Sandalwood: ಸ್ಟಾರ್‌ ಸಿನಿಮಾಗಳ ಸುಂದರಿಯರು; ಮಾಸ್‌ ಅಡ್ಡದ ಕ್ಲಾಸ್‌ ಹೀರೋಯಿನ್ಸ್‌


Team Udayavani, Aug 2, 2024, 4:20 PM IST

Sandalwood: ಸ್ಟಾರ್‌ ಸಿನಿಮಾಗಳ ಸುಂದರಿಯರು; ಮಾಸ್‌ ಅಡ್ಡದ ಕ್ಲಾಸ್‌ ಹೀರೋಯಿನ್ಸ್‌

ನಾಯಕಿ ನಟಿಯರಿಗೆ ಸ್ಟಾರ್‌ ಸಿನಿಮಾಗಳಲ್ಲಿ ಅವಕಾಶ ಸಿಕ್ಕರೆ ಅವರು ಚಿತ್ರರಂಗದಲ್ಲಿ ಬೇಗನೇ ಗುರುತಿಸಿಕೊಳ್ಳುವ ಜೊತೆಗೆ ಒಂದಷ್ಟು ವರ್ಷ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಾರೆ ಎಂಬ ಮಾತಿದೆ. ಅದು ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ, ಕೆಲವು ನಟಿಯರು ಮಾತ್ರ ಸ್ಟಾರ್‌ ಸಿನಿಮಾಗಳಿಗೇ ಮೊದಲ ಆದ್ಯತೆ ನೀಡುತ್ತಾ ಒಂದು “ರೌಂಡ್‌’ ಹಾಕಿದ್ದಾರೆ ಕೂಡಾ.

ಇತ್ತೀಚಿನ ವರ್ಷದ ಉದಾಹರಣೆ ಹೇಳುವುದಾದರೆ ರಚಿತಾ ರಾಮ್‌. ದರ್ಶನ್‌ ನಟನೆಯ “ಬುಲ್‌ ಬುಲ್‌’ ಸಿನಿಮಾ ಮೂಲಕ ಹಿರಿತೆರೆಗೆ ಎಂಟ್ರಿಕೊಟ್ಟ ರಚಿತಾ ಆ ನಂತರ ತಿರುಗಿ ನೋಡಿಯೇ ಇಲ್ಲ. ಬಹುತೇಕ ಕನ್ನಡದ ಎಲ್ಲಾ ಸ್ಟಾರ್‌ಗಳ ಚಿತ್ರಗಳಲ್ಲೂ “ಸ್ಟಾರ್‌ ನಟಿ’ಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಮತ್ತೆ ಸ್ಟಾರ್‌ ಸಿನಿಮಾಗಳ ಜಾತ್ರೆ ಆರಂಭವಾಗಿದೆ. ಆಗಸ್ಟ್‌ ಎರಡನೇ ವಾರದಿಂದ ಡಿಸೆಂಬರ್‌ವರೆಗೂ ಕನ್ನಡದ ಬಹುತೇಕ ಎಲ್ಲಾ ಸ್ಟಾರ್‌ಗಳ ಸಿನಿಮಾಗಳು ತೆರೆಕಾಣಲಿವೆ. ದುನಿಯಾ ವಿಜಯ್‌ “ಭೀಮ’, ಗಣೇಶ್‌ “ಕೃಷ್ಣಂ ಪ್ರಣಯ ಸಖೀ’, ಶಿವರಾಜ್‌ಕುಮಾರ್‌, “ಭೈರತಿ ರಣಗಲ್‌’, ಧ್ರುವ ಸರ್ಜಾ “ಮಾರ್ಟಿನ್‌’, “ಕೆಡಿ’, ಉಪೇಂದ್ರ “ಯು-ಐ’, ಶ್ರೀಮುರಳಿ “ಬ àರ’, ಸುದೀಪ್‌ “ಮ್ಯಾಕ್ಸ್‌’ ಚಿತ್ರಗಳು ಈ ವರ್ಷ ತೆರೆಕಾಣುವುದು ಪಕ್ಕಾ. ಈ ಸಿನಿಮಾಗಳು ಸ್ಟಾರ್‌ ನಟರಿಗೆ ಎಷ್ಟು ಮುಖ್ಯವೋ, ನಟಿಯರಿಗೂ ಅಷ್ಟೇ ಮುಖ್ಯವಾಗಿದೆ. ಒಂದು ಸಿನಿಮಾ ಹಿಟ್‌ ಆದರೆ ಅಥವಾ ಆ ಚಿತ್ರದಲ್ಲಿ ನಾಯಕಿ ತನ್ನ ನಟನೆಯ ಮೂಲಕ ಗುರುತಿಸಿ ಕೊಂಡರೆ ಸಿನಿರಂಗದಲ್ಲಿ ಆಕೆಯ “ಆಯಸ್ಸು’ ಕಡಿಮೆ ಎಂದರೂ ಮೂರು ವರ್ಷ ಹೆಚ್ಚುತ್ತದೆ. ಜೊತೆಗೆ ಸಿನಿಅಕೌಂಟ್‌ಗೆ ನಾಲ್ಕೈದು ಸಿನಿಮಾಗಳು ಜಮೆಯಾಗುತ್ತವೆ. ಹಾಗಾದರೆ ಈ ವರ್ಷ ತೆರೆ ಕಾಣುತ್ತಿರುವ ಸ್ಟಾರ್‌ ಸಿನಿಮಾಗಳಲ್ಲಿ ನಾಯಕಿಯರಾಗಿ ನಟಿಸಿದವರು ಯಾರು ಎಂಬ ಕುತೂಹಲ ಸಹಜ. ಆ ಬೆಡಗಿಯರ ಕುರಿತು ಒಂದು ರೌಂಡಪ್‌…

