ಅಯೋಧ್ಯೆ ಚಳವಳಿಯಲ್ಲಿ ಮಂಚೂಣಿಯಲ್ಲಿದ್ದ ಪೇಜಾವರ ಶ್ರೀ
Team Udayavani, Dec 30, 2019, 6:04 AM IST
1980ರ ಬಳಿಕ ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಅಯೋಧ್ಯಾ ರಾಮಜನ್ಮಭೂಮಿ ಚಳವಳಿ ಆರಂಭ ವಾಯಿತು. ಅಂದಿನಿಂದ ಕೊನೆಯವರೆಗೂ ಅದರಲ್ಲಿ ಸಕ್ರಿಯರಾಗಿದ್ದವರು ಪೇಜಾವರ ಶ್ರೀಗಳು. 1985ರ ಅಕ್ಟೋಬರ್ 31, ನವೆಂಬರ್ 1ರಂದು ಪೇಜಾವರ ಶ್ರೀಪಾದರ ಮೂರನೆಯ ಪರ್ಯಾಯ ಅವಧಿಯಲ್ಲಿ ನಡೆದ ಎರಡನೆಯ ಧರ್ಮಸಂಸದ್ ಅಧಿವೇಶನದಲ್ಲಿ ಅಯೋಧ್ಯೆ ರಾಮಮಂದಿರದ ತಾಲಾ ಖೋಲೋ ಆಂದೋಲನಕ್ಕೆ ಕರೆ ನೀಡಲಾಯಿತು.
“ವಹೀ ಮಂದಿರ್ ಬನಾಯೇಂಗೆ’ ಎಂಬ ಘೋಷವಾಕ್ಯ ಮೊಳಗಿತ್ತು. ಆಗ ರಾಜಾಂಗಣ ದಲ್ಲಿ ನಡೆದ ಸಭೆಯಲ್ಲಿ ಸಾವಿರಕ್ಕೂ ಅಧಿಕ ಸಂತರು ಪಾಲ್ಗೊಂಡಿದ್ದರು. ಅನಂತರ ಪ್ರಧಾನಿಯಾಗಿದ್ದ ರಾಜೀವ ಗಾಂಧಿಯವರು ಮಂದಿರದ ಬೀಗ ತೆಗೆದು ಪೂಜೆಗೆ ಅವಕಾಶ ಮಾಡಿಕೊಟ್ಟರು. 1990ರ ದಶಕದ ಇಟ್ಟಿಗೆಗಳ ಸಂಗ್ರಹ, ರಾಮರಥಯಾತ್ರೆ ಇತ್ಯಾದಿಗಳು ಜನಜನಿತ. 1992ರ ಡಿ. 6ರಂದು ಅಯೋಧ್ಯೆಯಲ್ಲಿ ಕರ ಸೇವೆಗೆ ಕರೆ ನೀಡಲಾಗಿತ್ತು.
ಆಗ ಪೇಜಾವರ ಶ್ರೀಗಳು ಉಡುಪಿಯ ಇತರ ಮಠಾಧೀಶರ ಜತೆ ಪಾಲ್ಗೊಂಡಿದ್ದರು. ಆಗ ಬಂಧನವೂ ನಡೆದಿತ್ತು. ಪೂಜೆಗೆ ತೊಂದರೆಯಾಗಿರಲಿಲ್ಲ. ಡಿ. 6ರಂದು ಕರಸೇವಕರು ನಾಯಕರ ಮಾತು ಮೀರಿ ನಿಯಂತ್ರಣ ತಪ್ಪುತ್ತಿದ್ದಾಗ ಪೇಜಾವರ ಶ್ರೀಗಳು ತಡೆಯಲು ಯತ್ನಿಸಿದರು. ಆದರೆ ಫಲಕಾರಿ ಯಾಗಲಿಲ್ಲ. ಆ ದಿನ ವಿವಾದಿತ ಕಟ್ಟಡ ಕುಸಿದ ಬಳಿಕ ಅದರೊಳಗಿದ್ದ ರಾಮಲಲ್ಲಾ ವಿಗ್ರಹವನ್ನು ಕಾರ್ಯಕರ್ತರು ಎಲ್ಲೋ ಕೊಂಡೊಯ್ದರು. ಪ್ರಾಯಃ ಇದಾಗುವಾಗ ಬೆಳಗ್ಗಿನ ಜಾವ ಆಗಿತ್ತು. ಎಲ್ಲೆಡೆ ಗಂಭೀರ ವಾತಾವರಣವಿತ್ತು.
