ಬಾಬು ಕನಸು ಇಂದು ನನಸು
ನೆಕ್ಲೆಸ್ ತಂದ ಆನಂದಭಾಷ್ಪ
Team Udayavani, Sep 6, 2019, 5:48 AM IST
ಕೆಲವು ನಿರ್ದೇಶಕರು ಸಿನಿಮಾ ಮಾಡುವ ಮೊದಲೇ ಸುದ್ದಿಯಾಗುತ್ತಾರೆ. ಸ್ಕ್ರಿಪ್ಟ್ಗೆ ಓಂಕಾರ ಹಾಕುವಾಗಿನಿಂದಲೇ ತಾವು, ತಮ್ಮ ಸಿನಿಮಾ ಸುದ್ದಿಯಲ್ಲಿರಬೇಕೆಂಬುದು ಬಯಸುತ್ತಾರೆ. ಇನ್ನು ಕೆಲವು ನಿರ್ದೇಶಕರು ಸಿನಿಮಾ ಬಿಡುಗಡೆಯಾದ ನಂತರ ಸುದ್ದಿಯಾಗಲು ಬಯಸುತ್ತಾರೆ. ಈ ಸಾಲಿಗೆ ಹಿರಿಯ ನಿರ್ದೇಶಕ ದಿನೇಶ್ ಬಾಬು ಕೂಡಾ ಸೇರುತ್ತಾರೆ. ಈಗ ಯಾಕೆ ಅವರ ವಿಷಯ ಅಂತೀರಾ, ನಿರ್ದೇಶಕ ದಿನೇಶ್ ಬಾಬು ಸದ್ದಿಲ್ಲದೇ ಸಿನಿಮಾವೊಂದನ್ನು ಮಾಡಿ ಮುಗಿಸಿದ್ದಾರೆ. ಅದು ‘ಹಗಲು ಕನಸು’. ಈ ಸಿನಿಮಾ ಯಾವ ಹಂತದಲ್ಲಿದೆ ಎಂದು ನೀವು ಕೇಳಿದರೆ ಅದಕ್ಕೆ ಉತ್ತರ ಈ ವಾರ ತೆರೆಕಾಣುತ್ತಿದೆ ಎಂಬುದು. ಹೌದು, ‘ಹಗಲು ಕನಸು’ ಎಂಬ ಸಿನಿಮಾ ಈ ವಾರ ತೆರೆಕಾಣುತ್ತಿದೆ.
ದಿನೇಶ್ ಬಾಬು ಈ ಚಿತ್ರದ ನಿರ್ದೇಶಕರು. ಆನಂದ್ ಈ ಚಿತ್ರದ ನಾಯಕ. ಎಲ್ಲಾ ಓಕೆ, ಈ ಸಿನಿಮಾದಲ್ಲಿ ದಿನೇಶ್ ಬಾಬು ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಆದರೆ, ದಿನೇಶ್ ಬಾಬು ಮಾತ್ರ ತಮ್ಮ ಸಿನಿಮಾ ವಿವರ ಕೊಡಲಿಲ್ಲ. ಬದಲಾಗಿ ನಾಯಕ ಆನಂದ್ ಮಾತನಾಡಿದರು. ‘ಇದು ಮೂರು ದಿನಗಳಲ್ಲಿ ನಡೆಯುವ ಕಥೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಈ ಕಥೆ ನಡೆಯುತ್ತದೆ.
ದಿನೇಶ್ ಬಾಬು ಅವರ ಸಿನಿಮಾ ಎಂದ ಮೇಲೆ ಅಲ್ಲಿ ಕಂಟೆಂಟ್‌ಗೆ ಹೆಚ್ಚಿನ ಒತ್ತು ಕೊಡುತ್ತಾರೆ. ಈ ಸಿನಿಮಾದಲ್ಲೂ ಗಟ್ಟಿಕಥಾಹಂದರವಿದೆ. ಇಡೀ ಸಿನಿಮಾವನ್ನು ಒಂದು ಮನೆಯಲ್ಲಿ ಚಿತ್ರೀಕರಿಸಲಾಗಿದೆ. ಹಾಡೊಂದರ ಚಿತ್ರೀಕರಣ ಹೊರಾಂಗಣದಲ್ಲಿ ನಡೆದಿದೆ. ನಾನಿಲ್ಲಿ ವಿಕ್ರಮಾದಿತ್ಯ ಎಂಬ ಪಾತ್ರ ಮಾಡಿದ್ದೇನೆ. ದೊಡ್ಡ ನೆಕ್ಲೆಸ್ ಹಾಕಿಕೊಂಡಿರುವ ಹುಡುಗಿಯ ಕನಸನ್ನೇ ಕಾಣುತ್ತಿರುವ ನನಗೆ ಅಂತಹ ಹುಡುಗಿ ಸಿಕ್ಕಾಗ ಜೀವನದಲ್ಲಿ ಮುಂದೆ ಏನೇನು ಆಗುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು ಆನಂದ್. ಸನಿಹ ಯಾದವ್ ಚಿತ್ರದ ನಾಯಕಿ.
ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಎರಡು ಹಾಡುಗಳನ್ನು ನೀಡಿದ್ದಾರೆ. ಚಿತ್ರದಲ್ಲಿ ಮನ್‌ದೀಪ್ ರಾಯ್, ಚಿತ್ಕಲಾ ಬಿರಾದರ್, ನಾರಾಯಣಸ್ವಾಮಿ ಸೇರಿದಂತೆ ಅನೇಕರು ನಟಿಸಿದ್ದು, ಅವರೆಲ್ಲರೂ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.