ಇಂದು ತೆರೆಗೆ ಬರುತ್ತಿದೆ ‘ಬೆಂಗಳೂರು ಬಾಯ್ಸ್’ ಮತ್ತು ‘ನಾನು ಕುಸುಮ’
Team Udayavani, Jun 30, 2023, 8:46 AM IST
ಯೂತ್ ಫುಲ್ ಬೆಂಗಳೂರು ಬಾಯ್ಸ್
“ಬೆಂಗಳೂರು ಬಾಯ್ಸ್’ ಚಿತ್ರ ಇಂದು ತೆರೆಕಾಣುತ್ತಿದೆ. ವಿ ಮೇಕರ್ಸ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರುತ್ತಿದೆ. 90ರ ದಶಕದ ಸೂಪರ್ ಹಿಟ್ ಸಿನಿಮಾಗಳದ “ಅಂತ’, “ರಣಧೀರ’, “ಓಂ’ ಹಾಗೂ “ಎ’ ಸಿನಿಮಾಗಳ ನಾಯಕರ ರೀತಿಯಲ್ಲಿ ಸಚಿನ್ ಚೆಲುವರಾಯ ಸ್ವಾಮಿ, ಅಭಿಷೇಕ್ ದಾಸ್, ರೋಹಿತ್ ಮಿಂಚಿದ್ದಾರೆ. ಇವರ ಜೊತೆ ವೈನಿಧಿ ಜಗದೀಶ್, ಸೋನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
“ಬೆಂಗಳೂರು ಬಾಯ್ಸ್’ ರೋಮ್ಯಾಂಟಿಕ್ ಕಾಮಿಡಿ ಎಂಟರ್ ಟೈನರ್ ಚಿತ್ರವಾಗಿದ್ದು, ಕಾಲೇಜು ಕಥೆ, ಲವ್ ಸ್ಟೋರಿ, ಸೆಂಟಿಮೆಂಟ್‌ನ ಕಾಂಬಿನೇಷನ್ ಇದರಲ್ಲಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ವಿಕ್ರಮ್, “ಇದು ನಾಲ್ವರು ಹುಡುಗರ ಸುತ್ತ ನಡೆಯುವ ಕಥೆ. ಹೆಸರಿಗೆ ತಕ್ಕಂತೆ ಬೆಂಗಳೂರು ಸಿಟಿಯೇ ಈ ಸಿನಿಮಾದ ಹೈಲೈಟ್. ಜೀವಕ್ಕೆ ಜೀವ ಕೊಡುವಂತಿರುವ ಹುಡ್ರು ನಡುವೆ ಒಂದು ಟ್ವಿಸ್ಟ್ ಬಂದಾಗ ಮುಂದೇನಾಗುತ್ತದೆ ಎಂಬುದು ಸಿನಿಮಾದ ಹೈಲೈಟ್. ಇದು ಪಕ್ಕಾ ಇಂದಿನ ಯೂತ್ಸ್ ಅನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾವಿದು’ ಎನ್ನುತ್ತಾರೆ.
ಥಿಯೇಟರ್ ನತ್ತ ‘ಕುಸುಮ’
ಹಿರಿಯ ಲೇಖಕ ಬೆಸಗರಹಳ್ಳಿ ರಾಮಣ್ಣ ಅವರ ಕಥೆಯನ್ನು ಆಧರಿಸಿ ತಯಾರಾಗಿರುವ, ಕೃಷ್ಣೇಗೌಡ ನಿರ್ಮಿಸಿ, ನಿರ್ದೇಶಿಸಿರುವ “ನಾನು ಕುಸುಮ’ ಸಿನಿಮಾ, ಇಂದು (ಜೂ. 30) ಥಿಯೇಟರ್‌ನಲ್ಲಿ ಬಿಡುಗಡೆಯಾಗಿ, ಪ್ರೇಕ್ಷಕರ ಮುಂದೆ ಬರುತ್ತಿದೆ.
ಈಗಾಗಲೇ “ಇಂಡಿಯನ್ ಪನೋರಮಾ’, “ರಾಜಸ್ಥಾನ್ ಫಿಲಂ ಫೆಸ್ಟಿವಲ್’, “ತ್ರಿಶೂರ್ ಫಿಲಂ ಫೆಸ್ಟಿವಲ್’ ಹೀಗೆ ಹಲವು ಪ್ರತಿಷ್ಠಿತ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವು ಪ್ರಶಸ್ತಿ, ಪ್ರಶಂಸೆಗಳನ್ನು ತನ್ನದಾಗಿಸಿಕೊಂಡಿರುವ “ನಾನು ಕುಸುಮ’ ಸಿನಿಮಾ ಇತ್ತೀಚೆಗಷ್ಟೇ ನಡೆದ “14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಪ್ರದರ್ಶನಗೊಂಡು ಪ್ರಥಮ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆದುಕೊಂಡಿತ್ತು.
ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುವ ಹುಡುಗಿಯೊಬ್ಬಳು ಅಲ್ಲಿ ಏನೇನು ಶೋಷಣೆಗಳನ್ನು ಅನುಭವಿಸುತ್ತಾಳೆ ಎನ್ನುವುದರ ಸುತ್ತ “ನಾನು ಕುಸುಮ’ ಸಿನಿಮಾದ ಕಥಾಹಂದರ ಸಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.