![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Oct 16, 2020, 1:19 PM IST
ಚಿತ್ರಮಂದಿರ ತೆರೆಯುತ್ತಿದ್ದಂತೆನಿಧಾನವಾಗಿ ಒಂದೊಂದೇ ಸಿನಿಮಾಗಳು ಬಿಡುಗಡೆಯ ಹಂತಕ್ಕೆ ಬರುತ್ತಿವೆ. ಈ ಮೂಲಕ ಚಿತ್ರರಂಗ ಮತ್ತೆ ಗರಿಗೆದರುವ ಲಕ್ಷಣಗಳುಕಾಣುತ್ತಿವೆ. ಮುಖ್ಯವಾಗಿ ಹೊಸಬರು ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಚಿತ್ರಗಳನ್ನು ಬಿಡುಗಡೆ ಮಾಡಲಿದ್ದಾರೆ. ಈ ಸಾಲಿಗೆ “ಅಮೃತಾ ಅಪಾರ್ಟ್ ಮೆಂಟ್’ ಚಿತ್ರವೂ ಸೇರುತ್ತದೆ.
ಜಿ-9ಕಮ್ಯುನಿಕೇಶನ್ ಮೀಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು, ಸೆನ್ಸಾರ್ ಅಂಗಳದಲ್ಲಿದೆ. ಗುರುರಾಜ ಕುಲಕರ್ಣಿ (ನಾಡಗೌಡ) ರಚಿಸಿ ನಿರ್ಮಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ತಾರಕ ಪೊನ್ನಪ್ಪ,ಊರ್ವಶಿ ಗೋವರ್ಧನ ನಾಯಕ -ನಾಯಕಿಯಾಗಿ ನಟಿಸಿದ್ದಾರೆ. ಬಾಲಾಜಿ ಮನೋಹರ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಸಂಪತ್‌ಕುಮಾರ ತಮ್ಮ ಎಂದಿನ ನೈಜ ನಟನೆಯಿಂದ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟಿ ಮಾನಸ ಜೋಷಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದು, ಸೀತಾ ಕೋಟೆ ಲಾಯರ್‌ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಕಿದ್ದಾರೆ. ಉಳಿದಂತೆ ರಂಗಭೂಮಿ ಕಲಾವಿದರಾದ, ಸಿತಾರಾ, ಮಾಲತೇಶ, ರಾಜ ನೀನಾಸಂ, ಜಗದೀಶ ಜಾಲಾ, ರಂಗಸ್ವಾಮಿ, ಶಂಕರ ಶೆಟ್ಟಿ, ವೈಷ್ಣವಿ ಮೊದಲಾದ ಕಲಾವಿದರು ನಟಿಸಿದ್ದಾರೆ.ಈ ಚಿತ್ರಕ್ಕೆ ಬಿ, ಎಸ್.ಕೆಂಪರಾಜ್‌ರವರ ಸಂಕಲನವಿದ್ದು,ಅರ್ಜುನ್ ಅಜಿತ್ ಛಾಯಾಗ್ರಹಣ ಚಿತ್ರಕ್ಕಿದೆ. ಎಸ್. ಡಿ ಅರವಿಂದ್ ಮೂರು ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.