ಉಪ್ಪಿ ಲವ್ ಸ್ಟೋರಿಗೆ 25ರ ಸಂಭ್ರಮ
Team Udayavani, Jul 5, 2019, 5:00 AM IST
ಸಿನಿಮಾವೊಂದರ ನಿಜವಾದ ಗೆಲುವನ್ನು ನಿರ್ಧರಿಸುವುದು ಹೇಗೆ?
– ಹೀಗೊಂದು ಗೊಂದಲ ಅನೇಕರಲ್ಲಿದೆ. ಆದರೆ, ಉಪೇಂದ್ರ ಅವರಲ್ಲಿ ಮಾತ್ರ ಈ ಗೊಂದಲಕ್ಕೆ ಸ್ಪಷ್ಟ ಉತ್ತರವಿದೆ. ಚಿತ್ರದ ನಿರ್ಮಾಪಕ, ವಿತರಕ, ಪ್ರದರ್ಶಕ, ಪಾರ್ಕಿಂಗ್ ಬಾಯ್, ಕ್ಯಾಂಟಿನ್, ಬ್ಲ್ಯಾಕ್ ಟಿಕೆಟ್ ಮಾರುವಾತ ಸೇರಿದಂತೆ ಸಿನಿಮಾಕ್ಕೆ ಸಂಬಂಧಪಟ್ಟ ಎಲ್ಲರೂ ಒಳ್ಳೆಯ ಹಣ ಮಾಡಿದಾಗ ಮಾತ್ರ ಅದು ಸಿನಿಮಾವೊಂದರ ಗೆಲುವು. ಉಪೇಂದ್ರ ಈ ಮಾತು ಹೇಳಲು ಕಾರಣ ‘ಐ ಲವ್ ಯು’ ಚಿತ್ರ. ಆರ್.ಚಂದ್ರು ನಿರ್ಮಾಣ, ನಿರ್ದೇಶನದ ‘ಐ ಲವ್ ಯು’ ಚಿತ್ರಕ್ಕೆ ಈಗ 25ರ ಸಂಭ್ರಮ. ಈ ಚಿತ್ರ ಸಿನಿಮಾದ ಎಲ್ಲಾ ವರ್ಗದವರು ಖುಷಿಯಾಗುವಂತೆ ಮಾಡಿದೆಯಂತೆ. ಇತ್ತೀಚೆಗೆ ಚಿತ್ರತಂಡ ಈ ಸಂಭ್ರಮವನ್ನು ಹಂಚಿಕೊಳ್ಳಲು ಮಾಧ್ಯಮದ ಮುಂದೆ ಬಂದಿತ್ತು. ಈ ವೇಳೆ ಉಪ್ಪಿ ಚಿತ್ರ ಗೆದ್ದ ಖುಷಿಯನ್ನು ಹಂಚಿಕೊಂಡರು. ‘ನಿರ್ಮಾಪಕ ಸಿನಿಮಾವನ್ನು ಹಂಚಿಕೆದಾರನಿಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವುದು ನಿಜವಾದ ಗೆಲುವಲ್ಲ. ಸಿನಿಮಾ ಬಿಡುಗಡೆಯಾಗಿ ಎಲ್ಲಾ ವಿಧಗಳಲ್ಲೂ ಯಶಸ್ಸು ಕಾಣುವುದು ನಿಜವಾದ ಗೆಲುವು. ಈ ಚಿತ್ರ ಗೆಲ್ಲುತ್ತದೆ ಎಂದು ನನಗೆ ಅಣ್ಣನ ಮಗ ನಿರಂಜನ್ ಹೇಳಿದ. ಆ ನಂತರ ವಿತರಕರಾದ ಮೋಹನ್ ದಾಸ್ ಪೈ, ಧೀರಜ್ ಕೂಡಾ ಅದೇ ಮಾತು ಹೇಳಿದರು. ನಿರ್ದೇಶಕ ಚಂದ್ರು ಅವರು ಆರಂಭದಲ್ಲಿ ಏನು ಹೇಳಿದ್ದಾರೋ ಅದರಂತೆ ಸಿನಿಮಾ ಮಾಡಿದ ಪರಿಣಾಮ ಸಿನಿಮಾ ಗೆದ್ದಿದೆ. ಇವತ್ತು ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಂದೊಂದು ಸಿನಿಮಾಗಳ ಗೆಲುವು ಕೂಡಾ ಚಿತ್ರರಂಗದ ಗೆಲುವು ಇದ್ದಂತೆ’ ಎಂದರು ಉಪೇಂದ್ರ. ನಿರ್ದೇಶಕ ಕಂ ನಿರ್ಮಾಪಕ ಆರ್.ಚಂದ್ರು ಕೂಡಾ ಚಿತ್ರದ ಗೆಲುವಿನ ಬಗ್ಗೆ ಖುಷಿಪಟ್ಟರು. ಉಳಿದಂತೆ ಚಿತ್ರತಂಡದ ಸದಸ್ಯರು ಕೂಡಾ ತಮ್ಮ ಸಂಭ್ರಮ ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.