ಶಾಂತಿವನದ ತಂಪಿನಲ್ಲಿ 35 ಸಮಾಧಿಗಳಿಗೆ ನಿತ್ಯ ಪೂಜೆ !


Team Udayavani, Oct 27, 2018, 3:25 AM IST

554412.jpg

ಸ್ವಾರ್ಥ, ಸಂಕುಚಿತ ಮನೋಭಾವ, ಮದುವೆ ಆದ ಕೂಡಲೇ ಬೇರೆ ಮನೆಯಲ್ಲಿ  ವಾಸ, ತಮ್ಮದೇ ಆದ ಕುಟುಂಬದ ಲೆಕ್ಕಾಚಾರ….ಇದು ಇತ್ತೀಚೆಗೆ ಸಮಾಜದಲ್ಲಿ ಕಂಡು ಬರುತ್ತಿರುವ ಕೌಟಂಬಿಕ ಚಿತ್ರಣ. ಈ ನಡವಳಿಕೆ 
ಒಂದು ಜಾತಿ, ಮತ, ಪಂಥ, ಧರ್ಮಕ್ಕೆ ಸೀಮಿತವಾಗಿಲ್ಲ. ಇದು ಯೂನಿರ್ವಸಲ್‌ ನಡೆ. ಹಾಗಾಗಿಯೇ,  ತಮ್ಮ ಕುಟುಂಬದಲ್ಲಿನ ಹಿರಿಯರ ಬಗ್ಗೆ ಯಾರಾದರೂ ಕೇಳಿದರೆ ತಂದೆ-ತಾಯಿ, ಅಜ್ಜ- ಅಜ್ಜಿ…ಕೊಂಚ ಮುಂದುವರಿದರೆ ಮುತ್ತಜ್ಜ-ಮುತ್ತಜ್ಜಿಯ ಹೆಸರು, ಮಾಹಿತಿ ಹೇಳಬಹುದು. ಆದರೆ, ಅವರ ಹಿಂದಿನ ತಲೆಮಾರಿನವರ ಬಗ್ಗೆ ಮಾಹಿತಿ ಇರಲಿ ಹೆಸರೇ ಯಾರಿಗೂ ಗೊತ್ತೇ ಇರುವುದಿಲ್ಲ.ಇದು ವಾಸ್ತವ.  
 

ಅಪರೂಪದ ಶಾಂತಿವನ…
ನಿಜ, ಆಧುನಿಕ ಪ್ರಪಂಚದ ಜೀವನದ ಜಂಜಾಟಾದಲ್ಲಿ ಮನುಷ್ಯ ಬದಲಾಗಿದ್ದಾನೆ. ಬಹುಶಃ  ಅವನು ಬದಲಾಗುವಂಥ ವಾತಾವರಣವೂ ಇದಕ್ಕೆ ಕಾರಣ ಇರಬಹುದು. ಆದರೂ ಇಂದಿಗೂ ಸಹ ಗ್ರಾಮೀಣ ಪ್ರದೇಶದಲ್ಲಿ ಕೆಲ ಕುಟುಂಬಗಳವರು ಅಪರೂಪ ಎನ್ನುವಂತೆ ಜಮೀನು, ಗದ್ದೆಗಳಲ್ಲಿ ತಮ್ಮವರ ಸಮಾಧಿಗಳ ಮಾಡಿ, ಪೂಜೆ ಸಲ್ಲಿಸುವುದು ಕಂಡು ಬರುತ್ತದೆ. ಆದರೆ, ಒಂದು ಮನೆತನದಲ್ಲಿ ಆಗಿ ಹೋದಂತಹ 35 ಜನರ ಸಮಾಧಿಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿ, ಪ್ರತಿ ದಿನವೂ ಪೂಜೆ ಸಲ್ಲಿಸುವ ಮೂಲಕ ಆ ಜೀವಗಳಿಗೆ ಗೌರವ ಸಲ್ಲಿಸುವರು ಈಗ್ಗೂ ಇದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೆನಕನಹಳ್ಳಿಯ ಹೊರ ವಲಯದಲ್ಲಿ ದೊಡ್ಡಮನೆಗೌಡರ ವಂಶಸ್ಥರ ಶಾಂತಿವನವಿದೆ. 35 ಮಂದಿಯ ಸಮಾಧಿಗಳಿಗೆ ದಿನವೂ ಪೂಜೆ ನಡೆಯುವುದೇ ಇಲ್ಲಿ.   

