ನಿರ್ಮಾಪಕನಿಂದ ಹೀರೋ ತನಕ…. “ರೌಡಿ ಬೇಬಿ’ ರವಿಗೌಡ ಮಾತು
Team Udayavani, Feb 11, 2022, 12:20 PM IST
ಈ ವಾರ ಬಿಡುಗಡೆಯಾಗುತ್ತಿರುವ “ರೌಡಿ ಬೇಬಿ’ ಸಿನಿಮಾದ ಮೂಲಕ ವರ್ಷದ ಮೊದಲ ಸಿನಿಮಾ ಬಿಡುಗಡೆಯ ಖುಷಿಯಲ್ಲಿದ್ದಾರೆ ನಾಯಕ ನಟ ರವಿ ಗೌಡ. ಆರಂಭದಲ್ಲಿ ಕಿರುತೆರೆಯ ನಿರ್ಮಾಪಕನಾಗಿ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ರವಿ ಗೌಡ, ಆ ನಂತರ ನಿರ್ಮಾಪಕನಾಗಬೇಕು ಎಂಬ ಕನಸಿನಿಂದ ಬೆಳ್ಳಿತೆರೆಗೆ ಅಡಿಯಿಟ್ಟವರು. ಆದರೆ ಮೊದಲ ನಿರ್ಮಾಣದ “ಮಿಸ್ಟರ್ ಮೊಮ್ಮಗ’ ಸಿನಿಮಾಕ್ಕಾಗಿ ಸಾಕಷ್ಟು ಹೀರೋಗಳ ಹುಡುಕಾಟ ನಡೆಸಿದರೂ, ತನಕೆ ಬೇಕಾದ ಹೀರೋಗಳು ಸಿಗದಿದ್ದರಿಂದ, ಕೊನೆಗೆ ತಾನೇ “ಮಿಸ್ಟರ್ ಮೊಮ್ಮಗ’ ಸಿನಿಮಾದ ಮೂಲಕ ನಾಯಕ ನಟನಾಗಿ ಅನಿರೀಕ್ಷಿತವಾಗಿ ತೆರೆಮುಂದೆ ಬಂದವರು ರವಿಗೌಡ.
“ಮಿಸ್ಟರ್ ಮೊಮ್ಮಗ’ ಸಿನಿಮಾದ ನಂತರ ರಾಧಿಕಾ ಕುಮಾರಸ್ವಾಮಿ ಅಭಿನಯದ “ದಮಯಂತಿ’ ಚಿತ್ರದಲ್ಲೂ ರವಿ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ ರವಿ ಗೌಡ ನಾಯಕ ನಟನಾಗಿ ಅಭಿನಯಿಸಿರುವ “ರೌಡಿ ಬೇಬಿ’ ಚಿತ್ರ ಈ ವಾರ (ಫೆ. 11ಕ್ಕೆ) ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ವರ್ಷದ ಆರಂಭದಲ್ಲಿ ಬಿಡುಗಡೆಯಾಗುತ್ತಿರುವ ತಮ್ಮ ಮೂರನೇ ಸಿನಿಮಾದ ಬಗ್ಗೆ ರವಿ ಗೌಡ ಕೂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು “ರೌಡಿ ಬೇಬಿ’ ಸಿನಿಮಾದಲ್ಲಿ ರವಿ ಗೌಡ ಎರಡು ಶೇಡ್‌ಗಳಿರುವ ಪಾತ್ರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರಂತೆ.
ಇದನ್ನೂ ಓದಿ:“ತೋತಾಪುರಿ’ ಹಾಡಿನ ಸಕ್ಸಸ್ ಸಂಭ್ರಮ
“ಹೆಸರೇ ಹೇಳುವಂತೆ, “ರೌಡಿ ಬೇಬಿ’ ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಸಿನಿಮಾ. ಇದರಲ್ಲಿ ಲವ್, ಆ್ಯಕ್ಷನ್, ಎಮೋಶನ್ಸ್ ಎಲ್ಲವೂ ಇದೆ. ಇದರಲ್ಲಿ ನನ್ನದು ಡಬಲ್ ಶೇಡ್ ಇರುವಂಥ ಪಾತ್ರ. ಒಂದು ಶೇಡ್‌ನಲ್ಲಿ ಕಾಲೇಜ್ ಹುಡುಗನಾಗಿ ಕಾಣಿಸಿಕೊಂಡರೆ, ಮತ್ತೂಂದು ಶೇಡ್‌ನಲ್ಲಿ ಸಾಫ್ಟ್ವೇರ್ ಕಂಪೆನಿ ಮಾಲೀಕನಾಗಿ ಕಾಣಿಸಿಕೊಂಡಿದ್ದೇನೆ. ಒಂದೇ ಸಿನಿಮಾದಲ್ಲಿ ಎರಡು ಬದಲಾವಣೆಗಳಿರುವಂಥ ಕ್ಯಾರೆಕ್ಟರ್ ಸಿಕ್ಕಿದೆ. ಸಿನಿಮಾದಲ್ಲಿ ಕಾಲೇಜ್ ಹುಡುಗನಾಗಿ ಕಾಣಿಸಿಕೊಳ್ಳುವುದಕ್ಕಾಗಿ, ಬರೋಬ್ಬರಿ 14 ಕೆ.ಜಿ ಯಷ್ಟು ದೇಹದ ತೂಕ ಇಳಿಸಿಕೊಂಡಿದ್ದೇನೆ’ ಎಂದು “ರೌಡಿ ಬೇಬಿ’ ಸಿನಿಮಾದಲ್ಲಿ ತಮ್ಮ ಪಾತ್ರ ಪರಿಚಯ ಮಾಡಿಕೊಡುತ್ತಾರೆ ರವಿ ಗೌಡ.
“ಸುಮುಖ ಎಂಟರ್‌ಟೈನರ್’ ಮತ್ತು “ವಾರ್‌ಫುಟ್ ಸ್ಟುಡಿಯೋ’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ರೌಡಿ ಬೇಬಿ’ ಸಿನಿಮಾಕ್ಕೆ ಕೃಷ್ಣ ರೆಡ್ಡಿ ನಿರ್ದೇಶನವಿದೆ. ಬೆಂಗಳೂರು, ಮಂಗಳೂರು ಮತ್ತು ಕೇರಳದ ಅನೇಕ ಸ್ಥಳಗಳಲ್ಲಿ “ರೌಡಿ ಬೇಬಿ’ ಚಿತ್ರದ ಚಿತ್ರೀಕರಣ ಮಾಡಲಾಗಿದೆ. “ಒಂದೊಳ್ಳೆ ಸಿನಿಮಾವನ್ನ ಮಾಡಿದ್ದೇವೆ. ಈಗಾಗಲೇ ಬಿಡುಗಡೆಯಾಗಿರುವ “ರೌಡಿ ಬೇಬಿ’ ಸಿನಿಮಾದ ಹಾಡುಗಳು, ಟ್ರೇಲರ್ ಎಲ್ಲವೂ ಹಿಟ್ ಆಗಿದೆ. ಅದರಂತೆಯೇ, ಸಿನಿಮಾ ಕೂಡ ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದು ವಿಶ್ವಾಸದ ಮಾತುಗಳನ್ನಾಡುತ್ತಾರೆ ರವಿ ಗೌಡ.
ಜಿ.ಎಸ್.ಕಾರ್ತಿಕಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.