ನೈಜ ಘಟನೆ ಸುತ್ತ ಬೆಸ್ಟ್ ಫ್ರೆಂಡ್ಸ್
Team Udayavani, Dec 28, 2018, 6:00 AM IST
“ಸಲಿಂಗ ಕಾಮಿಗಳು ಹಾಗೂ ಲೈಂಗಿಕ ಕಾರ್ಯಕರ್ತರ ಬಗ್ಗೆ ಸಮಾಜ ಅಸಹ್ಯವಾಗಿ ನೋಡುತ್ತಿದೆ. ಆ ವರ್ಗದವರನ್ನು ಸಮಾಜ ದೂಷಿಸದೆ ಅವರಿಗೊಂದು ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕು. ಆ ನಿಟ್ಟಿನಲ್ಲಿ ಅರಿವು ಮೂಡಿಸುವಂತಹ ಪ್ರಯತ್ನ ಈ ಚಿತ್ರದ ಮೂಲಕ ಮಾಡಲಾಗಿದೆ…’
– ಹೀಗೆ ಹೇಳುವ ಮೂಲಕ ತಮ್ಮ ಚಿತ್ರದೊಳಗಿರುವ ಅಂಶವನ್ನು ಹೇಳುತ್ತಾ ಹೋದರು ನಿರ್ದೇಶಕ ಟೇ.ಶಿ.ವೆಂಕಟೇಶ್. ಅವರು ಹೇಳಿದ್ದು, “ಬೆಸ್ಟ್ ಫ್ರೆಂಡ್ಸ್’ ಚಿತ್ರದ ಬಗ್ಗೆ. ಚಿತ್ರ ಜನವರಿ 4 ರಂದು ತೆರೆಗೆ ಬರುತ್ತಿದೆ. ಈ ಬಾರಿ ನೈಜ ಘಟನೆ ಇಟ್ಟುಕೊಂಡು ಮನಮಿಡಿಯುವ ಕಥೆ ಹೆಣೆಯುವ ಮೂಲಕ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕರು. ಎಲ್ಲಾ ಸರಿ, ಈ ಫ್ರೆಂಡ್ಸ್ ಕಥೆ ಏನು? ಈ ಪ್ರಶ್ನೆಗೆ ಉತ್ತರಿಸುವ ನಿರ್ದೇಶಕ ಟೇ.ಶಿ. ವೆಂಕಟೇಶ್, “ಇದು 2012 ರಲ್ಲಿ ಹಾಸನದಲ್ಲಿ ನಡೆದ ಘಟನೆ. ಇಬ್ಬರು ಗೆಳತಿಯರ ನಡುವೆ ಮನಸ್ತಾಪ ಮೂಡಿ, ಒಬ್ಟಾಕೆ ಮಚ್ಚಿನಿಂದ ಆಕ್ರಮಣ ಮಾಡಿ ಕೊಲೆ ಆರೋಪದ ಮೇಲೆ ಜೈಲಲ್ಲಿದ್ದಾಳೆ. ಆ ಘಟನೆ ಇಟ್ಟುಕೊಂಡು “ಬೆಸ್ಟ್ ಫ್ರೆಂಡ್ಸ್’ ಚಿತ್ರ ಮಾಡಿದ್ದೇನೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಚಿತ್ರ ಮಾಡುವ ಮುನ್ನ, ವಕೀಲರು, ಸಂಬಂಧಿಸಿದ ಕೆಲವರನ್ನು ಸಂಪರ್ಕಿಸಿ, ವಿಷಯ ಕಲೆಹಾಕಿ ಅದಕ್ಕೊಂದು ಕಥೆ ಹೆಣೆದು ಚಿತ್ರ ಮಾಡಿದ್ದು ಈಗ ಖುಷಿ ಕೊಟ್ಟಿದೆ. ನಾನು ಅಂದುಕೊಂಡಿದ್ದಕ್ಕಿಂತಲೂ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಶೇ.50 ರಷ್ಟು ನೈಜತೆ ಇಲ್ಲಿದೆ. ಉಳಿದದ್ದು ಕಾಲ್ಪನಿಕ. ಚಿತ್ರದಲ್ಲಿ ಶೋಷಿತ ವರ್ಗದವರ ಬದುಕು ಮತ್ತು ಅವರ ಭಾವನೆಗಳನ್ನು ಹೊರಹಾಕುವ ಪ್ರಯತ್ನ ಮಾಡಲಾಗಿದೆ. ಇಬ್ಬರು ಹೆಣ್ಣುಮಕ್ಕಳು ಸಲಿಂಗಿಗಳಾಗಿ ಬದುಕುತ್ತಿರುವ ಸತ್ಯ ಘಟನೆ ಆಧರಿಸಿ ಮಾಡಿರುವ ಚಿತ್ರದಲ್ಲಿ ಮನಕಲಕುವ ಕೆಲ ಅಂಶಗಳಿವೆ. ಅದನ್ನು ಚಿತ್ರದಲ್ಲೇ ನೋಡಬೇಕು’ ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ಮೇಘನಾ ಮತ್ತು ಚಿಕ್ಕಮಗಳೂರಿನ ದ್ರಾವ್ಯ ಶೆಟ್ಟಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಆಶಾ, ಸುಮತಿ ಪಾಟೀಲ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಲಯನ್ ಎಸ್.ವೆಂಕಟೇಶ್ ಅವರು ನಿರ್ಮಾಪಕರಾಗಿದ್ದಾರೆ. ಹೊಸ ವರ್ಷದ ಮೊದಲ ವಾರದಲ್ಲಿ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.