ಯಮುನಕ್ಕನ ರೇಡಿಯೊ ಟೇಸನು

Team Udayavani, Sep 7, 2019, 1:53 PM IST

bhu-tdy-4

ರಂಗಭೂಮಿಯ ಹಿರಿಯ ನಟಿ ಯಮುನಾ ಮೂರ್ತಿ ಅವರ “ಜೀವನ ನಾಟಕದ ನೇಪಥ್ಯದಿಂದ’ ಎಂಬ ಆತ್ಮಚರಿತ್ರೆ ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆ ಕಂಡಿತು. ಅಂದು ಅವರ ರೇಡಿಯೊಗಳಲ್ಲಿ ನಾಟಕ ಕೇಳುತ್ತಲೇ ಬೆಳೆದ, ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ, ವೇದಿಕೆಯಲ್ಲಿ ಹಂಚಿಕೊಂಡ ಒಂದು ಪುಳಕ ಇಲ್ಲಿದೆ…

1970ರ ದಶಕದ ಮಲೆನಾಡು ಅದು. ಒಂಥರಾ ತಂಪು, ಇಂಪು. ನಾಗರಿಕತೆಯಿಂದ ದೂರ ಇರುವ ಹಳ್ಳಿಗಳು. ಇಂದಿನಂತೆ ಅಂದು ಫೋನು ಇಲ್ಲ, ಫ್ಯಾನು ಇಲ್ಲ. ಮೊಬೈಲ್‌ ಇಲ್ಲ, ಟಿವಿಯಂತೂ ಇಲ್ಲವೇ ಇಲ್ಲ. ಆದರೆ, ನೆಮ್ಮದಿ, ವ್ಯವಧಾನ, ವಿರಾಮಗಳಿಗೆ ಕೊರತೆ ಇರಲಿಲ್ಲ.

ಉತ್ತರ ಕನ್ನಡದ ಸಿದ್ದಾಪುರದ ಕತ್ರಗಾಲು, ನನ್ನ ತವರಿನ ಹಳ್ಳಿ. ಅಲ್ಲಿ ಒಬ್ಬರಿಂದೊಬ್ಬರ ಸಂಬಂಧ ಎಷ್ಟು ಸುಂದರವಾಗಿತ್ತು ಎಂದರೆ, ಯಾರಿಗೆ ಏನೇ ಕಷ್ಟ ಬಂದರೂ ಎಲ್ಲರೂ ಬರುತ್ತಿದ್ದರು. ಅನ್ಯೋನ್ಯ ಸಂಬಂಧ, ಬಂಧಗಳ ಊರು. ಯಾರಿಗಾದರೂ ಅಡಕೆ ಕೊಯ್ಲಿಗೆ ಸಮಸ್ಯೆ ಬಂದರೂ ಎಲ್ಲರೂ ಹಾಜರ್‌. “ಅಡಕೆ ಸುಲಿಯಲು ಬನ್ನಿ’ ಎಂದು ಹೇಳಿದರೂ, ಸುತ್ತ ಮುತ್ತಲಿನ ಗೃಹಿಣಿಯರು, ಅನಕ್ಷರಸ್ಥ  ಮಹಿಳೆಯರೆಲ್ಲ ನಮ್ಮ ಮನೆಯಂಗಳದಲ್ಲಿ ಕಳೆಗ‌ಟ್ಟುತ್ತಿದ್ದರು.