ಕೆಲ ರಾಜಮನೆತನಗಳನ್ನು ಹೊರತುಪಡಿಸಿದರೆ ಒಂದೇ ಮನೆತನದವರ ಸಮಾಧಿಗಳು ಒಂದೇ ಕಡೆ ಕಾಣಸಿಗುವುದು ವಿರಳ. ಎಲ್ಲಾ ಸಮಾಧಿಗಳಿಗೆ ಪ್ರತಿ ದಿನ ಪೂಜೆ ಸಲ್ಲಿಸುವ ಮೂಲಕ ಸ್ಮರಿಸುವುದು ಇನ್ನೂ ಅಪರೂಪ. ಅಂತಹ ಹೃದ್ಯ, ಅಪರೂಪದ ಸಂಗತಿಗೆ ಸಾಕ್ಷಿಯಾಗಿದೆ ದೊಡ್ಡಮನೆಗೌಡರ ವಂಶಸ್ಥರ ಶಾಂತಿವನ.

ಪ್ರತಿ ಯುಗಾದಿ ಹಬ್ಬದಂದು ಇಡೀ ದೊಡ್ಡಮನೆಗೌಡರ ವಂಶಸ್ಥರೆಲ್ಲ ಶಾಂತಿವನದಲ್ಲಿ ಸೇರಿ, ಹಿರಿಯರ ಹಬ್ಬ ಆಚರಿಸುತ್ತಾರೆ. ಆ ಮೂಲಕ ಕುಟುಂಬದ ಹಿರಿಯರಿಗೆ ಗೌರವ ಸಲ್ಲಿಸುತ್ತಾರೆ. 

ಶಾಂತಿವನದ ಹಿನ್ನೆಲೆ…
ದೊಡ್ಡಮನೆಗೌಡರ ವಂಶಸ್ಥರ ಶಾಂತಿವನಕ್ಕೆ ಹಿನ್ನೆಲೆಯೂ ಇದೆ. ದೊಡ್ಡಮನೆಗೌಡರ ಮಲ್ಲಪ್ಪಗೌಡರ ಪತ್ನಿ, ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ಡಿ.ಜಿ. ಶಾಂತನಗೌಡರ ಅಜ್ಜಿ ನೀಲಮ್ಮ (ನಿಧನ 12.3. 1939)ಅವರ ಕಾಲದಿಂದಲೂ ಶಾಂತಿವನ ನಿರ್ಮಾಣದ ಕುರಿತು ಮಾತುಕತೆ ನಡೆದಿತ್ತು.  ಕೆಲ ಕಾರಣದಿಂದ ಅದು ಕೈಗೂಡಿರಲಿಲ್ಲ. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ನಿರ್ದೇಶಕರಾಗಿದ್ದ ಡಾ| ಡಿ.ಜಿ. ಬೆನಕಪ್ಪ (ಡಿ.ಜಿ.ಶಾಂತನಗೌಡರ ಸಹೋದರ) ಅವರಿಗೆ ಸ್ವಗ್ರಾಮ ಬೆನಕನಹಳ್ಳಿಯಲ್ಲಿ ಮನೆಯೂ ಇರಲಿಲ್ಲ. ಹೀಗಿರಲೊಮ್ಮೆ, ದೊಡ್ಡಮನೆಗೌಡರ ವಂಶಸ್ಥರೊಬ್ಬರು ನಿಧನ ಹೊಂದಿದಾಗ ಅಂತ್ಯಸಂಸ್ಕಾರಕ್ಕೆ ಜಾಗದ ಸಮಸ್ಯೆ ತಲೆದೋರಿತ್ತು. ಗೌಡರ ಮನೆತನದವರಿಗೆ ಮುಂದೆ ಅಂತ್ಯಸಂಸ್ಕಾರಕ್ಕೆ ಜಾಗದ ಸಮಸ್ಯೆ ಎದುರಾಗಬಾರದು ಎಂಬ ಹಿನ್ನೆಲೆಯಲ್ಲಿ ಕೈಗೊಂಡ ನಿರ್ಧಾರದ  ಫಲವಾಗಿಯೇ ಶಾಂತಿವನ ಮೈದಳೆಯಿತು.

