Ashwini Ambrish; ಭೀಮ ಅಡ್ಡದಲ್ಲಿ ಮಿನುಗಿದ ಅಶ್ವಿ‌ನಿ ನಕ್ಷತ್ರ


Team Udayavani, Aug 2, 2024, 7:11 PM IST

ಭೀಮ ಅಡ್ಡದಲ್ಲಿ ಮಿನುಗಿದ ಅಶ್ವಿ‌ನಿ ನಕ್ಷತ್ರ

“ದುನಿಯಾ’ ವಿಜಯ್‌ ನಟನೆಯ “ಭೀಮ’ ಚಿತ್ರ ಆ.9ಕ್ಕೆ ತೆರೆಕಾಣುತ್ತಿದೆ. ಈ ಮೂಲಕ ನವನಟಿಯೊಬ್ಬಳು ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ. ಆಕೆ ಅಶ್ವಿ‌ನಿ ಅಂಬರೀಶ್‌. ಈಗಾಗಲೇ ಸಿನಿಮಾದ ಸ್ಟಿಲ್‌ಗ‌ಳಲ್ಲಿ ಸಾದಾಸೀದಾ ಹುಡುಗಿಯಾಗಿ ಕಾಣಿಸಿಕೊಂಡಿರುವ ಅಶ್ವಿ‌ನಿ, ಈಗ ಈ ಚಿತ್ರದ ಮೇಲೆ ಭರ್ಜರಿ ನಿರೀಕ್ಷೆ ಇಟ್ಟಿದ್ದಾರೆ.

ಅಶ್ವಿ‌ನಿ ಅವರ ನಟನೆಯ ಹಿನ್ನೆಲೆ ಬಗ್ಗೆ ಹೇಳುವುದಾದರೆ, ಮೂಲತಃ ರಂಗಭೂಮಿ ಹಿನ್ನೆಲೆಯಿಂದ ಬಂದವರು. “ಭೀಮ’ ಚಿತ್ರಕ್ಕೆ ಆಯ್ಕೆಯಾದ ಬಗ್ಗೆ ಮಾತನಾಡುವ ಅಶ್ವಿ‌ನಿ, “ನಾನು ರಂಗಭೂಮಿ ಮೂಲಕ ನಟನೆಗೆ ಬಂದೆ. ಅಚ್ಯುತ್‌ ಕುಮಾರ್‌ ಅವರ ಥೇಟರ್‌ ತತ್ಕಾಲ್‌ ತಂಡದಲ್ಲಿ ನಟನೆ ತರಬೇತಿ ಪಡೆದಿದ್ದೇನೆ. “ಭೀಮ’ ಚಿತ್ರಕ್ಕೆ ಆಯ್ಕೆಯಾಗಿದ್ದು, ಆಕಸ್ಮಿಕ. ಯಾವುದೇ ಆಡಿಷನ್‌ ನೀಡಿರಲಿಲ್ಲ. ಕಾರ್ಯಕ್ರಮವೊಂದರಲ್ಲಿ ದುನಿಯಾ ವಿಜಯ ಅವರನ್ನು ಭೇಟಿಯಾಗಿದ್ದೆ. ಆಗ, “ಒಂದು ಪಾತ್ರ ಇದೆ ಮಾಡ್ತೀಯಾ?’ ಎಂದು ಖುದ್ದು ಅವರೇ ಕೇಳಿದ್ದರು. ಹೀಗೆ “ಭೀಮ’ ಚಿತ್ರ ತಂಡ ಸೇರಿಕೊಂಡೆ’ ಎನ್ನುತ್ತಾರೆ ಅಶ್ವಿ‌ನಿ.

