ಮುಂದಿನ ವಾರ ಸಾಹಸಿ ಮಕ್ಕಳ ಆಗಮನ
Team Udayavani, Jul 6, 2018, 6:00 AM IST
“ಅನಂತನ ಚೆಲ್ಲಾಟ’ ಎಂಬ ಚಿತ್ರ ಮಾಡಿದ್ದ ಸುಶೀಲ್ ಮೊಕಾಶಿ, ಈಗ ಸದ್ದಿಲ್ಲದೆ ಒಂದು ಚಿತ್ರ ಮಾಡಿ ಮುಗಿಸಿದ್ದಾರೆ. ಕಳೆದ ಬಾರಿ ಅನಂತನ ಜೊತೆಗೆ ಚೆಲ್ಲಾಟವಾಡಿದ್ದ ಅವರು, ಈ ಬಾರಿ ಸಾಹಸಿ ಮಕ್ಕಳ ಕುರಿತು ಚಿತ್ರ ಮಾಡಿದ್ದಾರೆ ಮತ್ತು ಆ ಚಿತ್ರಕ್ಕೆ “ಸಾಹಸಿ ಮಕ್ಕಳು’ ಎಂಬ ಹೆಸರನ್ನು ಇಟ್ಟಿದ್ದಾರೆ. ಈ ಚಿತ್ರ ಮುಂದಿನ ವಾರ (ಜುಲೈ 13ರಂದು) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರವನ್ನು ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ರತ್ನಮಾಲ ಅವರು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರಕ್ಕೆ ತಾವೇ ಕಥೆಯನ್ನೂ ರಚಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಓದಿನಿಂದ ವಂಚಿತರಾಗಿರುವ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕುರಿತಾಗಿ ಈ ಚಿತ್ರ ಸಾಗುತ್ತದೆ. ರತ್ನಮಾಲ ಅವರಿಗೂ ಚಿಕ್ಕ ವಯಸ್ಸಿನಲ್ಲೂ ಓದುವುದಕ್ಕೆ ಸಮಸ್ಯೆ ಎದುರಾಗಿದ್ದು, ಇತ್ತೀಚೆಗೆ ಅವರು ಪೊಲಿಟಿಕಲ್ ಸೈನ್ಸ್‌ನಲ್ಲಿ ಎಂ.ಎ ಮುಗಿಸಿದರಂತೆ. ತಮ್ಮ ಬಾಲ್ಯದಲ್ಲಿ ನೋಡಿದ ಅಂಶಗಳನ್ನು ಸೇರಿಸಿ ಅವರು ಈ ಚಿತ್ರದ ಕಥೆ ಮಾಡಿದ್ದಾರೆ.
ಈ ಚಿತ್ರದ ಕಥೆ ಮಧು, ಸುಶ್ಮಿತ್, ಮೈತ್ರಿ, ವಿನಯ್ ಮತ್ತು ಪುಣ್ಯ ಎಂಬ ಐದು ಮಕ್ಕಳ ಸುತ್ತ ಸುತ್ತುತ್ತದಂತೆ. ಕಾರಣಾಂತರಗಳಿಂದ ಕಾಡಿಗೆ ಹೋಗುವ ಆ ಮಕ್ಕಳು, ಅಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರಂತೆ. ಅಲ್ಲಿಂದ ತಮ್ಮ ಹಳ್ಳಿಗೆ ವಾಪಸ್ಸು ಬರುವುದಷ್ಟೇ ಅಲ್ಲ, ಶಿಕ್ಷಣಕ್ಕಾಗಿ ಏನೆಲ್ಲಾ ಹೋರಾಡುತ್ತಾರೆ ಎಂಬ ಕಥೆ ಇದೆಯಂತೆ. ಈ ಚಿತ್ರವನ್ನು “ಪುಟಾಣಿ ಏಜೆಂಟ್ 123’ಗೆ ಹೋಲಿಸುವ ನಿರ್ದೇಶಕರು, “ಚಿತ್ರದಲ್ಲಿ ಸಾಕಷ್ಟು ಮನರಂಜಿಸುವ ಅಂಶಗಳಿಗವೆ. ಅಷ್ಟೇ ಅಲ್ಲ, ಈ ಚಿತ್ರದ ಮೂಲಕ ಶಿಕ್ಷಣ ಜನ್ಮಸಿದ್ಧ ಹಕ್ಕು ಎಂಬುದನ್ನು ಹೇಳುವುದಕ್ಕೆ ಪ್ರಯತ್ನ ಮಾಡಿದ್ದೇವೆ. ಈ ಚಿತ್ರಕ್ಕೆ ವಿಟ್ಲ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು ಸುಶೀಲ್.
ಚಿತ್ರಕ್ಕೆ ಶರತ್ ಸಂಗೀತ ಸಂಯೋಜಿಸಿದ್ದಾರೆ. ನಾಲ್ಕು ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಎಂ.ಬಿ. ಅಳ್ಳಿàಕಟ್ಟಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. “ಸಾಹಸಿ ಮಕ್ಕಳು’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.