ಹಳದಿ ಮೂತಿ ಮರಕುಟುಕ
Team Udayavani, Dec 9, 2017, 12:50 PM IST
ಹಳದಿ ಮೂತಿ ಮರಕುಟುಕ ಹದಿನೆಂಟು ಸೆಂ.ಮೀ ದೊಡ್ಡದಿದ್ದು, ಪಿಕಳಾರದಷ್ಟು ಗಾತ್ರ ಇರುವ ಕೆಂಪು ಹಳದಿ, ಬಿಳಿ ಮಿಶ್ರ ಬಣ್ಣದ ಹಕ್ಕಿ ಇದು.Yellow Fronted pied woodpecker(Dendrocoposmahrattensis ) R BulBul ಕಪ್ಪು ಬೆನ್ನು ಮತ್ತು ರೆಕ್ಕೆಯ ಮೇಲೆ ಅಡ್ಡಾದಿಡ್ಡಿ ಬಿಳಿ ಚುಕ್ಕೆ ಇದೆ. ಪುಕ್ಕದ ಅಡಿ, ಹೊಟ್ಟೆ ನೆತ್ತಿಯಲ್ಲಿ ಚಿತ್ತಳೆ ಕೆಂಪು ಬಣ್ಣದ ಗರಿಗಳಿವೆ. ಸ್ವಲ್ಪ ಮೇಲ್ಮುಕ ಡೊಂಕಾಗಿರುವ ಇದರ ಬಾಲ ಮರ ಹತ್ತುವಾಗ 3ನೇ ಕಾಲಿನಂತೆ ಉಪಯೋಗಿಸುತ್ತದೆ. ಇತರ ಮರಕುಟುಕಗಳಿಗಿರುವಂತೆ ಬಲವಾದಕೊಕ್ಕಿದೆ ಇದಕ್ಕೆ.
ಕುಟು, ಕುಟು ಎಂದು ಮರಕುಟ್ಟಿ, ಅದರಲ್ಲಿ ರಂಧ್ರ ಕೊರೆಯಲು ಮತ್ತು ಹಾಗೆ ಕುಟ್ಟಿದಾಗ ಬರುವ ಮರದ ಹುಳುಗಳನ್ನು ಕಬಳಿಸಲು ಸಹಾಯಕಾರಿಯಾಗಿದೆ. ಇದರ ಉದ್ದ ಸಪೂರಾದ ನಾಲಿಗೆಯಲ್ಲಿ ಮುಳ್ಳಿನಂತಿದೆ. ರಂಧ್ರದಲ್ಲಿ ಸೇರಿಸಿ ಈ ನಾಲಿಗೆಯಿಂದ ಹುಳಗಳನ್ನು ಎಳೆದು ತಿನ್ನುತ್ತದೆ. ಉಳಿದ ಮರಕುಟುಕಗಳ ಚುಂಚು ತುದಿಯಲ್ಲಿ ಸ್ವಲ್ಪ ಮೊಂಡಾಗಿದೆ. ಆದರೆಇದರ ಚುಂಚು ತುದಿ ಚೂಪಾಗಿದೆ. ಇತರ ಮರಕುಟುಕಗಳ ಚುಂಚಿಗೆ ಹೋಲಿಸಿದರೆ ಇದರ ಚುಂಚು ಸ್ವಲ್ಪ ಚಿಕ್ಕದೇ. ಎದೆ, ಕುತ್ತಿಗೆ ಭಾಗದಲ್ಲಿ ತಿಳಿ ಬಿಳಿಬಣ್ಣದ ಮೇಲೆ ತಿಳಿ ಕಂದುಬಣ್ಣದ ಮಚ್ಚೆ ಇದೆ. ಮುಂದೆಲೆ ಮತ್ತು ಮುಖ, ಹೊಟ್ಟೆ ಭಾಗದಲ್ಲಿ ತಿಳಿ ಹಳದಿ ಬಣ್ಣ ಸಹ ಇದೆ. ಚಿಕ್ಕದಾದರೂ ಬಣ್ಣ ಬಣ್ಣಗಳಿಂದ ಕೂಡಿದ ಸುಂದರ ಮರಕುಟುಕ ಇದು. ಒಂಟಿಯಾಗಿ ಅಥವಾ ಜೋಡಿಗಳಲ್ಲಿ ಕಡಿಮೆ ಮರಗಳಿರುವ ಭಾಗದಲ್ಲಿ ಇರುತ್ತವೆ. ಒಣಗಿದ ಮರಗಳನ್ನು ಏರುತ್ತಾ , ಕೆಲವೊಮ್ಮೆ ಸುತ್ತುತ್ತಾ ,ಜಾರಿದಂತೆ ಕೆಳಗೆ ಜಾರುತ್ತಾ ತೋಗಟೆಯನ್ನು ತನ್ನಚುಂಚುನಿಂದ ಹಿಗ್ಗಿಸಿ ಅದರ ಅಡಿ ಇರುವ ಹುಳ, ಇರುವೆಗೆದ್ದಲು ಮೊಟ್ಟೆ, ತಿನ್ನುತ್ತದೆ. ಹಳ್ಳಿಯ ಪಕ್ಕ ಇರುವ ಉದುರೆಲೆ ಕಾಡು ಇದರ ವಾಸ. ಸ್ವಲ್ಪದೂರ ಹಾರುತ್ತಾ ಮತ್ತೆ ಸ್ವಲ್ಪದೂರ ತೇಲುತ್ತಾ , ರೆಕ್ಕೆ ಬಡಿಯುತ್ತಾ ಸ್ವಲ್ಪ ಕೀರಲು ದನಿಯಲ್ಲಿ ಕೂಗುತ್ತಾ ಹಾರುತ್ತದೆ.