ಶಾಂತಿವನದ ನಿರ್ಮಾಣವಾದಾಗ, ಅಲ್ಲಿ ವಿರಕ್ತಮಠದ ಸಂನ್ಯಾಸಿಯೊಬ್ಬರು ಇದ್ದರಂತೆ.  ತಮ್ಮ ಅಂತ್ಯಸಂಸ್ಕಾರವನ್ನ ಅಲ್ಲಿಯೇ ನೆರವೇರಿಸಿದರೆ ಒಳಿತಾಗುತ್ತದೆ ಎಂದೂ ಅವರು ಹೇಳಿದ್ದರಂತೆ. ಶಾಂತಿವನದಲ್ಲಿ ಅವರ ಸಮಾಧಿಯೂ ಇದೆ. ಶಾಂತಿವನದಲ್ಲಿ ಆನಂತರ ನಡೆದ ಅಂತ್ಯಕ್ರಿಯೆ ವೀರಪ್ಪಜ್ಜಗೌಡರದ್ದು. ಮೊದಲು ನಿರ್ಮಾಣವಾದ ಗೌಡರ ಕುಟುಂಬಕ್ಕೆ ಸೇರಿದ ಸಮಾಧಿಯೂ ಅವರದೇ.  ಅಲ್ಲಿಂದ ಇತೀ¤ಚಿನವರೆಗೆ ನಿಧನರಾದವರ ಅಂತ್ಯಸಂಸ್ಕಾರವನ್ನು ಶಾಂತಿವನದಲ್ಲೇ ನೆರವೇರಿಸಲಾಗುತ್ತಿದೆ.

ಬದಲಾದ ಚಿತ್ರಣ….
ಸಿರಿಗೆರೆ ಬೃಹನ್ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ 2008ರ ಅ.19 ರಂದು  ನಡೆದ ಕಾರ್ಯಕ್ರಮದ ನಂತರ, ದೊಡ್ಡಮನೆಗೌಡರ ವಂಶಸ್ಥರ ಶಾಂತಿವನದ ಚಿತ್ರಣವೇ ಬದಲಾಯಿತು. ಅಗಲಿದ ಕುಟುಂಬದ ಎಲ್ಲ ಹಿರಿಯರು ಮತ್ತು ಕಿರಿಯರ ಸಮಾಧಿಗಳಿಗೆ ಹೊಸ ರೂಪ ನೀಡಲಾಯಿತು.
ದೊಡ್ಡಮನೆಗೌಡರ ವಂಶಸ್ಥರಾದ ಡಾ| ಡಿ.ಜಿ. ರುದ್ರಮೂರ್ತಿ, ಡಿ.ಜಿ. ಪರಮೇಶ್ವರಪ್ಪ, ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ಡಿ.ಜಿ. ಬಸವನಗೌಡ, ಡಿ.ಜಿ. ಹಾಲಪ್ಪಗೌಡ, ಡಿ.ಜಿ. ಶಿವಮ್ಮ, ದೇವಿರಮ್ಮ, ಗಂಗಮ್ಮ, ಡಾ| ಡಿ.ಜಿ. ಬೆನಕಪ್ಪ, ಗಣೇಶಪ್ಪಗೌಡರು, ಶಿವಲಿಂಗಪ್ಪಗೌಡ, ಗೌರಮ್ಮ, ನಿಶಾ ಬೆನಕಪ್ಪ, ಡಿ.ಜಿ. ಜಯಣ್ಣ, ಡಿ.ಜಿ. ಶಿವಣ್ಣಗೌಡ, ಶಿವಲಿಂಗಮ್ಮ, ಸುಶೀಲಮ್ಮ, ಶಾಂತಮ್ಮ, ಮಲ್ಲಮ್ಮ, ನಂಜಪ್ಪಗೌಡ, ಶಂಕರಪ್ಪಗೌಡ, ದೊಡ್ಡ ವೀರಪ್ಪಗೌಡ…. ಸಮಾಧಿಗಳು ಶಾಂತಿವನದಲ್ಲಿವೆ. 

