ಅಂಬೇಡ್ಕರ್ ತತ್ವದ ಧಾಂಗಡಿ
Team Udayavani, Jul 6, 2018, 6:00 AM IST
ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತಾಗಿ ಈಗಾಗಲೇ ಅನೇಕ ಸಿನಿಮಾಳು ಬಂದಿವೆ. ಕನ್ನಡ ಸೇರಿದಂತೆ ನಾನಾ ಭಾಷೆಗಳಲ್ಲಿ ಅವರ ಹಾದಿಯ ಕುರಿತಾದ ಸಿನಮಾಗಳು ಬಂದಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಧಾಂಗಡಿ’. ಹೌದು, “ಧಾಂಗಡಿ’ ಎಂಬ ಚಿತ್ರವೊಂದು ಚಿತ್ರೀಕರಣ ಮುಗಿಸಿದ್ದು, ಚಿತ್ರ ಇಂದು ತೆರೆಕಾಣುತ್ತಿದೆ. ಅಂಬೇಡ್ಕರ್ ಅವರ ಜೀವನ, ಅವರ ಸಿದ್ಧಾಂತದ ಕುರಿತಾಗಿ ಈ ಸಿನಿಮಾ ಸಾಗುತ್ತದೆಯಂತೆ. ಶರತ್ ಈ ಸಿನಿಮಾದ ನಿರ್ದೇಶಕರು. ಆರಂಭದಲ್ಲಿ ಡಾ.ಸಿದ್ರಾಮ್ ಕಾರಣಿಕ ನಿರ್ದೇಶಕರಾಗಿದ್ದರು. ಆ ನಂತರ ಅವರ ಜಾಗಕ್ಕೆ ಶರತ್ ಬಂದಿದ್ದಾರೆ.
ಶರತ್ ಅವರಿಗೆ ಈ ಪ್ರಾಜೆಕ್ಟ್ ಬಂದಾಗ, ತನ್ನ ಕೈಯಿಂದ ಈ ಸಿನಿಮಾ ಮಾಡಲು ಸಾಧ್ಯನಾ ಎಂದು ಯೋಚಿಸಿದರಂತೆ. ಆ ನಂತರ ಅಂಬೇಡ್ಕರ್ ಕುರಿತಾದ ಪುಸ್ತಕಗಳನ್ನು ಓದಿ, ಸಿನಿಮಾಕ್ಕೆ ಬೇಕಾದ ಅಂಶವನ್ನು ಸಂಗ್ರಹಿಸಿ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು ಶರತ್. ಈ ಸಿನಿಮಾದ ಚಿತ್ರೀಕರಣ ಬೆಳಗಾವಿ ಸುತ್ತಮುತ್ತ ನಡೆದಿದೆ. ಅಮಾವಾಸ್ಯೆಯ ದಿನ ಆರಂಭವಾದ ಚಿತ್ರೀಕರಣಕ್ಕೆ ಅಮಾವಾಸ್ಯೆಯ ದಿನವೇ ಕುಂಬಳಕಾಯಿ ಒಡೆಯಲಾಗಿದೆ. ಈ ಮೂಲಕ ಚಿತ್ರ ಮೂಢನಂಬಿಕೆಯ ವಿರುದ್ಧ ಎಂಬುದನ್ನು ತೋರಿಸಿಕೊಟ್ಟಿದೆ.
ಈ ಚಿತ್ರವನ್ನು ಸುರೇಂದ್ರ ಉಗಾರೆ ನಿರ್ಮಿಸಿದ್ದಾರೆ. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಜನರಿಗೆ ತಿಳಿಯಪಡಿಸುವ ಉದ್ದೇಶದಿಂದ ಈ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು ಅವರು. ಜೊತೆಗೆ ಮುಂದಿನ ದಿನಗಳಲ್ಲಿ ಗೌತಮ ಬುದ್ಧ ಹಾಗೂ ಟಿಪ್ಪು ಸುಲ್ತಾನ್ ಕುರಿತ ಸಿನಿಮಾ ಮಾಡುವುದಾಗಿ ಘೋಷಿಸಿದರು. ಈ ಚಿತ್ರದಲ್ಲಿ ಸಂಜು, ಬಿರಾದಾರ್, ಡಾ.ಸಿದ್ರಾಮ್ ಕಾರಣಿಕ, ಕನಕ ಲಕ್ಷ್ಮೀ, ಡಾ.ಸವಿತಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಪ್ರಮೋದ್ ಸಂಗೀತ ನೀಡಿದ್ದಾರೆ. ಚಿತ್ರವನ್ನು ವೆಂಕಟ್ ಸುಮಾರು 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.