ಸಾಹಿಲ್ ನಿರೂಪಣೆಯಿಂದ ನಟನೆಗೆ
Team Udayavani, Mar 31, 2017, 11:20 AM IST
“ನೀವ್ಯಾಕೆ ಆಡಿಷನ್‌ನಲ್ಲಿ ಭಾಗವಹಿಸಬಾರದು …’ ಎಂದು ಪ್ರಶ್ನಿಸಿದರಂತೆ. ಅದುವರೆಗೂ ಹಲವು ಸ್ಟೇಜ್‌ಶೋ ಕೊಟ್ಟಿದ್ದ ಸಾಹಿಲ್
ಗೆ, ಯಾವತ್ತೂ ತಾನು ನಟನಾಗಬಹುದು ಎಂದನಿಸಿರಲಿಲ್ಲವಂತೆ. ಸರಿ ಅವಕಾಶ ಸಿಕ್ಕಾಗ ಯಾಕೆ ಬಿಡಬೇಕು ಎಂದು ಆಡಿಷನ್‌ನಲ್ಲಿ
ಭಾಗವಹಿಸಿದ್ದಾರೆ. ಅದಾದ ಒಂದು ವಾರಕ್ಕೆ ಚಿತ್ರದಲ್ಲಿ ನಟಿಸುವುದಕ್ಕೆ ಆಫರ್ ಸಿಕ್ಕಿದೆ. ಈಗ ಸಾಹಿಲ್, ಸದ್ದಿಲ್ಲದೆ “ಕರಾಲಿ’ ಎಂಬ ಚಿತ್ರದ ಮೂಲಕ ನಾಯಕನಾಗಿ ಬಣ್ಣ ಹಚ್ಚಿದ್ದಾಗಿದೆ.
ಸಾಹಿಲ್ ಮೂಲತಃ ಕರಾವಳಿಯವರು. ಧರ್ಮಸ್ಥಳದ ಕಾಲೇಜಿನಲ್ಲಿ ಎಂಬಿಎ ಮುಗಿಸಿದವರು. 2012ರಲ್ಲಿ ಮಿಸ್ಟರ್ ಕರ್ನಾಟಕ ಆಗಿ ಆಯ್ಕೆಯಾದರಂತೆ. ಅದಾದ ಮುಂದಿನ ವರ್ಷ ಮಿಸ್ಟರ್ ಬಂಟ್ ವರ್ಲ್ಡ್ ಆಗಿ ಆಯ್ಕೆಯಾಗಿದ್ದಾರೆ. ಎಂಟಿವಿಯಲ್ಲಿ
ಪ್ರಸಾರವಾಗುವ ಡ್ರೈವ್ ವಿಥ್ ನ್ಯಾನೋ, ಇಂಡಿಯಾಸ್ ಗಾಟ್ ಟ್ಯಾಲೆಂಟ್ ಮುಂತಾದ ಹಲವು ಕಾರ್ಯಕ್ರಮಗಳಲ್ಲಿ
ಭಾಗವಹಿಸಿದ್ದಾರೆ. ಇದಲ್ಲದೆ 1000ಕ್ಕೂ ಹೆಚ್ಚು ಕಾರ್ಯಕ್ರಮಗಳ ನಿರೂಪಕರಾಗಿದ್ದಾರೆ. ಬರೀ ಕರ್ನಾಟಕವಷ್ಟೇ ಅಲ್ಲ, ಹೊರದೇಶಗಳಲ್ಲೂ ಅದರಲ್ಲೂ ಕುವೈಟ್, ಮಸ್ಕಟ್, ಖತಾರ್ ಮುಂತಾದ ಕಡೆ ನಡೆದ ಹಲವು ಕಾರ್ಯಕ್ರಮಗಳನ್ನು ಅವರು ನಡೆಸಿಕೊಟ್ಟಿದ್ದಾರೆ. ಮೈಸೂರಿನಲ್ಲಿ ಯುವ ದಸರಾ ನಡೆಸಿಕೊಡುವ ಸಂದರ್ಭದಲ್ಲಿ, ನಿರ್ದೇಶಕ ದಕ್ಷಿಣಾ ಮೂರ್ತಿ ಅವರು “ಕರಾಲಿ’ ಚಿತ್ರದ ಆಡಿಷನ್ ನಲ್ಲಿ ಭಾಗವಹಿಸುವ ಆಫರ್ ಕೊಟ್ಟರಂತೆ. ಹೀಗೆ ನಿರೂಪಣೆ ಮಾಡುತ್ತಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಸಾಹಿಲ್.
“ನಾನು ಅದಕ್ಕೂ ಮುನ್ನ ಕ್ಯಾಮೆರಾ ಫೇಸ್ ಮಾಡಿರಲಿಲ್ಲ. ನಟನೆ ಬಗ್ಗೆ ಗೊತ್ತಿರಲಿಲ್ಲ. ಆದರೆ, ನಮ್ಮ ನಿರ್ದೇಶಕ ದಕ್ಷಿಣಾಮೂರ್ತಿ
ಮತ್ತು ಛಾಯಾಗ್ರಾಹಕ ಪವನ್ ಪ್ರತಿಯೊಂದು ವಿಷಯವನ್ನೂ ಹೇಳಿಕೊಟ್ಟರು. ನಾನೇನು ತಪ್ಪು ಮಾಡಿದರೂ ಯಾವತ್ತೂ ಗದರಿಲಿಲ್ಲ. ತಾಳ್ಮೆಯಿಂದ ಹೇಳಿಕೊಟ್ಟರು. ಅದೇ ಕಾರಣಕ್ಕೆ ನನಗೆ ನಟಿಸುವುದು ಸುಲಭವಾಯಿತು’ ಎನ್ನುವ ಸಾಹಿಲ್, ಆ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಚಿತ್ರ ಬಿಡುಗಡೆಯಾದ ಮೇಲೆ, ಮುಂದಿನ ದಾರಿಯ ಬಗ್ಗೆ ಅವರು ಯೋಚಿಸುತ್ತಾರಂತೆ.
ಚೇತನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಪವರ್ ಪರ್ಬ 2025: ಫೆ. 8 ರಂದು ಬೆಂಕಿ ರಹಿತ ಅಡುಗೆ ಸ್ಪರ್ಧೆ
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ
ಮೀಟರ್ ಬಡ್ಡಿ: ಯಾದಗಿರಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಬಲಿ
BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್
ಪೆರ್ಡೂರು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಐತಾಳ ವಿಧಿವಶ