5 ತಿಂಗಳು 85 ಸಿನಿಮಾ!
Team Udayavani, Jun 1, 2018, 7:49 PM IST
ಇನ್ನೊಂದು ತಿಂಗಳು ಕಳೆದರೆ ಗಾಂಧಿನಗರದ ಅರ್ಧವಾರ್ಷಿಕ ಪರೀಕ್ಷೆ ಮುಗಿದಂತೆ. ಹೌದು, 2018ರ ಅರ್ಧ ವರ್ಷದ ಅವಧಿಯ ಸಮೀಪವಿರುವ ಕನ್ನಡ ಚಿತ್ರರಂಗ, ಕಳೆದ ಐದು ತಿಂಗಳಲ್ಲಿ ತನ್ನ ಖಾತೆಗೆ ಬರೋಬರಿ 85 ಚಿತ್ರಗಳನ್ನು ದಾಖಲಿಸಿಕೊಂಡಿದೆ. ಇದು ಕನ್ನಡ ಸಾರ್ವಕಾಲಿಕ ದಾಖಲೆ ಎಂದರೆ ತಪ್ಪಿಲ್ಲ. ಕೆಲವು ವರ್ಷಗಳ ಹಿಂದೆ ವರ್ಷವೊಂದಕ್ಕೆ ಈ ಸಂಖ್ಯೆಯ ಚಿತ್ರ ಬಿಡುಗಡೆಯಾಗುತಿತ್ತು. ಆದರೆ, ಈ ಐದೇ ತಿಂಗಳಲ್ಲಿ ಇಷ್ಟೊಂದು ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಮುಂದಿನ ಏಳು ತಿಂಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳನ್ನು ಲೆಕ್ಕ ಹಾಕಿದರೆ, ಈ ವರ್ಷ ಸಹ ಇನ್ನೊಂದು ದಾಖಲೆ ಖಚಿತ ಎನ್ನಬಹುದು.
ಈ ಐದು ತಿಂಗಳಲ್ಲಿ ಚಿತ್ರಗಳ ಸಂಖ್ಯೆ ಹೆಚ್ಚಿದೆಯೇ ಹೊರತು, ಗೆಲುವಿನ ಸಂಖ್ಯೆ ತೀರಾ ವಿರಳ. ಈ ಅವಧಿಯಲ್ಲಿ ಒಂದೆರೆಡು ಹೊರತುಪಡಿಸಿದರೆ ಸ್ಟಾರ್ ಚಿತ್ರಗಳ ಸಂಖ್ಯೆ ಜಾಸ್ತಿ ಇಲ್ಲ. ಐದು ತಿಂಗಳ ಅವಧಿಯಲ್ಲಿ ಗೆಲುವಿಗಿಂತ ಸೋಲುಗಳ ಪಾಲೇ ಹೆಚ್ಚು. ಹಳಬರು, ಹೊಸಬರು ಜಂಟಿ ಖಾತೆ ತೆರೆದರೂ ಇಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ದಾಖಲಾಗಿಲ್ಲ. ಹಾಗೆ ನೋಡಿದರೆ, ಈ ಐದು ತಿಂಗಳಲ್ಲಿ ಸ್ವಮೇಕ್ ಚಿತ್ರಗಳದ್ದೇ ಕಾರುಬಾರು. ಅಲ್ಲೊಂದು, ಇಲ್ಲೊಂದು ರಿಮೇಕ್ ಚಿತ್ರಗಳು ಬಂದರೂ, ಗುರುತಿಸಿಕೊಂಡಿದ್ದು ಕಡಿಮೆ. ಒಟ್ಟಾರೆ ಈ ಐದು ತಿಂಗಳ ಗಾಂಧಿನಗರದ ಸಿನಿಮಾ ಪರೀಕ್ಷೆಯಲ್ಲಿ ಫಸ್ಟ್‌ಕ್ಲಾಸ್ ಇರಲಿ, ಜಸ್ಟ್ ಪಾಸ್ ಆದವರ ಸಂಖ್ಯೆಯೂ ಲೆಕ್ಕಕ್ಕೆ ಸಿಗುತ್ತಿಲ್ಲ. ಹಾಗೆ ನೋಡಿದರೆ, ಹೊಸಬರೇ ಒಂದಷ್ಟು ಸದ್ದು ಮಾಡಿದ್ದು ಅಂದರೆ ನಂಬಲೇಬೇಕು.
