ಅಮೆರಿಕ ಅಧ್ಯಕ್ಷರಿಗೆ ಸಂಸದರ ಸಾಥ್
ಹಾಡು ಹರಟೆ
Team Udayavani, Sep 27, 2019, 5:15 AM IST
ಶರಣ್ ಅಭಿನಯದ “ಅಧ್ಯಕ್ಷ ಇನ್ ಅಮೆರಿಕ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಅಕ್ಟೋಬರ್ 04 ರಂದು ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ಸಂಸದ ತೇಜಸ್ವಿ ಸೂರ್ಯ ಚಿತ್ರದ ಆಡಿಯೋ ಬಿಡುಗಡೆಗೆ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದರು. “ನನಗೆ ಬೇಸರ ಆದಾಗ ಶರಣ್ ಸೇರಿದಂತೆ ಇತರ ಹಾಸ್ಯ ಕಲಾವಿದರ ಕಾಮಿಡಿ ತುಣುಕುಗಳನ್ನು ನೋಡುತ್ತೇನೆ. ಇವರುಗಳು ಇಲ್ಲದೇ ಕನ್ನಡ ಚಿತ್ರರಂಗ ಇರಲು ಸಾಧ್ಯವಿಲ್ಲ. ಇಂತಹ ಕಲಾವಿದರ ದಂಡು ಇರುವುದರಿಂದ ಚಿತ್ರರಂಗದಲ್ಲಿ ಯಶಸ್ಸು ಇದೆ’ ಎಂದು ಶುಭಕೋರಿದರು ತೇಜಸ್ವಿ ಸೂರ್ಯ.
ನಾಯಕ ಶರಣ್‌ಗೆ ಈ ಸಿನಿಮಾ ಮೇಲೆ ಭರವಸೆ ಇದೆ. ಅದಕ್ಕೆ ಕಾರಣ ಸಿನಿಮಾ ಮೂಡಿಬಂದಿರುವ ರೀತಿ. ಈ ಚಿತ್ರವನ್ನು ಯೋಗಾನಂದ್ ಮುದ್ದಾನ್ ನಿರ್ದೇಶಿಸಿದ್ದಾರೆ. ಇವರಿಗಿದು ಚೊಚ್ಚಲ ಚಿತ್ರ. ಇನ್ನು, ಹೈದರಾಬಾದ್ ಮೂಲದ ಸಂಸ್ಥೆ ಚಿತ್ರವನ್ನು ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಿದೆ. ಇವೆಲ್ಲದರ ಜೊತೆಗೆ ಚಿತ್ರದ ಕಂಟೆಂಟ್ ಕೂಡಾ ಭಿನ್ನವಾಗಿರುವುದರಿಂದ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸ ಶರಣ್ ಅವರದು. “ನಾಲ್ಕು ಗೋಡೆಗಳ ಮಧ್ಯೆ ಕುಳಿತು ಹಾಸ್ಯ ದೃಶ್ಯಗಳನ್ನು ಸೃಷ್ಟಿಸೋದು ಕಷ್ಟದ ಕೆಲಸ. ಆದರೆ, ಯೋಗಾನಂದ ಮುದ್ದಾನ್ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ’ ಎನ್ನುತ್ತಾ ಚಿತ್ರದ ವಿಶೇಷತೆಯ ಮೇಲೆ ಬೆಳಕು ಚೆಲ್ಲಿದರು ಶರಣ್.
ಚಿತ್ರದಲ್ಲಿ ರಾಗಿಣಿ ನಾಯಕಿ. ರಾಗಿಣಿಗೆ ಮೊದಲ ಬಾರಿಗೆ ಕಾಮಿಡಿ ಚಿತ್ರದಲ್ಲಿ ನಟಿಸಿದ್ದು ಹೊಸ ಅನುಭವ ನೀಡಿದೆಯಂತೆ. ಇನ್ನು, ನಿರ್ದೇಶಕ ಯೋಗಾನಂದ್ ಮುದ್ದಾನ್ ಮಾತನಾಡಿ, “ಇದು ಅಧ್ಯಕ್ಷ ಚಿತ್ರದ ಮುಂದುವರೆದ ಭಾಗವಲ್ಲ. ಆ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕೂಡಾ ಸಂಪೂರ್ಣ ಹಾಸ್ಯಮಯ ಚಿತ್ರ ಎಂಬುದಷ್ಟೇ ಸಾಮ್ಯತೆ ಎಂದರು, ಚಿತ್ರದ ಹಾಡುಗಳನ್ನು ಡಿ ಬೀಟ್ಸ್ ಸಂಸ್ಥೆ ಹೊರತಂದಿದೆ. ಚಿತ್ರದಲ್ಲಿ ಶಿವರಾಜ್ ಕೆ.ಆರ್.ಪೇಟೆ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಒಂದು ಸಮಯದಲ್ಲಿ ಶರಣ್ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದ ಶಿವರಾಜ್ ಕೆ.ಆರ್.ಪೇಟೆಗೆ ಈಗ ಅವರ ಜೊತೆ ನಟಿಸಿದ್ದು ಖುಷಿ ಕೊಟ್ಟಿದೆಯಂತೆ. ಉಳಿದಂತೆ ರಂಗಾಯಣ ರಘು, ಪದ್ಮಜಾ ರಾವ್, ಸ್ಪಂದನಾ, ಶೈಲಜಾ ನಾಗ್, ವಿ.ಹರಿಕೃಷ್ಣ, ನಿರ್ಮಾಪಕ ವಿಶ್ವಪ್ರಸಾದ್.ಟಿ.ಜಿ ಚಿತ್ರದ ಬಗ್ಗೆ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.