ಹಳದಿ ಮೂತಿ ಮರಕುಟಕದ ಕುಟುಂಬವು ಜಗತ್ತಿನಾದ್ಯಂತ ಸುಮಾರು 200 ಜಾತಿಗಳಿವೆ. ಬಾರ್ಬೆಟ್ ಹಕ್ಕಿಗಳೂ ಸಹ ಇದರಂತೆ ಮರಕೊರೆಯುತ್ತವೆ. ಕೊರೆದು ಅದರಲ್ಲಿ ಗೂಡು ಮಾಡುತ್ತವೆ. ಆದರೆ ಇದರ ಚುಂಚಿ ಗಿಂತ ಅದರ ಚುಂಚು ದಪ್ಪ ಮತ್ತು ಕುಳ್ಳಾಗಿವೆ. ಹರಿಯಾಣ, ಕಾವಲ್ ಪಕ್ಷಿಧಾಮ ಮತ್ತು ಪಶ್ಚಿಮ ಘಟ್ಟದಲಿ Éಇರುವುದನ್ನು ದಾಖಲಿಸಲಾಗಿದೆ. ಗಂಡು, ಹೆಣ್ಣು ಒಂದೇ ರೀತಿಯಾಗಿ ಕಾಣುತ್ತದೆ. ಆದರೆ ಹೊಟ್ಟೆಯ ಮೇಲೆ ಬಾಲದ ಬುಡದಲ್ಲಿ ಕೆಂಪು ಬಣ್ಣ ಹೆಣ್ಣಿಗೆಇರುವುದಿಲ್ಲ. ಸಂತಾನೋತ್ಪತ್ತಿ ಮತ್ತು ಅದರ ಸ್ವಭಾವಗಳ ಕುರಿತುಅಧ್ಯಯನ ನಡೆಯಬೇಕಿದೆ. ಸದಾ ಸುತ್ತಗೆಯಂದೆ ತನ್ನ ಚುಂಚಿನಿಂದ ಮರಕುಟ್ಟುತ್ತಿರುವುದು.
ಅತಿ ತೆಳ್ಳಗಿನ ಇದರ ಕುತ್ತಿಗೆ, ತಲೆಯ ಎಲುಬುವುಗಳನ್ನು ಕಾಪಾಡಲು ಮತ್ತುಇದರ ಮಿದುಳಿಗೆ ಹಾನಿಯಾಗದಂತೆ ರಕ್ಷಿಸಿಕೊಳ್ಳಲು ಇದು ಯಾವತಂತ್ರ ಬಳಸುತ್ತದೆ, ಮರಕುಟ್ಟುವ ವೇಗ, ಅದರ ಪ್ರಶರ್, ಇದು ಇದರ ಅಂಗಾಂಗದ ಮೇಲೆ , ಇಲ್ಲವೇಕುತ್ತಿಗೆಯಮೇಲೆಯಾವುದೇ ಅಡ್ಡ ಪರಿಣಾಮಇರದಂತೆ ಸುರಕ್ಷತಾಕ್ರಮ ಏನು ಮಾಡುತ್ತದೆ ಈ ಎಲ್ಲಾ ವಿಷಯದ ಕುರಿತು ವೈಜಾnನಿಕ ಅಧ್ಯಯನ ನಡೆಸಬೇಕು. ಹೆಚ್ಚು ಸತ್ಯ ತಿಳಿಯಲು ಸಹಾಯವಾದೀತು. ಗೂಡು ನಿರ್ಮಿಸಲು ಗಂಡು ಹೆಣ್ಣು ಎರಡೂ ಭಾಗಿಯಾಗುತ್ತದೆ. ಇಂತಹ ಗೂಡಿನಲ್ಲಿ ಉಳಿಯುವಾಗ ವಾತಾವರಣದ ಏರು ಪೇರಿಗೆ ಅನುಗುಣವಾಗಿ ಗೂಡಿನ ಒಳಗೆ ಆಗುವ ಚಳಿ ಇಲ್ಲವೆ ಉಷ್ಣತೆಗೆ ಅದು ಹೇಗೆ ಪರಿಹಾರ ಕಂಡುಕೊಳ್ಳುತ್ತದೆ ಅನ್ನೋದೆ ಕುತೂಹಲ ವಿಚಾರ.
