ಬಡ್ಡಿಮಗನ್ ಲೈಫು ಹೇಗಿದೆ ಗೊತ್ತಾ ?
ಪಕ್ಕದ್ಮನೆ ಲವ್‌ಸ್ಟೋರೀಲಿ ಒಂದು ಟ್ವಿಸ್ಟು...
Team Udayavani, Dec 27, 2019, 5:10 AM IST
ಕನ್ನಡ ಚಿತ್ರರಂಗದಲ್ಲಿ ವಿಶೇಷ ಶೀರ್ಷಿಕೆಗಳ ಮೂಲಕ ಗಮನ ಸೆಳೆಯುವ ಟ್ರೆಂಡ್ ಹೆಚ್ಚಾಗಿದ್ದು, ಅದರಲ್ಲೂ ಚಿತ್ರರಂಗಕ್ಕೆ ಬರುವ ಹೊಸಬರು ಭಿನ್ನ-ವಿಭಿನ್ನ, ವಿಚಿತ್ರ ಶೀರ್ಷಿಕೆಗಳ ಮೂಲಕ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆ ಸಾಲಿಗೆ “ಬಡ್ಡಿ ಮಗನ್ ಲೈಫು’ ಕೂಡಾ ಸೇರುತ್ತದೆ. ಈ ಚಿತ್ರ ಈ ವಾರ ತೆರೆಗೆ ಬರುತ್ತಿದೆ ಎಂಬುದೇ ವಿಶೇಷ. ಗ್ರೀನ್ ಚಿಲ್ಲಿ ಎಂಟರ್‌ಟೈನ್‌ಮೆಂಟ್ಸ್‌ನಡಿ ನಿರ್ಮಾಣವಾಗಿರುವ ಈ ಚಿತ್ರವನ್ನು ಪವನ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ಪ್ರಸಾದ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿಯು “ಯು’ ಪ್ರಮಾಣ ಪತ್ರ ನೀಡಿದೆ. ಈ ಚಿತ್ರದಲ್ಲಿ ಸಚಿನ್ ಹಾಗೂ ಐಶ್ವರ್ಯ ರಾವ್ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.
ಶೀರ್ಷಿಕೆಯೇ ಹೇಳುವಂತೆ, ಇದೊಂದು ನಾರ್ಮಲ್ ಹುಡುಗ, ಹುಡುಗಿಯರ ಲವ್‌ಸ್ಟೋರಿ ಎಂಬುದನ್ನು ಸೂಚಿಸುತ್ತದೆ. ಪಕ್ಕದ್ಮನೆ ಲವ್‌ಸ್ಟೋರಿ ಕಾನ್ಸೆಪ್ಟ್ ನಡಿ ಈ ಸಿನಿಮಾ ತಯಾರಾಗಿದೆ. ಊರ ಗೌಡನ ಮಗಳನ್ನು ಬ್ರಾಹ್ಮಣರ ಹುಡುಗ ಲವ್ ಮಾಡಿ ಓಡಿಸಿಕೊಂಡು ಹೋಗುವುದೇ ಈ ಚಿತ್ರದ ಕಥಾಹಂದರ. ಐಪಿಲ್ ಬೆಟ್ಟಿಂಗ್ ಬಡ್ಡಿ ಸೀನಪ್ಪನ ಬಳಿ ಸಾಲ ಮಾಡಿಕೊಂಡ ಭಾವ ಮೈದುನನ್ನು ಉಳಿಸಲು ಜಾಮೀನು ಕೊಟ್ಟು ಸಂಕಟಕ್ಕೆ ಸಿಲುಕುವ ಭಾವನ ಪಾಡು ಕೂಡ ನೋಡುಗರಿಗೆ ಒಂದು ರೀತಿ ಮಜ ಕೊಡಲಿದೆ. ಸಿನಿಮಾ ನೋಡಿದವರಿಗೆ ನಮ್ಮ ಸುತ್ತ ನಡೆಯುವ ಕಥೆಯೇನೋ ಎಂದು ಭಾಸವಾಗುತ್ತದೆ ಎನ್ನುವುದು ಚಿತ್ರತಂಡದ ಮಾತು. ಬಲರಾಜುವಾಡಿ ಈ ಚಿತ್ರದಲ್ಲಿ ಬಡ್ಡಿ ಬಸಪ್ಪನಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಲವಿತ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ರಜನಿಕಾಂತ್, ವನಿತಾ, ಪದ್ಮನಾಭ, ಪೂರ್ಣಚಂದ್ರ ತೇಜಸ್ವಿ, ಮೈಮ್ ರಮೇಶ್ ಇತರರು ನಟಿಸಿದ್ದಾರೆ.ಬಹುತೇಕ ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಈಗಾಗಲೇ ಚಿತ್ರದ “ಏನ್ ಚಂದನೋ…’ ಎಲ್ಲೆಡೆ ಮೆಚ್ಚುಗೆ ಪಡೆದಿದ್ದು, ಚಿತ್ರ ಕೂಡ ನೋಡುಗರ ಮನಗೆಲ್ಲಲಿದೆ ಎಂಬ ನಂಬಿಕೆ ನಿರ್ದೇಶಕರದ್ದು. ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತವಿದೆ. ಪವನ್‌ಕುಮಾರ್ ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.