ಅಲ್ಲೊಂದು,ಇಲ್ಲೊಂದು ಪ್ರಯೋಗಾತ್ಮಕ ಚಿತ್ರಗಳು ಇಣುಕಿ ನೋಡಿದರೂ, ಕೊಂಚ ಅತ್ತ ತಿರುಗುವಂತೆ ಮಾಡಿದ್ದು ಸುಳ್ಳಲ್ಲ. ನಿರೀಕ್ಷೆಯ ನಡುವೆ…: ಈ ಐದು ತಿಂಗಳಲ್ಲಿ ಕೆಲ ಸ್ಟಾರ್ ಮತ್ತು ಹೊಸಬರ ಚಿತ್ರಗಳು ತೆರೆಗೆ ಬಂದರೂ, ಸೈ ಎನಿಸಿಕೊಂಡ ಚಿತ್ರಗಳನ್ನು ಹೆಸರಿಸುವುದಾದರೆ, ಅದು ಶಿವರಾಜಕುಮಾರ್ ಅಭಿನಯದ “ಟಗರು’ ಮತ್ತು ಹೊಸಬರ “ಗುಳುr’. ಈ ಐದು ತಿಂಗಳ ಅವಧಿಯಲ್ಲಿ ಶತದಿನ ಆಚರಿಸಿಕೊಂಡ ಚಿತ್ರ ಎಂಬ ಹೆಗ್ಗಳಿಕೆಗೆ “ಟಗರು’ ಪಾತ್ರವಾಗಿದೆ. ಉಳಿದಂತೆ ಹೊಸಬರೇ ಸೇರಿ ಮಾಡಿದ “ಗುಳುr’ ಹೇಗೋ ಐವತ್ತು ದಿನಗಳನ್ನು ಪೂರೈಸಿ ಸುದ್ದಿ ಮಾಡಿತು. ಅದರೊಟ್ಟಿಗೆ ಬಿಡುಗಡೆಯಾದ “ಇದೀಗ ಬಂದ ಸುದ್ದಿ’ ಮೆಚ್ಚುಗೆ ಪಡೆಯಿತಾದರೂ, ಹಣ ಗಳಿಸುವಲ್ಲಿ ವಿಫಲವಾಯಿತು. “ರ್‍ಯಾಂಬೋ 2′ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದಲ್ಲದೆ, ಕಲೆಕ್ಷನ್‌ನಲ್ಲೂ ಹಿಂದೆ ಬೀಳದೆ, ಸ್ಟಡಿಯಾಗಿದೆ. ನಿರೀಕ್ಷೆ ಇದ್ದಂತಹ “ಜಾನಿ ಜಾನಿ ಯೆಸ್ ಪಪ್ಪಾ’, “ಸಂಹಾರ’ ಕೂಡ ನಿರೀಕ್ಷೆ ಮಟ್ಟ ತಲುಪಲಿಲ್ಲ. ಮಿಕ್ಕಂತೆ ಬಿಡುಗಡೆಯಾದ ಹೊಸಬರ ಚಿತ್ರಗಳಾÂವೂ ಗಮನಸೆಳೆಯಲಿಲ್ಲ. ಹಾಗೆ ನೋಡಿದರೆ, ಈ ಐದು ತಿಂಗಳ ಅವಧಿಯಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 85. ಈ ಪೈಕಿ, ಹೊಸಬರ 44 ಚಿತ್ರಗಳೇ ಬಿಡುಗಡೆಯಾಗಿವೆ. ಅರ್ಜುನ್ ಸರ್ಜಾ ನಿರ್ದೇಶನದ “ಪ್ರೇಮ ಬರಹ’ ಹೇಗೋ ಅರ್ಧ ಸೆಂಚುರಿ ಬಾರಿಸಿತು ಎಂಬ ಸುದ್ದಿಗೆ ಪಾತ್ರವಾಯ್ತು. ಅದು ಬಿಟ್ಟರೆ, ಯೋಗಿ ಅಭಿನಯದ “ಯೋಗಿ ದುನಿಯಾ’, ನಿರೂಪ್ ಭಂಡಾರಿಯ “ರಾಜರಥ’, “ನೆನಪಿರಲಿ’ ಪ್ರೇಮ್ ಅಭಿನಯದ “ದಳಪತಿ’, “ಸೀಜರ್’, “ಬಕಾಸುರ’ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಗೊಂಡರೂ ಸುದ್ದಿ ಮತ್ತು ಸದ್ದು ಎರಡರಲ್ಲೂ ಹಿಂದೆ ಬಿದ್ದವು.
ಈವರೆಗೆ ಶೇ.5 ರಷ್ಟು ಲಾಭ!: ಐದು ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳ ಲೆಕ್ಕ ಹಾಕಿದಾಗ ಸಿಕ್ಕಿದ್ದು 85 ಚಿತ್ರಗಳು. ಇಷ್ಟೊಂದು ಚಿತ್ರಗಳು ಬಿಡುಗಡೆಯಾಗಿದ್ದರೂ, ಚಿತ್ರೋದ್ಯಮಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಕಡಿಮೆ ಅಂದರೂ, 75 ಲಕ್ಷ ದಿಂದ 1, 2, 3 ಕೋಟಿ ಮತ್ತು ಅದಕ್ಕಿಂತ ಹೆಚ್ಚು ಕೋಟಿ ರುಪಾಯಿ ಖರ್ಚು ಮಾಡಿ ನಿರ್ಮಾಣಗೊಂಡಿವೆ ಅಂತ ಇಟ್ಟುಕೊಂಡರೂ ಸುಮಾರು 200 ಕೋಟಿ ರುಪಾಯಿಗಳಷ್ಟು ವಹಿವಾಟು ಬಿಡುಗಡೆಗೊಂಡಿರುವ ಈ ಚಿತ್ರಗಳಿಂದ ಆಗಿದೆ. ಆದರೆ, ಇಲ್ಲಿ ಚಿತ್ರೋದ್ಯಮದಲ್ಲಿ ನೂರಾರು ಕೋಟಿ ವ್ಯವಹಾರ ನಡೆದಿದೆಯಾದರೂ, ಚಿತ್ರ ನಿರ್ಮಿಸಿದ ನಿರ್ಮಾಪಕರ ಜೇಬಿಗೆ ಲಾಭ ಇರಲಿ, ಹಾಕಿದ ಹಣ ಕೂಡ ಬಂದಿಲ್ಲ! ಈ ಕುರಿತು ಸಿನಿ ವಿತರಕ, ನಿರ್ಮಾಪಕ ಜಯಣ್ಣ ಅವರನ್ನು ವಿಚಾರಿಸಿದರೆ, ಅವರು ಹೇಳುವುದಿಷ್ಟು.
