ಅರಮನೆಯಲ್ಲಿ ಆಪ್ತಮಿತ್ರರು


Team Udayavani, Oct 6, 2017, 11:33 AM IST

06-10.jpg

“ಹೇ ನಾಗವಲ್ಲಿ ನಮ್ಮ ವಿಷ್ಣುದಾದ ಸಾವಿಗೆ ನೀನೇ ಕಾರಣವಾಗಿದ್ರೆ, ನಿನ್ನನ್ನು ಬಿಡೋ ಛಾನ್ಸೇ ಇಲ್ಲ …’ 
– ನಿರ್ದೇಶಕ ಶಂಕರ್‌ ಅರುಣ್‌ ಹೀಗೆ ಡೈಲಾಗ್‌ ಬರೆದ ದಿನ ಸಂಜೆ ಅವರಿಗೆ ಒಂದು ಅಪಘಾತವಾಯಿತಂತೆ. ಅದರಿಂದ ಸುಧಾರಿಸಿಕೊಂಡು ಚಿತ್ರೀಕರಣಕ್ಕೆ ಹೊರಟು ಏರ್‌ಪೋರ್ಟ್‌ಗೆ ಹೋಗುವಾಗ ಅವರ ಕಾರು ಮತ್ತೆ ಆ್ಯಕ್ಸಿಡೆಂಟ್‌ ಆಗಿ ದೊಡ್ಡ ಗಾಯವಾಯಿತಂತೆ. ಇನ್ನು, ಚಿತ್ರೀಕರಣದ ವೇಳೆ ಸಾಕಷ್ಟು ತೊಂದರೆ ಎದುರಿಸಿದರಂತೆ ಶಂಕರ್‌ ಅರುಣ್‌. ಹಾಗಾದರೆ, ಇದಕ್ಕೆಲ್ಲಾ ಕಾರಣ ನಾಗವಲ್ಲಿನಾ? ಅರುಣ್‌ ಇದಕ್ಕೆ ಸರಿಯಾಗಿ ಉತ್ತರಿಸೋದಿಲ್ಲ. ಡೈಲಾಗ್‌ ಬರೆದ ಮರುಕ್ಷಣದಿಂದಲೇ ಈ ತರಹ ತೊಂದರೆಗಳಾಯಿತು ಎನ್ನುವ ಮೂಲಕ ತನಗೂ “ನಾಗವಲ್ಲಿ’ ಕಾಟ ಕೊಟ್ಟಿದ್ದಾಳೆ ಎಂದು ಸುತ್ತಿಬಳಸಿ ಹೇಳಲು ಪ್ರಯತ್ನಿಸಿದರು ಅರುಣ್‌. ಅಷ್ಟಕ್ಕೂ ಯಾರು ಈ ಶಂಕರ್‌ ಅರುಣ್‌, ಯಾಕಾಗಿ ನಾಗವಲ್ಲಿ ವಿಷಯ ಎಂದರೆ “ನಾಗವಲ್ಲಿ ವರ್ಸಸ್‌ ಆಪ್ತಮಿತ್ರರು’ ಸಿನಿಮಾ ಬಗ್ಗೆ ಹೇಳಬೇಕಾಗುತ್ತದೆ.

