ತೆರೆಮೇಲೆ ‘ಅಘೋರ’ ವ್ಯಾಖ್ಯಾನ!


Team Udayavani, Feb 25, 2022, 3:47 PM IST

ಅಘೋರ

“ಅಘೋರ’ ಎಂಬ ಪದವನ್ನು ಬಹುತೇಕ ಎಲ್ಲರೂ ಕೇಳಿರುತ್ತೀರಿ. ಈ “ಅಘೋರ’ ಎಂಬುದಕ್ಕೆ ಹತ್ತಾರು ವ್ಯಾಖ್ಯಾನಗಳಿವೆ. ವೇದ, ಪುರಾಣಗಳಿಂದ ಹಿಡಿದು ಇಂದಿನ ಕಾದಂಬರಿಗಳವರೆಗೆ ಇದರ ಬಗ್ಗೆ ನೂರಾರು ಕಥೆ-ಕಲ್ಪನೆಗಳಿವೆ. ಈಗ ಇಲ್ಲೊಂದು ಹೊಸಬರ ತಂಡ ಈ ಮಾಂತ್ರಿಕ ವಿದ್ಯೆಯನ್ನು ತಮ್ಮದೇ ಅರ್ಥ, ವ್ಯಾಖ್ಯಾನದೊಂದಿಗೆ “ಅಘೋರ’ ಎಂಬ ಹೆಸರಿನಲ್ಲೇ ಸಿನಿಮಾ ಮೂಲಕ ತೆರೆಮೇಲೆ ಹೇಳಲು ಹೊರಟಿದೆ.

ಅಂದಹಾಗೆ, ತಮ್ಮ ಸಿನಿಮಾಕ್ಕೆ ಚಿತ್ರತಂಡ ಇಂಥದ್ದೊಂದು ಟೈಟಲ್‌ ಇಟ್ಟಿರುವುದಕ್ಕೂ ಕಾರಣವಿದೆಯಂತೆ, “ಅನೇಕರಿಗೆ ಗೊತ್ತಿರುವಂತೆ, ಈ “ಅಘೋರ’ ಎಂಬುದಕ್ಕೆ ಒಂದು ಘಟನೆ ಅಥವಾ ಒಂದು ವಿದ್ಯೆ ಎಂಬ ಅರ್ಥವಿದೆ. ಈ ವಿದ್ಯೆ ತುಂಬ ಕಠೊರವಾಗಿರುತ್ತದೆ. ಆದರೆ, ಈ ವಿದ್ಯೆಯನ್ನು ಮನುಷ್ಯ ಒಮ್ಮೆ ಕಲಿತರೆ, ಸೃಷ್ಟಿಯ ನಿಯಮ, ತನ್ನ ಅಸ್ವಿತ್ವ, ಜಗತ್ತಿನ ವಾಸ್ತವ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾನೆ. ಈ ಸಿನಿಮಾದಲ್ಲೂ ಅದನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದೇವೆ. ಹಾಗಾಗಿ ಸಿನಿಮಾಕ್ಕೂ “ಅಘೋರ’ ಎಂದು ಟೈಟಲ್‌ ಇಟ್ಟಿದ್ದೇವೆ’ ಎನ್ನುತ್ತದೆ ಚಿತ್ರತಂಡ.

ಇನ್ನು “ಅಘೋರ’ ಚಿತ್ರದಲ್ಲಿ ಅವಿನಾಶ್‌, ಪುನೀತ್‌, ಅಶೋಕ್‌, ದ್ರವ್ಯಾ ಶೆಟ್ಟಿ, ರಚನಾ ದಶರಥ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಮೋಕ್ಷ ಸಿನಿಮಾಸ್‌’ ಬ್ಯಾನರ್‌ನಲ್ಲಿ ಪುನೀತ್‌ ಗೌಡ ನಿರ್ಮಿಸಿರುವ “ಅಘೋರ’ ಚಿತ್ರಕ್ಕೆ ಎನ್‌. ಎಸ್‌ ಪ್ರಮೋದ್‌ ರಾಜ್‌ ನಿರ್ದೇಶನವಿದೆ.