“ಇಲ್ಲಿಯವರೆಗೆ ಬಿಡುಗಡೆಯಾಗಿರುವ ಇಷ್ಟು ಚಿತ್ರಗಳಲ್ಲಿ ಕೇವಲ ನಾಲ್ಕು ಸಿನಿಮಾಗಳು ಮಾತ್ರ ಹಣ ಗಳಿಸಿವೆ. “ಟಗರು’, “ರ್‍ಯಾಂಬೋ 2′,”ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್’ ಮತ್ತು “ಗುಳುr’. “ಟಗರು’ ಮತ್ತು “ರ್‍ಯಾಂಬೋ 2′ ಈ ಎರಡು ಚಿತ್ರಗಳಿಂದ ಸುಮಾರು 30 ಕೋಟಿ ವ್ಯವಹಾರವಾಗಿದೆ. “ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್’ ಮತ್ತು “ಗುಳುr’ ಈ ಎರಡು ಚಿತ್ರಗಳು ಸ್ವಲ್ಪ ಮಟ್ಟಿಗಿನ ಲಾಭ ಪಡೆದಿವೆ. ಕಡಿಮೆ ಬಜೆಟ್‌ನಲ್ಲಿ ತಯಾರಾಗಿದ್ದ ಈ ಚಿತ್ರಗಳು ಸೇಫ್ ಆಗುವುದರ ಜೊತೆಗೆ ಸ್ವಲ್ಪ ಲಾಭದಲ್ಲಿವೆ. “ಹಂಬಲ್…’ 50 ಲಕ್ಷದಿಂದ 75 ಲಕ್ಷ ವರೆಗೆ ಲಾಭ ಮಾಡಿಕೊಂಡರೆ, “ಗುಳುr’ 35 ರಿಂದ 50 ರವರೆಗೆ ಲಾಭ ಮಾಡಿಕೊಂಡಿದೆ. ಈ ಎಲ್ಲಾ ಚಿತ್ರಗಳಿಂದ ಸುಮಾರು 175 ರಿಂದ 200 ಕೋಟಿ ವಹಿವಾಟು ನಡೆದಿದ್ದರೂ, ಚಿತ್ರೋದ್ಯಮಕ್ಕೆ ಲಾಭ ಮಾತ್ರ ಇಲ್ಲ. ಶೇ.5ರಷ್ಟು ಮಾತ್ರ ಲಾಭ ಅಂದುಕೊಳ್ಳಬಹುದು. ಮುಂದಿನ 7 ತಿಂಗಳ ಒಳಗೆ ಮೂವರ ಸ್ಟಾರ್ ಚಿತ್ರಗಳು ರಿಲೀಸ್ ಆಗಲಿವೆ. “ಕೆಜಿಎಫ್’, “ವಿಲನ್’ ಮತ್ತು “ಕುರುಕ್ಷೇತ್ರ’ ಚಿತ್ರಗಳು ಬಿಗ್‌ಬಜೆಟ್ ಹೊಂದಿವೆ. ಇವುಗಳಿಂದ ಚಿತ್ರೋದ್ಯಮ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳಬಹುದೇನೋ? ಸಿನಿಮಾ ವಹಿವಾಟಿಗೆ ಪೆಟ್ಟು ಬೀಳಲು ಜಿಎಸ್‌ಟಿಯೂ ಕಾರಣ. ಇದರಿಂದಾಗಿ ಸಿನಿಮಾ ಆಗುತ್ತಿಲ್ಲ. ಒಂದು ಮಾತು ಹೇಳುವುದಾದರೆ, ಸಣ್ಣಪುಟ್ಟ ಸಿನಿಮಾ ಮಾಡಿದರೆ, ಇಲ್ಲಿ ಪ್ರಯೋಜನವೇ ಇಲ್ಲ. ಕರೆಕ್ಟ್ ಪ್ಲಾನ್ ಮಾಡಿ ಸ್ಟಾರ್ ನಟರ ಚಿತ್ರ ಮಾಡಿದರೆ, ದೊಡ್ಡ ಮಟ್ಟದ ಲಾಭ ಇಲ್ಲದಿದ್ದರೂ, ತಕ್ಕಮಟ್ಟಿಗೆ ಲಾಭ ಪಡೆಯಬಹುದು. ಕೊನೇಪಕ್ಷ ಹಾಕಿದ ಹಣಕ್ಕೆ ಮೋಸವಂತೂ ಆಗುವುದಿಲ್ಲ’ ಎನ್ನುತ್ತಾರೆ ಜಯಣ್ಣ.