ಭಾವೈಕ್ಯತೆ, ಕಾಯಕಕ್ಕೆ ನೆರವು… 
ಶಾಂತಿವನದಲ್ಲಿರುವ ಎಲ್ಲಾ ಸಮಾಧಿಗಳಿಗೆ ರೂಪು ಕೊಡುವವರು ಶಿವಮೊಗ್ಗದ ಮುಸ್ಲಿಂ ಸಮುದಾಯದವರು. ಆ ಮೂಲಕವೂ ವಂಶಸ್ಥರ ಶಾಂತಿವನ, ಭಾವೈಕ್ಯತೆಗೆ ಸಾಕ್ಷಿಯಾಗಿದೆ.  ಶಾಂತಿವನದ ನಿರ್ವಹಣೆಗಾಗಿಯೇ ಮಳಲಿ ಮಂಜಪ್ಪ ಎಂಬುವರನ್ನೂ ನೇಮಕ ಮಾಡಲಾಗಿದೆ. ಅಲ್ಲಿರುವ ವಿರಕ್ತ ಮಠಕ್ಕೆ ಹೊಸ ರೂಪ ನೀಡಲಾಗಿದೆ. ಶಾಂತಿವನದ ನಾಲ್ಕು ಮೂಲೆಯಲ್ಲೂ ಲಿಂಗಮುದ್ರಿಕೆ ಕಲ್ಲು ನೆಟ್ಟು ಅವುಗಳಿಗೆ ಪ್ರತಿ ದಿನ ಪೂಜೆ ಮಾಡಲಾಗುತ್ತದೆ. ಮಂಜಪ್ಪ ಪ್ರತಿ ದಿನ ಮಠದ ಪೂಜಾ ಕಾರ್ಯಗಳ ನಂತರ ಪ್ರತಿ ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾನೆ. ಮಂಜಪ್ಪನ ಕುಟುಂಬದವರೂ ಈ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮಾಜಿ ಶಾಸಕ ಡಿ.ಜಿ. ಶಾಂತನಗೌಡರು ತಮ್ಮ ಪಾಲಿನ ಎರಡು ಎಕರೆಯಲ್ಲಿ ಅಡಕೆ ಬೆಳೆಸಿದ್ದಾರೆ. ಅಡಕೆಯಿಂದ ಬರುವ ಹಣವನ್ನು ಶಾಂತಿವನದ ನಿರ್ವಹಣೆಗೆ ಬಳಸಲಾಗುತ್ತದೆ. ಶಾಂತಿವನದ ನಿರ್ವಹಣೆ ಮಾಡುತ್ತಿರುವ ಮಂಜಪ್ಪ ಎರಡು ಎಕರೆ ಅಡಕೆ ತೋಟದಲ್ಲಿ ಏನೇ ಉಪ ಬೆಳೆ ಬೆಳೆದುಕೊಂಡರೂ ಅದು ಆತನಿಗೆ ಸಲ್ಲುತ್ತದೆ. 