ಇದನ್ನೂ ಓದಿ:ಯುದ್ಧದ ನಡುವೆಯೂ ರಷ್ಯಾಗೆ ಸಿಹಿ ಸುದ್ದಿ ನೀಡಿದ ಡೇನಿಯಲ್ ಮೆಡ್ವೆಡೇವ್

“ಕೆಲವರನ್ನ ನಾವು ಮೊದಲ ಬಾರಿಗೆ ನೋಡಿದ್ರೂ ಅವರು ನಮಗೆ ಮೊದಲೇ ತುಂಬ ಪರಿಚಿತರು ಅನಿಸುತ್ತದೆ. ಅವರೊಂದಿಗೆ ಆತ್ಮೀಯತೆ ಭಾವ ಮೂಡುತ್ತದೆ. ಅವರಿಗೆ ಸ್ಪಂದಿಸಬೇಕು ಅನಿಸುತ್ತದೆ. ಅದೇ ಇನ್ನು ಕೆಲವರನ್ನ ನೋಡಿದ್ರೆ, ಅವರು ನಮಗೇನೂ ಮಾಡದಿದ್ದರೂ, ನಮಗೇ ಗೊತ್ತಿಲ್ಲದಂತೆ ಅವರ ಮೇಲೆ ನಮಗೆ ಕೋಪ ಬರುತ್ತದೆ. ಅವರು ನಮಗೆ ಎಷ್ಟೇ ಹತ್ತಿರವಿದ್ರೂ, ನಾವೇ ದೂರ ಹೋಗ್ಬೇಕು ಅನಿಸುತ್ತದೆ. ನಮಗೆ ಸಹಾಯ ಮಾಡುವ ಮನೋಭಾವವಿದ್ದರೂ, ಅಂಥವರನ್ನು ನೋಡಿದ್ರೆ ನಾವು ಸಹಾಯ ಮಾಡಲ್ಲ. ಎಲ್ಲರಿಗೂ ಇಂಥದ್ದೊಂದು ಅನುಭವವಾಗಿರುತ್ತದೆ. ಯಾಕೆ ಹೇಗೆ? ಅಂದ್ರೆ, ಅದೆಲ್ಲದಕ್ಕೂ ಕಾರಣ ಕರ್ಮಫ‌ಲ!. ಈ ಪೂರ್ವ ಜನ್ಮದ ನಂಟು ಪ್ರೀತಿ, ಮೋಸ ಎಲ್ಲವನ್ನೂ ಮಾಡುತ್ತದೆ’ ಎನ್ನುವುದು “ಅಘೋರ’ ಚಿತ್ರತಂಡದ ಮಾತು.

ಋಣ ಮತ್ತು ಕರ್ಮಫ‌ಲದ ಆಧಾರದ ಮೇಲೆ “ಅಘೋರ’ ಚಿತ್ರದ ಕಥೆ ಮತ್ತು ಪಾತ್ರಗಳು ಸಾಗುತ್ತದೆ ಎಂದು ಕಥಾಹಂದರದ ವಿವರಣೆ ಕೊಡುತ್ತದೆ ಚಿತ್ರತಂಡ. ಇದೇ ಫೆ. 26ಕ್ಕೆ “ಅಘೋರ’ ಚಿತ್ರದ ಮೊದಲ ಪಬ್‌ ಸಾಂಗ್‌ ಬಿಡುಗಡೆ ಯಾಗಲಿದ್ದು, ಮಾರ್ಚ್‌ 4ಕ್ಕೆ ಚಿತ್ರ ತೆರೆಗೆ ಬರಲಿದೆ.

ಟಾಪ್ ನ್ಯೂಸ್

bjp-congress

BJP vs Congress ; ಕೇಸ್‌ ಮೇಲೆ ಕೇಸ್‌

isrel netanyahu

India ವರ, ಇರಾಕ್‌, ಇರಾನ್‌ ಶಾಪ: ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು 

1-ATM

ATM ದರೋಡೆಕೋರರ ಬೆನ್ನತ್ತಿ ರೋಚಕ ಕಾರ್ಯಾಚರಣೆ

BJP 2

CM Siddaramaiah ಕಂಡಲ್ಲೆಲ್ಲ ಕಪ್ಪುಪಟ್ಟಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜು

1-mali

Karnataka; ಮಳಿಗೆಯಲ್ಲಿ 10 ಸಿಬಂದಿ ಇದ್ದರೆ 24 ತಾಸೂ ವ್ಯವಹಾರಕ್ಕೆ ಅವಕಾಶ

Sunita williams

Sunita Williams;ಬಾಹ್ಯಾಕಾಶದಿಂದ ಕರೆ ತರುವ ಕಾರ್ಯ ಆರಂಭ

naksal (2)

Karnataka; ರಾಜ್ಯದ ಆರು ನಕ್ಸಲರಿಂದ ಶರಣಾಗತಿಗೆ ಒಲವು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

moksha Kushal recent photoshoot

Moksha Kushal: ಹಾಟ್‌ ಫೋಟೋಶೂಟ್‌ನಲ್ಲಿ ಮೋಕ್ಷಾ ಮಿಂಚು

Ramesh Aravind spoke about bhairadevi movie

Bhairadevi; ಈ ಚಿತ್ನ ನನಗೆ ಆಪ್ತಮಿತ್ರ ನೆನಪಿಸಿತು…: ರಮೇಶ್‌ ಅರವಿಂದ್‌

Sandalwood; ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಸ್ಯಾಂಡಲ್‌ವುಡ್‌ನ‌ಲ್ಲಿ ಪಾರ್ಟ್‌-2 ಕ್ರೇಜ್‌

Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್‌ವುಡ್‌ನ‌ ಪಾರ್ಟ್‌-2 ಕ್ರೇಜ್‌

upendra

Upendra Movie: ರೀ ರಿಲೀಸ್‌ ನಲ್ಲೂ ʼಉಪೇಂದ್ರʼನಿಗೆ ಜೈ ಎಂದ ಪ್ರೇಕ್ಷಕ

night road kannada movie

Nite Road; ಇಂದು ತೆರೆಗೆ ಬರುತ್ತಿದೆ ಕ್ರೈಂ ಕಹಾನಿ ʼನೈಟ್‌ ರೋಡ್‌ʼ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

028

IPL players: ಐಪಿಎಲ್‌ ಆಟಗಾರರಿಗೆ ಬಂಪರ್‌ ಸಂಭಾವನೆ

bjp-congress

BJP vs Congress ; ಕೇಸ್‌ ಮೇಲೆ ಕೇಸ್‌

085

Puttur: ಕಾಂಗ್ರೆಸ್‌ ಕಾರ್ಯಕರ್ತನದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್‌

isrel netanyahu

India ವರ, ಇರಾಕ್‌, ಇರಾನ್‌ ಶಾಪ: ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು 

1-ATM

ATM ದರೋಡೆಕೋರರ ಬೆನ್ನತ್ತಿ ರೋಚಕ ಕಾರ್ಯಾಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.