ಕೃಷ್ಣಂನಲ್ಲಿ ಮಾಳವಿಕಾ ನಾಯರ್‌

ಗಣೇಶ್‌ ನಾಯಕರಾಗಿರುವ “ಕೃಷ್ಣಂ ಪ್ರಣಯ ಸಖೀ’ ಚಿತ್ರ ಆಗಸ್ಟ್‌ 15ರಂದು ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮಾಳವಿಕಾ ನಾಯರ್‌. ಮೂಲ ಮಲಯಾಳಿ ಬೆಡಗಿಯಾಗಿರುವ ಮಾಳವಿಕಾ ಈಗಾಗಲೇ ಮಲಯಾಳಂ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ “ಕೃಷ್ಣಂ ಪ್ರಣಯ ಸಖೀ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಮಾಳವಿಕಾ ಸಿನಿಮಾದ ಚಿತ್ರೀಕರಣ ಮುಗಿಯುವ ಹೊತ್ತಿಗೆ ಒಂದಷ್ಟು ಕನ್ನಡ ಕಲಿತಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರ ಪ್ರಮುಖವಾಗಿದ್ದು, 50ಕ್ಕೂ ಹೆಚ್ಚು ದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸದ್ಯ ಚೊಚ್ಚಲ ಕನ್ನಡ ಚಿತ್ರದ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ ಮಾಳವಿಕಾ.

