ಹುಡುಗರ ಕಥೆ ನಿಮ್ಮ ಜೊತೆ
Team Udayavani, Nov 16, 2018, 6:00 AM IST
ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ “ಸೆಕೆಂಡ್ ಹಾಫ್’ ಚಿತ್ರದಲ್ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ನಟಿಸಿದ್ದು ನಿಮಗೆ ಗೊತ್ತಿರಬಹುದು. ಆ ಚಿತ್ರದ ನಂತರ ನಿರಂಜನ್ ಬೇರೆ ಯಾವ ಸಿನಿಮಾ ಮೂಲಕವೂ ಸುದ್ದಿಯಾಗಿರಲಿಲ್ಲ. ಈಗ ನಿರಂಜನ್ ಹೊಸ ಸಿನಿಮಾದ ಮೂಲಕ ಬರುತ್ತಿದ್ದಾರೆ. ಅದು “ನಮ್ ಹುಡುಗರ ಕಥೆ’. ಇದು ನಿರಂಜನ್ ಸೋಲೋ ಹೀರೋ ಆಗಿ ನಟಿಸುತ್ತಿರುವ ಮೊದಲ ಸಿನಿಮಾ. ಇತ್ತೀಚೆಗೆ ಈ ಸಿನಿಮಾಕ್ಕೆ ಮುಹೂರ್ತ ನಡೆಯಿತು. ಗವಿಸಿದ್ಧಪ್ಪ ಈ ಚಿತ್ರದ ನಿರ್ದೇಶಕರು. ಸುಮಾರು 10 ವರ್ಷಗಳಿಂದ ಹಲವು ನಿರ್ದೇಶಕರ ಬಳಿ ಕೆಲಸ ಮಾಡಿದ್ದ ಗವಿಸಿದ್ಧಪ್ಪ ಅವರಿಗೆ ಇದು ಚೊಚ್ಚಲ ಸಿನಿಮಾ. ಈಗ ತಮ್ಮ ಮೊದಲ ಸಿನಿಮಾದಲ್ಲೇ ಹೆಸರು ಬದಲಿಸಿಕೊಂಡಿದ್ದು, ಎಚ್.ಬಿ.ಸಿದ್ದು ಎಂಬ ಹೆಸರಿನೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ.
ಸಿದ್ದು ಕಥೆ ಮಾಡಿಕೊಂಡು ಹೀರೋಗಾಗಿ ಹುಡುಕಾಟ ನಡೆಸುತ್ತಿದ್ದರಂತೆ. ಅವರ ಕಥೆಗೆ ವಿಭಿನ್ನ ಮ್ಯಾನರೀಸಂ ಇರುವ ಹೀರೋ ಬೇಕಾದ ಕಾರಣ, ಸಾಕಷ್ಟು ಹುಡುಕಾಟ ನಡೆಸುತ್ತಿದ್ದರಂತೆ. ಅದೊಂದು ದಿನ “ಸೆಕೆಂಡ್ ಹಾಫ್’ ಸಿನಿಮಾಕ್ಕೆ ಹೋದ ಸಿದ್ದು ಫುಲ್ ಖುಷಿಯಾಗಿದ್ದಾರೆ. ಕಾರಣ, ತಾವು ಅಂದುಕೊಂಡಂತಹ ಹೀರೋ ಸಿಕ್ಕಿದ್ದು. “ಸೆಕೆಂಡ್ ಹಾಫ್ ಸಿನಿಮಾ ನೋಡಿದ ನಂತರ ನೇರವಾಗಿ ನಿರಂಜನ್ ಮನೆಗೆ ಹೋಗಿ ಕಥೆ ಬಗ್ಗೆ ಹೇಳಿದೆ. ಅವರು ಕೂಡ ಇಷ್ಟಪಟ್ಟು ಎಲ್ಲವನ್ನು ಪಕ್ಕಾ ಮಾಡಿಕೊಂಡು ಬನ್ನಿ ಅಂದರು. ಅದರಂತೆ ನಿರ್ಮಾಪಕರೊಂದಿಗೆ ಹೋದೆ’ ಎನ್ನುತ್ತಾ ಸಿನಿಮಾ ಆರಂಭವಾದ ಬಗ್ಗೆ ಹೇಳಿಕೊಂಡರು. ಎಲ್ಲಾ ಓಕೆ ಈ ಸಿನಿಮಾದಲ್ಲಿ ಏನು ಹೇಳಲು ಹೊರಟಿದ್ದಾರೆ, ಚಿತ್ರದ ಕಥೆ ಏನು ಎಂದರೆ, ಸ್ನೇಹಿತರ ಸುತ್ತ ತಿರುಗುವ ಕಥೆ ಎಂಬ ಉತ್ತರ ನಿರ್ದೇಶಕರಿಂದ ಬರುತ್ತದೆ. “ಚಿತ್ರ ಮಂಡ್ಯ ಟೌನ್‌ನಲ್ಲಿ ನಡೆಯುತ್ತದೆ. ಸ್ನೇಹಿತರ ಮಧ್ಯೆ ಒಂದು ಸುಳ್ಳು ಬಂದರೆ ಅದರಿಂದ ಏನೆಲ್ಲಾ ತೊಂದರೆಯಾಗುತ್ತದೆ’ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ.
ನಾಯಕ ನಿರಂಜನ್ “ಸೆಕೆಂಡ್‌ಹಾಫ್’ ನಂತರ ಅನೇಕ ಕಥೆ ಕೇಳಿದರಂತೆ. ಅದರಲ್ಲಿ ತುಂಬಾ ಇಷ್ಟವಾದ ಕಥೆ ಇದಂತೆ. “ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕನಾಗುತ್ತಿದ್ದೇನೆ. ಹಾಡು, ಫೈಟ್ ಎಲ್ಲವೂ ಇದೆ’ ಎಂದಷ್ಟೇ ಹೇಳಿದರು ನಿರಂಜನ್. ಚಿತ್ರದಲ್ಲಿ ರಿಯಾ ರನ್ವಿಕಾ ನಾಯಕಿ. ಪಕ್ಕಾ ಹೋಮ್ಲಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರಕ್ಕೆ ಅಭಿಮಾನ್‌ರಾಯ್ ಸಂಗೀತವಿದೆ. ಈ ಚಿತ್ರವನ್ನು ಅಶ್ರಫ್ ಎನ್ನುವವರು ನಿರ್ಮಿಸುತ್ತಿದ್ದು, ರೋಶನ್, ನಟರಾಜ್ ಸಹ ನಿರ್ಮಾಪಕರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.