ಡಿ.23 ರಂದು ಅಗೋಳಿ ಮಂಜಣ್ಣ ಟೀಸರ್
Team Udayavani, Dec 14, 2018, 6:00 AM IST
ತುಳುನಾಡಿನ ವೀರಪುರುಷ “ಅಗೋಳಿ ಮಂಜಣ್ಣ’ ಅವರ ಕುರಿತು ಅದೇ ಹೆಸರಿನ ಸಿನಿಮಾ ಆಗುತ್ತಿರುವುದು ಗೊತ್ತೇ ಇದೆ. ಈಗ ಹೊಸ ಸುದ್ದಿ ಅಂದರೆ, ಆ ಚಿತ್ರದ ಟೀಸರ್ ಡಿ.23 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಸುಮಾರು ಒಂದುವರೆ ನಿಮಿಷದ ಟೀಸರ್ ಅನ್ನು ಕಾರ್ಕಳದ ಕಟೀಲ್ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಚಿತ್ರರಂಗದ ಗಣ್ಯರು ಬಿಡುಗಡೆ ಮಾಡುತ್ತಿರುವುದು ವಿಶೇಷ. ಅಂದಹಾಗೆ, “ಅಗೋಳಿ ಮಂಜಣ್ಣ’ ಶಕ್ತಿ ಶಾಲಿ ವ್ಯಕ್ತಿಯ ಚಿತ್ರಣವಾಗಿದ್ದು, ಮಂಗಳೂರಿನ ಮುಲ್ಕಿ ಸೀಮೆಯ ಅಧಿಪತಿ ಎನಿಸಿಕೊಂಡಿದ್ದ “ಅಗೋಳಿ ಮಂಜಣ್ಣ’, ಸುಮಾರು 200 ವರ್ಷಗಳ ಹಿಂದೆ ಮಂಗಳೂರಿನ ಸುರತ್ಕಲ್ ಸಮೀಪದ ಚೇಳಾರ್ ಗುತ್ತಿನಲ್ಲಿ ಬದುಕು ಸವೆಸಿದ್ದರು. ಅವರ ರೋಚಕವಾದ ಸಾಹಸಮಯ ಜನಪದ ಕಥೆವುಳ್ಳ ಈ ಚಿತ್ರವನ್ನು ಸುಧೀರ್ ಅತ್ತಾವರ್ ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆಗೆ “ಸೂಪರ್ ಮ್ಯಾನ್ ಆಫ್ ತುಳುನಾಡು’ ಎಂಬ ಅಡಿಬರಹವಿದ್ದು, ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್‌ಕುಮಾರ್ ಕಟೀಲು ಅವರು ಅಗೋಳಿ ಮಂಜಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ತುಳು ಚಿತ್ರರಂಗದಲ್ಲೇ ಇದೊಂದು ಅದ್ಧೂರಿ ಬಜೆಟ್‌ನ ಚಿತ್ರ. ತುಳು ಸೇರಿದಂತೆ ಕನ್ನಡ ಮತ್ತು ಮರಾಠಿ ಈ ಮೂರು ಭಾಷೆಯಲ್ಲೂ ತಯಾರಾಗುತ್ತಿರುವುದು ವಿಶೇಷತೆಗಳಲ್ಲೊಂದು.
ಈ ಚಿತ್ರಕ್ಕೆ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಅವರ ನಿರ್ಮಾಣವಿದೆ. ಮುಂಬೈನ ಸಕ್ಸಸ್ ಫಿಲ್ಮ್ಸ್ ಇಂಡಿಯಾ ಬ್ಯಾನರ್‌ನಡಿ ಚಿತ್ರ ತಯಾರಾಗುತ್ತಿದೆ. ಚಿತ್ರದ ಹೀರೋ ರೋಹಿತ್‌ಕುಮಾರ್ ಕಟೀಲ್ ಅವರಿಗೆ ನಾಯಕಿಯಾಗಿ ಗುಜರಾತಿ ಚಿತ್ರರಂಗದ ಹಿಮಾಂಗಿನಿ ನಟಿಸುತ್ತಿದ್ದಾರೆ. ಚಿತ್ರದ ಮತ್ತೂಂದು ವಿಶೇಷವೆಂದರೆ, ಮಾಜಿ ಸಚಿವರಾದ ಅಭಯ ಚಂದ್ರ ಜೈನ್ ಮತ್ತು ಡಾ.ಮೋಹನ್ ಆಳ್ವ ಅವರೂ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ನಿರ್ದೇಶಕರ ಮಾತು.
ಚಿತ್ರಕ್ಕೆ ಬಾಲಿವುಡ್‌ನ ಶಫಿಖಾನ್ ಛಾಯಾಗ್ರಹಣ ಮಾಡಿದರೆ, ಚಂದ್ರಕಾಂತ್ ಅವರು ಸಂಗೀತ ನೀಡುತ್ತಿದ್ದಾರೆ. ವಿದ್ಯಾಧರ್ ಅವರ ಸಂಕಲನವಿದೆ. ಮಾಸ್ ಮಾದ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಹಾಗು ಸಂಭಾಷಣೆಯಲ್ಲಿ ಪ್ರೊಫೆಸರ್ ಜಯಪ್ರಕಾಶ್ ಮಾವಿನಕುಳಿ, ರಾಜಶೇಖರ್ ಜೋಗಿನ್ಮನೆ ಸಾಥ್ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
Ayogya 2: ಇಲ್ಲಿ ಎಲ್ಲವೂ ಡಬಲ್ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ
Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.