ವೀಕೆಂಡ್ ಮಜಾ ಮೂಡ್‌ನಲ್ಲಿ ಅಖಿಲಾ
ಮತ್ತೂಂದು ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾದಲ್ಲಿ ಬೋಲ್ಡ್‌ಪಾತ್ರ
Team Udayavani, Nov 13, 2020, 2:13 PM IST
ಸಸ್ಪೆನ್ಸ್ – ಥ್ರಿಲ್ಲರ್ ಕಥಾ ಹಂದರ ಹೊಂದಿದ್ದ”ರತ್ನಮಂಜರಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಸಿನಿಪ್ರಿಯರ ಗಮನ ಸೆಳೆದಿದ್ದ ನಟಿ ಅಖಿಲಾ ಪ್ರಕಾಶ್, ಈಗ ಮತ್ತೂಂದು ಸಸ್ಪೆನ್ಸ್ – ಥ್ರಿಲ್ಲರ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದ್ದಾರೆ. ಅಂದಹಾಗೆ, ಅಖಿಲಾ ಪ್ರಕಾಶ್ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ “ವೀಕೆಂಡ್ ಮಜಾ’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಈ ಚಿತ್ರದ ಟೈಟಲ್ ಮತ್ತು ಫಸ್ಟ್‌ಲುಕ್ ಪೋಸ್ಟರ್ ಹೊರಬಂದಿದೆ.
ಇನ್ನು “ವೀಕೆಂಡ್ ಮಜಾ’ ಚಿತ್ರದ ಬಗ್ಗೆ ಮಾತನಾಡುವ ಅಖಿಲಾ, “ಇದೊಂದು ಪಕ್ಕಾ ಇಂದಿನ ಜನರೇಶನ್ ಹುಡುಗರ ಲೈಫ್ಟ್ ಸ್ಟೈಲ್ ಮತ್ತು ಮಾನಸಿಕತೆ ತೋರಿಸುವಂಥ ಸಿನಿಮಾ. ರೆಸಾರ್ಟ್ ಒಂದರಲ್ಲಿ ವೀಕೆಂಡ್‌ನಲ್ಲಿ ಮೂರು ದಿನದಲ್ಲಿ ನಡೆಯುವ ಘಟನೆಗಳ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಮಹಿಳಾಕೇಂದ್ರಿತ ಕಥೆಯಾಗಿದ್ದು, ನಾಲ್ವರು ಹುಡುಗ – ಹುಡುಗಿಯರ ಮೇಲೆಕಥೆ ನಡೆಯುತ್ತದೆ. ಸಸ್ಪೆನ್ಸ್- ಥ್ರಿಲ್ಲರ್, ಹಾರರ್ ಹೀಗೆ ಎಲ್ಲ ಎಲಿಮೆಂಟ್ಸ್ ಸಿನಿಮಾದಲ್ಲಿದೆ. ಆಡಿಯನ್ಸ್‌ಗೆ ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಇದರಲ್ಲಿ ಸಿಗಲಿದೆ’ ಎನ್ನುತ್ತಾರೆ.
ಇನ್ನು ಹಿಂದಿನ ಚಿತ್ರಕ್ಕಿಂತಲೂ ತುಂಬ ಬೋಲ್ಡ್ ಲುಕ್‌ನಲ್ಲಿ ಅಖಿಲಾ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. “ಇದರಲ್ಲಿ ನಾನು ತುಂಬಾ ಫ್ಯಾಷನೆಬಲ್ ಮತ್ತು ಬೋಲ್ಡ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇಂದಿನಜನರೇಶನ್ ಪ್ರತಿನಿಧಿಸುವ ಮಾಡುವಂಥಕ್ಯಾರೆಕ್ಟರ್ ನನ್ನದು. ಹಿಂದೆಂದೂ ಈ ಥರದ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಮೊದಲ ಬಾರಿಗೆ ಈ ಥರದ ಪಾತ್ರ ಮಾಡುತ್ತಿದ್ದು, ಪಾತ್ರದ ಮೇಲೆ ನನಗೂ ಸಾಕಷ್ಟು ನಿರೀಕ್ಷೆ ಇದೆ’ ಎನ್ನುತ್ತಾರೆ. “ವೀಕೆಂಡ್ ಮಜಾ’ ಚಿತ್ರದಲ್ಲಿ ಅಖಿಲಾ ಪ್ರಕಾಶ್ ಅವರೊಂದಿಗೆ, ನಟ ಡ್ಯಾನಿ ಕುಟ್ಟಪ್ಪ ಮತ್ತೂಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಉಳಿದಂತೆ ಬಹುತೇಕ ಹೊಸ ಪ್ರತಿಭೆಗಳು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ.
ಸದ್ಯ “ವೀಕೆಂಡ್ ಮಜಾ’ ಚಿತ್ರದ ಪ್ರೀ- ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಈಗಾಗಲೇ ಚಿತ್ರತಂಡ ಸ್ಕ್ರೀಪ್ಟ್ ಮತ್ತು ಎರಡು ಹಾಡುಗಳ ರೆಕಾರ್ಡಿಂಗ್‌ಕೆಲಸಗಳನ್ನು ಪೂರ್ಣಗೊಳಿಸಿದೆ. ಮುಂಬರುವ ಜನವರಿ ಮೊದಲ ವಾರದಿಂದ “ವೀಕೆಂಡ್ ಮಜಾ’ ಶೂಟಿಂಗ್ ಪ್ರಾರಂಭವಾಗಲಿದ್ದು, ಮಾರ್ಚ್ ವೇಳೆಗೆ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. “ಮಿಲೇನಿಯಮ್ ಆ್ಯಡ್ ಮೀಡಿಯಾ’ ಬ್ಯಾನರ್ ನಲ್ಲಿ ವ್ಯಾಲರೀನಾ ಮರೀಯಾ ರೋಜಸ್ ನಿರ್ಮಿಸುತ್ತಿರುವ ಚಿತ್ರಕ್ಕೆ ಡಾ. ನೆಲ್ಸನ್ ರೋಜಸ್, ರಮೇಶ್‌ಕೃಷ್ಣ ಜಂಟಿ ಯಾಗಿ ನಿರ್ದೇಶನ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.