ಉದ್ಭವ ಗಣೇಶ!
ಕೋಡ್ಲು ಹೊಸ ಕನಸು
Team Udayavani, Jun 14, 2019, 5:00 AM IST
“ಉದ್ಭವ’ ಸಿನಿಮಾದ ಬಗ್ಗೆ ನಿಮಗೆ ಗೊತ್ತಿರಬಹುದು. ಅನಂತ್‌ನಾಗ್ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರವನ್ನು ಕೋಡ್ಲು ರಾಮಕೃಷ್ಣ ನಿರ್ದೇಶಿಸಿದ್ದರು. ಹೊಸ ಕಲ್ಪನೆಯೊಂದಿಗೆ ಬಂದ ಈ ಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಈಗ ಕೋಡ್ಲು ಮತ್ತೆ ಬಂದಿದ್ದಾರೆ. ಅದು ಉದ್ಭವದ ಜೊತೆಗೆ.
ಹೌದು, ಕೋಡ್ಲು ರಾಮಕೃಷ್ಣ “ಮತ್ತೆ ಉದ್ಭವ’ ಎಂಬ ಹೊಸ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರಕ್ಕೆ ಮುಹೂರ್ತ ನಡೆಯಿತು. ಹಾಗಂತ ಆ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಹೊಸ ಕಥೆಯೊಂದಿಗೆ “ಮತ್ತೆ ಉದ್ಭವ’ ಕಟ್ಟಿಕೊಡುವ ಉತ್ಸಾಹದಲ್ಲಿದ್ದಾರೆ ಕೋಡ್ಲು. ಈ ಚಿತ್ರದಲ್ಲಿ ಅನಂತ್‌ನಾಗ್ ನಟಿಸುತ್ತಿಲ್ಲ. ಬದಲಾಗಿ ರಂಗಾಯಣ ರಘು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. “ಉದ್ಭವ’ದ ಅನಂತ್ ನಾಗ್ ಪಾತ್ರದ ಮುಂದುವರಿದ ಪಾತ್ರದಂತೆ ರಂಗಾಯಣ ಪಾತ್ರ ಸಾಗುತ್ತದೆಯಂತೆ. ಉಳಿದಂತೆ ಚಿತ್ರದಲ್ಲಿ ಪ್ರಮೋದ್, ಮಿಲನ ನಾಗರಾಜ್, ಅವಿನಾಶ್, ಮೋಹನ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಕೋಡ್ಲು ರಾಮಕೃಷ್ಣ, “ಸುಮಾರು ಒಂದು ವರ್ಷದಿಂದ ಈ ಕಥೆಯಲ್ಲಿ ತೊಡಗಿದ್ದೇನೆ. ಚಿತ್ರದಲ್ಲಿ ರಾಜಕೀಯ, ಲವ್, ಕಾಮಿಡಿ ಎಲ್ಲವೂ ಇದೆ. “ಉದ್ಭವ’ ಚಿತ್ರಕ್ಕಿಂತ 10 ಪಟ್ಟು ಹೆಚ್ಚು ಚೆನ್ನಾಗಿ ಮೂಡಿಬರುತ್ತದೆ ಎಂಬ ವಿಶ್ವಾಸವಿದೆ’ ಎಂದರು ಕೋಡ್ಲು ರಾಮಕೃಷ್ಣ. ಚಿತ್ರವನ್ನು ನಿತ್ಯಾನಂದ ಭಟ್, ಸತ್ಯ, ಮಹೇಶ್, ರೋಶನ್, ರಾಜೇಶ್ ಸೇರಿಕೊಂಡು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ರಂಗಾಯಣ ರಘು ಹಾಗೂ ಅವಿನಾಶ್ ಅವರಿಗೆ ಇದೊಂದು ಹೊಸ ಬಗೆಯ ರಾಜಕೀಯ ಹಿನ್ನೆಲೆಯ ಸಿನಿಮಾವಾಗುತ್ತದೆ ಎಂಬ ವಿಶ್ವಾಸವಿದೆ. ಇನ್ನು ಚಿತ್ರ ಭಕ್ತಿ ಹಾಗೂ ಭಯದ ಸುತ್ತ ಚಿತ್ರ ಸಾಗಲಿದೆಯಂತೆ. ಚಿತ್ರದಲ್ಲಿ ಮಿಲನ ನಾಗರಾಜ್ ಪ್ರಕೃತಿ ಪ್ರೇಮಿಯಾಗಿ ನಟಿಸುತ್ತಿದ್ದಾರಂತೆ. ಈ ಹಿಂದೆ “ಪ್ರೀಮಿಯರ್ ಪದ್ಮಿನಿ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದ ಪ್ರಮೋದ್ ಕೂಡಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಚಿತ್ರದಲ್ಲಿ ಮೋಹನ್ ಸಂಭಾಷಣೆಯ ಜೊತೆಗೆ ಸ್ವಾಮೀಜಿಯಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅಪೇಕ್ಷಾ ಪುರೋಹಿತ್ ಕಾಸ್ಟೂéಮ್ ಡಿಸೈನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. “ಮತ್ತೆ ಉದ್ಭವ’ ಚಿತ್ರಕ್ಕೆ ವಿ.ಮನೋಹರ್ ಸಂಗೀತ, ಮೋಹನ್ ಛಾಯಾಗ್ರಹಣ, ಕೆಂಪರಾಜು ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.