ಆರೋಹಣ ಹಾಡುಗಳ ಅನಾವರಣ
Team Udayavani, Mar 30, 2018, 8:15 AM IST
ಒಬ್ಬ ಹುಡುಗಿ, ಇಬ್ಬರು ಹುಡುಗರು …
ಹಾಗೆಂದಾಕ್ಷಣ ಇದೊಂದು ತ್ರಿಕೋನ ಪ್ರೇಮಕಥೆ ಎಂದು ಅಂದಾಜು ಮಾಡಬಹುದು. ಆದರೆ, ಶ್ರೀಧರ್ ಶೆಟ್ಟಿ ಎನ್ನುವವರು ಈ ಎಳೆಗೆ ಒಂದು ಟ್ವಿಸ್ಟ್ ಕೊಟ್ಟು ಹಾರರ್ ಹಾಗೂ ಥ್ರಿಲ್ಲರ್ ಚಿತ್ರ ಮಾಡಿದ್ದಾರೆ. ಚಿತ್ರದ ಹೆಸರು “ಆರೋಹಣ’. ಈಗಾಗಲೇ ಚಿತ್ರೀಕರಣ ಮುಗಿದಿರುವ ಈ ಚಿತ್ರ, ಬಿಡುಗಡೆಯ ಹಂತಕ್ಕೆ ಬಂದಿದೆ.
ಈ ಮಧ್ಯೆ ಚಿತ್ರದ ಹಾಡುಗಳನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ. ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ್ ಬಣಕಾರ್, ಚಿತ್ರಕ್ಕೆ ಹಾಡುಗಳನ್ನು ಬರೆದಿರುವ ವಿ. ಮನೋಹರ್,
ಕೆ. ಕಲ್ಯಾಣ್ ಮುಂತಾದವರು ಬಂದಿದ್ದರು.
ಜ್ಯೋತಿಷಿಗಳ ಮಾತನ್ನು ಕೇಳಿ ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದಾದೀರಿ ಜೋಕೆ ಎಂದು ಉಮೇಶ್ ಬಣಕಾರ್ ಮತ್ತೂಮ್ಮೆ
ಎಚ್ಚರಿಸಿದರು. “ಒಂದು ಚಿತ್ರ ಮಾಡುವುದು ಸುಲಭದ ಕೆಲಸ. ಆದರೆ, ಬಿಡುಗಡೆ ಮಾಡುವುದು ಅಷ್ಟು ಸುಲಭವಲ್ಲ. ಒಳ್ಳೆಯ ಸಮಯ ನೋಡಿಕೊಂಡು ಚಿತ್ರ ಬಿಡುಗಡೆ ಮಾಡಿದರಷ್ಟೇ ನಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಜ್ಯೋತಿಷಿಗಳ ಮಾತು ಕೇಳಿಕೊಂಡು ಸಿನಿಮಾ ಹಾಳು ಮಾಡಿಕೊಳ್ಳಬೇಡಿ ಎಂದು’ ಅವರು ಸಲಹೆ ನೀಡಿದರು. ಆರೋಹಣ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ಶ್ರೀಧರ್ ಶೆಟ್ಟಿ. ಅವರಿಗೆ ಇದು ಮೊದಲನೆಯ ಚಿತ್ರ. ಇದಕ್ಕೂ ಮುನ್ನ ಕೆಲವು ಧಾರಾವಾಹಿಗಳಿಗೆ
ಕೆಲಸ ಮಾಡಿರುವ ಅವರು, ಇದೇ ಮೊದಲ ಬಾರಿಗೆ ಅವರು ಈ ಚಿತ್ರ ನಿರ್ದೇಶಿಸಿದ್ದಾರೆ.
ಇನ್ನು ಈ ಚಿತ್ರವನ್ನು ಸುಶೀಲ್ ಕುಮಾರ್ ಎನ್ನುವವರು ನಿರ್ಮಿಸಿದ್ದಾರೆ. ಅವರೇ ಈ ಚಿತ್ರದ ನಾಯಕ. ನಾಗತಿಹಳ್ಳಿ ಚಂದ್ರಶೇಖರ್
ಅವರ ಸಿನಿಮಾ ಶಾಲೆಯಲ್ಲಿ ಅಭಿನಯ ಕಲಿತು ಬಂದಿರುವ ಅವರು, ಈ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. “ಹಳ್ಳಿಯ ಸೊಗಡಿನಲ್ಲಿ ನಡೆಯುವ ಈ ಕಥೆಯಲ್ಲಿ ಅಪ್ಪ-ಮಗನ ಬಾಂಧವ್ಯವಿದೆ. ಅದೇ ತರಹ ನವಿರಾದ ಪ್ರೇಮಕಥೆಯೂ ಇದೆ. ಮನೆಯಲ್ಲಿ ಅಹಿತಕರ ಘಟನೆ ನಡೆದಾಗ ಹಿರಿಯ ಮಗನಾದ ನಾನು ಹೇಗೆ ನಿಭಾಯಿಸುತ್ತೇನೆ’ ಎಂಬುದು ಚಿತ್ರದ ಕಥೆ’ ಎಂದು ಅವರು ವಿವರಿಸಿದರು.
ಸುಶೀಲ್ ಕುಮಾರ್ ಜೊತೆಗೆ ರೋಹಿತ್ ಶೆಟ್ಟಿ ಇನ್ನೊಬ್ಬ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಪ್ರೀತಿ, ಮೈತ್ರಿ ಮತ್ತು ದೀಕ್ಷಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.