ಡಿ. 7ರ ಬೆಳಗ್ಗೆ ಪೇಜಾವರ ಶ್ರೀಗಳೂ ತರಾತುರಿ ಯಲ್ಲಿ ಹೋಗುವಾಗ ದಾರಿ ಮಧ್ಯೆ ಕಾರ್ಯ ಕರ್ತರು ಆ ವಿಗ್ರಹವನ್ನು ಮೂಲ ಸ್ಥಳದಲ್ಲಿ ಇರಿಸುವಂತೆ ಹೇಳಿದರು. ಗಳಿಗೆ, ಮುಹೂರ್ತ ಯಾವುದನ್ನೂ ಕಾಣದೆ ತತ್‌ಕ್ಷಣವೇ ರಾಮಮಂತ್ರ ಜಪಿಸಿ ಪ್ರತಿಷ್ಠಾಪಿಸಿದರು. ಇದುವರೆಗೂ ಅಲ್ಲಿ ಕೋಟ್ಯಂತರ ಜನರು ದರ್ಶನ ಪಡೆದದ್ದು ಪೇಜಾವರ ಶ್ರೀಗಳಿಂದ ದಿಢೀರ್ ಪ್ರತಿಷ್ಠಾಪಿತವಾದ ರಾಮಲಲ್ಲಾ.
ಭವಿಷ್ಯ ನುಡಿದರು: 2016-17ರ 5ನೆಯ ಪರ್ಯಾಯ ಒದಗಿ ಬಂದಾಗ 2017ರ ನವೆಂಬರ್ 24, 25, 26ರಂದು 15ನೆಯ ಧರ್ಮಸಂಸದ್ ಆಯೋಜನೆಗೊಂಡಿತು. ಸುಮಾರು 2 ಸಾವಿರ ಸಂತರು ಪಾಲ್ಗೊಂಡರು. ಈ ಅಧಿವೇಶನ ದಲ್ಲಿ ರಾಮಮಂದಿರ ನಿರ್ಮಾಣದ ಖಚಿತ ನಿರ್ಣಯ ವನ್ನು ತಳೆಯಲಾಯಿತು. ಆಗ ಪೇಜಾವರ ಶ್ರೀಗಳು ಮಾತನಾಡಿ “ಮಂದಿರ ನಿರ್ಮಾಣಕ್ಕೆ ಪೂರಕ ವಾತಾ ವರಣ ಕಂಡುಬರುತ್ತಿದೆ. 2019ರೊಳಗೆ ಇದು ಸಾಕಾರ ಗೊಳ್ಳಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಸಂತೃಪ್ತಿ ತಂದ ತೀರ್ಪು: 2019ರ ನ. 9ರಂದು ಸರ್ವೋಚ್ಚ ನ್ಯಾಯಾಲ ಯದ ತೀರ್ಪು ಹೊರಬಿದ್ದಾಗ “ನಾನು ರಾಮ ಮಂದಿರದ ಪೂರಕ ವಾತಾವರಣವನ್ನು ನೋಡು ತ್ತೇನೋ ಇಲ್ಲವೋ ಎಂಬ ಕೊರಗು ಇತ್ತು. ಈಗ ಸಂತೃಪ್ತಿಯಾಯಿತು’ ಎಂದಿದ್ದರು. ಅದೇ ದಿನ ಉಡುಪಿಯಲ್ಲಿ ಉತ್ಥಾನ ದ್ವಾದಶಿ, ಲಕ್ಷದೀಪೋತ್ಸವದ ಸಡಗರ. ಉತ್ಥಾನ ದ್ವಾದಶಿಯಂದು ದೇವರು ಏಳುವ ದಿನ ಎಂಬ ನಂಬಿಕೆ ಇದೆ. ಪೇಜಾವರ ಶ್ರೀಗಳು ಎರಡೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನ. 10ರಂದು ದಿಲ್ಲಿಯಲ್ಲಿ ಪ್ರಧಾನ ಮಂತ್ರಿ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ನಡೆದ ಉನ್ನತ ಸ್ತರದ ಸಭೆಯಲ್ಲಿ ಭಾಗವಹಿಸಿದ್ದರು.
1980ರ ಬಳಿಕ ಇದುವರೆಗೆ ರಾಮಮಂದಿರ ಚಳವಳಿಗೆ ಸಂಬಂಧಿಸಿದ ಇಟ್ಟಿಗೆ ಸಂಗ್ರಹ, ರಾಮ ರಥಯಾತ್ರೆ ಇತ್ಯಾದಿಯಾಗಿ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಪಾಲ್ಗೊಂಡ ಕಾರ್ಯಕ್ರಮಗಳು ಅದೆಷ್ಟೋ… ಇದೇ ವೇಳೆ ವಿ.ಪಿ. ಸಿಂಗ್, ಪಿ.ವಿ. ನರಸಿಂಹ ರಾವ್ ಮೊದ ಲಾದವರು ಪ್ರಧಾನಿಯಾಗಿದ್ದಾಗ ಅನೇಕ ಸಂಧಾನ ಸಭೆಗಳಲ್ಲಿಯೂ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.