ಭೀಮಣ್ಣನ ಹಿಂದೆ ಬರಗೂರು

ಬಯಲಾಟದ ಕಲಾವಿದನ ಏಳು-ಬೀಳಿನ ಸುತ್ತ

Team Udayavani, Aug 2, 2019, 5:00 AM IST

k-25

ನಿರ್ದೇಶಕ ಬರಗೂರು ರಾಮಚಂದ್ರಪ್ಪ ಸದ್ದಿಲ್ಲದೆಯೇ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಆ ಚಿತ್ರಕ್ಕೆ “ಬಯಲಾಟದ ಭೀಮಣ್ಣ’ ಎಂದು ಹೆಸರಿಡಲಾಗಿದೆ. ಅದು ಅವರೇ ಬರೆದ ಕಥೆ. ರಂಗ ಕಲಾವಿದನ ಯಶೋಗಾಥೆ ಕುರಿತಾದ ಚಿತ್ರವದು. ಇತ್ತೀಚೆಗೆ ರವಿಚಂದ್ರನ್‌ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ನಿರ್ದೇಶಕ ಬರಗೂರು ರಾಮಚಂದ್ರಪ್ಪ ತಮ್ಮ “ಬಯಲಾಟದ ಭೀಮಣ್ಣ’ ಕುರಿತು ಹೇಳಿದ್ದಿಷ್ಟು. “ಇದು ನಾನೇ ಬರೆದ ಕಥೆಯೊಂದನ್ನು ಆಧರಿಸಿದ ಚಿತ್ರ. ಯಕ್ಷಗಾನ ಮತ್ತು ಬಯಲಾಟ ದೊಡ್ಡ ಕಲೆ. ಬಯಲಾಟದ ಕಲಾವಿದನೊಬ್ಬ ಸಾಮಾಜಿಕ ನಾಟಕದಲ್ಲೊಮ್ಮೆ ನಟಿಸಬೇಕು ಎಂಬ ಆಸಕ್ತಿ ಉಳ್ಳವನು. ಆದರೆ, ಅದನ್ನು ಮಾಡದಂತಹ ಸ್ಥಿತಿ ಎದುರಾಗುತ್ತದೆ. ಬಯಲಾಟ ಕಲಾವಿದನ ಬದುಕಿನ ಏಳು-ಬೀಳು, ನಿರಾಸೆ, ಹತಾಶೆ ಕುರಿತಾದ ವಿಷಯಗಳು ಇಲ್ಲಿವೆ. ಇದೊಂದು ಹಳ್ಳಿ ಕಥೆಯಾಗಿದ್ದರೂ, ದೇಶದ ಕಲಾವಿದನ ಆಶೋತ್ತರ ಇಲ್ಲಿದೆ. ಹಳ್ಳಿಕಥೆಯಾಗಿದ್ದರೂ, ದೇಶದ ಕಥೆಯೇ ಎನ್ನುವಷ್ಟರ ಮಟ್ಟಿಗೆ ರೂಪಕವಾಗಿರಲಿದೆ’ ಎಂದು ಹೇಳಿದ ಬರಗೂರು, ರವಿಚಂದ್ರನ್‌ ಅವರ ಗುಣಗಾನ ಮಾಡಿದ್ದು ಹೀಗೆ, “ರವಿಚಂದ್ರನ್‌ ನೇರ ಮಾತುಗಾರ. ಭಾರತೀಯ ಚಿತ್ರರಂಗದಲ್ಲಿ ತೆರೆಯ ಮೇಲೆ ಹಾಡುಗಳ ಚಿತ್ರಣವನ್ನು ಅದ್ಭುತವಾಗಿ ಕಟ್ಟಿಕೊಡುವ ಇಬ್ಬರು ಅದ್ಭುತ ಪ್ರತಿಭೆಗಳೆಂದರೆ ಅದು ರವಿಚಂದ್ರನ್‌ ಹಾಗೂ ರಾಜ್‌ಕಪೂರ್‌. ಹಾಡಿನ ಸಂದರ್ಭದ ಭಾವ ತೀವ್ರತೆಯನ್ನು ಚೆನ್ನಾಗಿ ಕಟ್ಟಿಕೊಡುತ್ತಾರೆ. ಹಾಡಲ್ಲಿ ಸೌಂದರ್ಯ ಪ್ರಜ್ಞೆ, ಭಾವ ಪ್ರಜ್ಞೆ ವಿಶೇಷವಾಗಿ ಕಾಣಬಹುದು. ನನ್ನ ಪ್ರಕಾರ, ಸಾಲ ಮಾಡಿಯೂ ಸಂಭ್ರಮ ಪಡುವ ಕಲಾವಿದ ಅಂದರೆ ಅದು ರವಿಚಂದ್ರನ್‌. ದಿನದ 24 ಗಂಟೆ ಸಿನಿಮಾ ಬಿಟ್ಟು ಬೇರೆ ಏನೂ ಯೋಚಿಸಲ್ಲ. ರವಿಚಂದ್ರನ್‌ ಅವರ ಸರಳ ಮಾತುಗಳ ಹಿಂದೆ ಫಿಲಾಸಫಿ ಇರುತ್ತದೆ. ಅದು ಸಿನಿಮಾ ಬದುಕಿಗೆ ಸಂಬಂಧಿಸಿದಂತೆ ಸೀಮಿತವಾಗಿರುತ್ತೆ. ಅವರ ಚಿತ್ರಗಳ ಕುರಿತು ಗಂಭೀರ ಅಧ್ಯಯನ ಆಗಬೇಕು’ ಎಂಬುದು ಬರಗೂರು ಮಾತು.

