ಮಗನ ಗೂಗ್ಲಿ; ಅಪ್ಪನ ಸಹಕಾರ
Team Udayavani, Mar 16, 2018, 8:15 AM IST
ಕನ್ನಡದಲ್ಲಿ ಮಕ್ಕಳಿಗಾಗಿ ಸಿನಿಮಾ ನಿರ್ಮಿಸುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಆ ಸಾಲಿಗೆ “ಬಿಂದಾಸ್ ಗೂಗ್ಲಿ’ ಹೊಸ ಸೇರ್ಪಡೆ ಎನ್ನಬಹುದು. ಸದ್ದಿಲ್ಲದೆ ಶೇ. 95ರಷ್ಟು ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ನಿರ್ದೇಶಕ ಸಂತೋಷ್‌ಕುಮಾರ್, ತಮ್ಮ ತಂಡದೊಂದಿಗೆ ಮಾಹಿತಿ ಹಂಚಿಕೊಳ್ಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದರು.
ಅಂದು ಮೊದಲು ಮಾತು ಶುರು ಮಾಡಿದ್ದು, ನಿರ್ಮಾಪಕ ವಿಜಯ್ ಕುಮಾರ್. “ನನ್ನ ಮಗ ಆಕಾಶ್‌ಗೆ ಸಿನಿಮಾ ಮೇಲೆ ಆಸಕ್ತಿ ಇತ್ತು. ಮುಂಬೈನ ಅನುಪಮ್ ಖೇರ್ ನಟನೆ ಶಾಲೆಯಲ್ಲಿ ಕಲಿತು ಬಂದ ಬಳಿಕ ಸಂತೋಷ್ ಒಂದು ಕಥೆ ಹೇಳಿದರು. ಮಗನನ್ನು ಪರಿಚಯಿಸಲು ಒಳ್ಳೆಯ ಕಥೆ ಎನಿಸಿತು. ಆದರೆ, ಚಿತ್ರದಲ್ಲಿ ಡ್ಯಾನ್ಸ್ ಕೋಚ್ ಪಾತ್ರಕ್ಕೆ ಹಲವು ನಟರ ಬಳಿ ಹೋಗಿ ಕೇಳಿಕೊಂಡರೂ ಯಾರೊಬ್ಬರೂ ಒಪ್ಪಲಿಲ್ಲ. ಕೊನೆಗೆ ಧರ್ಮ ಕೀರ್ತಿರಾಜ್ ಅವರು ಪಾತ್ರ ಮಾಡಲು ಒಪ್ಪಿದ್ದರಿಂದ ಚಿತ್ರ ಶುರುವಾಯಿತು. ಇದು ಡ್ಯಾನ್ಸ್ ಕುರಿತ ಸಿನಿಮಾ. ಇಲ್ಲಿ ಒಳ್ಳೆಯ ಸಂದೇಶವೂ ಇದೆ. ಈಗಿನ ಟ್ರೆಂಡ್‌ಗೆ ತಕ್ಕ ಚಿತ್ರ ಮಾಡಿರುವ ಖುಷಿ ನಮ್ಮದು’ ಎಂದರು ವಿಜಯ್‌ಕುಮಾರ್.
ನಿರ್ದೇಶಕ ಸಂತೋಷ್ ಕುಮಾರ್ ಮಾತನಾಡಿ, “ಇಲ್ಲಿ ಕಥೆ ಮತ್ತು ಪಾತ್ರ ಮುಖ್ಯ. ಮೌಲ್ಯವುಳ್ಳ ಸಂದೇಶ ಇಲ್ಲಿದೆ. ಬರುವ ಯಾವ ಪಾತ್ರವೂ ಸುಮ್ಮನೆ ಬಂದು ಹೋಗುವುದಿಲ್ಲ. ಎಲ್ಲಾ ಪಾತ್ರಕ್ಕೂ ಆದ್ಯತೆ ನೀಡಲಾಗಿದೆ. ಒಂದು ಕಾಲೇಜ್ ಸುತ್ತ ನಡೆಯುವ ಕಥೆ ಇಲ್ಲಿದೆ. ಮಕ್ಕಳಿಗೆ ವಿದ್ಯಾಭ್ಯಾಸ ಎಷ್ಟು ಮುಖ್ಯವೋ, ಕಲೆ ಕೂಡ ಅಷ್ಟೇ ಮುಖ್ಯ. ಬಿಂದಾಸ್ ಆಗಿರುವ ವ್ಯಕ್ತಿತ್ವದ ಹುಡುಗ, ಡ್ಯಾನ್ಸ್ ಆಯ್ಕೆ ಮಾಡಿಕೊಂಡು ಏನು ಸಾಧನೆ ಮಾಡ್ತಾನೆ ಎಂಬುದು