು ಬಂದಿದಿರುವುದು ಬಡವ ಮತ್ತು ಲಿಂಗ ಎಂಬ ಎರಡು ಪದಗಳ ಸಂಯೋಜನೆಯಿಂದ. ದೇವಸ್ಥಾನದೊಳಗೆ ಇರಿಸಲಾಗಿರುವ ಶಿವಲಿಂಗವನ್ನು ಬಡತ ರೈತ ಮಹಿಳೆ ಸ್ಥಾಪಿಸಿದಳು ಎಂಬುದು ಪುರಾಣದಿಂದ ತಿಳಿದುಬರುತ್ತದೆ. ಆದ್ದರಿಂದ ದೇವಾಲಯವು ಬಡಲಿಂಗ ದೇವಸ್ಥಾನ ಎಂದು ಕರೆಯುತ್ತಾರೆ.
ಈ ದೇವಸ್ಥಾನವು ಸಾಕಷ್ಟು ಆಶ್ಚರ್ಯಕರ ಸಂಗತಿಗಳ ಬೀಡಾಗಿದೆ. ಒಂದು ಪುಟ್ಟದಾಗಿ ಸಂಪೂರ್ಣ ಕಲ್ಲಿನಿಂದ ಕೂಡಿದ ಕೊಠಡಿಯಲ್ಲಿ ಈ ಬೃಹದಾಕಾರದ ಶಿವಲಿಂಗವನ್ನು ನಿರ್ಮಿಸಲಾಗಿದೆ. ಇದಕ್ಕೆ ಒಂದೇ ಒಂದು ಚಿಕ್ಕದಾದ ಬಾಗಿಲನ್ನು ನಿರ್ಮಿಸಲಾಗಿದ್ದು, ಇಲ್ಲಿಗೆ ಬರುವ ಭಕ್ತರು ಈ ಬಾಗಿಲಿನ ಮುಖಾಂತರವೇ ಗರ್ಭಗುಡಿಯನ್ನು ಪ್ರವೇಶಿಸಬೇಕು. ಇನ್ನು, ಈ ಕಲ್ಲಿನ ಕೊಠಡಿಯ ವಿನ್ಯಾಸದ ಬಗ್ಗೆ ಗಮನಿಸಬೇಕಾದ ಆಸಕ್ತಿದಾಯಕ ವಿಷಯವೊಂದಿದೆ. ಅದೇನೆಂದರೆ ಈ ದೇವಸ್ಥಾನ ಛಾವಣಿಯನ್ನೇ ಹೊಂದಿಲ್ಲ. ಹಗಲಿನಲ್ಲಿ, ಸೂರ್ಯನ ಬೆಳಕು ಛಾವಣಿಯ ಮೂಲಕ ಪ್ರವೇಶಿಸಿ ಶಿವಲಿಂಗವನ್ನು ಸ್ಪರ್ಶಿಸುವುದನ್ನು ನೋಡಲು ಎರಡು ಕಣ್ಣು ಸಾಲದು. ಹೀಗೆ ಸೂರ್ಯನ ರಶ್ಮಿ ನೇರವಾಗಿ ಶಿವಲಿಂಗದ ಬೀಳುವುದರಿಂದ ಲಿಂಗ ಹೊಳಪನ್ನು ಪಡೆದಿದೆ. ಶಿವಲಿಂಗವು ವೃತ್ತಾಕಾರದ ದೊಡ್ಡ ಪೀಠವನ್ನು ಹೊಂದಿದ್ದು, ಈ ಪೀಠವು ಸದಾ ನೀರಿನಿಂದ ತುಂಬಿರುತ್ತದೆ. ಈ ನೀರು ಪವಿತ್ರ ಗಂಗಾನದಿಯಿಂದ ಬಂದಿರಬಹುದು ಎಂಬುದು ಭಕ್ತರ ಅನಿಸಿಕೆ ಮತ್ತು ನಂಬಿಕೆ.
ಕಾಲಮಾನದ ಹೊಡೆತಕ್ಕೆ ಸಿಲುಕಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಈ ಬಡಲಿಂಗ ದೇವಸ್ಥಾನ ಇದೂವರೆಗೆ ಗಟ್ಟಿಯಾಗಿ ನಿಂತಿರುವುದಕ್ಕೆ ಕಾರಣ ಇದರ ಕಲ್ಲುಗಳಿಂದ ನಿರ್ಮಿತವಾಗಿರುವ ವಿನ್ಯಾಸ, ಕಟ್ಟಡ ತಂತ್ರಗಾರಿಕೆ ಹಾಗೂ ಅದ್ಭುತ ಶಿಲ್ಪಕಲೆ. ಅಷ್ಟೇ ಅಲ್ಲ, ಇಲ್ಲಿರುವ ಬೃಹದಾಕಾರದ ಶಿವಲಿಂಗ ಕೂಡ ಇನ್ನೂ ಗಟ್ಟಿಮುಟ್ಟಾಗಿದೆ. ಕಾರಣ, ಪ್ರಕೃತಿ ಪೂಜೆ ಇಲ್ಲಿ ನಡೆಯುತ್ತದೆ. ವಾರದ ಎಲ್ಲಾ ದಿನಗಳಲ್ಲಿ ಸಂಜೆ 5:00 ರಿಂದ 9:00 ರವರೆಗೆ ತೆರೆದಿರುವ ಈ ದೇವಸ್ಥಾನಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಶಿವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತದೆ. ರಾಜ್ಯದಲ್ಲಿರುವ ಎತ್ತರ ಶಿವಲಿಂಗಗಳ ಪಟ್ಟಿಯಲ್ಲಿ ಇದೂ ಒಂದು. ಇಲ್ಲಿಗೆ ಬರುವ ಭಕ್ತಾದಿಗಳು ಹತ್ತಿರದಲ್ಲಿಯೇ ಇರುವ ವಿಜಯಠಲ ದೇವಸ್ಥಾನ, ನವಬೃಂದಾವನ, ಆಂಜನೇಯ ದೇವಸ್ಥಾನ, ವಿರೂಪಾಕ್ಷ$ ದೇವಸ್ಥಾನಕ್ಕೂ ಭೇಟಿ ನೀಡಬಹುದು.
ತಲುಪುವ ಮಾರ್ಗ
ದೇಶದ ಪ್ರಮುಖ ನಗರಗಳಿಂದ ಹಂಪಿ ಪಟ್ಟಣಕ್ಕೆ ಸಾಕಷ್ಟು ಬಸ್ ಹಾಗೂ ರೈಲು ಸಂಪರ್ಕವಿದೆ. ಹಂಪಿಯ ಹತ್ತಿರದ ರೈಲು ನಿಲ್ದಾಣ ಹೊಸಪೇಟೆ. ಹೊಸಪೇಟೆಯಿಂದ ಬಸ್, ಟ್ಯಾಕ್ಸಿಗಳ ಮೂಲಕ ಹಂಪಿ ತಲುಪಬಹುದು. ಇಲ್ಲಿ ನರಸಿಂಹ ದೇವಾಲಯದ ಬಳಿಯೇ ಬಡಲಿಂಗ ದೇವಾಲಯವಿದೆ.
ಆಶಾ ಎಸ್. ಕುಲಕರ್ಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.