ಬಾಹುಬಲಿ ಕನ್‌ಫ್ಯೂಶನ್‌: ಮಗಳು ಹೀರೋಯಿನ್‌ ಆದಾಗ 

Team Udayavani, Aug 4, 2017, 8:21 AM IST

04-SUCHI-2.jpg

“ನಿಜ ಹೇಳಬೇಕೆಂದರೆ ಇದು ನನ್ನ ಜಾನರ್‌ನ ಸಿನಿಮಾ ಅಲ್ಲ …’
ಹೀಗೆಂದರು ನಟ ಸಂಚಾರಿ ವಿಜಯ್‌. ಅವರು ಹೀಗೆ ಹೇಳಲು ಕಾರಣ “ನನ್‌ ಮಗಳೇ ಹೀರೋಯಿನ್‌’ ಚಿತ್ರ. “ನನ್‌ ಮಗಳೇ ಹೀರೋಯಿನ್‌’ ಚಿತ್ರ ಕಾಮಿಡಿ ಜಾನರ್‌ಗೆ ಸೇರಿದ ಚಿತ್ರ. ಸಂಚಾರಿ ವಿಜಯ್‌ ಸೀರಿಯಸ್‌ ನಟ. ಈವರೆಗೆ ಇಂತಹ ಪಾತ್ರ ಮಾಡಿಲ್ಲ. ಹೀಗಿರುವಾಗ ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾ ಮಾಡಿದ್ದಾರೆ. ಹಾಗಾಗಿಯೇ ಸಂಚಾರಿ ವಿಜಯ್‌ ಇದು ನನ್ನ ಜಾನರ್‌ನ ಸಿನಿಮಾವಲ್ಲ ಅಂದಿದ್ದು. “ನನಗೆ ಈ ತರಹದ ಪಾತ್ರ ತುಂಬಾ ಹೊಸದು. ನನ್ನನ್ನು ನಂಬಿ ನಿರ್ದೇಶಕರು ಈ ಪಾತ್ರ ಕೊಟ್ಟರು. ಈಗ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಅನ್ನು ಅನೇಕ ನಟ-ನಟಿಯರಿಗೆ ತೋರಿಸಿದೆವು. ನೋಡಿದವರೆಲ್ಲರೂ ಹೊಸ ತರಹದ ಕಾಮಿಡಿ ಇದೆ, ವಿಭಿನ್ನವಾಗಿದೆ ಎಂದು ಪ್ರೋತ್ಸಾಹಿಸಿದರು. ಆ ಮಟ್ಟಿಗೆ ಒಂದಷ್ಟು ಹೊಸತನ್ನು ಇಲ್ಲಿ ಪ್ರಯತ್ನಿಸಿದ್ದೇವೆ. ಕನ್ನಡದ ಬಹುತೇಕ ಹಾಸ್ಯ ನಟರೆಲ್ಲ ಇಲ್ಲಿ ನಟಿಸಿದ್ದಾರೆ’ ಎಂದು ಹೇಳಿಕೊಂಡರು ಸಂಚಾರಿ ವಿಜಯ್‌. 

ಈ ಚಿತ್ರವನ್ನು ಬಾಹುಬಲಿ ಎನ್ನುವವರು ನಿರ್ದೇಶಕರು. ಇವರ ಹೆಸರೇ ಬಾಹುಬಲಿ. ಚಿತ್ರದ ಟ್ರೇಲರ್‌ನಲ್ಲಿ ತಮ್ಮ ಹೆಸರನ್ನೇ ಫ‌ನ್‌ ಮಾಡುತ್ತಾ ಟ್ರೇಲರ್‌ ಕಟ್‌ ಮಾಡಿದ್ದಾರೆ. “ಬಾಹುಬಲಿ ಕನ್‌ಫ್ಯೂಶನ್‌’ ಎಂದೇ ಆರಂಭವಾಗುತ್ತದೆ ಟ್ರೇಲರ್‌. ತಮ್ಮ ಚೊಚ್ಚಲ ಪ್ರಯತ್ನವಾದ ಕಾಮಿಡಿ ಸಿನಿಮಾ ಬಗ್ಗೆ ಮಾತನಾಡುವಾಗ ನಿರ್ದೇಶಕ ಬಾಹುಬಲಿ ಭಾವುಕರಾದರು. ಅದಕ್ಕೆ ಕಾರಣ ಅವರ ಕನಸು ಇಂದು ತೆರೆಮೇಲೆ ಬರಲು ಸಿದ್ಧವಾಗಿರೋದು. “ನನ್ನ ಕನಸು ಇಂದು ತೆರೆಮೇಲೆ ಬರಲು ಸಿದ್ಧವಾಗಿದೆ. ಆದಕ್ಕೆ ನಾನೊಬ್ಬ ಕಾರಣನಲ್ಲ. ನನ್ನನ್ನು ನಂಬಿ ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕರು, ಪಾತ್ರಕ್ಕೆ ಜೀವ ತುಂಬಿದ ತಾಂತ್ರಿಕ ವರ್ಗ ಎಲ್ಲರೂ ಕಾರಣ. ನಮ್ಮ ಚಿತ್ರದ ಟ್ರೇಲರ್‌ ನೋಡಿ ಚಿತ್ರರಂಗದ ನಟ-ನಟಿಯರು ಖುಷಿಪಟ್ಟಿದ್ದಾರೆ. ಸದ್ಯ ಚಿತ್ರ ಡಿಟಿಎಸ್‌ ಹಂತದಲ್ಲಿದ್ದು, ಶೀಘ್ರದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಇಡೀ ಫ್ಯಾಮಿಲಿ ನೋಡುವಂತಹ ಒಂದು ಮಜಾವಾದ ಸಿನಿಮಾ ಇದು’ ಎಂಬುದು ಅವರ ಮಾತು. 

ನಿರ್ಮಾಪಕರಾದ ಅನ್ನದಾನಪ್ಪ ಹಾಗೂ ಮೋಹನ್‌ ಕುಮಾರ್‌ ಕೂಡಾ ಸಿನಿಮಾ ನಿರ್ಮಾಣ ಮಾಡಿದ ಖುಷಿ ಹಂಚಿಕೊಂಡರು. 

ನಟಿ ಅಮೃತಾ ನಿರ್ದೇಶಕರ, ಕಥೆಯ ಮೇಲೆ ನಂಬಿಕೆ ಇಟ್ಟು ಈ ಸಿನಿಮಾ ಒಪ್ಪಿಕೊಂಡರಂತೆ. ಒಂದು ವೇಳೆ ಆ ಸಿನಿಮಾವನ್ನು ಮಿಸ್‌ ಮಾಡಿಕೊಳ್ಳುತಿದ್ದರೆ ಅದು ಅವರು ಮಾಡಿದ ದೊಡ್ಡ ತಪ್ಪಾಗುತ್ತಿತ್ತಂತೆ. ಇನ್ನು, ದೀಪಿಕಾ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ನಗಿಸುವ ಅವಕಾಶ ಸಿಕ್ಕಿದೆಯಂತೆ. ಚಿತ್ರದಲ್ಲಿ ನಟಿಸಿದ ವಿಜಯ್‌ ಚೆಂಡೂರ್‌ ಸೇರಿದಂತೆ ಇತರ ಕಲಾವಿದರು ಕೂಡಾ ತಮ್ಮ ಅನಿಸಿಕೆ ಹಂಚಿಕೊಂಡರು. ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್‌ ಅವರ ಛಾಯಾಗ್ರಹಣವಿದೆ.

ಟಾಪ್ ನ್ಯೂಸ್

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.