ಮಣ್ಣಲ್ಲಿ ಮುಚ್ಚಿಹೋದ ಕಥೆ!
Team Udayavani, Oct 12, 2018, 6:00 AM IST
ಒಮ್ಮೊಮ್ಮೆ ಹಾಗಾಗುತ್ತೆ…!
– ಇಲ್ಲಿ ಹೇಳಹೊರಟ ವಿಷಯ ಹೊಸಬರ “ಲಾಕ್’ ಚಿತ್ರದ ಪತ್ರಿಕಾಗೋಷ್ಠಿ ಬಗ್ಗೆ. ಅದು ನಿರ್ದೇಶಕ, ನಿರ್ಮಾಪಕ, ನಾಯಕ, ನಾಯಕಿ ಮತ್ತು ತಂತ್ರಜ್ಞರೆಲ್ಲರಿಗೂ ಮೊದಲ ಅನುಭವ. ಸಾಮಾನ್ಯವಾಗಿ ನಿರ್ದೇಶಕರು ಚಿತ್ರದ ಒನ್‌ಲೈನ್ ಸ್ಟೋರಿ ಹೇಳಿ, ಚಿತ್ರದ ಬಗ್ಗೆ ಮಾಹಿತಿ ಕೊಡುವುದು ವಾಡಿಕೆ. ಆದರೆ, “ಲಾಕ್’ ಚಿತ್ರದ ನಿರ್ದೇಶಕ ಪರಶುರಾಮ್ ಮಾತ್ರ ತಮ್ಮ “ಲಾಕ್’ ಓಪನ್ ಮಾಡಲೇ ಇಲ್ಲ. ಕಥೆ ಏನೆಂದರೆ, “ಇದು ಪ್ರತಿಯೊಬ್ಬ ಭಾರತೀಯನೂ ನೋಡಬೇಕಾದ ಚಿತ್ರ’ ಅಂದರು. ಯಾಕೆ ಎಲ್ಲರೂ ನೊಡಬೇಕಾದ ಸಿನಿಮಾ ಅಂತ ಪ್ರಶ್ನಿಸಿದರೆ, “ನಾನಿಲ್ಲಿ ವ್ಯವಸ್ಥೆ ಕುರಿತು ಹೇಳಿದ್ದೇನೆ. ಹಾಗಾಗಿ ನೋಡಬೇಕು’. ಹೋಗಲಿ ನಿಮ್ಮ ಕಥೆಯ ಒಂದು ಎಳೆ ಹೇಳಿ, “ಹಾಗೆ ಹೇಳಲು ಆಗುವುದಿಲ್ಲ. ಚಿತ್ರಮಂದಿರದಲ್ಲೇ ನೋಡಿ. ಒಂದು ಘಟನೆ ಬಗ್ಗೆ ವಿವರಿಸಿದ್ದೇನೆ. ಅದೇ ಮೂಲಕಥೆ. ದೇಶದ ಮಣ್ಣಲ್ಲಿ ಮುಚ್ಚಿಹೋಗಿರುವ ಅನೇಕ ಕಥೆಗಳಲ್ಲಿ ತುಂಬಾ ಅಗತ್ಯವಾದ ಒಂದು ಘಟನೆ ಇಲ್ಲಿದೆ. ಅದು ಸಸ್ಪೆನ್ಸ್’ ಅಂದರು. “ಸರಿ ಕಥೆಯ ಗುಟ್ಟು ಹೇಳದಿದ್ದರೂ ಪರವಾಗಿಲ್ಲ. ನಿಮ್ಮ ಹಿನ್ನೆಲೆ ಹೇಳಿ’ ಅಂದಿದ್ದಕ್ಕೆ, “ಹದಿನೆಂಟು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನಾಗತಿಹಳ್ಳಿ ಅವರೊಂದಿಗೆ, ಓಂ ಪ್ರಕಾಶ್ ಅವರ ಜೊತೆ, ಪಿ.ಶೇಷಾದ್ರಿ ಬಳಿ ಕೆಲಸ ಮಾಡಿದ್ದೇನೆ. ನಡುವೆ ಗ್ಯಾಪ್ ಪಡೆದು ಮುಂಬೈಗೆ ಹೋಗಿದ್ದೆ. ಪುನಃ ಇಲ್ಲಿಗೆ ಬಂದು ಸಿನಿಮಾ ಮಾಡುವ ಕನಸು ಕಂಡೆ. ನಿರ್ಮಾಪಕರು ಸಿಕ್ಕರು. ಕಥೆ ಹೇಳಿದೆ. ಸಿನಿಮಾ ಮಾಡಿದ್ದೇನೆ’ ಅಂತ ವಿವರ ಕೊಟ್ಟರು ಪರಶುರಾಮ್.