ಫಲಿಸದ ಪ್ರಯತ್ನ
ಈ ಐದು ತಿಂಗಳಲ್ಲಿ ಬಿಡುಗಡೆಯಾದ 85 ಚಿತ್ರಗಳ ಪೈಕಿ ಕೆಲ ನಿರ್ದೇಶಕರ ಚಿತ್ರಗಳೂ ಗುರುತಿಸಿಕೊಂಡಿದ್ದು ವಿಶೇಷ. ನಾಗಾಭರಣ ನಿರ್ದೇಶನದ “ಕಾನೂರಾಯಣ’, ನಂಜುಡೇಗೌಡರ “ಹೆಬ್ಬೆಟ್ ರಾಮಕ್ಕ’, ಅಶೋಕ್ ಕಶ್ಯಪ್ ಅವರ “ಧ್ವಜ’, ನಾಗೇಂದ್ರಪ್ರಸಾದ್ ಅವರ “ಗೂಗಲ್’, ಪ್ರದೀಪ್‌ರಾಜ್ ಅವರ “ಕಿಚ್ಚು’, ನಾಗೇಶ್ ಅವರ “ರಾಮಧಾನ್ಯ’ ಸೇರಿದಂತೆ ಇನ್ನಷ್ಟು ಚಿತ್ರಗಳು ಹೊಸ ಪ್ರಯತ್ನ ಎನಿಸಿಕೊಂಡವು ಹೊರತು, ಅವರ ಪ್ರಯತ್ನ ಅಷ್ಟಾಗಿ ಫಲಿಸಲಿಲ್ಲ. ಈ ಎಲ್ಲಾ ಚಿತ್ರಗಳಲ್ಲಿ ಸಂದೇಶದ ಸತ್ವ ಇದ್ದವು ಹೊರತು, ಮೆಚ್ಚುಗೆ ಪಡೆದುಕೊಂಡವು ಹೊರತು ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಂತಹ ಖಾತೆ ದಾಖಲಿಸಲಿಲ್ಲ. ಈ ಎಲ್ಲಾ ಚಿತ್ರಗಳಲ್ಲೂ ವಿಷಯ ಅಡಕವಾಗಿತ್ತು, ಹೊಸತೇನನ್ನೋ ಹೇಳಲಾಗಿತ್ತು. ಆದರೂ, ಈ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ.
ಇನ್ನು ಹೊಸಬರು ಚಿತ್ರಗಳಲ್ಲೂ ಒಂದಿಷ್ಟು ಪ್ರಯೋಗಗಳನ್ನು ಗುರುತಿಸಬಹುದು. “ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್’, “ಗುಳುr’ ಮತ್ತು “ಇದೀಗ ಬಂದ ಸುದ್ದಿ’ ಚಿತ್ರ ಬಿಟ್ಟರೆ ಹೊಸಬರ ಬೇರ್ಯಾವ ಚಿತ್ರಗಳು ಸುದ್ದಿಯಾಗಲಿಲ್ಲ. “ಹೀಗೊಂದು ದಿನ’ ಒಳ್ಳೆಯ ಪ್ರಯತ್ನ ಎನಿಸಿಕೊಂಡಿತು. “ಎಡಕಲ್ಲು ಗುಡ್ಡದ ಮೇಲೆ’ ಚಿತ್ರ ಕೂಡ ಉತ್ತಮ ಪ್ರತಿಕ್ರಿಯೆ ಪಡೆಯಿತು. “ಡೇಸ್ ಆಫ್ ಬೋರಾಪುರ’, “ಕೃಷ್ಣ ತುಳಸಿ’, “ಮುಖ್ಯಮಂತ್ರಿ ಕಳೊªàದ್ನಪ್ಪೋ’ ಸೇರಿದಂತೆ ಹೊಸಬರ ಹಲವು ಚಿತ್ರಗಳು ಬಿಡುಗಡೆಯಾದರೂ, ಪ್ರೇಕ್ಷಕನ ಖುಷಿಪಡಿಸುವ ಪವಾಡಗಳೇನೂ ಆಗಲಿಲ್ಲ. ಹಾಗೆ ನೋಡಿದರೆ, ಹೊಸಬರ ಚಿತ್ರಗಳ ಸಂಖ್ಯೆ ಜಾಸ್ತಿಯಾದರೂ, ಗುರುತಿಸಿಕೊಂಡ ಚಿತ್ರಗಳ ಸಂಖ್ಯೆ ಬೆರಳೆಣಿಯಷ್ಟು. ಹಾಗಾಗಿ ಹೊಸಬರ ಮೇಲಿನ ನಿರೀಕ್ಷೆ ಐದು ತಿಂಗಳಲ್ಲಿ ಸುಳ್ಳಾಗಿದ್ದು ನಿಜ.
