ಅಜೇಯ ವಿಜಯ: ಕೃಷ್ಣ ಟಾಕೀಸ್‌ ಬಗ್ಗೆ ಕೃಷ್ಣನ್‌ ಟಾಕ್‌!

Team Udayavani, Apr 16, 2021, 8:10 AM IST

ಅಜೇಯ ವಿಜಯ: ಕೃಷ್ಣ ಟಾಕೀಸ್‌ ಬಗ್ಗೆ ಕೃಷ್ಣನ್‌ ಟಾಕ್‌!

“ನಾನು ಸಿನಿಮಾ ಇಂಡಸ್ಟ್ರಿಗೆ ಬಂದು 20 ವರ್ಷವಾಯ್ತು. ಇಲ್ಲಿಯವರೆಗೆ ಯಾವ ಸಿನಿಮಾಗಳಲ್ಲೂ ಸಿಕ್ಕಿರದಂಥ ಕ್ಯಾರೆಕ್ಟರ್‌ “ಕೃಷ್ಣ ಟಾಕೀಸ್‌’ನಲ್ಲಿ ಸಿಕ್ಕಿದೆ. ಕೃಷ್ಣ ಸೀರಿಸ್‌ ಜನಕ್ಕೆ ಇಷ್ಟವಾಗುತ್ತಿದ್ದಂತೆ, ಆಡಿಯನ್ಸ್‌, ನನ್ನ ಫ್ಯಾನ್ಸ್‌ ಕೂಡ ಹೊಸಥರದ ಪಾತ್ರದಲ್ಲಿ ನನ್ನನ್ನು ನೋಡಲು ಬಯಸುತ್ತಿದ್ದರು. ಅವರೆಲ್ಲರಿಗೂ ಸರ್‌ಪ್ರೈಸ್‌ ಅನಿಸುವಂಥ ಕ್ಯಾರೆಕ್ಟರ್‌ “ಕೃಷ್ಣ ಟಾಕೀಸ್‌’ನಲ್ಲಿದೆ. ಹಾಗಾಗಿ ನನಗೂ “ಕೃಷ್ಣ ಟಾಕೀಸ್‌’ ಮೇಲೆ ತುಂಬ ನಿರೀಕ್ಷೆ ಇದೆ’ ಇದು ನಟ ಅಜೇಯ್‌ ರಾವ್‌ ಮಾತು.

ಈ ವಾರ ಅಜೇಯ್‌ ರಾವ್‌ ಅಭಿನಯದ “ಕೃಷ್ಣ ಟಾಕೀಸ್‌’ ಚಿತ್ರ ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ಮಾತಿಗಿಳಿದ ಅಜೇಯ್‌ ರಾವ್‌ “ಕೃಷ್ಣ ಟಾಕೀಸ್‌’ ಚಿತ್ರ ಮತ್ತು ಪಾತ್ರದ ಬಗ್ಗೆ ಒಂದಷ್ಟು ಮಾತನಾಡಿದರು.

“ಇಲ್ಲಿಯವರೆಗೆ “ಕೃಷ್ಣ’ ಸೀರಿಸ್‌ನಲ್ಲಿ ನಾನು ಮಾಡಿರುವ ಕ್ಯಾರೆಕ್ಟರ್‌ಗಳು ಲೈವ್ಲಿಯಾಗಿ, ರೊಮ್ಯಾಂಟಿಕ್‌ ಆಗಿ ಇರುತ್ತಿದ್ದವು. ಆದ್ರೆ “ಕೃಷ್ಣ ಟಾಕೀಸ್‌’ನಲ್ಲಿ ತುಂಬ ಸೀರಿಯಸ್‌ ಆಗಿರುವಂಥ ಕ್ಯಾರೆಕ್ಟರ್‌ ಸಿಕ್ಕಿದೆ. ಇದರಲ್ಲಿ ನನ್ನದು ಒಬ್ಬ ಜರ್ನಲಿಸ್ಟ್‌ ಕ್ಯಾರೆಕ್ಟರ್‌. ನನ್ನ ಕ್ಯಾರೆಕ್ಟರ್‌, ಮ್ಯಾನರಿಸಂ ಎಲ್ಲವೂ ಬೇರೆಯದ್ದೇ ಆಗಿರುತ್ತದೆ.

ಈಗಾಗಲೇ “ಕೃಷ್ಣ ಟಾಕೀಸ್‌’ ಪೋಸ್ಟರ್‌, ಟೀಸರ್‌, ಟ್ರೇಲರ್‌ ಎಲ್ಲದರಲ್ಲೂ ಅದರ ಝಲಕ್‌ ಕಾಣುತ್ತದೆ. ಆಡಿಯನ್ಸ್‌ ಕೂಡ ಈ ಸೋಶಿಯಲ್‌ ಮೀಡಿಯಾದಲ್ಲಿ ಇಂಥದ್ದೊಂದು ಚೇಂಜ್‌ ಓವರ್‌ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ’ ಎನ್ನುತ್ತಾರೆ ಅಜೇಯ್‌ ರಾವ್‌. ಇನ್ನು “ಕೃಷ್ಣ ಟಾಕೀಸ್‌’ ಚಿತ್ರ ಅಂದುಕೊಂಡಂತೆ ತೆರೆಮೇಲೆ ಮೂಡಿಬರಲು ಕಾರಣ ಚಿತ್ರತಂಡದ ಎಫ‌ರ್ಟ್‌ ಅನ್ನೋದು ಅಜೇಯ್‌ ಮಾತು.

“ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಈ ಸಿನಿಮಾದ ಕೆಲಸಗಳು ಶುರುವಾಯ್ತು. ಅದಾದ ನಂತರ ಒಂದು ವರ್ಷ ಕೋವಿಡ್‌ ಭಯದಿಂದ ಏನೂ ಮಾಡಲಾಗಲಿಲ್ಲ. ಸಾಕಷ್ಟು ಅಡೆ-ತಡೆಗಳು, ಕಷ್ಟಗಳು ಇದ್ದರೂ ನಿರ್ಮಾಪಕರು, ನಿರ್ದೇಶಕರು ಅಂದುಕೊಂಡಂತೆ ಸಿನಿಮಾ ಮಾಡಿದ್ದಾರೆ. ಇಡೀ ಟೀಮ್‌ ಎಫ‌ರ್ಟ್‌ನಿಂದ ಇಂಥದ್ದೊಂದು ಸಿನಿಮಾ ಅದ್ಭುತವಾಗಿ ಮಾಡಲು ಸಾಧ್ಯವಾಯ್ತು’ ಎನ್ನುತ್ತಾರೆ ಅಜೇಯ್‌.

“ಈಗಾಗಲೇ ರಿಲೀಸ್‌ ಆಗಿರುವ “ಕೃಷ್ಣ ಟಾಕೀಸ್‌’ನ ಟೀಸರ್‌, ಟ್ರೇಲರ್‌, ಸಾಂಗ್ಸ್‌ ಎಲ್ಲವೂ ಹಿಟ್‌ ಆಗಿದೆ. ಆಡಿಯನ್ಸ್‌ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್‌ ಸಿಕ್ತಿದೆ. ಹೊರಗಡೆ ಕೋವಿಡ್‌ ಭಯ ಇದ್ರೂ, ಥಿಯೇಟರ್‌ನಲ್ಲಿ ಆ ಭಯ ಬೇಡ. ಕಂಟೆಂಟ್‌ ನೋಡಿ ಭಯಪಡುವಂಥ ಸಿನಿಮಾ ಇದು. ಆಡಿಯನ್ಸ್‌ನ ಎರಡೂವರೆ ಗಂಟೆ ಹಿಡಿದು ಕೂರಿಸಿ, ಹೊರ ಜಗತ್ತನ್ನು ಮರೆಯುವಂಥ ಮಾಡುವ ಸಿನಿಮಾ ಇದು’ ಎಂದು ಪ್ರೇಕ್ಷಕರಿಗೆ ಅಭಯ ನೀಡುವ ಮಾತುಗಳನ್ನಾಡುತ್ತಾರೆ ಅಜೇಯ್‌ ರಾವ್‌.

