ನಾಗವಲ್ಲಿಯ ಆತ್ಮದ ಸುತ್ತ…
Team Udayavani, Apr 13, 2018, 7:30 AM IST
ಕನ್ನಡ ಚಿತ್ರರಂಗದವರು ನಾಗವಲ್ಲಿಯನ್ನು ಬಿಡುವಂತೆ ಕಾಣುತ್ತಿಲ್ಲ. ಒಂದಲ್ಲ ಒಂದು ನೆಪದಲ್ಲಿ ನಾಗವಲ್ಲಿಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಲೇ ಇದ್ದಾರೆ ಮತ್ತು ಆ ಸಾಲಿಗೆ ಹೊಸ ಸೇರ್ಪಡೆ “ನಾಗವಲ್ಲಿ ವರ್ಸಸ್ ಆಪ್ತಮಿತ್ರರು’. “ಸಪ್ನೋ ಕೀ ರಾಣಿ’ ಚಿತ್ರವನ್ನು ನಿರ್ಮಿಸಿದ್ದ ಅರುಣ್, ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರವು ಸೆನ್ಸಾರ್ ಆಗಿದ್ದು ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಈ ಚಿತ್ರಕ್ಕಾಗಿ ಅರುಣ್ ಅವರು ನಾಗವಲ್ಲಿಯ ಆತ್ಮ ಇದೆಯಾ ಎಂದು ಸಾಕಷ್ಟು ರೀಸರ್ಚ್ ಮಾಡಿದ್ದಾರಂತೆ. ಅದಕ್ಕಾಗಿಯೇ ಅವರು ತಿರುವನಂತಪುರಕ್ಕೂ ಹೋಗಿ ಬಂದಿದ್ದಾರೆ. ನಾಗವಲ್ಲಿ ಇದ್ದ ಕೇರಳದ ಅನಂತ ಪದ್ಮನಾಭ ಅರಮನೆಗೆ ಭೇಟಿ ನೀಡಿದ್ದಲ್ಲದೇ ಅವಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರಂತೆ. ಅಲ್ಲಿ ಸುಮಾರು ಏಳು ದಿನಗಳ ಕಾಲ ಚಿತ್ರೀಕರಣ ಮಾಡಿರುವ ಅವರು, ಅಲ್ಲಿ ಅರ್ಚಕರಾಗಿರುವ ವರ್ಮ ಅವರ ಜೊತೆಗೂ ಸಾಕಷ್ಟು ಚರ್ಚೆ ಮಾಡಿ, ನಾಗವಲ್ಲಿಯ ಬಗ್ಗೆ ಹಲವು ಮಾಹಿತಿಗಳನ್ನು ಅವರು ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲ, ಕೇರಳ ಸರ್ಕಾರದ ಪ್ರಾಚ್ಯಶಾಸ್ತ್ರದ ಪುಸ್ತಕವನ್ನು ಸಹ ತಿರುವಿ ಹಾಕಿ, ಸಾಕಷ್ಟು ಮಾಹಿತಿಯನ್ನು ಕಲೆಹಾಕಿ, ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರಂತೆ.
