ನಿತ್ಯಯೋಗಾಸನ ಪಟು


Team Udayavani, Dec 30, 2019, 6:05 AM IST

nitya-yogasana

ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಮತ್ತು ಶ್ರೀ ವಿಶ್ವಪ್ರಸನ್ನತೀರ್ಥರು ಇಬ್ಬರೂ ನಿತ್ಯ ಯೋಗಾಸನ ಪಟುಗಳೇ. ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಚಿಕ್ಕ ಪ್ರಾಯದಿಂದಲೂ ಪ್ರಾಣಾಯಾಮವನ್ನು ಸಂಪ್ರ ದಾಯದಂತೆ ನಡೆಸುತ್ತಿದ್ದಾರಾದರೂ ಯೋಗಾಸನಗಳ ಅಭ್ಯಾಸವನ್ನು ಮಾಡುತ್ತಿದ್ದುದು 1984ರ ಬಳಿಕ. ತಮ್ಮ ಮೂರನೆಯ ಪರ್ಯಾಯ ವೇಳೆ ಯೋಗಾ ಸನಗಳನ್ನು ಮಾಡಲು ಆರಂಭಿಸಿದರು.

ಆಗ ಶ್ರೀಗಳಿಗೆ ಯೋಗಾಸನಗಳನ್ನು ಕಲಿಸಿಕೊಟ್ಟವರು ಯೋಗ ಗುರು ಡಾ| ಕೃಷ್ಣ ಭಟ್‌. ನರೇಂದ್ರ ಮೋದಿಯವರಿಗೆ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಲು ಸಲಹೆ ನೀಡಿದ ಬೆಂಗಳೂರು ಜಿಗಣಿ ವಿವೇಕಾನಂದ ಯೋಗ ಕೇಂದ್ರದ ಡಾ| ಎಚ್‌.ಆರ್‌. ನಾಗೇಂದ್ರರೂ ಮಾರ್ಗದರ್ಶನ ಮಾಡಿದ್ದರು. ಶ್ರೀಗಳು ಸುಮಾರು ಎರಡು ವರ್ಷಗಳ ಹಿಂದಿನವರೆಗೂ ದಿನಕ್ಕೆ 15-20 ನಿಮಿಷಗಳನ್ನು ಯೋಗಾಸನ, ಪ್ರಾಣಾಯಾಮಕ್ಕೆ ಮೀಸಲಿಡು ತ್ತಿದ್ದರು.

ಯೋಗಾಸನಗಳನ್ನು ಖಾಲಿ ಹೊಟ್ಟೆಯಲ್ಲಿ ಮಾಡಬೇಕೆಂಬ ನಿಯಮದಿಂದಲೋ ಏನೋ ಸದಾ ಗಡಿಬಿಡಿಯಲ್ಲಿರುವ ಶ್ರೀಗಳು ಮಧ್ಯಾಹ್ನದೊಳಗೆ (ಹೇಗಿದ್ದರೂ ಮಧ್ಯಾಹ್ನದವರೆಗೆ ಖಾಲಿ ಹೊಟ್ಟೆ) ಸಮಯ ಸಿಕ್ಕಿದಾಗ ಗಡಿಬಿಡಿಯಲ್ಲಿಯೇ ಭುಜಂಗಾಸನ, ಸರ್ವಾಂಗಾಸನ, ಹಲಾಸನ ಮೊದಲಾದ ಯೋಗಾಸನಗಳನ್ನು, ಅನುಲೋಮ ವಿಲೋಮ ಮೊದಲಾದ ಪ್ರಾಣಾಯಾಮ ಮಾಡುತ್ತಿದ್ದರು. ಬೆನ್ನು ಹುರಿ ನೋವು, ಹರ್ನಿಯಾ ಶಸ್ತ್ರಚಿಕಿತ್ಸೆ ಬಳಿಕ ಯೋಗಾಸನಗಳನ್ನು ಮಾಡ ಲಾಗುತ್ತಿರಲಿಲ್ಲ. ಆದರೆ ಕೈಕಾಲು ಅಲ್ಲಾಡಿಸುವ ಸರಳ ವ್ಯಾಯಾಮ ಬಿಟ್ಟಿರಲಿಲ್ಲ.

