ಅಗೋಳಿ ಮಂಜಣ್ಣ ಸಿದ್ಧತೆ ಜೋರು
ನವೆಂಬರ್ 26ರಂದು ಟೀಸರ್ ರಿಲೀಸ್
Team Udayavani, Nov 20, 2020, 5:38 PM IST
“ಅಗೋಳಿ ಮಂಜಣ್ಣ’ -ಈ ಹೆಸರನ್ನು ದಕ್ಷಿಣ ಕನ್ನಡದ ಮಂದಿ ಕೇಳಿರುತ್ತಾರೆ. ಅಗೋಳಿ ಮಂಜಣ್ಣ ತುಳುನಾಡಿನ ವೀರಪುರುಷ. ಈಗ ಈ ವೀರಪುರುಷನ ಕುರಿತಾಗಿ ಸಿನಿಮಾ ಮಾಡಲು ಸಮಾನ ಮನಸ್ಕರು ಒಂದಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್‌ಕುಮಾರ್ ಕಟೀಲು ನಾಯಕರಾಗಿ ನಟಿಸುತ್ತಿದ್ದು, ಈಗಾಗಲೇ ಪಾತ್ರಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಪೂರ್ವತಯಾರಿ ಜೋರಾಗಿ ನಡೆಯುತ್ತಿದ್ದು, ನವೆಂಬರ್ 26ರಂದು ಚಿತ್ರದ ಟೀಸರ್ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಸುಧೀರ್ ಅತ್ತಾವರ್ ಈ ಚಿತ್ರದ ನಿರ್ದೇಶಕ
ಕನ್ನಡ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರೋಹಿತ್‌ಕುಮಾರ್‌ಕಟೀಲ್ ಅವರು ಕೂಡಾ ಈ ಪಾತ್ರದ ಬಗ್ಗೆ ಎಕ್ಸೆ„ಟ್ ಆಗಿದ್ದಾರೆ. ಈ ಮೂಲಕ ಮತ್ತಷ್ಟು ಪ್ರೇಕ್ಷಕರಿಗೆ ಹತ್ತಿರವಾಗುವ ವಿಶ್ವಾಸವಿದೆ. ಚಿತ್ರಕ್ಕಾಗಿ ದೇಹವನ್ನು ಹುರಿಯಾಗಿಸುವುದರ ಜೊತೆಗೆ,ಕುದುರೆ ಸವಾರಿ,ಕತ್ತಿ ವರಸೆ,ಕುಸ್ತಿ ಮೊದಲಾದಕಲೆಗಳನ್ನು ರೋಹಿತ್ ಈಗಾಗಲೇ ಕಲಿಯಲು ಆರಂಭಿಸಿದ್ದಾರೆ.
ಸದ್ಯ ಈ ಚಿತ್ರದ ಪೂರ್ವತಯಾರಿ ಜೋರಾಗಿ ನಡೆಯುತ್ತಿದ್ದು, ನವೆಂಬರ್26ರಂದು ಚಿತ್ರದ ಟೀಸರ್ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಸಕ್ಸಸ್ ಫಿಲಂಸ್ ಪ್ರೊಡಕ್ಷನ್ ನಲ್ಲಿ ಚಿತ್ರ ತಯಾರಾಗುತ್ತಿದೆ. “ತುಳುನಾಡಿನ ವೀರಪುರುಷ ಎಂದೇ ಹೆಸರಾದ “ಅಗೋಳಿ ಮಂಜಣ್ಣ’ ಒಬ್ಬ ಅಸಾಧ್ಯ ಧೈರ್ಯ ಶಾಲಿ. ಅದು ಎಷ್ಟರಮಟ್ಟಿಗೆ ಅಂದರೆ, ಒಂದೇ ಬಾರಿಗೆ ಹತ್ತು ಮೂಟೆ ಅಕ್ಕಿ ಎತ್ತಬಲ್ಲಂತಹ ಬಲಶಾಲಿ. ಮಂಗಳೂರಿನ ಮುಲ್ಕಿ ಸೀಮೆಯ ಅಧಿಪತಿ ಎನಿಸಿಕೊಂಡಿದ್ದ “ಅಗೋಳಿ ಮಂಜಣ್ಣ’, ಸುಮಾರು 200 ವರ್ಷಗಳ ಹಿಂದೆ ಮಂಗಳೂರಿನ ಸುರತ್ಕಲ್ ಸಮೀಪದ ಚೇಳ್ಯಾರ್ ಗುತ್ತಿನಲ್ಲಿ ಬದುಕು ಸವೆಸಿದ್ದರು. ಅವರ ರೋಚಕವಾದ ಸಾಹಸಮಯ ಜನಪದಕಥೆ ಚಿತ್ರದ ಜೀವಾಳ.
