ಬಾಲ್ಯವಿವಾಹದ ಸುತ್ತ ಭಾಗ್ಯಶ್ರೀ
ಪಿಡುಗು ನಿರ್ಮೂಲನೆಯೇ ಸಿನಿಮಾ ಗುರಿ...
Team Udayavani, Aug 16, 2019, 5:35 AM IST
ಬಾಲ್ಯ ವಿವಾಹದ ವಿರುದ್ಧ ಹೋರಾಡುವ, ಆ ಪಿಡುಗನ್ನು ಸಮಾಜದಿಂದ ಹೋಗಲಾಡಿಸಲು ಶ್ರಮಿಸುವ ಕುರಿತಾಗಿ ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಎಲ್ಲಾ ಸಿನಿಮಾಗಳ ಗುರಿ ಒಂದೇ, ಅದು ಬಾಲ್ಯ ವಿವಾಹ ನಿರ್ಮೂಲನೆ. ಈಗ ಅದೇ ಗುರಿಯೊಂದಿಗೆ ಮತ್ತೂಂದು ಸಿನಿಮಾ ತಯಾರಾಗಿದೆ. ಅದು ‘ಭಾಗ್ಯಶ್ರೀ’. ಬಾಗಲಕೋಟೆಯ ಆಶಾ ಶಾಹೀರ್ ಬಿಳಗಿ ಹಾಗೂ ಶಾಹೀರ ಬಿಳಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎಸ್.ಮಲ್ಲೇಶ್ ಈ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ಬೇಬಿ ಹೀರಾ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ, ನಿರ್ದೇಶಕ ಮಲ್ಲೇಶ್ ಅವರಿಗೆ ಇದು ಚೊಚ್ಚಲ ಚಿತ್ರ. ಈ ಹಿಂದೆ ಹಲವು ಸಿನಿಮಾಗಳ ವಿತರಣೆ ಸೇರಿದಂತೆ ಸಿನಿಮಾದ ನಾನಾ ವಿಭಾಗಗಳಲ್ಲಿ ಅನುಭವ ಪಡೆದ ಮಲ್ಲೇಶ್ ಈಗ ಆ ಎಲ್ಲಾ ಅನುಭದೊಂದಿಗೆ ‘ಭಾಗ್ಯಶ್ರೀ’ ಎಂಬ ಚಿತ್ರ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಆಶಾ ಬಿಳಗಿ, ‘ಬಾಲ್ಯವಿವಾಹ ಎಂಬುದು ನಮ್ಮ ಸಮಾಜಕ್ಕೆ ಅಂಟಿಕೊಂಡಿರುವ ಒಂದು ಪಿಡುಗು. ಸರ್ಕಾರ ಅದರ ವಿರುದ್ಧ ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಇವತ್ತಿಗೂ ಅಲ್ಲಲ್ಲಿ ಬಾಲ್ಯವಿವಾಹಗಳು ನಡೆಯುತ್ತಿರುತ್ತವೆ. ಈ ವಿಚಾರವನ್ನಿಟ್ಟುಕೊಂಡೇ ‘ಭಾಗ್ಯಶ್ರೀ’ ಚಿತ್ರ ಮಾಡಲಾಗಿದೆ’ ಎಂದರು. ಬೇಬಿ ಹೀರಾ ಕೂಡಾ ಚಿತ್ರೀಕರಣದ ಅನುಭವ, ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಹಿರಿಯ ಸಾಹಿತಿ ಪ್ರೊ.ದೊಡ್ಡರಂಗೇಗೌಡರು ಆಡಿಯೋ ಬಿಡುಗಡೆ ಮಾಡಿದರು. ಚಿತ್ರಕ್ಕೆ ಎರಡು ಹಾಡುಗಳನ್ನು ಬರೆಯುವ ಜೊತೆಗೆ ಚಿತ್ರತಂಡಕ್ಕೆ ಒಂದಷ್ಟು ಸಲಹೆಗಳನ್ನು ಕೂಡಾ ನೀಡಿದ್ದಾರಂತೆ. ಅದರಂತೆ ನಿರ್ದೇಶಕರು ಸಮಾಜಕ್ಕೊಂದು ಸಂದೇಶವಿರುವ ಸಿನಿಮಾ ಮಾಡಿದ್ದಾರೆ ಎಂದರು. ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ, ಸಂಜೀವ್ ರೆಡ್ಡಿ ಸಂಕಲನವಿದೆ. ಚಿತ್ರದಲ್ಲಿ ಮಂಜುನಾಥ್, ಕೀರ್ತಿ, ಬಾಲಕೃಷ್ಣ ಸೇರಿದಂತೆ ಅನೇಕರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.