ಜನವರಿಯಿಂದ ಮೇ ಅವಧಿಯಲ್ಲಿ ಇವು ಮೊಟ್ಟೆಇಟ್ಟು ಮರಿ ಮಾಡುತ್ತವೆ. ಕೊರೆದ ಗೂಡು ಸಾಮಾನ್ಯವಾಗಿ 8 ರಿಂದ 10 ಇಂಚು ಆಳ 2ವರೆ ಇಂಚು ವ್ಯಾಸ ಇರುತ್ತದೆ. ಇದರಲ್ಲಿ 2-5 ಬಿಳಿಬಣ್ಣದ ವರ್ತುಲಾಕಾರದ ಮೊಟ್ಟೆ ಇಡುತ್ತದೆ. 11-14 ದಿನ ಕಾವು ಕೊಡುತ್ತವೆ. ಹೀಗೆ ಅದರ ಪುಟ್ಟ ಮರಿಗಳಿಗೆ ಗುಟುಕು ಕೊಟ್ಟು ತಂದೆತಾಯಿ ಆರೈಕೆ ಮಾಡುತ್ತವೆ. 18 ರಿಂದ 30 ದಿನ ತಂದೆತಾಯಿಯ ಆರೈಕೆಯಲ್ಲಿ ಬೆಳೆದು, ಅನಂತರಗೂಡು ಬಿಟ್ಟು ಸ್ವತಂತ್ರವಾಗಿ ಉಳಿಯುತ್ತವೆ. ಹಿಮಾಲಯದ 1000ಮೀ. ಎತ್ತರದ ಪ್ರದೇಶದಲ್ಲಿ ಮತ್ತು ಭಾರತದ ಉದುರೆಲೆಕಾಡು ಇದರ ವಾಸಸ್ಥಾನ. ಹಳ್ಳಿ ಸಮೀಪ ಇರುವ ಬಂದಳಕಗಳಿರುವ ಮರ, ಮಾವಿನ ಮರ, ಕೆಲವೊಮ್ಮೆ ಕಾಂಡ್ಲಾ ಗಿಡಗಳು ತುಂಬಿರುವ ನದಿಯಂಚಿನಲ್ಲೂ ಕಾಣಸಿಗುತ್ತದೆ.
ಚಿಕ್. ಚಿಕ್, ಚೀಕ್‌ಇಲ್ಲವೇ ಚಿಕ್‌ಚಿಕ್‌ಚೀರ್ ಎಂದು ಸ್ವಲ್ಪಕೀರಲು ದನಿಯಲ್ಲಿ ಕೂಗುತ್ತಾ ಹಾರುವುದು ಇದರ ಸ್ವಭಾವ. ಕೆಲವೊಮ್ಮೆ ತಾನು ಹಿಡದಚಿಕ್ಕ ಏಡಿ, ಹುಲ್ಲಿನ ಮಿಡತೆ, ಕಟ್ಟಿರುವೆ, ಗೊದ್ದ, ಇರುವೆ ಎಂದು ಹಳ್ಳಿಗರು ಕರೆಯವದೊಡ್ಡಇರುವೆಗಳನ್ನು ಬೇಟೆಯಾಡಿದ ಸಂಭ್ರಮಕ್ಕೂ ಕೂಗುತ್ತದೆ.
10 ರಿಂದ 15 ಅಡಿ ಎತ್ತರದಲ್ಲಿ ಮರದಟೊಂಗೆಯ ಕೆಳಭಾಗದಲ್ಲಿ ಇದುಗೂಡು ನಿರ್ಮಿಸುವುದು. ಈ ಪುಟ್ಟ ಹಕ್ಕಿಯಲ್ಲಿ ಕುತೂಹಲಕ್ಕೆ ಕಾರಣವಾದ ದನಿ, ಮಿದುಳಿನ ರಚನೆ, ಕಣ್ಣಿನರಕ್ಷಣೆ, ಸದಾಕುಟ್ಟುತ್ತಿದ್ದರೂ ಅದರಕುತ್ತಿಗೆ ಎಲುಬುವುಗಳು ಸವಕಳಿಯಾಗದೇ ಇರುತ್ತವೆ. ಯಾವ ಅಂಶ ಅದಕ್ಕೆಕಾರಣ ಎಂದು ತಿಳಿದರೆ ಮಾನವರ ಮಂಡಿ ಎಲುಬು ಇಲ್ಲವೇ ಮಂಡಿನೋವಿನ ಸಮಸ್ಯೆಗೆ ಪರಿಹಾರ ಸಿಕ್ಕು ಮಾನವರಿಗೂ ಉಪಕಾರವಾದೀತು. ಆದರೆ ಇಂತಹ ಅಧ್ಯಯಯನಕ್ಕೆ ಬೇಕಾದ ಸಲಕರಣೆಗಳಿಲ್ಲ.
ಪಿ.ವಿ.ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.