ಕೆಡಿ, ಯು-ಐನಲ್ಲಿ ರೀಷ್ಮಾ ನಾಣಯ್ಯ

ಪ್ರೇಮ್‌ ನಿರ್ದೇಶನದ “ಏಕ್‌ ಲವ್‌ ಯಾ’ ಸಿನಿಮಾ ಮೂಲಕ ಚಂದನವನಕ್ಕೆ ಬಲಗಾಲಿಟ್ಟು ಎಂಟ್ರಿಕೊಟ್ಟ ಚೆಂದದ ಬೆಡಗಿ ರೀಷ್ಮಾ ಕೈಯಲ್ಲಿ ಈಗ ಎರಡ ಸ್ಟಾರ್‌ ಸಿನಿಮಾಗಳಿವೆ. ವಿಶೇಷವೆಂದರೆ ಈ ಎರಡೂ ಚಿತ್ರಗಳು ಪ್ಯಾನ್‌ ಇಂಡಿಯಾ. ಧ್ರುವ ಸರ್ಜಾ ನಾಯಕರಾಗಿರುವ “ಕೆಡಿ’ ಚಿತ್ರದಲ್ಲಿ ಮಚ್ಚ್ ಲಕ್ಷ್ಮೀ ಎಂಬ ಪಾತ್ರ ಮಾಡುತ್ತಿದ್ದಾರೆ. ಇನ್ನು ಉಪೇಂದ್ರ ನಟನೆ, ನಿರ್ದೇಶನದ “ಯು-ಐ’ ತಾರಾಗಣದಲ್ಲೂ ರೀಷ್ಮಾಗೆ ಅವಕಾಶ ಸಿಕ್ಕಿದೆ. ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಚಿತ್ರದ “ಟ್ರೋಲ್‌ ಆಗುತ್ತೆ ಇದು ಟ್ರೋಲ್‌ ಆಗುತ್ತೆ’ ಹಾಡಲ್ಲಿ ಭರ್ಜರಿಯಾಗಿ ಸ್ಟೆಪ್‌ ಹಾಕಿದ ರೀಷ್ಮಾಗೆ ಆ ಹಾಡು ಒಳ್ಳೆಯ ಮೈಲೇಜ್‌ ನೀಡಿತ್ತು. ಮೂಲತಃ ಕೊಡಗಿನ ಬೆಡಗಿಯಾದ ರೀಷ್ಮಾ ಚಿತ್ರರಂಗದಲ್ಲಿ ನೆಲೆನಿಲ್ಲುವ ಲಕ್ಷಣ ತೋರುತ್ತಿದ್ದಾರೆ.

ಭೈರತಿ, ಬಘೀರದಲ್ಲಿ ರುಕ್ಮಿಣಿ

ರುಕ್ಮಿಣಿ ವಸಂತ್‌- ಈ ಹೆಸರು ಇತ್ತೀಚೆಗೆ ಜೋರಾಗಿ ಕೇಳಿಬಂದಿದ್ದು “ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಸಮಯದಲ್ಲಿ. ಆ ಚಿತ್ರದಲ್ಲಿ ರುಕ್ಮಿಣಿ ವಸಂತ್‌ ಪ್ರಿಯಾ ಎಂಬ ಪಾತ್ರದ ಮೂಲಕ ಮಿಂಚಿದ್ದರು. “ಬೀರಬಲ್‌’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ರುಕ್ಮಿಣಿ ಕೈಯಲ್ಲಿ ಈಗ ಎರಡು ಸ್ಟಾರ್‌ ಸಿನಿಮಾಗಳಿವೆ. ಶಿವರಾಜ್‌ಕುಮಾರ್‌ ನಾಯಕರಾಗಿರುವ “ಭೈರತಿ ರಣಗಲ್‌’ ಹಾಗೂ ಶ್ರೀಮುರಳಿ ನಟನೆಯ “ಬಘೀರ’. ಈ ಎರಡೂ ಚಿತ್ರಗಳ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆಪ್ಟೆಂಬರ್‌ನಲ್ಲಿ “ಭೈರತಿ’ ತೆರೆಗೆ ಬರಲಿದೆ. ಎರಡರಲ್ಲೂ ವಿಭಿನ್ನ ಪಾತ್ರ ಸಿಕ್ಕಿದೆಯಂತೆ. ಅದೇ ಕಾರಣ ದಿಂದ ರುಕ್ಮಿಣಿ ಕಣ್ಣಲ್ಲಿ ನಿರೀಕ್ಷೆ ಹೆಚ್ಚಿದೆ.