ಹಿರಿಯರ ಸ್ಮರಣೆ ಕರ್ತವ್ಯ ….
“ಇವತ್ತು ನಾವೇ ಏನೇ ಆಗಿರಲಿ, ಅದಕ್ಕೆ ನಮ್ಮ ಹಿರಿಯರೇ ಕಾರಣ. ಅವರು ಕಷ್ಟಪಟ್ಟ ಬೆಳೆಸಿದ ಕಾರಣಕ್ಕೆ ನಮ್ಮ ಹೆತ್ತವರು ಬೆಳೆದರು. ನಮ್ಮ ಹಿರಿಯರು ಕುಟುಂಬದವರನ್ನು ಬೆಳೆಸಿದರು. ಹೀಗೆ ನಡೆದುಕೊಂಡೇ ಹೋಗುತ್ತದೆ. ಹಿರಿಯರಿಗೆ ಗೌರವ ಸಲ್ಲಿಸುವ ಕಾರಣಕ್ಕಾಗಿ ನಾವು “ದೊಡ್ಡಮನೆಗೌಡರ ವಂಶಸ್ಥರ ಶಾಂತಿವನ’ ಮಾಡಿದ್ದೇವೆ. ಪ್ರತಿ ಯುಗಾದಿ ಹಬ್ಬದಂದು ನಮ್ಮ ಕುಟುಂಬದ ಎಲ್ಲರೂ ಅಲ್ಲಿ (ಶಾಂತಿವನ)ದಲ್ಲಿ ಸೇರಿ ಹಿರಿಯರಿಗೆ ಪೂಜೆ-ಪುನಸ್ಕಾರ ಸಲ್ಲಿಸಿ, ಊಟ ಮಾಡಿ ಬರುತ್ತೇವೆ. ನಮ್ಮ ಕುಟುಂಬದವರು ಹೆಚ್ಚಾಗಿ ಬೆಂಗಳೂರು, ಶಿವಮೊಗ್ಗ, ದಾವಣಗೆರೆಯಲ್ಲಿ ಇದ್ದಾರೆ. ಯುಗಾದಿ ದಿನ ಹಿರಿಯರ ಹಬ್ಬಕ್ಕೆ ಎಲ್ಲೇ ಇದ್ದರೂ, ಎಷ್ಟೇ ಕೆಲಸ ಇದ್ದರೂ ಬಿಡುವು ಮಾಡಿಕೊಂಡು ಬರುತ್ತಾರೆ. ಎಲ್ಲರೂ ಜೊತೆಯಾಗಿ ಹಬ್ಬ ಮಾಡಿ, ಬೇವು-ಬೆಲ್ಲ ಹಂಚಿ, ಹಬ್ಬದ ಊಟದ ನಂತರ ಕಷ್ಟಸುಖ ಮಾತನಾಡಿಕೊಂಡು, ನಂತರ ನಮ್ಮ ನಮ್ಮ ಮನೆ, ಕೆಲಸಕ್ಕೆ ಹೋಗುತ್ತೇವೆ. ಬಹಳ ವರ್ಷದಿಂದ ತಪ್ಪದೇ ನಡೆಸಿಕೊಂಡು ಬರುತ್ತಿದ್ದೇವೆ’ - 
ಡಿ.ಜಿ ಶಾಂತನಗೌಡ

ಶಾಂತಿವನದ ಉಸ್ತುವಾರಿ
ದೊಡ್ಡಮನೆಗೌಡರ ವಂಶಸ್ಥರ ಶಾಂತಿವನದ ಉಸ್ತುವಾರಿಯನ್ನ ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಇಂಜಿನಿಯರ್‌ ಡಿ.ಜಿ. ಬೆನಕಪ್ಪ, ಡಿ.ಜಿ. ಬಸವರಾಜಪ್ಪ, ಡಿ.ಜಿ. ಚಂದ್ರಶೇಖರ್‌, ಶಾಂತನಗೌಡರ ಪುತ್ರ ಡಿ.ಎಸ್‌. ಪ್ರದೀಪ್‌ ವಹಿಸಿಕೊಂಡಿದ್ದಾರೆ. ದೊಡ್ಡಮನೆಗೌಡರ ವಂಶಸ್ಥರಾದ ಡಿ.ಜಿ. ಶಾಂತಪ್ಪ ಗ್ರಾಮದಲ್ಲಿದ್ದುಕೊಂಡು ಎಲ್ಲ ಜವಾಬ್ದಾರಿ ನಿರ್ವಹಿಸುತ್ತಾರೆ. 

ಲೇಖನ-ರಾ.ರವಿಬಾಬು

ಟಾಪ್ ನ್ಯೂಸ್

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

4-soldier

Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು

Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.