ಓಲ್ಡ್ ಮಾಂಕ್ ನಲ್ಲಿ ಶ್ರೀನಿ ಬಿಝಿ
Team Udayavani, Sep 25, 2020, 8:26 PM IST
“ಶ್ರೀನಿವಾಸ ಕಲ್ಯಾಣ’, “ಬೀರ್‌ಬಲ್’ ಚಿತ್ರಗಳ ಮೂಲಕ ಕನ್ನಡ ಸಿನಿಪ್ರಿಯರನ್ನು ರಂಜಿಸಿ ಗಮನ ಸೆಳೆದಿದ್ದ ನಟ ಶ್ರೀನಿ, ಈ ಬಾರಿ “ಓಲ್ಡ್ ಮಾಂಕ್’ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಹೌದು, ನಟ ಶ್ರೀನಿ ಮತ್ತು ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸಚಿತ್ರ “ಓಲ್ಡ್ ಮಾಂಕ್’ ಚಿತ್ರದ ಕೆಲಸಗಳು ಭರದಿಂದ ಸಾಗಿದೆ. ಸದ್ಯ ಈ ಚಿತ್ರದ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ.
ಇನ್ನು,ನಟ ಶ್ರೀನಿ ಇಲ್ಲಿಯವರೆಗೆ ಹೆಚ್ಚಾಗಿ ಗುರುತಿಸಿಕೊಂಡಿದ್ದು ರೊಮ್ಯಾಂಟಿಕ್ – ಕಾಮಿಡಿ ಚಿತ್ರಗಳಲ್ಲಿ. ಆ ಚಿತ್ರಗಳು ಶ್ರೀನಿ ಅವರಿಗೆ ಸಾಕಷ್ಟು ಹೆಸರು, ಜನಪ್ರಿಯತೆ ಎರಡನ್ನೂ ತಂದುಕೊಟ್ಟಿವೆ. ಇನ್ನು “ಓಲ್ಡ್ ಮಾಂಕ್’ನಲ್ಲಿಯೂ ಅದೇ ಮ್ಯಾಜಿಕ್ ಮುಂದುವರೆಯಲಿದೆಯಂತೆ. “ಇದೊಂದು ರೊಮ್ಯಾಂಟಿಕ್ – ಕಾಮಿಡಿ ಸಬ್ಜೆಕ್ಟ್. ಅದರ ಜೊತೆಗೆ ಸಸ್ಪೆನ್ಸ್ – ಥ್ರಿಲ್ಲರ್, ಎಮೋಶನ್ಸ್ ಹೀಗೆ ಎಲ್ಲ ಎಂಟರ್‌ಟೈನ್ಮೆಂಟ್ ಅಂಶಗಳು ಇದರಲ್ಲಿ ಹದವಾಗಿ ಬೆರೆತಿದೆ. ಆದ್ರೆ ಯಾರೂ ನಿರೀಕ್ಷಿಸದ ಟ್ವಿಸ್ಟ್ ಆ್ಯಂಡ್ ಟರ್ನ್ಸ್ ಈ ಸಿನಿಮಾದಲ್ಲಿರಲಿದೆ. ಸ್ಟೋರಿ ಕಂಪ್ಲೀಟ್ ಚೇಂಜ್ ಆಗಿರಲಿದೆ. ಸ್ಕ್ರೀನ್ ಪ್ಲೇ ಮತ್ತು ಪ್ರಸೆಂಟೇಶನ್ ಸಿನಿಮಾದ ಹೈಲೈಟ್’ ಎನ್ನುತ್ತಾರೆ ಶ್ರೀನಿ.
“ಓಲ್ಡ್ ಮಾಂಕ್’ ಚಿತ್ರದಲ್ಲಿ ಗಮನ ಸೆಳೆಯುತ್ತಿರುವ ಇನ್ನೊಂದು ವಿಶೇಷತೆ ಚಿತ್ರದ ಕಲಾವಿದರು ಮತ್ತು ತಾರಾಗಣ. “ಓಲ್ಡ್ ಮಾಂಕ್’ನಲ್ಲಿ ಅದಿತಿ ಪ್ರಭುದೇವ ಟ್ರೆಡೀಷನಲ್ ಲುಕ್‌ನಲ್ಲಿಕಾಣಿಸಿಕೊಳ್ಳುತ್ತಿದ್ದು, ಶ್ರೀನಿಗೆ ನಾಯಕಿಯಾಗಿ ಜೋಡಿಯಾಗುತ್ತಿದ್ದಾರೆ. ಉಳಿದಂತೆ ಹಿರಿಯ ನಟ ಕಂ ನಿರ್ದೇಶಕ ಎಸ್. ನಾರಾಯಣ್, ಅರುಣಾ ಬಾಲರಾಜ್, ಸಿಹಿಕಹಿ ಚಂದ್ರು ಸೇರಿದಂತೆ ಸುಮಾರು100ಕ್ಕೂ ಹೆಚ್ಚು ಕಲಾವಿದರು ಚಿತ್ರದ ಬೇರೆ ಬೇರೆ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ಚಿತ್ರದ ಕಲಾವಿದರ ಆಯ್ಕೆಗಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆಡಿಷನ್ ನಡೆಸಿದ್ದ ಶ್ರೀನಿ, ಸಾಕಷ್ಟು ಅಳೆದು-ತೂಗಿ ಪಾತ್ರಕ್ಕೆ ಬೇಕಾದ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.