ಹೀಗೊಂದು ಸಿನಿಮಾ ಆರಂಭವಾಗಿರೋದು ನಿಮಗೆ ನೆನಪಿರಬಹುದು. ಈಗ ಚಿತ್ರೀಕರಣ ಮುಗಿಸಿದೆ. ಈ ಸಿನಿಮಾ ಮೂಲಕ “ನಾಗವಲ್ಲಿ’ಯ ರಿಯಾಲಿಟಿನಾ ಬಿಚ್ಚಿಡೋಕೆ ಹೊರಟಿದ್ದಾರಂತೆ ಶಂಕರ್‌ ಅರುಣ್‌. ಜೊತೆಗೆ ಕಲಾವಿದರಾದ ಸೌಂದರ್ಯ, ವಿಷ್ಣುವರ್ಧನ್‌ ಸಾವಿಗೆ ಹಾಗೂ ನಟ ರಜನಿಕಾಂತ್‌ ಅವರಿಗೆ 2011ರಲ್ಲಿ ತೀವ್ರ ಅನಾರೋಗ್ಯ ಕಾಣಿಸಿಕೊಳ್ಳಲು ಕೂಡಾ ನಾಗವಲ್ಲಿ ಕಾರಣನಾ ಎಂಬ ಪ್ರಶ್ನೆಗಳಿಗೆ ಈ ಸಿನಿಮಾ ಮೂಲಕ ಉತ್ತರ ಕೊಡಲಿದ್ದಾರಂತೆ. ಅದು ಯಾವ ರೀತಿ ಎಂಬುದನ್ನು ನೀವು ಸಿನಿಮಾದಲ್ಲೇ ನೋಡಬೇಕು. ಇನ್ನು, ಶಂಕರ್‌ ಅರುಣ್‌ ಈ ಚಿತ್ರಕ್ಕಾಗಿ ಸಾಕಷ್ಟು ರೀಸರ್ಚ್‌ ಕೂಡಾ ಮಾಡಿದ್ದಾರಂತೆ. ಮುಖ್ಯವಾಗಿ ನಾಗವಲ್ಲಿ ವಾಸವಿದ್ದ ಕೇರಳದ ಅನಂತ ಪದ್ಮನಾಭ
ಪ್ಯಾಲೇಸ್‌ಗೆ ಭೇಟಿ ನೀಡುವ ಜೊತೆಗೆ ಅಲ್ಲೇ  ಚಿತ್ರೀಕರಿಸಿದ್ದಾರಂತೆ. ಅಲ್ಲದೇ, ನಾಗವಲ್ಲಿಯ ವಂಶಸ್ಥರನ್ನು ಕೂಡಾ ಭೇಟಿಯಾಗಿ ನಾಗವಲ್ಲಿ ಕುರಿತು ಮಾಹಿತಿ ಸಂಗ್ರಹಿಸಿದ್ದಾರಂತೆ. “ಇಲ್ಲಿ ನಾನು ಸೌಂದರ್ಯ, ವಿಷ್ಣುವರ್ಧನ್‌ ಸಾವಿನ ಸಂದರ್ಭದಲ್ಲಿ ನಾಗವಲ್ಲಿ ಹೆಸರು ಕೇಳಿಬಂದಿತ್ತು. ಆ ಪ್ರಶ್ನೆಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ.

ನಿಜವಾಗಿಯೂ ನಾಗವಲ್ಲಿ ಕಾಟ ಇದೆಯಾ ಎಂಬುದನ್ನು ಹೇಳಲು ಪ್ರಯತ್ನಿಸಿದ್ದೇನೆ’ ಎಂಬುದು ನಿರ್ದೇಶಕ ಶಂಕರ್‌ ಅರುಣ್‌ ಅವರ ಮಾತು. ಚಿತ್ರದಲ್ಲಿ ವಿಕ್ರಮ್‌ ಕಾರ್ತಿಕ್‌ ನಾಯಕರಾಗಿ ನಟಿಸಿದ್ದಾರೆ. ಅವರಿಲ್ಲಿ ವಿಷ್ಣುವರ್ಧನ್‌ ಅವರ ಅಭಿಮಾನಿ. ಜೊತೆಗೆ ಪತ್ರಕರ್ತನ ಪಾತ್ರವಾದ್ದರಿಂದ ನಾಗವಲ್ಲಿ ಕುರಿತು ರೀಸರ್ಚ್‌ ಮಾಡಿ ಸತ್ಯ ಹೊರ ತೆಗೆಯುವ ಪಾತ್ರವಂತೆ. ಇನ್ನು, ಚಿತ್ರದಲ್ಲಿ ನಾಗವಲ್ಲಿ ಯಾರು, ನಾಯಕಿ ಯಾರು ಎಂಬ ಪ್ರಶ್ನೆಗೆ ಮುಂದಿನ ಪತ್ರಿಕಾಗೋಷ್ಠಿವರೆಗೆ ಕಾಯಬೇಕು.

ನಾಯಕಿಯನ್ನೂ ಪರಿಚಯಿಸಲೆಂದೇ ಒಂದು ಪತ್ರಿಕಾಗೋಷ್ಠಿ ಮಾಡುವ ಉದ್ದೇಶ ನಿರ್ದೇಶಕರಿಗಿದೆ. ಚಿತ್ರದ ನಿರ್ದೇಶನದ ಜೊತೆಗೆ ಶಂಕರ್‌ ಅರುಣ್‌, ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಇವರಿಗೆ ಪ್ರಬೀಕ್‌
ಹಾಗೂ ವಿಘ್ನೇಶ್‌ ಕೈ ಜೋಡಿಸಿದ್ದಾರೆ. ಅವರು ಕೂಡಾ ಸಿನಿಮಾ ಬಗ್ಗೆ ಖುಷಿ ಹಂಚಿಕೊಂಡರು.

ಟಾಪ್ ನ್ಯೂಸ್

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

aaram aravinda swamy movie song hudukuta hoda

Aaram Aravinda Swamy: ಹುಡುಕತ್ತಾ ಹೋದ ಅರವಿಂದ್‌ ಸ್ವಾಮಿ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.