ಈ ವೇಳೆ ರವಿಚಂದ್ರನ್‌ ಕೂಡ, ಬಯಲಾಟದ ಭೀಮಣ್ಣ ಕುರಿತು ಮಾತನಾಡಿದರು. “ಬರಗೂರು ಅವರು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಮೂಲಕ ಅವರ ಮೊಗದಲ್ಲಿ ನಗುವಿಗೆ ಕಾರಣರಾಗಿದ್ದಾರೆ. ಅವರು ನನಗೂ ಮೇಷ್ಟ್ರು ಇದ್ದಂತೆ. ಅವರ ನನ್ನ ಸ್ನೇಹ ಹಳೆಯದು. ಆ ಪ್ರೀತಿಗೆ ನಾನು ಬಂದಿದ್ದೇನೆ. ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದರು ರವಿಚಂದ್ರನ್‌.

ಸಂಗೀತ ನಿರ್ದೇಶಕಿ ಶಮಿತಾ ಮಲಾ°ಡ್‌ ಅವರಿಗೆ ಬರಗೂರು ರಾಮಚಂದ್ರಪ್ಪ ಅವರ ಚಿತ್ರಕ್ಕೆ ಸಂಗೀತ ನೀಡಿದ್ದು ಹೆಮ್ಮೆಯಂತೆ. ಆ ಬಗ್ಗೆ ಹೇಳುವ ಶಮಿತಾ ಮಲಾ°ಡ್‌, “ಚಿತ್ರದಲ್ಲಿ ಎಲ್ಲಾ ಗೀತೆಗಳಿಗೆ ಬರಗೂರು ಅವರ ಸಾಹಿತ್ಯವಿದೆ. ಇನ್ನು, ಚಿತ್ರಕ್ಕೆ ಪೊಲೀಸ್‌ ಅಧಿಕಾರಿ ರೂಪಾ, ಸುಂದರ್‌ರಾಜ್‌, ಸಂಚಾರಿ ವಿಜಯ್‌ ಹಾಡಿರುವುದು ವಿಶೇಷ. ಪ್ರತಿ ಹಾಡಲ್ಲೂ ವಿಶೇಷ ಅರ್ಥವಿದೆ. ಈ ಚಿತ್ರ ನನ್ನ ಬದುಕಿನ ಮೈಲಿಗಲ್ಲು’ ಎಂದರು ಶಮಿತಾ.

ಚಿತ್ರಕ್ಕೆ ಹಾಡಿರುವ ಪೊಲೀಸ್‌ ಅಧಿಕಾರಿ ರೂಪಾ, ಸಂಚಾರಿ ವಿಜಯ್‌, ಸುಂದರ್‌ರಾಜ್‌, ಕುರಿಗಾಹಿ ಹನುಮಂತ ಬಟ್ಟೂರು ತಮ್ಮ ಹಾಡುಗಳ ಬಗ್ಗೆ ಮಾತನಾಡಿದರು. ರಂಜಿತ್‌ ಎಂಬ ಹೊಸ ಪ್ರತಿಭೆ ಈ ಚಿತ್ರದ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದೆ. ಚಿತ್ರವನ್ನು ನಂಜಪ್ಪ ಕಾಳೇಗೌಡ, ಕೃಷ್ಣವೇಣಿ, ಧನಲಕ್ಷ್ಮಿ, ಕೃಷ್ಣಪ್ಪ ನಿರ್ಮಾಣ ಮಾಡಿದ್ದಾರೆ. ನಾಗರಾಜ ಆದವಾನಿ ಛಾಯಾಗ್ರಹಣವಿದೆ. ಸುರೇಶ್‌ ಅರಸ್‌ ಸಂಕಲನವಿದೆ. ಚಿತ್ರದಲ್ಲಿ “ಸ್ಪರ್ಶ’ ರೇಖಾ, ಪ್ರಮೀಳಾ ಜೋಷಾಯ್‌, ರಾಧಾ, ಮಾ.ಆಕಾಂಕ್ಷ್, ವತ್ಸಲಾ ಮೋಹನ್‌, ಶಾಂತರಾಜ್‌, ಬಸವರಾಜ್‌, ರಂಗಾರೆಡ್ಡಿ , ಅರುಣ್‌ ಇತರರು ನಟಿಸಿದ್ದಾರೆ.

ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.