ರಂಗಭೂಮಿಯಲ್ಲಷ್ಟೇ ಅಲ್ಲ, ಅಶ್ವಿ‌ನಿ, ಕೆಲ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. “ಸಿನಿಮಾಗೆ ಬರುವ ಮುನ್ನ ಎರಡು ಧಾರಾವಾಹಿಗಳಲ್ಲಿ ನಟಿಸಿದ್ದೆ. ಜೀವನದಿ’ಯಲ್ಲಿ ನನ್ನದು ಮುಖ್ಯ ಪಾತ್ರವಾಗಿತ್ತು. ಜೊತೆಗೆ ಟಿ.ಎನ್‌. ಸೀತಾರಾಮ್‌ ಅವರ “ಮಗಳು ಜಾನಕಿ’ ಧಾರಾವಾಹಿಯಲ್ಲಿ ಒಂದು ಪಾತ್ರ ನಿರ್ವಹಿಸಿದ್ದೆ. ಅದಾದ ಬಳಿಕ ಈಗ ಸಿನಿಮಾಗೆ ಕಾಲಿಟ್ಟಿದ್ದೇನೆ’ ಎನ್ನುವುದು ಅಶ್ವಿ‌ನಿ ಮಾತು.

ಚಿತ್ರೀಕರಣದ ಅನುಭವಗಳ ಹಾಗೂ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅಶ್ವಿ‌ನಿ, “ನಾನು ನಟನೆಗೆ ಹೊಸಬಳಲ್ಲ.ಆದರೆ, ಸಿನಿಮಾಗೆ ಹೊಸಬಳು. ಚಿತ್ರೀಕರಣವಿಭಿನ್ನ ಅನುಭವ ನೀಡಿದೆ. ಅದರಲ್ಲೂ ಮುಖ್ಯವಾಗಿ, ನನ್ನ ಮೊದಲ ಸಿನಿಮಾದಲ್ಲೇ ವಿಜಯ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ಬಹಳ ಖುಷಿ ತಂದಿದೆ. ಅವರ ನಿರ್ದೇಶನ ವೈಖರಿ, ಪ್ರತಿ ಸನ್ನಿವೇಶವನ್ನೂ ವಿಭಿನ್ನವಾಗಿ ಚಿತ್ರಿಸುವ ಶೈಲಿಯನ್ನು ಹತ್ತಿರದಿಂದ ನೋಡಿ ಕಲಿಯುವ ಅವಕಾಶ ಸಿಕ್ಕಿತ್ತು. ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌, ಮತ್ತಿತರ ಗಲ್ಲಿಗಳಲ್ಲಿ ರಾತ್ರಿ ಶೂಟಿಂಗ್‌ ಮಾಡಿದ್ದು ಸಹ ಥ್ರಿಲ್ಲಿಂಗ್‌ ಅನುಭವ. ಚಿತ್ರದಲ್ಲಿ ವಿಜಯ ಅವರನ್ನು ಪ್ರೀತಿಸುವ ಮುಖ್ಯ ಪಾತ್ರ ನನ್ನದು. ಕತೆಯ ಜೊತೆಗೆ ನನ್ನ ಪಾತ್ರವೂ ಕೂಡಿಕೊಂಡಿದೆ. ನನ್ನ ಮೊದಲ ಚಿತ್ರ ಇದು. ಹಾಗಾಗಿ ಸಾಕಷ್ಟು ನಿರೀಕ್ಷೆ ಇದೆ.’ ಎನ್ನುತ್ತಾರೆ ಅಶ್ವಿ‌ನಿ.

“ಭೀಮ’ ಅಶ್ವಿ‌ನಿ ನಟನೆಯ ಮೊದಲ ಸಿನಿಮಾ. ಸದ್ಯ ಅದು ಬಿಡುಗಡೆಯಾಗುವ ಹೊತ್ತಲ್ಲೆ ಅಶ್ವಿ‌ನಿಗೆ ಚಂದನವದಲ್ಲಿ ಮತ್ತಷ್ಟು ಅವಕಾಶಗಳು ಕೈ ಬೀಸಿ ಕರೆಯುತ್ತಿವೆ. “ಈಗಾಗಲೇ ಮೂರು ಚಿತ್ರಗಳಿಗೆ ಅವಕಾಶ ಬಂದಿವೆ’ ಎನ್ನುತ್ತಾರೆ.