ಸಂಪೂರ್ಣ ನವಮಯಂ
ಬಿಡುಗಡೆಯಾದ ಅಷ್ಟು ಚಿತ್ರಗಳಲ್ಲಿ, ಹಲವು ಚಿತ್ರಗಳಲ್ಲಿ ನೂರಕ್ಕೆ ನೂರು ಹೊಸ ತಂಡವಿದ್ದಿದ್ದು ವಿಶೇಷ. ಈ ಚಿತ್ರಗಳಲ್ಲಿ ನಾಯಕ, ನಾಯಕಿ, ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರು ಹೊಸಬರು. ಇವರೆಲ್ಲಾ ದೊಡ್ಡ ಸುದ್ದಿ ಮಾಡದೆ ಹೀಗೆ ಬಂದು ಹಾಗೆ ಹೋದರು. ಆ ಒಂದು ದಿನ, ಪುನರಪಿ ಜನನಂ, 3000, ಚಿನ್ನದ ಗೊಂಬೆ, ಪುನಾರಂಭ, ಜಂತರ್ ಮಂತರ್, ಐ ಡ್ಯಾಷ್ ಯು, ಮಳೆಗಾಲ, ಅಮಲು, ನಾನು ಲವ್ವರ್ ಆಫ್ ಜಾನು, ಕಂತ್ರಿ ಬಾಯ್ಸ, ಧೆÌ„ತ, ಗಂಡ ಊರಿಗ್ ಹೋದಾಗ, ಪ್ರೀತಿಯ ರಾಯಭಾರಿ, ರಂಕಲ್ ರಾಟೆ, ಸರ್ಕಾರ್, ಇದಂ ಪ್ರೇಮಂ ಜೀವನಂ, ಮುಖ್ಯಮಂತ್ರಿ ಕಳೆದೋದ್ನಪ್ಪ, ಅಂಧಗಾರ, ಎಟಿಎಂ, ಪಾರ್ಥಸಾರಥಿ, ಸದ್ದು, ಯಾರ್ ಯಾರೋ ಗೋರಿ ಮೇಲೆ, ಅತೃಪ್ತ, ಅಮ್ಮ ನಿನಗಾಗಿ, ನಾಗವಲ್ಲಿ ವರ್ಸಸ್ ಆಪ್ತಮಿತ್ರರು.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Burhan Wani; ಬುರ್ಹಾನ್ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್
IED explodes: ನಕ್ಸಲರು ಇರಿಸಿದ್ದ ಐಇಡಿ ಸ್ಫೋಟ: ಮೂರು ಕರಡಿಗಳು ಸಾವು
Formula E race; ಫಾರ್ಮುಲಾ-ಇ ರೇಸ್ ಪ್ರಕರಣ: ಕೆಟಿಆರ್ ಮೇಲೆ ಎಸಿಬಿ ಎಫ್ಐಆರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.