ಬ್ಯಾಕ್ ಟು ಬ್ಯಾಕ್ ಧನಂಜಯ್
Team Udayavani, Mar 27, 2020, 6:53 PM IST
“ಟಗರು’ ಚಿತ್ರದ “ಡಾಲಿ’ ಪಾತ್ರದ ಮೂಲಕ ಅಬ್ಬರಿಸಿದ “ಡಾಲಿ’ ಅಂದಿನಿಂದ ಇಂದಿನವರೆಗೆ ತಿರುಗಿ ನೋಡಿಲ್ಲ. ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2020ರಲ್ಲಿ ಧನಂಜಯ್ ಅಭಿನಯದ “ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರಗಳು ತೆರೆಕಂಡಿರೋದು ನಿಮಗೆ ಗೊತ್ತೇ ಇದೆ. ಅದರ ಬೆನ್ನಲ್ಲೇ ಈ ವರ್ಷ ಮತ್ತೂಂದಿಷ್ಟು ಧನಂಜಯ್ ನಟಿಸಿರುವ ಮತ್ತೂಂದಿಷ್ಟು ಸಿನಿಮಾಗಳು ಬಿಡುಗಡೆಯಾಗಲಿವೆ.
ಸುಮ್ಮನೆ ನೀವೇ ಲೆಕ್ಕ ಹಾಕಿ ನೋಡಿ, “ಸಲಗ’, “ಯುವರತ್ನ’, “ತೋತಾಪುರಿ’, “ಬಡವ ರಾಸ್ಕಲ್’, “ಡಾಲಿ’, “ಜಯರಾಜ್’… ಇವು ಸದ್ಯಕ್ಕೆ ಧನಂಜಯ್ ಕೈಯಲ್ಲಿರುವ ಸಿನಿಮಾಗಳು. ಇದರಲ್ಲಿ ಬಹುತೇಕ ಸಿನಿಮಾಗಳು ಈ ವರ್ಷವೇ ತೆರೆಕಾಣಲಿವೆ ಎಂಬುದು ವಿಶೇಷ. ವಿಜಯ್ ನಟನೆ, ನಿರ್ದೇಶನದ “ಸಲಗ’ ಚಿತ್ರದಲ್ಲಿ ಧನಂಜಯ್ ಎಸಿಪಿ ಸಾಮ್ರಾಟ್ ಎಂಬ ಪಾತ್ರ ಮಾಡಿದ್ದು, ಆ ಚಿತ್ರ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಾರ್ಚ್ ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ ಈಗ ಕೋವಿಡ್ 19 ಎಫೆಕ್ಟ್ ನಿಂದಾಗಿ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಏಪ್ರಿಲ್‌ನಲ್ಲಿ ಚಿತ್ರ ತೆರೆಕಾಣಬಹುದು. ಇದರ ಬೆನ್ನಲ್ಲೇ “ಯುವರತ್ನ’ ಚಿತ್ರ ಬರಲಿದೆ.
ಈ ಚಿತ್ರದಲ್ಲೂ ಧನಂಜಯ್ ನೆಗೆಟಿವ್ ರೋಲ್‌ನಲ್ಲಿ ಮಿಂಚಿದ್ದಾರೆ. ಇನ್ನು ಜಗ್ಗೇಶ್ ಅಭಿನಯದ “ತೋತಾಪುರಿ’ ಚಿತ್ರದಲ್ಲೂ ಧನಂಜಯ್ ನಟಿಸಿದ್ದು, ಆ ಚಿತ್ರ ಕೂಡಾ ಈ ವರ್ಷವೇ ತೆರೆಕಾಣಲಿದೆ. ಇನ್ನು, ಧನಂಜಯ್ ನಾಯಕರಾಗಿ ನಟಿಸುತ್ತಿರುವ “ಬಡವ ರಾಸ್ಕಲ್’, “ಡಾಲಿ’ ಚಿತ್ರಗಳು ಕೂಡಾ ಈ ವರ್ಷ ಬರುವ ಸಾಧ್ಯತೆಗಳಿವೆ. ಈ ನಡುವೆಯೇ ಧನಂಜಯ್ ಜಯರಾಜ್ ಅವರ ಬಯೋಪಿಕ್‌ನಲ್ಲಿ ನಟಿಸುತ್ತಿದ್ದು, ಈ ಚಿತ್ರ ಈ ವರ್ಷಾಂತ್ಯಕ್ಕೆ ಬಂದರೂ ಅಚ್ಚರಿಯಿಲ್ಲ. ಒಟ್ಟಾರೆ 2020ರಲ್ಲಿ ಧನಂಜಯ್ ತೆರೆಮೇಲೆ ದರ್ಶನ ಕೊಡುತ್ತಿರೋದಂತೂ ಪಕ್ಕಾ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.