ಭರ್ಜರಿ ಬೇಟೆ
ಶ್ರೀಮುರಳಿ ಮಾತಿನ ಭರಾಟೆ
Team Udayavani, Oct 18, 2019, 5:45 AM IST
ಇದೊಂದು ಫ್ಯಾಮಿಲಿ ಕಂಟೆಂಟ್ ಇರುವ ಚಿತ್ರ. ಆ ಬಗ್ಗೆ ಹೇಳುವುದಾದರೆ, ಪ್ರತಿಯೊಬ್ಬರ ಲೈಫಲ್ಲೂ ಸಂಬಂಧಕ್ಕೆ ವ್ಯಾಲ್ಯು ಇದ್ದೇ ಇರುತ್ತೆ. ಆ ಜೀವನ ಸಂಬಂಧದ ಹಿನ್ನೆಲೆಯೂ ಇರುತ್ತೆ. ನಾವೆಲ್ಲರೂ ನಮ್ಮ ತಾತ, ಅಜ್ಜಿ, ನಮ್ಮ ಮನೆತನ ಹೀಗೆ ಎಲ್ಲವನ್ನೂ ನೆನಪಿಸಿಕೊಳ್ತಾನೇ ಇರ್ತೀವಿ. ಇಲ್ಲೂ ಅಂಥದ್ದೊಂದು ಬದುಕಿನ ಸಂಬಂಧಗಳ ಸೆಳೆತವಿದೆ. ಅದೇ ಚಿತ್ರದ ಆಕರ್ಷಣೆ. ಈವರೆಗೆ ಬಂದ ಅದ್ಭುತ ಫ್ಯಾಮಿಲಿ ಸಿನಿಮಾಗಳ ಲಿಸ್ಟ್‌ಗೆ “ಭರಾಟೆ’ಯೂ ಸೇರಬೇಕೆಂಬುದು ನನ್ನಾಸೆ…
“ಭಯ ಮತ್ತು ಟೆನ್ಸ್ ನ್ ಎರಡೂ ಇದೆ….’
-ಹೀಗೆ ಹೇಳಿ ಹಾಗೊಂದು ಜೋರು ನಗೆ ಬೀರಿದರು ಶ್ರೀಮುರಳಿ. ಅವರು ಹೇಳಿದ್ದು, ಈ ವಾರ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷೆಯ “ಭರಾಟೆ’ ಬಗ್ಗೆ. ಅವರು ಹಾಗೆ ಹೇಳಿ ನಗುತ್ತಲೇ, “ಅದರಲ್ಲೂ ಟೆನ್ಸ್ ನ್ ಮತ್ತು ಭಯ ಪಾಸಿಟಿವ್ ಆಗಿದೆ ಅನ್ನೋದೇ ಖುಷಿಯ ವಿಷಯ’ ಅಂತ ಮಾತಿಗಿಳಿದ ಶ್ರೀಮುರಳಿ “ಭರಾಟೆ’ಯೊಳಗಿನ ವಿಶೇಷ, ವಿನೋದ ಕುರಿತು ಹೇಳುತ್ತಾ ಹೋದರು.
