ಆ್ಯಕ್ಷನ್ ಅಥರ್ವ: ಹೊಸ ಹೀರೋನಾ ಭರ್ಜರಿ ಎಂಟ್ರಿ
Team Udayavani, Jul 13, 2018, 6:00 AM IST
“ಅಥರ್ವ’ ಎಂಬ ಚಿತ್ರವೊಂದು ಆರಂಭವಾಗಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಸಿನಿಮಾದ ಮೂಲಕ ಸರ್ಜಾ ಕುಟುಂಬದ ಮತ್ತೂಂದು ಕುಡಿ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ. ಅವರು ಪವನ್ ತೇಜ. ಹೌದು, ಪವನ್ ತೇಜ “ಅಥರ್ವ’ ಚಿತ್ರದ ಮೂಲಕ ನಾಯಕರಾಗಿ ಎಂಟ್ರಿಕೊಡುತ್ತಿದ್ದಾರೆ. ಈ ಚಿತ್ರವನ್ನು ಅರುಣ್ ನಿರ್ದೇಶಿಸಿದ್ದು, ವಿನೋದ್ ಕುಮಾರ್ ಹಾಗೂ ರಕ್ಷಯ್ ಸೇರಿ ನಿರ್ಮಿಸಿದ್ದಾರೆ.
ಎಲ್ಲಾ ಓಕೆ, “ಅಥರ್ವ’ ಎಂದರೆ ಏನು ಎಂದು ನೀವು ಕೇಳಬಹುದು. ನಿರ್ದೇಶಕ ಅರುಣ್ ಹೇಳುವಂತೆ, ನರಸಿಂಹ ಸ್ವಾಮಿ ರೂಪದ ಒಂದು ಹೆಸರು. ಈ ಹೆಸರನ್ನೇ ಚಿತ್ರಕ್ಕೆ ಇಡಲು ಒಂದು ಪ್ರಮುಖ ಕಾರಣವಿದೆಯಂತೆ. ಇಡೀ ಚಿತ್ರಕಥೆಯಲ್ಲಿ ಅದು ಸಾಗಿದೆಯಂತೆ. ಹಾಗಂತ ಅದೇನೆಂಬ ಕುತೂಹಲಕ್ಕೆ ನೀವು ಸಿನಿಮಾ ಬಿಡುಗಡೆವರೆಗೆ ಕಾಯಲೇಬೇಕು. ಅದು ಬಿಟ್ಟರೆ ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ಒಬ್ಬ ನಾಯಕ ನಟನ ಲಾಂಚ್‌ಗೆ ಏನೆಲ್ಲಾ ಇರಬೇಕೋ ಆ ಎಲ್ಲಾ ಅಂಶಗಳು ಈ ಚಿತ್ರದಲ್ಲಿವೆ ಎಂಬುದು ನಿರ್ದೇಶಕರ ಮಾತು. ಚಿತ್ರ ತಾಂತ್ರಿಕವಾಗಿಯೂ ಶ್ರೀಮಂತವಾಗಿದೆಯಂತೆ. ಚಿತ್ರದಲ್ಲಿ ತಾರಾ ಅವರ ಪಾತ್ರ ಪ್ರಮುಖವಾಗಿದೆಯಂತೆ.
ನಿರ್ಮಾಪಕರಲ್ಲೊಬ್ಬರಾದ ರಕ್ಷಯ್ ಅವರಿಗೆ ಸಿನಿಮಾ ಬಿಡುಗಡೆಯಾಗುತ್ತಿರುವ ಖುಷಿ. “ಸಿನಿಮಾ ಬಿಡುಗಡೆಯಾಗೋದು ಪ್ರತಿಯೊಬ್ಬ ನಿರ್ಮಾಪಕನ ಕನಸಿನ ದಿನ. ನಾನು ಕೂಡಾ ಅದೇ ಖುಷಿಯಲ್ಲಿದ್ದೇನೆ. ಸಿನಿಮಾ ಅಂದುಕೊಂಡಂತೆ ಮೂಡಿಬಂದಿದ್ದು, ಕನ್ನಡಕ್ಕೆ ಒಂದೊಳ್ಳೆಯ ಸಿನಿಮಾವಾಗುವ ವಿಶ್ವಾಸವಿದೆ’ ಎನ್ನುವುದು ಅವರ ಮಾತು. ಚಿತ್ರವನ್ನು ಜಯಣ್ಣ ವಿತರಣೆ ಮಾಡುತ್ತಿದ್ದು, 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ನಾಯಕ ಪವನ್ ತೇಜಗೆ ಈ ಸಿನಿಮಾ ಮೂಲಕ ಆ್ಯಕ್ಷನ್ ಹೀರೋ ಇಮೇಜ್ ಸಿಗುವ ನಿರೀಕ್ಷೆ ಇದೆ. ಆ್ಯಕ್ಷನ್ ಪ್ರಿಯರಿಗೆ ಇಷ್ಟವಾಗುವಂತಹ ಫೈಟ್‌ಗಳು ಚಿತ್ರದಲ್ಲಿವೆಯಂತೆ. ಇನ್ನು ಸಿನಿಮಾಕ್ಕೆ ಬರುವ ಮುನ್ನ ಎಲ್ಲವನ್ನು ಕಲಿತುಕೊಳ್ಳಬೇಕು, ಆಗ ನಮ್ಮ ವಿಶ್ವಾಸ ಹೆಚ್ಚುತ್ತದೆ ಎಂದು ಅರ್ಜುನ್ ಸರ್ಜಾ ಹೇಳಿದ್ದರಂತೆ. ಅದರಂತೆ ತಯಾರಿ ಮಾಡಿಕೊಂಡಿದ್ದಾರೆ ಪವನ್. ಅದು ಚಿತ್ರೀಕರಣ ಸಮಯದಲ್ಲಿ ಸಹಾಯವಾಯಿತಂತೆ. “ಸಿದ್ಧತೆ ಇಲ್ಲದೇ ಯಾವುದನ್ನೂ ಮಾಡಿಲ್ಲ. ಹಾಗಾಗಿ, ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎನ್ನುವುದು ಪವನ್ ಮಾತು. ನಾಯಕಿ ಸನಮ್ ಶೆಟ್ಟಿ ಕೂಡಾ ತಮ್ಮ ಚೊಚ್ಚಲ ಕನ್ನಡ ಸಿನಿಮಾ ಬಗ್ಗೆ ಖುಷಿಯಿಂದ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.