ಕಥೆ’ ಎಂದು ಹೇಳಿದರು. “ಇದು ಬಿಂದಾಸ್ ಬ್ಯಾನರ್’ ಅಂತ ಮಾತಿಗಿಳಿದರು ಧರ್ಮ ಕೀರ್ತಿರಾಜ್. “ನನಗೆ ಈ ಕಥೆ ಕೇಳಿದಾಗ, ಕೋಚ್ ಪಾತ್ರ ತುಂಬ ಹಿಡಿಸಿತು. ಒಂದು ಬದಲಾವಣೆ ಬೇಕಿತ್ತು. ಹೊಸ ತರಹದ ಪ್ರಯತ್ನ ಇಲ್ಲಿದೆ. ಒಬ್ಬ ಡ್ಯಾನ್ಸರ್‌ನ ಆಸೆ ಈಡೇರಿಸುವ ಮೂಲಕ ಅವನೊಳಗಿನ ಬದಲಾವಣೆಗೆ
ಕಾರಣವಾಗುವಂತಹ ಪಾತ್ರ ನನ್ನದು. ಸುಮಾರು 40 ದಿನಗಳ ಕಾಲ ಬೆಳಗಾವಿಯಲ್ಲಿ ಚಿತ್ರೀಕರಣವಾಗಿದೆ. ಇಲ್ಲಿ ನಾನು ಹೀರೋ ಅಂತೇನಿಲ್ಲ. ಕಥೆ ಮುಖ್ಯ. ಆಕಾಶ್‌ಗೆ ಮೊದಲ ಚಿತ್ರವಾದರೂ ಅನುಭವಿಯಂತೆ ನಟಿಸಿದ್ದಾನೆ ಎಂದು ಆಕಾಶ್‌ಗೆ ಮಾರ್ಕ್ಸ್ ಕೊಟ್ಟರು ಧರ್ಮ. ನಾಯಕ ಆಕಾಶ್‌ಗೆ ಇದು ಮೊದಲ ಚಿತ್ರ. “ಪೂರ್ಣ ತಯಾರಿಯೊಂದಿಗೇ ನಾನು ಕ್ಯಾಮೆರಾ ಮುಂದೆ ನಿಂತಿದ್ದೇನೆ. ಚಿಕ್ಕಂದಿನಲ್ಲಿ ಇದ್ದ ಆಸೆ ಈಗ ಈಡೇರಿದೆ. ಇಡೀ ಕುಟುಂಬ ನನಗಾಗಿ ಈ ಚಿತ್ರ ಮಾಡಿದೆ. ಶೇ.100 ರಷ್ಟು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ನಂಬಿಕೆ ನನ್ನದು. ಒಬ್ಬ ಡ್ಯಾನ್ಸರ್ ಸ್ಪರ್ಧೆಯಲ್ಲಿ ಪಾಲ್ಗೊಂಡು ತನ್ನ ಬದುಕನ್ನು ಹೇಗೆ ರೂಪಿಸಿಕೊಳ್ತಾನೆ ಎಂಬ ಕಥೆ
ಇಲ್ಲಿದೆ. ಹೊಸ ಪ್ರತಿಭೆಗೆ ನಿಮ್ಮ ಸಹಕಾರ ಇರಲಿ’ ಎಂದರು ಆಕಾಶ್.
ಸಂಗೀತ ನಿರ್ದೇಶಕ ವಿನು ಮನಸು ಐದು ಹಾಡುಗಳ ಜೊತೆಗೆ ಎರಡು ತುಣುಕು ನೀಡಿದ್ದಾರಂತೆ. ಪತ್ರಕರ್ತರ ಮುಂದೆ ಎಂದು ಹೆಚ್ಚು ಮಾತನಾಡದ ಮ್ಯಾಥುರಾಜನ್ ಅಂದು ಸಿಕ್ಕಾಪಟ್ಟೆ ಮಾತನಾಡಿದರು. ಮಮತಾ ರಾವತ್, ನಿಮಿಕಾ ರತ್ನಾಕರ್ ಮತ್ತು ಶಿಲ್ಪಾ ನಾಯಕಿಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Weightlifting: ಏಷ್ಯನ್ ವೇಟ್ ಲಿಫ್ಟಿಂಗ್; ಭಾರತಕ್ಕೆ ಎರಡು ಬೆಳ್ಳಿ
Junior World Cup shooting: ಭಾರತದ ಆತಿಥ್ಯದಲ್ಲಿ ಜೂ. ವಿಶ್ವಕಪ್ ಶೂಟಿಂಗ್
Udupi: ಕುದ್ರು ನೆಸ್ಟ್ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.