ಪ್ರತಿಯೊಬ್ಬ ನಟನಿಗೂ ಒಂದೊಂದು ಸಿನಿಮಾ ಹೊಸ ಅನುಭವ ಮತ್ತು ಪಾಠ ಕಲಿಸುತ್ತೆ. ಅಷ್ಟೇ ಅಲ್ಲ, ಅತಿಯಾದ ನಿರೀಕ್ಷೆಯನ್ನೂ ಹೆಚ್ಚಿಸುತ್ತೆ. ಅಂಥದ್ದೊಂದು ಅನುಭವ, ಪಾಠ ಮತ್ತು ನಿರೀಕ್ಷೆ “ಭರಾಟೆ’ ಕಟ್ಟಿಕೊಟ್ಟಿದೆಯಾ? ಇದಕ್ಕೆ ಉತ್ತರಿಸುವ ಶ್ರೀಮುರಳಿ, “ಪ್ರತಿ ಚಿತ್ರವೂ ಒಂದೊಂದು ಅನುಭವ ಆಗುತ್ತೆ. ಪ್ರತಿಯೊಂದರಲ್ಲೂ ಒಂದಷ್ಟು ಪಾಠ ಕಲಿಯುತ್ತೇವೆ. ಸಹಜವಾಗಿಯೇ ನಿರೀಕ್ಷೆಯೂ ಇರುತ್ತೆ. “ಭರಾಟೆ’ ಇವೆಲ್ಲವನ್ನೂ ಹೆಚ್ಚಿಸಿದೆ. ಅದರಲ್ಲೂ ಬಿಡುಗಡೆ ಮೊದಲೇ ಪಾಸಿಟಿವ್ ಎನಿಸಿದೆ. ಜನರು ಹೇಗೆ ಸ್ವೀಕರಿಸುತ್ತಾರೆ ಅನ್ನೋ ಕುತೂಹಲವಿದೆ. ಕನ್ನಡದಲ್ಲೊಂದು ಒಳ್ಳೆಯ ಸಿನಿಮಾವನ್ನು ಕೊಡುತ್ತಿದ್ದೇವೆ ಎಂಬ ಹೆಮ್ಮೆ ನಮ್ಮದು’ ಎನ್ನುತ್ತಾರೆ ಶ್ರೀಮುರಳಿ.
ಸಾಮಾನ್ಯವಾಗಿ ಶ್ರೀಮುರಳಿ ಅವರ ಚಿತ್ರದಲ್ಲಿ ಆ್ಯಕ್ಷನ್‌ಗೆ ಹೆಚ್ಚು ಒತ್ತು. ಹಾಡುಗಳದೇ ಅಬ್ಬರ. ಅದು ಈಗಾಗಲೇ ಸಾಬೀತಾಗಿದೆ ಕೂಡ. ಇವೆಲ್ಲವನ್ನೂ ಹೊರತುಪಡಿಸಿ ಇನ್ನೇನಿದೆ? ಈ ಪ್ರಶ್ನೆಗೆ ಶ್ರೀಮುರಳಿ ಉತ್ತರವಿದು. “ಇದೊಂದು ಫ್ಯಾಮಿಲಿ ಕಂಟೆಂಟ್ ಇರುವ ಚಿತ್ರ. ಆ ಬಗ್ಗೆ ಹೇಳುವುದಾದರೆ, ಪ್ರತಿಯೊಬ್ಬರ ಲೈಫಲ್ಲೂ ಸಂಬಂಧಕ್ಕೆ ವ್ಯಾಲ್ಯು ಇದ್ದೇ ಇರುತ್ತೆ. ಆ ಜೀವನ ಸಂಬಂಧದ ಹಿನ್ನೆಲೆಯೂ ಇರುತ್ತೆ. ನಾವೆಲ್ಲರೂ ನಮ್ಮ ತಾತ, ಅಜ್ಜಿ, ನಮ್ಮ ಮನೆತನ ಹೀಗೆ ಎಲ್ಲವನ್ನೂ ನೆನಪಿಸಿಕೊಳ್ತಾನೇ ಇರಿ¤àವಿ. ಇಲ್ಲೂ ಅಂಥದ್ದೊಂದು ಬದುಕಿನ ಸಂಬಂಧಗಳ ಸೆಳೆತವಿದೆ. ಅದೇ ಚಿತ್ರದ ಆಕರ್ಷಣೆ. ಇನ್ನೂ ಹೆಚ್ಚು ಅಭಿಮಾನದಿಂದ ಹೇಳುವುದಾದರೆ, ಈವರೆಗೆ ಬಂದ ಅದ್ಭುತ ಕಥೆವುಳ್ಳ ಫ್ಯಾಮಿಲಿ ಸಿನಿಮಾಗಳ ಲಿಸ್ಟ್‌ಗೆ “ಭರಾಟೆ’ಯೂ ಸೇರಬೇಕೆಂಬುದು ನನ್ನಾಸೆ. ಇನ್ನು, ಸಾಕಷ್ಟು ಮೊದಲುಗಳಿವೆ. ನಿರ್ದೇಶಕ, ನಿರ್ಮಾಪಕ, ಅಷ್ಟೊಂದು ಜನ ಖಳಟನರೊಂದಿಗಿನ ನಟನೆ ಎಲ್ಲವೂ ಮೊದಲ ಕಾಂಬಿನೇಷನ್. ಸಿನಿಮಾದ ಹಾಡು, ಟ್ರೇಲರ್, ಟೀಸರ್ ನೋಡಿದವರು ಬೇರೆ ಭಾಷೆಯ ಸಿನಿಮಾಗೆ ಹೋಲಿಸುತ್ತಾರೆ. ನಮಗಂತೂ ಯಾವ ಭಾಷೆಗೂ ಹೋಲಿಕೆ ಮಾಡುವಂತಹ ಚಿತ್ರ ಮಾಡಿಲ್ಲ. ಒಂದಂತೂ ನಿಜ. ಕನ್ನಡದಲ್ಲಿ ಒಳ್ಳೆಯ ಚಿತ್ರ ಮಾಡಿದ್ದೇವೆ. ಎಲ್ಲಾ ವರ್ಗಕ್ಕೂ “ಭರಾಟೆ’ ಮನತಟ್ಟುತ್ತದೆ ಎಂಬ ಭರವಸೆ ಇದೆ. ಗುಣಮಟ್ಟ, ತಾಂತ್ರಿಕತೆ, ಕಲಾವಿದರ ನಟನೆ, ಲೊಕೇಷನ್ಸ್, ಸೆಟ್ ಹೀಗೆ ಎಲ್ಲಾ ವಿಷಯದಲ್ಲೂ ಅದ್ಧೂರಿತನವಿದೆ. ಮೃಷ್ಟಾನ್ನ ಭೋಜನಕ್ಕೆ ಏನೆಲ್ಲಾ ಅಡುಗೆ ಸಾಮಾಗ್ರಿ ಇರಬೇಕೋ, ಆ ಭೋಜನ ಎಷ್ಟೊಂದು ರುಚಿಯಾಗಿರುತ್ತೋ, ಅಷ್ಟೇ ರುಚಿಯೂಟ “ಭರಾಟೆ’ಯಲ್ಲೂ ಸಿಗುತ್ತೆ’ ಎಂಬ ಗ್ಯಾರಂಟಿ ಕೊಡ್ತೀನಿ ಎನ್ನುತ್ತಾರೆ ಅವರು.
ಎಲ್ಲೂ ಹೇಳದ ವಿಷಯ ಇಲ್ಲಿದೆ…
“ಭರಾಟೆ’ ಹಲವು ಕಾರಣಗಳಿಗೆ ವಿಶೇಷ ಎಂಬುದು ಶ್ರೀಮುರಳಿ ಅವರ ಮಾತು. “ಇದುವರೆಗೂ ಹೇಳದೇ ಇರುವ ಒಂದು ವಿಷಯವಿದೆ. ಅದನ್ನು ಎಲ್ಲೂ ಹಂಚಿಕೊಂಡಿಲ್ಲ. ಆ ವಿಚಾರ ನನಗೆ ಈ ಸಿನಿಮಾದಲ್ಲಿ ಒಲವು ಮೂಡಿಸಿತು. ಅದನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಮಾಡಲು ಮುಂದಾದೆ. ಎಲ್ಲಾ ನಟರಿಗೂ ಒಂದೊಂದು ಕನಸು ಇರುತ್ತೆ ಅಂತೀವಲ್ಲ. ಏನಾದರೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಬಹುದಲ್ವಾ ಅಂದುಕೊಂಡು ನಮಗೆ ನಾವೇ ಚಾಲೆಂಜ್ ಮಾಡ್ಕೊàತ್ತೀವಲ್ಲ. ಹಾಗೆ ಮಾಡೋಕೆ ಸಿಕ್ಕ ವೇದಿಕೆ ಇದು. ನಾನು ಕಥೆ ಮತ್ತು ಪಾತ್ರವನ್ನು ತುಂಬಾ ಇಷ್ಟಪಡ್ತೀನಿ. ಇಲ್ಲಿ ನಿರ್ವಹಿಸಿರುವ ಪಾತ್ರವನ್ನು ಮಾಡಿಲ್ಲ. ಅದೊಂದು ಜವಾಬ್ದಾರಿ ಇರುವಂತಹ, ಫನ್ ಎಲಿಮೆಂಟ್ಸ್ ತುಂಬಿರುವಂತಹ, ಅಮ್ಮನ ಜೊತೆ ಅಪ್ಪನ ಜೊತೆ ಮಾತಾಡುವ ರೀತಿ ಎಲ್ಲವೂ ವಿಶೇಷವಾಗಿದೆ. ಆ ವಿಷಯದಲ್ಲಿ ನಾನು ಲಕ್ಕಿ. ನಿರ್ದೇಶಕ ಚೇತನ್‌ಕುಮಾರ್ ಬಗ್ಗೆ ಹೇಳಲೇಬೇಕು. ಅವರಲ್ಲಿ ಗ್ರಿಪ್ ವರ್ಕ್ ಇದೆ. ಪ್ರೀತಿಯಿಂದ ಕೆಲಸ ಮಾಡುತ್ತಾರೆ. ಅಷ್ಟೇ ಬದ್ಧತೆಯಿಂದ ಪ್ರಾಮಾಣಿಕವಾಗಿ ವಹಿಸಿಕೊಂಡಿದ್ದನ್ನು ಮಾಡುತ್ತಾರೆ. ಈಗೋ ಇಲ್ಲ, ಎಲ್ಲವನ್ನೂ ನೀಟ್ ಆಗಿ ನಿರ್ವಹಿಸುವ ತಾಕತ್ತು ಇದೆ. ಕ್ಲಾರಿಟಿ ಇರುವಂತಹ ವ್ಯಕ್ತಿ, ಚರ್ಚೆಗೆ ಓಪನ್ ಇರುತ್ತಾರೆ. ಒಟ್ಟಾರೆ ಕಂಫರ್ಟ್ ಜೋನ್ ಕಲ್ಪಿಸಿಕೊಡುತ್ತಾರೆ. ಎಲ್ಲಾ ನಿರ್ದೇಶಕರಿಗೂ ಇವೆಲ್ಲಾ ಗುಣಗಳಿದ್ದರೆ, ಈ ರೀತಿಯ ಸಿನಿಮಾ ಕಟ್ಟಿಕೊಡಲು ಸಾಧ್ಯ. ಹಾಗೆಯೇ, ಇಂತಹ ಅದ್ಧೂರಿ ಸಿನಿಮಾ ಮಾಡಲು ನಿರ್ಮಾಪಕರಿಗೆ ಧೈರ್ಯ ಬೇಕು. ನಾನು ಇದುವರೆಗೆ ಮಾಡಿರುವ ಬೆಸ್ಟ್ ಪ್ರೊಡಕ್ಷನ್ ಸಾಲಿಗೆ ಸುಪ್ರಿತ್ ಕೂಡ ಸೇರುತ್ತಾರೆ. ಅವರೊಳಗಿನ ಆತ್ಮವಿಶ್ವಾಸ, ನಂಬಿಕೆ ಈ ಮಟ್ಟಕ್ಕೆ ಸಿನಿಮಾ ಮಾಡಲು ಸಾಧ್ಯ’ ಎನ್ನುತ್ತಾರೆ.