ಮ್ಯಾಕ್ಸ್‌ನಲ್ಲಿ”ಕೆಜಿಎಫ್’ ನಿಧಿ

ಕೆಜಿಎಫ್’ ಸಿನಿಮಾ ಮೂಲಕ ಬೆಳಕಿಗೆ ಬಂದ ಮಂಗಳೂರು ಚೆಲುವೆ ಶ್ರೀನಿಧಿ ಶೆಟ್ಟಿ ಈಗ ಸುದೀಪ್‌ ನಟನೆಯ “ಮ್ಯಾಕ್ಸ್‌’ ಮೂಲಕ ಮತ್ತೂಮ್ಮೆ ತೆರೆಮೇಲೆ ಬರುತ್ತಿದ್ದಾರೆ. “ಕೆಜಿಎಫ್’ ಮೊದಲ ಭಾಗದಲ್ಲಿ ಶ್ರೀನಿಧಿ ಪಾತ್ರಕ್ಕೆ ಹೆಚ್ಚೇನು ಮಹತ್ವವಿರಲಿಲ್ಲ. ಆದರೆ, “ಕೆಜಿಎಫ‌-2’ನಲ್ಲಿ ರೀನಾ ದೇಸಾಯಿ ಆಗಿ ಶ್ರೀನಿಧಿ ಶೆಟ್ಟಿ ಗಮನ ಸೆಳೆದಿದ್ದರು. ಆ ನಂತರ ಕನ್ನಡದಿಂದ ಸಾಕಷ್ಟು ಅವಕಾಶಗಳು ಬಂದರೂ ಆ ಬಗ್ಗೆಹೆಚ್ಚು ಆಸಕ್ತಿ ತೋರಿಸದ ಶ್ರೀನಿಧಿ, ಅಳೆದು ತೂಗಿ ಒಪ್ಪಿಕೊಂಡ ಚಿತ್ರ “ಮ್ಯಾಕ್ಸ್‌’. ಈ ಚಿತ್ರ ಈಗ ಬಿಡುಗಡೆಯ ತಯಾರಿಯಲ್ಲಿದೆ. ಸುದೀಪ್‌ ಅಭಿಮಾನಿಗಳು ಕೂಡಾ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಕುಡ್ಲದ ಚೆಲುವೆ ಮತ್ತೂಮ್ಮೆ ಮಿಂಚುವ ನಿರೀಕ್ಷೆಯಲ್ಲಿದ್ದಾರೆ.

ಮಾರ್ಟಿನ್‌ ಜೊತೆ ವೈಭವಿ ಶಾಂಡಿಲ್ಯ

ರಾಜ್‌ ವಿಷ್ಣು ‘ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿದ ಚೆಲುವೆ ವೈಭವಿ ಶಾಂಡಿಲ್ಯ ಈಗ ಧ್ರುವ ಸರ್ಜಾ ನಾಯಕರಾಗಿರುವ “ಮಾರ್ಟಿನ್‌’ ಚಿತ್ರದ ಮೂಲಕ ಪ್ಯಾನ್‌ ವರ್ಲ್ಡ್ ಲಾಂಚ ಆಗುತ್ತಿದ್ದಾರೆ. ಮುಂಬೈನಲ್ಲಿ ಹುಟ್ಟಿ ಬೆಳೆದ ವೈಭವಿಗೆ ಮೊದಲು ಅವಕಾಶ ಸಿಕ್ಕಿದ್ದು, ಮರಾಠಿ ಸಿನಿಮಾದಲ್ಲಿ. ಅಲ್ಲಿಂದ ಆರಂಭವಾದ ವೈಭವಿ ಸಿನಿ ಜರ್ನಿ ಈಗ ಒಂದಷ್ಟು ಭಾಷೆಗಳನ್ನು ಸುತ್ತಿಕೊಂಡು ಬಂದಿದೆ. ತಮಿಳು, ತೆಲುಗು ಚಿತ್ರಗಳಲ್ಲೂ ಬಿಝಿ ನಟಿ ಎನಿಸಿಕೊಂಡಿರುವ ವೈಭವಿಗೆ ನಿರೀಕ್ಷೆಗಿಂತಲೂ ದೊಡ್ಡ ಅವಕಾಶ ಸಿಕ್ಕಿದೆ. “ನಾನು ಬೇರೆ ಭಾಷೆಯಿಂದ ಬಂದವಳಾದರೂ ಕನ್ನಡಿಗರು ನನ್ನ ಮೇಲೆ ಇಷ್ಟೊಂದು ಪ್ರೀತಿ ಅಭಿಮಾನ ತೋರಿಸುತ್ತಿದ್ದಾರೆ’ ಎನ್ನುವ ವೈಭವಿಯ ದೃಷ್ಟಿ ಏನಿದ್ದರೂ ಸದ್ಯ “ಮಾರ್ಟಿನ್‌’ನತ್ತ