ಇದನ್ನೂ ಓದಿ : ಗಡಿಯಾರ ರಿಲೀಸ್ ಗೆ ಟೈಮ್ ಫಿಕ್ಸ್! : ಕಮರ್ಷಿಯಲ್ ಟಚ್‌ನಲ್ಲಿ ಕಾಲದ ಕಥೆ
ಈ ಚಿತ್ರದಲ್ಲಿ ಅಗೋಳಿ ಮಂಜಣ್ಣ ಅವರ ಬಗ್ಗೆ ಗೊತ್ತಿರದ ಸೂಕ್ಷ್ಮತೆಯ ವಿಷಯಗಳು, ಅಚ್ಚರಿ ಎನಿಸುವ ಅಂಶಗಳು ಮೂಡಿಬರಲಿವೆ. ಅಗೋಳಿ ಮಂಜಣ್ಣ ಅವರ ಬಗ್ಗೆ ಯಾರೂ ಅಷ್ಟೊಂದುಅಧ್ಯಯನ ಮಾಡಿಲ್ಲ. ಮಾಡಿದ್ದರೂ,ಕೆಲವುಅಪರೂಪ ಎನಿಸುವಂತಹ ಅಂಶಗಳನ್ನೇಕೈಬಿಡಲಾಗಿದೆ.200 ವರ್ಷಗಳ ಹಿಂದೆ ಬದುಕಿ, ಹೆಸರು ಮಾಡಿದ್ದ ಶಕ್ತಿಶಾಲಿ ಅಗೋಳಿ ಮಂಜಣ್ಣ ಅವರ ಬಗ್ಗೆ ಸಮಗ್ರವಾಗಿ ಹೇಳುವ ಪ್ರಯತ್ನ ಇಲ್ಲಿಮಾಡಲಾಗುತ್ತಿದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ, ಅಗೋಳಿ ಮಂಜಣ್ಣ ಅವರು ಮದುವೆ ಆಗಿದ್ದರೋ, ಇಲ್ಲವೋ ಎಂಬ ಪ್ರಶ್ನೆ ಇದೆ. ಆ ಪ್ರಶ್ನೆಗೆ ಈ ಚಿತ್ರದಲ್ಲಿ ನಿಖರವಾದ ಉತ್ತರ ಸಿಗಲಿದೆ.
ಚಿತ್ರದಲ್ಲಿ ನಾಯಕರಾಗಿ ರೋಹಿತ್ ಕುಮಾರ್ ಕಟೀಲ್ ನಟಿಸಿದರೆ, ವಿನಯಾ ಪ್ರಸಾದ್, ರಾಮಕೃಷ್ಣ, ಐಶಾನಿ ಶೆಟ್ಟಿ, ದುನಿಯಾ ರಶ್ಮಿ, ಅರವಿಂದ ಬೋಳಾರ್ ನಟಿಸುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ಮಾಜಿ ಸಚಿವರಾದ ಅಭಯ ಚಂದ್ರ ಜೈನ್ ಮತ್ತು ಡಾ.ಮೋಹನ್ ಆಳ್ವ ಅವರೂ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.