ಇನ್ನು ಸಸ್ಪೆನ್ಸ್‌ ಕಂ ಹಾರರ್‌ – ಥ್ರಿಲ್ಲರ್‌ ಶೈಲಿಯ “ಕೃಷ್ಣ ಟಾಕೀಸ್‌’ನಲ್ಲಿ ಅಜೇಯ್‌ ರಾವ್‌ಗೆ ಅಪೂರ್ವ ಮತ್ತು ಸಿಂಧೂ ಲೋಕನಾಥ್‌ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿಕ್ಕಣ್ಣ, ನಿರಂತ್‌, ಮಂಡ್ಯ ರಮೇಶ್‌, ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ತುಮ್ಮಿನಾಡು, ಶೋಭರಾಜ್‌, ಯಶ್‌ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಶ್ರೀಧರ್‌ ವಿ. ಸಂಭ್ರಮ್‌ ಸಂಗೀತವಿದೆ.

ಕೆಲವರ್ಷಗಳ ಹಿಂದೆ ಲಕ್ನೋದ ಥಿಯೇಟರ್‌ನಲ್ಲಿ ನಡೆದ ಘಟನೆ ಕುರಿತು, ನ್ಯೂಸ್‌ ಪೇಪರ್‌ನಲ್ಲಿ ಬಂದ ಸುದ್ದಿ ಈ ಚಿತ್ರದ ಕಥೆಗೆ ಕಾರಣವಾಯ್ತು. ಸುಮಾರು 2 ವರ್ಷ ಸ್ಕ್ರಿಪ್ಟ್ ವರ್ಕ್‌ ನಂತರ, ಆ ಕಥೆ ಅಂತಿಮವಾಗಿ ಈಗ ಸಿನಿಮಾ ರೂಪದಲ್ಲಿ ಸ್ಕ್ರೀನ್‌ ಮೇಲೆ ಬರುತ್ತಿದೆ. ಕನ್ನಡದಲ್ಲಿ ಈ ಥರದ ಹಾರರ್‌-ಥ್ರಿಲ್ಲರ್‌ ಸಿನಿಮಾ ಬಂದಿದ್ದು ತುಂಬ ಕಡಿಮೆ. ಖಂಡಿತಾ ಈ ಸಿನಿಮಾ ನಮ್ಮೆಲ್ಲರಿಗೂ ಒಂದೊಳ್ಳೆ ಬ್ರೇಕ್‌ ನೀಡುತ್ತದೆ ಎಂಬ ಕಾನ್ಫಿಡೆನ್ಸ್‌ ಇದೆ.

  • ವಿಜಯಾನಂದ್‌, ನಿರ್ದೇಶಕ

ಕನ್ನಡದ ಮಟ್ಟಿಗೆ ಇದೊಂದು ಹೊಸಥರದ ಸಿನಿಮಾ. ಈಗಾಗಲೇ “ಕೃಷ್ಣ ಟಾಕೀಸ್‌’ನ ಟೀಸರ್‌, ಟ್ರೇಲರ್‌, ಸಾಂಗ್ಸ್‌ ಎಲ್ಲವೂ ಹಿಟ್‌ ಆಗಿದೆ. ಸಿನಿಮಾ ಸ್ವಲ್ಪ ಲೇಟ್‌ ಆದ್ರೂ, ಲೇಟೆಸ್ಟ್‌ ಆಗಿ ಬರುತ್ತಿದೆ. ಆಡಿಯನ್ಸ್‌ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್‌ ಸಿಗ್ತಿದೆ. ಸುಮಾರು 250ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಸಿನಿಮಾ ರಿಲೀಸ್‌ಗೆ ಪ್ಲಾನ್‌ ಮಾಡಿಕೊಂಡಿದ್ದೇವೆ. ಆಡಿಯನ್ಸ್‌ಗೆ ಸಿನಿಮಾ ಇಷ್ಟವಾಗುತ್ತದೆ ಎಂಬ ನಂಬಿಕೆ ಬಲವಾಗಿದೆ.

  • ಗೋವಿಂದರಾಜು ಆಲೂರು, ನಿರ್ಮಾಪಕ

ಜಿ.ಎಸ್.ಕಾರ್ತಿಕ್ ಸುಧನ್

ಟಾಪ್ ನ್ಯೂಸ್

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ

ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ

7

Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

hejjenu 1

Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.