ಇಷ್ಟೆಲ್ಲಾ ಮಾಹಿತಿಗಳನ್ನು ಕಲೆಹಾಕಿರುವ ಅರುಣ್, ಏನು ಮಾಡಿದ್ದಾರೆ ಎಂಬ ಪ್ರಶ್ನೆ ಬರಬಹುದು. “ಆಪ್ತಮಿತ್ರ’ ಚಿತ್ರದಲ್ಲಿ ನಟಿಸಿರುವ ಸೌಂದರ್ಯ ಹಾಗೂ ವಿಷ್ಣುವರ್ಧನ್ ಅವರ ಸಾವಿನ ವಿಷಯವೇ ಈ ಚಿತ್ರದ ಕಥೆ. ಅವರಿಬ್ಬರ ಸಾವಿಗೆ ನಾಗವಲ್ಲಿ ಕಾರಣನಾ ಎಂಬುದನ್ನು ಹುಡುಕುತ್ತಾ ಹೋಗೋದೇ ಸಿನಿಮಾ. ಕೊನೆಗೆ ಏನು ಗೊತ್ತಾಯಿತು ಎಂಬುದು ಗೊತ್ತಾಗಬೇಕಿದ್ದರೆ ಚಿತ್ರವನ್ನು
ನೋಡಬೇಕು. ಇನ್ನು ಇದಕ್ಕೂ ಮುನ್ನ ಚಿತ್ರದ ಹೆಸರು “ಆಪ್ತಮಿತ್ರ 2′ ಎನ್ನುವಂತೆ ಡಿಸೈನ್ ಮಾಡಿಸಲಾಗಿತ್ತು. ರಮೇಶ್ ಯಾದವ್ ಸಹ “ಆಪ್ತಮಿತ್ರರು 2′ ಎಂಬ ಸಿನಿಮಾ ಮಾಡುತ್ತಿರುವುದರಿಂದ, ಚಿತ್ರದ ಹೆಸರನ್ನು “ನಾಗವಲ್ಲಿ ವರ್ಸಸ್ ಆಪ್ತಮಿತ್ರರು’ ಎಂದು ಅರುಣ್ ಬದಲಾಯಿಸಿದ್ದಾರೆ.
ಈ ಚಿತ್ರದಲ್ಲಿ ವಿಕ್ರಂ ಕಾರ್ತಿಕ್ ನಾಯಕನಾಗಿ ಕಾಣಿಸಿಕೊಂಡಿದ್ದು, ಅವರ ಪಾತ್ರಕ್ಕೆ ಎರಡು ಶೇಡ್‌ಗಳಿವೆಯಂತೆ. “ಮೊದಲಾರ್ಧ
ನಾಗವಲ್ಲಿಯ ಆತ್ಮದ ಹುಡುಕಾಟದಲ್ಲಿರುವ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಇನ್ನೊಂದು ಶೇಡ್ ಏನು ಎಂಬುದನ್ನು
ಚಿತ್ರದಲ್ಲೇ ನೋಡಬೇಕು’ ಎಂದರು. ನಾಯಕಿ ನಟಿಸಿರುವ ವೈಷ್ಣವಿ ಚಂದ್ರನ್, ಈ ಚಿತ್ರದಲ್ಲಿ ಮನಶಾಸ್ತ್ರ ವಿದ್ಯಾರ್ಥಿಯಾಗಿ
ಕಾಣಿಸಿಕೊಂಡಿದ್ದಾರೆ. ಅದಲ್ಲದೆ ಫ್ಲಾಶ್‌ಬ್ಯಾಕ್‌ನಲ್ಲಿ ನೃತ್ಯಗಾತಿಯ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರಂತೆ. ಅದೇ ಕಾರಣಕ್ಕೆ,
ಅವರು ಒಂದಿಷ್ಟು ತೂಕ ಹೆಚ್ಚಿಸಿಕೊಂಡು, ಆ ನಂತರ ತೂಕ ಇಳಿಸಿಕೊಂಡರಂತೆ. ಅವರಿಬ್ಬರಲ್ಲದೆ ಈ ಚಿತ್ರದ ಮೂಲಕ ಯುವನ್,
ರಾಕಿ, ಅನಿಲ್ ಮುಂತಾದವರನ್ನು ಪರಿಚಯಿಸಲಾಗುತ್ತಿದೆ. ಈ ಚಿತ್ರಕ್ಕೆ ಶ್ಯಾಮ್ ಎನ್ನುವವರು ಛಾಯಾಗ್ರಹಣ ಮಾಡಿದ್ದು, ತಿರುವನಂತಪುರದ ಅರಮನೆಯಲ್ಲಿ ಚಿತ್ರೀಕರಣ ಮಾಡಿದ್ದು ಅದ್ಭುತ ಅನುಭವ ಎಂದು ಹೇಳಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.