ಅಭಿ-ಸಾರಿಕೆಯ ಪ್ರೇಮಕಥೆ

Team Udayavani, Feb 16, 2018, 11:18 AM IST

abhisarike.jpg

“ನಾಯಕ- ನಾಯಕಿ ಬರ್ತಿದ್ದಾರೆ, ಗೊತ್ತಲ್ಲ ನಿಮ್ಗೆ ಬೆಂಗಳೂರು ಟ್ರಾಫಿಕ್‌… ಸ್ವಲ್ಪ ಹೊತ್ತಲ್ಲೇ ಬಂದು ಜಾಯಿನ್‌ ಆಗ್ತಾರೆ …’ – ನಿರೂಪಕಿ ಹೀಗೆ ಹೇಳುತ್ತಲೇ ಇದ್ದರು. ಆದರೆ, ಸಂಜೆ ಪತ್ರಿಕಾಗೋಷ್ಠಿ ಮುಗಿದು ಗ್ಲಾಸ್‌ಗಳು ಸದ್ದು ಮಾಡಲಾರಂಭಿಸಿದರೂ ನಾಯಕ-ನಾಯಕಿ ಪಾತ್ರ ಪತ್ರಿಕಾಗೋಷ್ಠಿಗೆ ಬರಲೇ ಇಲ್ಲ. ಅಂದಹಾಗೆ, ಅದು “ಅಭಿಸಾರಿಕೆ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ.

ಈ ಚಿತ್ರದಲ್ಲಿ ತೇಜ್‌ ಹಾಗೂ ಸೋನಾಲ್‌ ಮಾಂಟೇರೋ ಈ ಚಿತ್ರದ ನಾಯಕ-ನಾಯಕಿ. ಅವರಿಬ್ಬರು ಅಂದಿನ ಕಾರ್ಯಕ್ರಮಕ್ಕೆ ಗೈರಾಗಿದ್ದರು. “ಅಭಿಸಾರಿಕೆ’ ಕೂಡಾ ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾ. ಈ ಚಿತ್ರವನ್ನು ಮಧುಸೂದನ್‌ ನಿರ್ದೇಶಿಸಿದ್ದಾರೆ. ಈ ಹಿಂದೆ “ಗಣಪ’, “ಕರಿಯ-2′ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿದ್ದ ಮಧು ಅವರಿಗೆ “ಅಭಿಸಾರಿಕೆ’ ಚೊಚ್ಚಲ ಸಿನಿಮಾ.

“ಚಿತ್ರರಂಗದಲ್ಲಿ ಜನ ಗುರುತಿಸಬೇಕಾದರೆ ಏನಾದರೂ ಹೊಸತನ ಮಾಡಬೇಕು. ಹಾಗಾಗಿ ಕಥೆಗೆ ಸಾಕಷ್ಟು ಸಮಯ ತೆಗೆದುಕೊಂಡು ಈ ಚಿತ್ರ ಮಾಡಿದ್ದೇನೆ. ಇದು ಮಾಮೂಲಿ ಸಿನಿಮಾವಲ್ಲ’ ಎಂದು ತಮ್ಮ ಸಿನಿಮಾ ಬಗ್ಗೆ ಹೇಳಿಕೊಂಡರು. ಇದು ಹಾರರ್‌ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ. ಚಿತ್ರದಲ್ಲಿ ಲವ್‌ಸ್ಟೋರಿಯೂ ಇದ್ದು, ಅದಕ್ಕೆ ಹಾರರ್‌ ಅನ್ನು ಸೇರಿಸಿದ್ದಾರೆ.

ಹಾಗಾಗಿ, ಈ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ ಎಂಬ ವಿಶ್ವಾಸ ಅವರಿಗಿದೆ. ಅಭಿ ಹಾಗೂ ಸಾರಿಕೆಯ ಲವ್‌ಸ್ಟೋರಿ ಇದಾಗಿರುವುದರಿಂದ ಚಿತ್ರಕ್ಕೆ “ಅಭಿಸಾರಿಕೆ’ ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು ಶಿವಕುಮಾರ್‌ ಹಾಗೂ ಪ್ರಶಾಂತ್‌ ಕೊಡೆYದಾರ್‌ ನಿರ್ಮಿಸುತ್ತಿದ್ದಾರೆ. ನಿರ್ದೇಶಕರು ಹೇಳಿದ ಕಥೆ ಕೇಳಿ ಮರು ಮಾತನಾಡದೇ, ಯಾವಾಗ ಸಿನಿಮಾ ಶುರು ಮಾಡುವ ಎಂದು ಕೇಳಿದರಂತೆ.  

ಚಿತ್ರದಲ್ಲ ಯಶ್‌ ಶೆಟ್ಟಿ ವಿಲನ್‌ ಆಗಿ ನಟಿಸಿದ್ದಾರೆ. ಹಾಗಂತ ಸಿನಿಮಾ ನೋಡಿದವರಿಗೆ ಇವರು ವಿಲನ್‌ ಎನಿಸೋದಿಲ್ಲ. ಆ ತರಹದ ಸೈಕೋಪಾತ್ರವಂತೆ. ನಿರ್ದೇಶಕರು ನಟಿಸಿ ತೋರಿಸುತ್ತಿದುದನ್ನು ನೋಡಿ, “ನೀವೇ ಈ ಪಾತ್ರ ಮಾಡಿ’ ಎಂದರಂತೆ ಯಶ್‌. ಇಲ್ಲಿ ಅವರು ಸುನೀಲ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕರಣ್‌ ಬಿ ಕೃಪಾ ಸಂಗೀತ ನೀಡಿದ್ದು, ಚಿತ್ರದಲ್ಲಿ ಮೂರು ಮೆಲೋಡಿ ಹಾಡುಗಳಿವೆಯಂತೆ. ಅಂದಹಾಗೆ, ಚಿತ್ರದ ಆಡಿಯೋ ಬಿಡುಗಡೆಗೆ ನಟರಾದ ಜೆಕೆ, ರವಿಕಿರಣ್‌, ನಟಿ ಅಭಿನಯ, ವಿತರಕ ಮಹೇಶ್‌ ಕೊಠಾರಿ ಆಗಮಿಸಿ, ಚಿತ್ರಕ್ಕೆ ಶುಭಕೋರಿದರು. 

ಟಾಪ್ ನ್ಯೂಸ್

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Pushpa-2; Bollywood withered in Pushpa fire

Pushpa-2; ಪುಷ್ಪ ಫೈರ್‌ ನಲ್ಲಿ ಬಾಡಿದ ಬಾಲಿವುಡ್

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

crimebb

Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

hejjenu 1

Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.