ಚಿತ್ರಕ್ಕೆ ಅಭಿಲಾಶ್ ಹೀರೋ. ಇವರಿಗೆ ಇದು ಮೊದಲ ಚಿತ್ರ. ಅವರಿಗೆ ಕಥೆ ಏನೆಂಬುದು ಗೊತ್ತಿಲ್ಲವಂತೆ. ನಿರ್ದೇಶಕರು ಆಡಿಷನ್ ನಡೆಸಿ, ಆಯ್ಕೆ ಮಾಡಿದ ಬಳಿಕ ಹೇಳಿದ್ದನ್ನಷ್ಟೇ ಮಾಡು ಅಂದರು. ಮಾಡಿದ್ದೇನೆ. “ಲಾಕ್’ ಬಗ್ಗೆ ಏನೂ ಗೊತ್ತಿಲ್ಲ. ಪಾತ್ರ ಮಾತ್ರ ಏನೋ ಒಂದನ್ನು ಹುಡುಕಿ ಹೊರಡುತ್ತದೆ ಅದೇ ಸಸ್ಪೆನ್ಸ್ ಅಂದರು ಅಭಿಲಾಶ್.
ನಾಯಕಿ ಸೌಂದರ್ಯಗೂ ಇದು ಮೊದಲ ಅನುಭವ. ಅವರಿಗೂ “ಲಾಕ್’ ಬಗ್ಗೆ ನಿರ್ದೇಶಕರು ಏನನ್ನೂ ಹೇಳಿಲ್ಲ. ನಿಮ್ಮ ಪಾತ್ರ ಎಷ್ಟಿದೆಯೋ ಅಷ್ಟು ಕೇಳಿಕೊಂಡು ಮಾಡಿ’ ಅಂದಿದ್ದಕ್ಕೆ ಸೌಂದರ್ಯ ಅವರಿಗೆ “ಲಾಕ್’ ಆಗಿ ಹೇಳಿದಂತೆ ನಟಿಸಿದ್ದಾರಂತೆ. ಎಂ.ಕೆ.ಮಠ ಅವರ ಬಳಿಗೆ ಹೋದ ನಿರ್ದೇಶಕರು ಕಥೆ ಹೇಳಿಲ್ಲವಂತೆ. ಕಥೆ ಹೇಳಿಲ್ಲವೆಂದರೆ ನಾನು ನಟಿಸಲ್ಲ ಅಂದರಂತೆ. ಸರಿ, ಅಂತ ನಿರ್ದೇಶಕರು ಅಲ್ಲಿಂದ ಹೊರಟು ಹೋದರಂತೆ. ಕೊನೆಗೆ ಕಥೆಯಲ್ಲೇನೋ ಇರಬೇಕೆಂದು ಭಾವಿಸಿ, ಎಂ.ಕೆ.ಮಠ ಅವರು, ಪುನಃ ಕರೆದು ಪಾತ್ರ ಹೇಳಿ ಅಂದರಂತೆ. ಪಾತ್ರ ಕೇಳಿಕೊಂಡು ನಟಿಸಿದ್ದಾಗಿ ಹೇಳಿಕೊಂಡರು ಅವರು.
ಇವರಷ್ಟೇ ಅಲ್ಲ, ಚಿತ್ರದಲ್ಲಿ ನಟಿಸಿರುವ ರಾಜ್ ಹಿರೇಮs…, ರಾಜ್ ಸತೀಶ್ ಅವರಿಗೂ “ಲಾಕ್’ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ ನಿರ್ದೇಶಕರು. ಅದೇನೆ ಇರಲಿ, ನಿರ್ಮಾಪಕರಿಗಾದರೂ “ಲಾಕ್’ ಕಥೆ ಗೊತ್ತಾ? ಈ ಪ್ರಶ್ನೆಗೆ ಮಾತಿಗೆ ನಿಂತ ನಿರ್ಮಾಪಕ ರೋಹಿತ್ ಅಶೋಕ್‌ಕುಮಾರ್, ಮಾತನಾಡಲು ಗಂಟಲು ಸರಿ ಇಲ್ಲ. ಎಲ್ಲರಿಗೂ ನಮಸ್ಕಾರ ಎಂದಷ್ಟೇ ಹೇಳಿ ಕುಳಿತರು. ವಿಶೇಷವೆಂದರೆ, ಈ ಚಿತ್ರದಲ್ಲಿ ನೇತಾಜಿಯಾಗಿ ಶಶಿಕುಮಾರ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅವಿನಾಶ್, ಶರತ್‌ಲೋಹಿತಾಶ್ವ, ದಿಶಾ ಪೂವಯ್ಯ ಇದ್ದಾರೆ. ವಿ.ರಾಘವೇಂದ್ರ ಹಿನ್ನೆಲೆ ಸಂಗೀತವಿದೆ. ಎಂ.ಸಂಜೀವ ರಾವ್ ಸಂಗೀತ ನೀಡಿದ್ದಾರೆ. ವಿನಯ ಚಂದ್ರ ಪ್ರಸನ್ನ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.