ಚಿತ್ರದಲ್ಲಿ ಹೀರೋ ರಾಜಸ್ಥಾನದ ಕನ್ನಡಿಗ. ಹಾಗಂತ ಇಲ್ಲಿ ಭಾಷಾ ಸಂಘರ್ಷವಿಲ್ಲ. ಕನ್ನಡಕ್ಕೆ ಧಕ್ಕೆ ಬಂದಾಗ, ಭಾಷೆ ಬಗ್ಗೆ ಯಾರಾದರೂ ಅಗೌರವ ತೋರಿಸಿದಾಗ ಕನ್ನಡಿಗನಿಗೆ ಬರುವಂತಹ ಕೋಪ ಹೀರೋಗು ಬರುತ್ತೆ. ಇಲ್ಲಿ ಬೇರೆ ಭಾಷಿಗರಿಗೆ ಬೇಜಾರು ಮಾಡುವ ಉದ್ದೇಶವಂತೂ ಇಲ್ಲ ಎನ್ನುವ ಮುರುಳಿ, ರಾಜಸ್ಥಾನದಲ್ಲಿ ಇರುವ ಕನ್ನಡಿಗ ಎಂಬುದು ಒನ್‌ಲೈನ್ ಅಷ್ಟೇ. ಉಳಿದ ಶೇ.99 ರಷ್ಟು ಕಥೆ ಬೇರೇನೆ ಇದೆ ಎಂದು ವಿವರ ಕೊಡುತ್ತಾರೆ. ಇನ್ನು ಚಿತ್ರದಲ್ಲಿ ತಾವು ಹಾಡಿದ “ಭರ ಭರ ಭರ ರಾಟೆ…’ ಹಾಡಿನ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ. “ಹಾಡು ಕೇಳಿದಾಗಲೇ ಅವರಿಗೆ ನಾನೇ ಹಾಡಬೇಕು ಎನಿಸಿತಂತೆ. ನಿರ್ದೇಶಕ, ನಿರ್ಮಾಪಕರು ಹಾಡೋಕೆ ಅವಕಾಶ ಮಾಡಿಕೊಟ್ಟಿದ್ದನ್ನು ನೆನಪಿಸಿಕೊಳ್ಳುವ ಶ್ರೀಮುರಳಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೆನ್ನಾಗಿ ಹಾಡಿಸಿದರು. ಹಾಗಾಗಿ ಚಂದದ ಹಾಡು ಹೊರಬಂತು. ಇನ್ನು, ಇಲ್ಲೂ ಭರ್ಜರಿ ಸ್ಟಂಟ್ಸ್ ಇದೆ. ಎಲ್ಲಾ ಹೀರೋಗಳು ಸ್ಟಂಟ್ ಮಾಡುವಾಗ ಪೆಟ್ಟು ತಿಂದಂತೆ ನಾನೂ ಪೆಟ್ಟು ತಿಂದಿದ್ದೇನೆ. ಮೊದಲು ಕಷ್ಟಪಟ್ಟರೆ ತಾನೇ ಆಮೇಲೆ ಫಲ ಪಡೆಯೋದು. ಇವೆಲ್ಲಾ ಆದಾಗ ಮಾತ್ರ “ಭರಾಟೆ’ಯಂತಹ ಸಿನಿಮಾ ರೂಪಗೊಳ್ಳುತ್ತೆ’ ಎಂದು ಮಾತು ಮುಗಿಸುತ್ತಾರೆ.
ಭರಾಟೆ ಹೈಲೈಟ್ಸ್
ರಾಜಸ್ಥಾನದಲ್ಲಿ ಹಾರಿದ ಕನ್ನಡ ಬಾವುಟ
ಸಂಬಂಧಗಳ ಮೌಲ್ಯ ಹೆಚ್ಚಿಸುವ ಭರಾಟೆ
ಭರವಸೆ ಹುಟ್ಟಿಸಿದ ಕಾಂಬಿನೇಷನ್
ಮೊದಲ ಸಲ ಸಾಯಿಕುಮಾರ್ ಬ್ರದರ್ಸ್ ನಟನೆ
ಹಾಡು- ಸಂಭಾಷಣೆಗೆ ಭರ್ಜರಿ ರೆಸ್ಪಾನ್ಸ್
ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.