ಪ್ರತಿನಿತ್ಯ ಬೆಳಗ್ಗೆ 4 ಗಂಟೆಗೆ ಎದ್ದು 6 ಗಂಟೆ ಯೊಳಗೆ ಪೂಜೆಗಳನ್ನು ಮುಗಿಸುವ ಶ್ರೀಗಳು ಸ್ಥಳದ ಅನುಕೂಲತೆಗಳನ್ನು ನೋಡಿ ಆಸನಗಳನ್ನು ಮಾಡುತ್ತಿದ್ದರು. ಸಂಚಾರದಲ್ಲಿರುವಾಗ ಕೆಲವು ಬಾರಿ ಆಸನಗಳ ಅಭ್ಯಾಸ ಮಾಡಲಿಕ್ಕೆ ಆಗುತ್ತಿರಲಿಲ್ಲ. ಇಂತಹ ಆಸನಗಳ ಅಭ್ಯಾಸದಿಂದಲೋ ಏನೋ ಅವರು ನೂರಾರು ಕಿ.ಮೀ. ಸುಲಭವಾಗಿ ನಡೆಯು ತ್ತಿದ್ದರು. ನೀರಿನಲ್ಲಿಯೂ ಅವರು ಯೋಗಾಸನಗಳನ್ನು ನಡೆಸುತ್ತಿದ್ದರು. ನೀರಿನಲ್ಲಿ ಅಂಗಾತ ಮಲಗಿ ಚಲಿಸುವುದು, ಕುತ್ತಿಗೆವರೆಗೆ ನೀರಿನಲ್ಲಿ ನಿಂತು ನಿಧಾನವಾಗಿ ನಡೆಯುವುದು,

ಎತ್ತರದಿಂದ ನೀರಿಗೆ ಧುಮುಕುವುದು (ಡೈವಿಂಗ್‌) ಹೀಗೆ ಸುಮಾರು ಹತ್ತು ಬಗೆಯ ವಿವಿಧ ಸ್ಟ್ರೋಕ್‌ಗಳನ್ನು ಲೀಲಾಜಾಲವಾಗಿ ಮಾಡು ತ್ತಿದ್ದರು. ಕಷ್ಟಕರವಾದ ನೀರಿನಲ್ಲಿ ಮಾಡುವ ಚಮ ತ್ಕಾರಗಳನ್ನು ಮಾಡಲು ಅವರು ಕಲಿತದ್ದು ಉಡುಪಿಯ ಮಧ್ವ ಸರೋವರದಲ್ಲಿ. ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಚಿಕ್ಕಪ್ರಾಯದಿಂದಲೇ ಯೋಗಾಸನಗಳನ್ನು ಶಿಸ್ತು ಬದ್ಧವಾಗಿ ಕಲಿತು, ಅದರಲ್ಲಿ ಪ್ರಾವೀಣ್ಯ ಪಡೆದಿ ದ್ದಾರೆ. ಅವರು ಯೋಗನಿದ್ರಾಸನ, ಮಯೂರಾಸನ ದಂತಹ ಅತಿ ಕ್ಲಿಷ್ಟ ಆಸನಗಳೂ ಸೇರಿದಂತೆ ಸುಮಾರು 50 ಆಸನಗಳನ್ನು ಸಿದ್ಧಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ve-46

ರಾಜಕಾರಣ- ಭ್ರಷ್ಟಾಚಾರ- ಸ್ವರ್ಗ- ಪರಿಸರ- ಪುಣ್ಯ…

ve-44

ರಥಬೀದಿ, ಪೇಜಾವರ ಮಠದಲ್ಲಿ ನೀರವ ಮೌನ

ve-47

ರಾಮ-ವಿಠಲ, ಶ್ರೀಕೃಷ್ಣ, ರಾಮಲಲ್ಲಾ…

bg-68

ಪೇಜಾವರ ಶ್ರೀ ಬದುಕಿನ ಸಾರ

kolar-tdy-1

ದಲಿತ ಕೇರಿಗೆ ಭೇಟಿ ನೀಡಿದ್ದ ಪೇಜಾವರ ಶ್ರೀ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.