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Amith-sha

Fight Terrorism: ಶೀಘ್ರವೇ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ನೀತಿ ಬಿಡುಗಡೆ: ಅಮಿತ್‌ ಶಾ

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ

Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ

CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!

CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!

Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ

Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ

Maharashtra: ಕ್ವಿಂಟಲ್‌ ಈರುಳ್ಳಿಗೆ5,400 ರೂ.: 5 ವರ್ಷದಲ್ಲೇ ಗರಿಷ್ಠ!

Maharashtra: ಕ್ವಿಂಟಲ್‌ ಈರುಳ್ಳಿಗೆ5,400 ರೂ.: 5 ವರ್ಷದಲ್ಲೇ ಗರಿಷ್ಠ!

Ranji Trophy: ಶ್ರೇಯಸ್‌ ಅಯ್ಯರ್‌ ದ್ವಿಶತಕ

Ranji Trophy: ಶ್ರೇಯಸ್‌ ಅಯ್ಯರ್‌ ದ್ವಿಶತಕ; ಬೃಹತ್‌ ಮೊತ್ತದತ್ತ ಮುಂಬಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

99 ರೂಪಾಯಿಗೆ ಆರಾಮ್‌ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್

Sandalwood: 99 ರೂಪಾಯಿಗೆ ಆರಾಮ್‌ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್

navagraha movie re release

Darshan; ಭರ್ಜರಿ ಓಪನಿಂಗ್‌ ನಿರೀಕ್ಷೆಯಲ್ಲಿ ನವಗ್ರಹ: ರೀರಿಲೀಸ್‌ ಚಿತ್ರದಲ್ಲಿ ದರ್ಶನ್‌ ಹವಾ

Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

BBK-11: ಮತ್ತೆ ಬಿಗ್ ಬಾಸ್ ಮನೆಯ ಕಿಂಗ್ ಮೇಕರ್ ಹನುಮಂತು

BBK-11: ಮತ್ತೆ ಬಿಗ್ ಬಾಸ್ ಮನೆಯ ಕಿಂಗ್ ಮೇಕರ್ ಆದ ಹನುಮಂತು

Shwetha Srivatsav: ಶ್ವೇತಾ ಕಲರ್‌ಫುಲ್‌ ಫೋಟೋಶೂಟ್‌

Shwetha Srivatsav: ಶ್ವೇತಾ ಕಲರ್‌ಫುಲ್‌ ಫೋಟೋಶೂಟ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

death

Belthangady: ನೇಣು ಬಿಗಿದು ವ್ಯಕ್ತಿ ಆತ್ಮಹ*ತ್ಯೆ

arest

Mangaluru: ಮಾದಕ ವಸ್ತು ಗಾಂಜಾ ಸೇವನೆ ಪ್ರತ್ಯೇಕ ಪ್ರಕರಣದಲ್ಲಿ ಮೂವರು ವಶಕ್ಕೆ

crime

Puttur: ಕಾರು ತಡೆಬೇಲಿ ಸಹಿತ ಹಲವು ವಾಹನಗಳಿಗೆ ಢಿಕ್ಕಿ

12

Mangaluru: ಅಕ್ರಮ ಮರಳುಗಾರಿಕೆ; ದೋಣಿಗಳು ವಶಕ್ಕೆ

fraudd

Puttur: ಲಕ್ಕಿ ಡ್ರಾ ನಂಬಿ ಹಣ ಕಳೆದುಕೊಂಡ ಕೂಲಿ ಕಾರ್ಮಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.