ರಾತ್ರಿ ಆರೇಳಕ್ಕೆಲ್ಲ ತಮ್ಮ ತಮ್ಮ ಮನೆಯ ಸೀಮೆಎಣ್ಣೆಯ ಚಿಮಣಿ ದೀಪ, ಲಾಟೀನು ಹಿಡಿದು ಬೆಳಕಿನ ವ್ಯವಸ್ಥೆ ಜೊತೆ ಮನೆಯಂಗಳಕ್ಕೆ ಬಂದರೆ  ಅಲ್ಲೊಂದು ಅದ್ಭುತ ಜಾನಪದ ಲೋಕವೇ ತೆರೆದುಕೊಳ್ಳುತ್ತಿತ್ತು. ಅಡಕೆ ಸುಲಿತದ “ಕಟ್‌ ಕಟ್‌’ ಎಂಬ ನಾದಕ್ಕೆ ಮಹಿಳೆಯರೂ ಹಳೇ ಹಾಡು, ಜಾನಪದದ ಪದ್ಯ ಹೇಳುತ್ತಿದ್ದರು. ಅವರ ಮಾತು, ಪದ್ಯ ಮುಗಿಯುತ್ತಿದ್ದಂತೇ ಅಪ್ಪಯ್ಯ ಮನೆಯೊಳಗಿನಿಂದ ದೊಡ್ಡ ಮರ್ಫಿ ರೆಡಿಯೋ ತಂದು ಜಗುಲಿಯಲ್ಲಿ ಪ್ರತಿಷ್ಠಾಪಿಸುತ್ತಿದ್ದರು. “ಈಗ ಎಲ್ರೂ ಸುಮ್ಮನಾಗಿ, ನಾಟಕ ಶುರು ಆಪ ಟೈಂ ಆತು’ ಅನ್ನುತ್ತಿದ್ದರು. ಆಗ ನಮ್ಮೂರಿಗೆ ಧಾರವಾಡ ಆಕಾಶವಾಣಿ ನಿಲಯದಿಂದ ಪ್ರಸಾರ ಆಗುವ ನಾಟಕಗಳು ಕೇಳುತ್ತಿದ್ದವು. ಅಲ್ಲಿ ಇದೇ ಯಮುನಾ ಮೂರ್ತಿ ಎಂಬ ಮಾಂತ್ರಿಕ ಸ್ವರದ ವಿಭಿನ್ನ ಶೈಲಿ ನಾಟಕಗಳು ಎಲ್ಲರ ಹುಚ್ಚು ಹೆಚ್ಚಿಸುತ್ತಿದ್ದವು. ತಾವೇ ನಾಟಕ ರಚಿಸಿ, ನಿರ್ದೇಶಿಸಿ, ಸ್ವತಃ ಪಾತ್ರ ಮಾಡಿ ನಮಗೆ ನಾಟಕ ಕೇಳಿಸುತ್ತಿದ್ದರು. ಒಂದು ಸ್ವರ ಬಾಂಧವ್ಯ ಮನೆಯಂಗಳದಲ್ಲಿ ಸೃಷ್ಟಿಯಾಗಿತ್ತು. ಯಮುನಾಮೂರ್ತಿ ಯಮುನಕ್ಕನಾಗಿ ಊರ ಮಹಿಳೆಯರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದರು.

ಸ್ವರ ಬಾಂಧವ್ಯ ಎಷ್ಟು ತೀವ್ರವಾಗಿತ್ತೆಂದರೆ, ಆ ಪಾತ್ರಕ್ಕೆ ತೊಂದರೆ ಆದರೆ, ಯಾರಾದರೂ ಚುಚ್ಚು ಮಾತಾಡಿದರೂ ನಮ್ಮ ಮಹಿಳಾ ವರ್ಗ ಕೆರಳುತ್ತಿತ್ತು. ಯಾರಾದರೂ ನಾಟಕ ಚೆನ್ನಾಗಿಲ್ಲ ಎಂದರೆ ಮಹಿಳೆಯರು ಬೈಯ್ಯಲೇ ಬರುತ್ತಿದ್ದರು. ಆ ಪಾತ್ರಗಳನ್ನು ತಾವೇ ವಿಮರ್ಶಿಸುತ್ತಿದ್ದರು. ನಾಟಕದ ವಿಮರ್ಶೆ ಮಾಡುತ್ತಾ, ಯಮುನಕ್ಕನಿಗೆ ಏನಾದರೂ ಅಂದರೂ “ನಿನ್‌ ಬಿಡಂಗಿಲ್ಲ ಮಂಜಣ್ಣ’ ಎಂದೂ ಹೇಳುತ್ತಿದ್ದರು.

ಅಂದೆಲ್ಲ ರೇಡಿಯೊ ನಾಟಕಗಳು, ಸಿನಿಮಾಗಳು ನಮಗೆ ಕಣ್ಣಿಗೆ ಕಾಣದ ಹೃದಯಕ್ಕೆ ಇಳಿದ ಹೊಸ ಲೋಕವೊಂದನ್ನು ಸೃಷ್ಟಿಸಿದ್ದವು. ಇಂದು ನಮ್ಮ ನಡುವೆ ಬೇಡದ ಸಪ್ಪಳಗಳೇ ತುಂಬಿವೆ. ಮೌನದ ತಂಪನ್ನು ಏರ್ಪಡಿಸುತ್ತಿದ್ದ ಸ್ವರ ಮಾಧುರ್ಯವನ್ನೂ ಸವಿಯಲಾರದ ಮಟ್ಟಕ್ಕೆ ತಲುಪಿದ್ದೇವೆ. ಮತ್ತೆ ಅಂಥ ಕಾಲ ಬರಲಾರದೇ ಅನ್ನಿಸುತ್ತದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.