ನೈಜ ಘಟನೆಗೆ ದೃಶ್ಯ ರೂಪ

ಕೇಳಿದ್ದು-ನೋಡಿದ್ದು ಸುಳ್ಳಾಗಬಹುದು...

Team Udayavani, Oct 11, 2019, 5:00 AM IST

u-23

ಎಷ್ಟೋ ಸಮಯ ಯಾರೋ ಹೇಳಿದ್ದು, ನಾವು ಕೇಳಿದ್ದು, ಕಣ್ಣಾರೆ ಕಂಡಿದ್ದು ಕೂಡ ಸುಳ್ಳಾಗಬಹುದು. ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಘಟನೆ, ಸನ್ನಿವೇಶಗಳಿಗೂ ನಾವು ತಿಳಿಯದೇ ಇರುವ, ಅದರದ್ದೇ ಆದ ಇನ್ನೊಂದು ಆಯಾಮವಿರುತ್ತದೆ. ನಿಧಾನಿಸಿ ಯೋಚಿಸಿದಾಗ ವಾಸ್ತವದ ಅರಿವಾಗುತ್ತದೆ.

“ಕಣ್ಣಾರೆ ಕಂಡರೂ ಪರಾಮರ್ಶಿಸಿ ನೋಡು…’, “ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು’ ಅನ್ನೋ ಮಾತುಗಳನ್ನು ನಾವೆಲ್ಲರೂ ಅದೆಷ್ಟೋ ಬಾರಿ ಕೇಳಿರುತ್ತೇವೆ. ಎಷ್ಟೋ ಸಮಯ ಯಾರೋ ಹೇಳಿದ್ದು, ನಾವು ಕೇಳಿದ್ದು, ಕಣ್ಣಾರೆ ಕಂಡಿದ್ದು ಕೂಡ ಸುಳ್ಳಾಗಬಹುದು. ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಘಟನೆ, ಸನ್ನಿವೇಶಗಳಿಗೂ ನಾವು ತಿಳಿಯದೇ ಇರುವ, ಅದರದ್ದೇ ಆದ ಇನ್ನೊಂದು ಆಯಾಮವಿರುತ್ತದೆ. ನಿಧಾನಿಸಿ ಯೋಚಿಸಿದಾಗ ವಾಸ್ತವದ ಅರಿವಾಗುತ್ತದೆ.

ಈಗ ಯಾಕೆ ಈ ವಿಷಯದ ಬಗ್ಗೆ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಆರ್‌ಟಿಓ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಎಂಬುವವರು ಕುಡಿದು ವಾಹನ ಚಲಾಯಿಸಿ, ಅಪಘಾತವೆಸಗಿದ್ದಾರೆ ಎಂದು ಸಾರ್ವಜನಿಕರು ಅವರನ್ನು ಬಹಿರಂಗವಾಗಿ ಅವರನ್ನು ಥಳಿಸಿದ್ದರು. ಇನ್ನು ಈ ಸುದ್ದಿಯನ್ನು ಟಿವಿ ವಾಹಿನಿಗಳು, ಸೋಶಿಯಲ್‌ ಮೀಡಿಯಾಗಳು ಇನ್ನಿಲ್ಲದಂತೆ ವೈಭವೀಕರಿಸಿ ಆರ್‌ಟಿಓ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಅಪರಾಧಿ ಎನ್ನುವಂತೆ ಬಿಂಬಿಸಿದ್ದವು.

ಆದರೆ ತನಿಖೆಯ ಬಳಿಕ ಆರ್‌ಟಿಓ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಅನಾರೋಗ್ಯದಿಂದ ಬಳಲುತ್ತಿದ್ದು, ಅವರು ತೆಗೆದುಕೊಂಡ ಔಷಧಿಯ ಪರಿಣಾಮದಿಂದ ಮಂಜುನಾಥ್‌ ದೇಹದ ನಿಯಂತ್ರಣ ತಪ್ಪಿ ಅಪಘಾತವೆಸಗಿದ್ದರು ಎಂಬುದು ಗೊತ್ತಾಯಿತು. ಆನಂತರ ಈ ಘಟನೆಯ ವಾಸ್ತವತೆ ತಿಳಿದು ಅನೇಕರು ಕನಿಕರ ಪಟ್ಟರೂ, ಅಷ್ಟರಲ್ಲಾಗಲೇ ಜನರಿಂದ ಥಳಿತಕ್ಕೆ ಒಳಗಾಗಿ, ಆಘಾತಗೊಂಡಿದ್ದ ಆರ್‌ಟಿಓ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಕೊನೆಯುಸಿರೆಳೆದಿದ್ದರು.

ಈಗ ಇದೇ ನೈಜ ಘಟನೆಯನ್ನು ಇಟ್ಟುಕೊಂಡು ನಟ ಯತಿರಾಜ್‌, ಅರವಿಂದ್‌ ರಾವ್‌, ಸಿನಿಮಾ ಪಿಆರ್‌ಒ ಸುಧೀಂದ್ರ ವೆಂಕಟೇಶ್‌, ಭಾಸ್ಕರ್‌ ಮತ್ತು ಆರ್‌. ಚಂದ್ರಶೇಖರ್‌ ಎಂಟು ನಿಮಿಷದ ಕಿರುಚಿತ್ರವೊಂದನ್ನು ನಿರ್ಮಿಸಿದ್ದಾರೆ. ನಟ ಯತಿರಾಜ್‌ ರೀಲ್‌ದಲ್ಲಿ ಮಂಜುನಾಥ್‌ ಪಾತ್ರವನ್ನು ನಿಭಾಯಿಸುವ ಜೊತೆಗೆ ಈ ಕಿರುಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಕಿರುಚಿತ್ರ ಬಿಡುಗಡೆಗೊಂಡಿದ್ದು, ಇದೇ ವೇಳೆ ಹಾಜರಿದ್ದ ಆರ್‌ಟಿಓ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಅವರ ಪತ್ನಿ ಶೈಲಾ ಮಂಜುನಾಥ್‌, “ಇಂತಹ ಸತ್ಯ ಘಟನೆಯನ್ನು ಚಿತ್ರರೂಪಕ್ಕೆ ತಂದಿರುವುದು ಶ್ಲಾಘನೀಯ. ಇಬ್ಬರು ಅಪರಾಧಿಗಳು ಹೋದರೂ ಚಿಂತೆ ಇಲ್ಲ. ಆದರೆ ಒಬ್ಬ ಮುಗ್ದ ಹೋಗುವುದು ಸರಿಯಲ್ಲ. ಮೆಡಿಕಲ್‌ ಮತ್ತು ಪಿಯುಸಿ ಓದುತ್ತಿರುವ ಇಬ್ಬರು ಮಕ್ಕಳನ್ನು ಯಜಮಾನರು ಬಿಟ್ಟುಹೋಗಿದ್ದರೆ. ಸಾಮಾಜಿಕ ಜಾಲತಾಣಗಳು, ವಾಹಿನಿಗಳು ಇನ್ನು ಮುಂದೆಯಾದರೂ, ಸತ್ಯ ಏನೆಂದು ಅರಿಯದೆ ಯಾರೊಬ್ಬರನ್ನೂ ಅಪರಾಧಿಯಂತೆ ಬಿಂಬಿಸಬೇಡಿ’ ಎಂದು ಮನವಿ ಮಾಡಿಕೊಂಡರು.

ಟಾಪ್ ನ್ಯೂಸ್

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.