ನಿತೀಶ ಡಂಬಳ

ಟಾಪ್ ನ್ಯೂಸ್

Ripponpete

Ripponpete: ಖಾಸಗಿ ಬಸ್‌ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

Court-Symbol

Gangolli: ಪಿಸ್ತೂಲ್‌ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು

MAHE-13

Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್‌.ಎಸ್‌.ಬಲ್ಲಾಳ್‌

udupi-lawrence

Udupi: ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ರೆ.ಡಾ.ಲಾರೆನ್ಸ್‌ ಸಿ. ಡಿ’ಸೋಜಾ ಇನ್ನಿಲ್ಲ

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ

BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ

Sandalwood: ಪ್ಯಾನ್‌ ಇಂಡಿಯಾ ʼಪುಷ್ಪʼ ಜೊತೆ ರಿಲೀಸ್‌ ಆಗಲಿದೆ ಕನ್ನಡದ ʼಭಗತ್‌ʼ

Sandalwood: ಪ್ಯಾನ್‌ ಇಂಡಿಯಾ ʼಪುಷ್ಪʼ ಜೊತೆ ರಿಲೀಸ್‌ ಆಗಲಿದೆ ಕನ್ನಡದ ʼಭಗತ್‌ʼ

Sandalwood: ಡಿ.27ಕ್ಕೆ ‘ರಾಜು ಜೇಮ್ಸ್‌ ಬಾಂಡ್‌’ ರಿಲೀಸ್

Sandalwood: ಡಿ.27ಕ್ಕೆ ‘ರಾಜು ಜೇಮ್ಸ್‌ ಬಾಂಡ್‌’ ರಿಲೀಸ್

Toxic Movie: ಯಶ್‌ ʼಟಾಕ್ಸಿಕ್ʼ ಸಿನಿಮಾಕ್ಕಾಗಿ ಮರ ಕಡಿದ ಆರೋಪ; ಎಫ್‌ಐಆರ್‌ ದಾಖಲು

Toxic Movie: ಯಶ್‌ ʼಟಾಕ್ಸಿಕ್ʼ ಸಿನಿಮಾಕ್ಕಾಗಿ ಮರ ಕಡಿದ ಆರೋಪ; ಎಫ್‌ಐಆರ್‌ ದಾಖಲು

Abishek AmbarಅAbishek Ambareesh: ಗಂಡು ಮಗುವಿಗೆ ಜನ್ಮ ನೀಡಿದ ಅವಿವಾ; ಅಂಬಿ ಮನೆಯಲ್ಲಿ ಸಂಭ್ರಮeesh: ಗಂಡು ಮಗುವಿಗೆ ಜನ್ಮ ನೀಡಿದ ಅವಿವಾ; ಅಂಬಿ ಮನೆಯಲ್ಲಿ ಸಂಭ್ರಮ

Abishek Ambareesh: ಗಂಡು ಮಗುವಿಗೆ ಜನ್ಮ ನೀಡಿದ ಅವಿವಾ; ಅಂಬಿ ಮನೆಯಲ್ಲಿ ಸಂಭ್ರಮ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Bhagat Singh Extremist: Pakistan Report to Court

Lahore; ಭಗತ್‌ ಸಿಂಗ್‌ ಉಗ್ರವಾದಿ: ಕೋರ್ಟ್‌ಗೆ ಪಾಕ್‌ ವರದಿ

Ripponpete

Ripponpete: ಖಾಸಗಿ ಬಸ್‌ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

Court-Symbol

Gangolli: ಪಿಸ್ತೂಲ್‌ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು

MAHE-13

Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್‌.ಎಸ್‌.ಬಲ್ಲಾಳ್‌

udupi-lawrence

Udupi: ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ರೆ.ಡಾ.ಲಾರೆನ್ಸ್‌ ಸಿ. ಡಿ’ಸೋಜಾ ಇನ್ನಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.